Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮೇಚಕಾಚಳ
[ನಾ] ನೀಲಪರ್ವತ (ಸಂಚಾರಿತಮೇಚಕಾಚಳ ಚಕ್ರವಾಳರುಚಿ ಹರಿಕರಟಿಘಟಾಪ್ರಪಂಚ ರಾಗಕೇತನ ಚಂಚಳಾಂಚಳನಿಚಯದಿಂ: ಆದಿಪು, ೧೩. ೭೭ ವ)
ಮೇಚಕಿತ
[ಗು] ದಟ್ಟ ನೀಲಿಯ (ಉತ್ತುಂಗಮಣಿಭೂಷಣ ಮರೀಚಿಮೇಚಕಿತ ದೇವಾಂಗನಾನಿಕಾಯಸಮೇತಂ: ಆದಿಪು, ೨. ೬೯ ವ)
ಮೇಡು
[ನಾ] ಹಿಣಿಲು (ನಿಡುಗೋಡು ಮೇಡುಂ ಅಮರುತ್ತುಮಿರೆ ಇಱುಂಕಿದ ಕೆಚ್ಚಲ್ ಎತ್ತಂ ಎತ್ತಿದ ಕುಡಿವಾಲಂ ಆಂದೆಸೆಯೆ ಕರ್ಬಸುಗಳ್ ಪರಿಗೊಂಡುವಾಜಿಯೊಳ್: ಪಂಪಭಾ, ೮. ೧೦೪)
ಮೇಣ್
[ಅ] ಅಥವಾ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿಮಂಗಳರಶ್ಮಿಯೋ: ಪಂಪಭಾ, ೧. ೯೬)
ಮೇತ
[ನಾ] ಮೇಯುವಿಕೆ (ಸುೞಿಯದು ಗಾಳಿ ಮೃಗಂ ಕೆಯ್ವೞಿಗಳ ಮೇತದೊಳೆ ತಣಿದಪುವು ಪಂದಿಗಳುಂ ಪೞನವಿರ್ ಇಕ್ಕಿದುವು ಆದಂ ಪೞು ಪರಿದಾಡಲ್ ಕರಂ ಬೆಡಂಗವನಿಪತೀ: ಪಂಪಭಾ, ೫. ೩೮)
ಮೇದಿನಿ
[ನಾ] ಭೂಮಿ, ರಾಜ್ಯ (ಜೂದಾಡಿ ಸೋಲ್ತು ನನ್ನಿಗೆ ಮೇದಿನಿಯಂ ಕೊಟ್ಟು ಪಾಂಡುನಂದನರ್ ಈಗಳ್ ಪೋದೊಡಮೇಂ ತಿಣುಕಾಗದೆ ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್: ಪಂಪಭಾ, ೭. ೧೮)
ಮೇಪು
[ನಾ] ಮೇವು (ಕೞಿವುಂ ಉೞಿವುಂ ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ: ಪಂಪಭಾ, ೫. ೪೩ ವ)
ಮೇರುವ ಪೊನ್
[ನಾ] ಮೇರುಪರ್ವತದ ಚಿನ್ನ (ಮೇರುವ ಪೊನ್ ಕಲ್ಪಾಂಘ್ರಿಪದಾರವೆ ರಸದೊಱವು ಪರುಸವೇದಿಯ ಕಣಿ ಭಂಡಾರದೊಳುಂಟೆನೆ: ಪಂಪಭಾ, ೧. ೨೮)
ಮೇರೆ
[ನಾ] ಎಲ್ಲೆ (ಎಮ್ಮಾಳ್ವ ಷಟ್ಖಂಡಕಿಂತಿದಱಿಂದಿತ್ತೆಯೆ ಮೇರೆ ನೋಡಿಂ ಎಮಗೀ ಶೈಳೇಂದ್ರಮೆಂದೆಂದು ತೋಱಿದಂ .. .. ಹೈಮಾದ್ರಿಯಂ: ಆದಿಪು, ೧೩. ೬೯)
ಮೇರೆದಪ್ಪು
[ಕ್ರಿ] ಮೇರೆ ಮೀರು (ಅಂತು ವಿಳಯಕಾಲ ಜಳನಿಧಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು: ಪಂಪಭಾ, ೭. ೮ ವ)
ಮೇರೆಯಂ ದಾಂಟು
