Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮಂಡಳಿಸು
[ಕ್ರಿ] ವೃತ್ತಾಕಾರವಾಗಿ ತಿರುಗು (ತುಱುಗಿರ್ದ ಬಲ್ಮಿಡಿಯ ತೂಗುಂಗೊಂಬಿನೊಳ್ಪಾಯ್ದು ಮಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬)
ಮಡಿ
[ನಾ] ಪಾತಿ (ಮಡಿಗಳೊಳಗಲರ್ದ ನೆಯ್ದಿಲ ಕಡುಗಂಪುನಿವಱ ಕಂಪು ಗೆಲ್ದುವು ಸಾಸಿರ್ಮಡಿ ಎನೆ ಪೊಂಬಣ್ಣದ ಕೆಂಪಿಡಿದಿರೆ ಸೊಗಯಿಪುವು ಗಂಧಶಾಳಿವನಂಗಳ್: ಆದಿಪು, ೧. ೬೦); [ನಾ] ತಿರಿ, ಕೀಳು (ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನಾವಗಂ ಗೆಲ್ದ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ: ಪಂಪಭಾ, ೨. ೩೯ ವ); [ನಾ] ಒಗೆದ ಬಟ್ಟೆ (ಚಂದನದೊಳ್ ತಳಿರ್ವಾಸು ಬೆಳ್ಪನಾಳ್ದತ್ತು ದುಕೂಲದೊಂದು ಮಡಿ ಮಾಸಿದ ಮಾೞ್ಕೆವೊಲಾಯ್ತು: ಪಂಪಭಾ, ೫. ೧೭)
ಮಂಡಿತ
[ಗು] [ಅಧಿಕಾರಕ್ಕಾಗಿ] ನೆಲೆಗೊಳಿಸಿದ (ಶೌರ್ಯಾವಷ್ಟಂಭದಿಂ ಆಳ್ದವನಾಂ ಷಟ್ಖಂಡಮಂಡಿತ ಕ್ಷಿತಿತಳಮಂ: ಆದಿಪು, ೧೩. ೭೬)
ಮಡಿಪು
[ಕ್ರಿ] ಕೊಲ್ಲು (ಆ ಮಾರ್ಗಣದಿಂ ಗಡ ಮತ್ತುೞಿದರಂ ಎಂತುಂ ಮಡಿಪದೆ ಗುರುತನಯಂ ಎಚ್ಚ ಶಿತನಾರಾಚಂ: ಪಂಪಭಾ, ೧೨. ೭೨)
ಮಡಿಮಡಿಗೆ
[ಅ] ಬಾರಿಬಾರಿಗೂ (ಮಡಿಮಡಿಗುಱುವುದುಂ ಒಂದು ಪತ್ತೆಂಟು ಪಲಗೆಯಂ ಮೆೞ್ಪಡಿಸಲೆಂದು ಸೋಲ್ತು ಸೋಲದೊಳೇವಯಿಸಿಯಿನ್ನೊಡ್ಡಂ ಕೊಳ್ಳಿಂ ಎಂದು: ಪಂಪಭಾ, ೬. ೭೧ ವ)
ಮಡಿಯಿಸು
[ಕ್ರಿ] ಸಾಯಿಸು (ಮುಡಿಯಂ ಪಿಡಿದೆೞೆದವನಂ ಮಡಿಯಿಸಿ ಮತ್ತವನ ಕರುಳ ಪಿಣಿಲಿಂದ ಎನ್ನಂ ಮುಡಿಯಿಸುವಿನೆಗಂ ಮುಡಿಯಂ ಮುಡಿಯೆಂ ಗಡ ಕೇಳಿಂ ಈಗಳ್ ಆನ್ ನುಡಿನುಡಿದೆಂ: ಪಂಪಭಾ, ೭. ೧೦)
ಮಡಿವಳ್ಳ
[ನಾ] ಅಗಸ, ಮಡಿವಾಳ (ಪೞಿ ಚಿತ್ರಾವಳಿ ಜೋನೆಗವೞಿಯಂ ದೇವಾಂಗಮೆಂಬ ವಸನಂಗಳನೇಂ ಮಡಿವಳ್ಳನ ಪೞಿಯತನನೆ ಪೋಲ್ತು ವಿಶದ ವಸನಾಂಗಕುಜಂ: ಆದಿಪು, ೫. ೩೪)
ಮಡು
[ನಾ] ನದಿಯ ಆಳವಾದ ಜಾಗ (ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨); [ನಾ] ಕೊಳ (ಅರೆಮುಚ್ಚಿ ಕಣ್ಗಳಂ ನಿಶ್ಚಳಿತಂ ತಾನಿರ್ದು ಮಱೆದು ಕೆಂದಿದ ಮೀನಂ ತಳ್ತಾಡದಿರ್ದ ಮಡುವಂ ಪೋಲ್ತಂ: ಪಂಪಭಾ, ೮. ೧೩)
ಮಣಲ್
ಮರಳು (ಮುಡಿಯ ಕುಚಯುಗದ ಜಘನದ ಕಡುವಿಣ್ಪಿಂ ಮಣಲೊಳ್ ಅೞ್ದುಬರೆ ಮೆಲ್ಲಡಿಗಳ್: ಪಂಪಭಾ, ೭. ೮೫)
ಮಣಿ
[ಕ್ರಿ] ಸೋಲು (ಉಗ್ರಮಾರ್ಗಣಂ ಆ ವೀರನಿನಾದ ಸಿಂಹನಿನದಂ ತಮ್ಮಂ ಪಳಂಚಲ್ಕೆ ತತ್ಫಣಿವೃಂದಂ ಮಣಿದೋಡೆ: ಆದಿಪು, ೧೩. ೬೭); [ನಾ] ರತ್ನ (ಮಣಿಮೌಕ್ತಿಕ ನೀಳಸ್ಥೂಳಶಿಲಾಪ್ರವಿಭಾಸಿತ ಉತ್ತುಂಗಮಂ ಮುನಿಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫); [ಕ್ರಿ] ಹೆದರು (ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱಿದು ಪೊೞ್ತು ಕಾದಿ ನಿಂದಾಗಳ್: ಪಂಪಭಾ, ೧೦. ೮೫ ವ); [ಕ್ರಿ] ಬಾಗು (ಮಣಿಕುಂಡಲಂ ಕವಚಂ ಮಣಿಯದ ಚಾರಿತ್ರಂ ಉಗ್ರತೇಜಮುಂ ಈ ಒಳ್ಗುಣಮುಂ ಕಲಿತನಮುಂ ಇವೇಂ ಪ್ರಣತಾರೀ ಸೂತಸುತನೊಳ್ ಒಡವುಟ್ಟುಗುಮೇ: ಪಂಪಭಾ, ೧೨. ೯೮)
ಮಣಿಕಟಕ
[ನಾ] ರತ್ನದ ಕಟಕ ಹಾಗೂ ಸಾನು ಪ್ರದೇಶ (ಮಣಿಮಕುಟಂ ಶಿಖರಂ ಲಂಬಣಿಗೆಯ ಪೊಸಮುತ್ತು ನಿರ್ಝರಂ ಮಣಿಕಟಕಂ ಮಣಿಕಟಕಮಾಗೆ ತದ್ಗಿರಿಗೆಣೆಯಾದಂ ತನ್ನ ಪೆಸರೊಳಂ ವಿಜಯಾರ್ಧಂ: ಆದಿಪು, ೧೩. ೧೩)
ಮಣಿಕುಟ್ಟಿಮ
[ನಾ] ರತ್ನಖಚಿತ ನೆಲಗಟ್ಟು (ರಂಜಿಸೆ ಚರಣಾಲಕ್ತಕ ರಂಜನೆ ಮಣಿಕುಟ್ಟಿಮಂಗಳಂ: ಆದಿಪು, ೮. ೧೮)
ಮಣಿಕುಂಡಲ
[ನಾ] ರತ್ನಖಚಿತವಾದ ಕವಚ (ಒಡವುಟ್ಟಿದ ಮಣಿಕುಂಡಲಂ ಒಡವುಟ್ಟಿದ ಸಹಜಕವಚಂ ಅಮರ್ದಿರೆ ತನ್ನೊಳ್ ತೊಡರ್ದಿರೆಯುಂ ಬಂದಾಕೆಯ ನಡುಕಮಂ ಒಡರಿಸಿದನಾಗಳ್: ಪಂಪಭಾ, ೧. ೯೫)
ಮಣಿಗಣ
[ನಾ] ರತ್ನದ ರಾಶಿ (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ ಸಮುಚ್ಚಳತ್ ಮಣಿಗಣ ಆತ್ತ ಮರೀಚಿಲತಾಪ್ರತಾನಸಂವಳಿಯಿತ: ಪಂಪಭಾ, ೪. ೨೫)
ಮಣಿದೀಪ
[ನಾ] ರತ್ನಖಚಿತ ದೀಪ (ಆಪೊತ್ತುಂ ಮಣಿದೀಪಕಳಾಪೋದ್ಯಜ್ಜ್ಯೋತಿಗಳ್ ದಿಶಾಮಂಡಲಮಂ ವ್ಯಾಪಿಸುತಿರೆ: ಆದಿಪು, ೫. ೪೦)
ಮಣಿನಿಚಯ
[ನಾ] ರತ್ನರಾಶಿ (ಗಂಡಸ್ಥಳಕರಿನಿಕರಂ ಬಾೞ್ತೆಯೋ ಮೆಚ್ಚುವೇೞ್ ಆಜಾನೇಯ ಅಶ್ವೋತ್ಕರಂ ಬಾೞ್ತೆಯೋ ಮಣಿನಿಚಯಂ ಬಾೞ್ತೆಯೋ: ಪಂಪಭಾ, ೬. ೪೦)
ಮಣಿನೂಪುರಮಂಜುಶಿಂಜಿತ
[ಗು] ರತ್ನಖಚಿತ ಕಾಲಂದುಗೆಯ ಇನಿದನಿ (ಆಗಳೇಂ ಪೊದಳ್ದೆಸೆದುದೊ ಚಾರುದೇವಗಣಿಕಾ ಮಣಿನೂಪುರಮಂಜುಶಿಂಜಿತಂ: ಆದಿಪು, ೭. ೨೨)
ಮಣಿಮಕುಟ
[ನಾ] ರತ್ನಖಚಿತವಾದ ಕಿರೀಟ (ಆತಂ ನಿಜವಿಜಯಖ್ಯಾತಿಯನಾಳ್ದು ಆಳ್ದನಧಿಕಬಲನವನಿಪತಿವ್ರಾತ ಮಣಿ ಮಕುಟ ಕಿರಣದ್ಯೋತಿತ ಪಾದಂ ಸಪಾದ ಲಕ್ಷಕ್ಷಿತಿಯಂ: ಪಂಪಭಾ, ೧. ೧೬)
ಮಣಿಮುದ್ರಿಕೆ
[ನಾ] ಹರಳುಂಗುರ (ಮಕುಟಂ ಕೇಯೂರಂ ಕರ್ಣಕುಂಡಲಂ ಕೊಪ್ಪು ಸರಿಗೆ ದುಸರಂ ಮಣಿಮುದ್ರಿಕೆ ತಿಸರಮೆಂಬ ಭೂಷಾನಿಕರಮಂ: ಆದಿಪು, ೫. ೩೩)
ಮಣಿರತ್ನ