[ಕ್ರಿ] ಎಲ್ಲೆಯನ್ನು ಮೀರು (ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ಗಾಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ: ಪಂಪಭಾ, ೧. ೮೪)
ಮೇಲಪ್ಪ
[ಗು] ಶ್ರೇಷ್ಠವಾದ (ದಿವದೊಳ್ ಮೇಲಪ್ಪ ರತ್ನಂಗಳೆಂದನಿತಂ ಮುಂ ಮಣಿಮಾಳೆಗಿತ್ತಂ: ಆದಿಪು, ೨. ೧೮)
ಮೇಲಪ್ಪುದು
[ನಾ] ಮುಂದೆ ಸಂಭವಿಸುವುವು, ಮುಂದಾಗುವುವು (ನಷ್ಟಂ ನಷ್ಟಂ ಮೃತಂ ಮೃತಂ ಎಂಬುದು ಇನ್ನೞಲದಿರ್ ಮೇಲಪ್ಪುದಂ ಬಗೆ ಭೂಪತೀ: ಪಂಪಭಾ, ೧೩. ೨೨)
ಮೇಲಪ್ಪೊಡಂ
[ಅ] ಅತಿಶಯವಾದರೂ (ಮೇಲೆೞ್ದ ಬಲಂ ಕೋಟಿಗೆ ಮೇಲಪ್ಪೊಡಂ ಅನ್ಯ ವನಿತೆ ನೆಗೞ್ದೂರ್ವಶಿಗಂ ಮೇಲಪ್ಪೊಡಂ ಅಕ್ಕೆ ಎಂದುಂ ಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ: ಪಂಪಭಾ, ೧. ೪೭)
ಮೇಲುದು
[ನಾ] ಮೇಲುಹೊದಿಕೆ, ಸೆರಗು (ನೊಸಲಂ ತೊಂಗಲ್ಗುರುಳ್ ಮೇಲುದನೊಗೆವ ಕುಚಂ ಬೆನ್ನನಾ ನೀಳಕೇಶಪ್ರಸರಂ: ಆದಿಪು, ೧೧. ೧೬); [ನಾ] ಉತ್ತರೀಯ (ರಿಪುಕುರಂಗಕಂಠೀರವನ ಕೆಯ್ಯೊಳ್ ವೈಕರ್ತನಂ ಸಾಯಲೊಡಂ ಮೇಲುದಂ ಬೀಸಿ ಬೊಬ್ಬಿಱಿದಾರ್ವ ಪಾಂಡವಪತಾಕಿನಿಯೊಳ್: ಪಂಪಭಾ, ೧೨. ೨೧೮)
ಮೇಲೆ ಬೀೞ್
[ಕ್ರಿ] ಮೇಲೆ ಬೀಳು, [ಲೈಂಗಿಕಾಸಕ್ತಿಯಿಂದ] ಮುಂದುವರಿ (ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ತು ಸೈರಿಸಲಾಱದೆ ಏಕಾಂತದೊಳ್ ಮೇಲೆ ಬಿೞ್ದೊಡೆ: ಪಂಪಭಾ, ೮. ೨೮ ವ)
ಮೇಲೇೞ್
[ಕ್ರಿ] ಆಕ್ರಮಣ ಮಾಡು (ಸೆಣಸುವ ಅಹಿತರ್ ಮೇಲೇೞ್ವ ಉದ್ಯೋಗಮಂ ಬಗೆದಿರ್ದರ್ ಎನ್ನಣುಗಿನ ಅಳಿಯಂಗೆ ಎನ್ನಿಂ ಮೇಗಿಲ್ಲ ಕೂರ್ಪವರ್: ಆದಿಪು, ೪. ೯೦)
ಮೇಲ್
[ನಾ] ಮಿಗಿಲಾದುದು, ಶ್ರೇಷ್ಠವಾದುದು (ಪರಮಾರ್ಹಂತ್ಯಮನೆಯ್ದಲಿರ್ದುದಱಿಂ ಮೇಲುಂಟೆ ಸತ್ತ್ವಂ ಚರಾಚರಮಂ ನೆಟ್ಟನೆ ಪರ್ವಲಿರ್ದುದಱಿಂ ಮೇಲುಂಟೆ ವಿಜ್ಞಾನಂ: ಆದಿಪು, ೯. ೬೨)
ಮೇಲ್ಮಲೆಗೆಯ್
[ಕ್ರಿ] ಮೇಲೆ ಮೇಲೆ ಹುರುಡು ತೋರಿಸು, ಮನಸ್ಸಿಟ್ಟು ಹೋರಾಡದೆ (ಕುರುಪತಿಗಿಲ್ಲ ದೈವಬಲಂ ಆಜಿಗೆ ಮೇಲ್ಮಲೇಗೆಯ್ವರ್ ಆಗಳುಂ ಗುರು ಗುರುಪುತ್ರ ಸಿಂಧುಸುತರ್: ಪಂಪಭಾ, ೯. ೭೦)
ಮೇಲ್ವಾಯ್