Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮೇವಳಿ
[ನಾ] ಮೇಯುವ ಸ್ಥಳ (ನೆಲನಂ ನಿಱುಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ .. .. ನಿಱಿಸುವೆಂ ಪಂದಿಯಂ: ಪಂಪಭಾ, ೫. ೪೬)
ಮೇಹನ
[ನಾ] ಆನೆಯ ಜನನಾಂಗದ ಅಂಗಭಾಗ (ಪೀನಾಯತಾಮ್ರಪಲ್ಲವ ಕೋಶ ಸುಕೋಶ ಮೇಹನನುಂ: ಆದಿಪು, ೧೨. ೫೬ ವ)
ಮೇಳ
ಜೊತೆ (ಚಾಮರದಡಪದ ಡವಕೆಯ ಕನ್ನಡಿಯ ಪರಿಚಾರಿಕೆಯರುಂ ಒಡನಾಡಿ ಬಳೆದ ಮೇಳದ ಕೆಳದಿಯರುಂ: ಆದಿಪು, ೩. ೨೩ ವ); [ನಾ] ಸಮಾಗಮ, ಸೇರುವಿಕೆ (ಇನಿವಿರಿದೊಂದು ಮೇಳಮುಂ ಒಡಂಬಡು ಅೞ್ಕಱುಂ ಎನ್ನ ನಿನ್ನ ಮುನ್ನಿನ ಭವದೊಂದು ಕೂರ್ಮೆಯೊಳೆ ಕೂಡಿದುದು: ಆದಿಪು, ೪. ೫೨); [ನಾ] ಸ್ನೇಹ (ಸುತನೆಂಬ ಮೇಳದಿಂ ನಿನಗೆ ಅತರ್ಕ್ಯಬೋಧಂಗೆ ಯುಕ್ತಿಯಂ ತೋಱೆ: ಆದಿಪು, ೮. ೧೪); [ನಾ] ಸಂಬಂಧ (ನೀಂ ಕುಡೆ ಪಡೆದೆವಿಳಾತಳಮಂ ಒಡನೆ ಪುಟ್ಟಿದ ಮೇಳಕ್ಕೆ ಅಡಿಗೆಱಗಿಂ ಎಂದು ಭರತಂ ಜಡಿವಂ: ಆದಿಪು, ೧೪. ೩೬)
ಮೇಳಗಾಳೆಗ
[ನಾ] ಆಟಕ್ಕಾಗಿ ಆಡುವ ಯುದ್ಧ (ಕಾದುವ ಮಾೞ್ಕೆಯಲ್ಲಮಿದು ಕೆಮ್ಮನೆ ನಣ್ಪಿನ ಮೇಳಗಾಳೆಗಂಗಾದುವ ಮಾೞ್ಕೆ: ಪಂಪಭಾ, ೧೩. ೪೩)
ಮೇಳದಂಕ
[ನಾ] ಸ್ನೇಹದ ಯುದ್ಧ (ಮೇಳದಂಕದಂತೆ ಸುೞಿಯಱಿದುಂ ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ: ಪಂಪಭಾ, ೬. ೭೨ ವ)
ಮೇಳದಾಕೆ
[ನಾ] ಸಖಿ, ಪರಿಚಾರಿಕೆ (ಪೊಸದಳಿಂಬದ ಮೇಗೆ ಕಿಱಿದು ಬೇಗಂ ವಿಶ್ರಮಿಸಿ ಮೇಳದಾಕೆಗಳ್ವೆರಸು ಬಂದು ಕಾವಣಮಂ ಪುಗಲೊಡನೆ: ಆದಿಪು, ೧೧. ೭೩ ವ)
ಮೇಳಿಸಿದಪ್ಪುದು
ಮೋದಗೊಳಿಸುತ್ತಿದೆ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಮುರ್ಚಿದ ಫಣಾಮಣಿಮಂಗಳ ರಶ್ಮಿಯೋ ಕರಂ ಮೇಳಿಸಿದಪ್ಪುದೆನ್ನೆರ್ದೆಯಂ: ಪಂಪಭಾ, ೧. ೯೬)
ಮೇಳಿಸು
[ಕ್ರಿ] ಲಲ್ಲೈಸು, ಮುದ್ದುಮಾಡು (ಎರೆವ ಮರಲ್ವ ಲಲ್ಲಯಿಪ ಕಾಲ್ವಿಡಿವ ಎಂಬುದನಿಂಬುಕೆಯ್ವ ಅಳಂಕರಣವಿಳಾಸದಿಂ ಮೆಱೆವ ಮೇಳವಿಸುವಂದಿನ ರೂಪು ಶಾಸನಂ ಬರೆದುದು: ಆದಿಪು, ೩. ೪೩); [ಕ್ರಿ] ಜೊತೆಗೂಡು, ಸೇರಿಕೊ (ಪೆಱರಾಳಂ ಛಿದ್ರಿಸುವೆವೆಂಬ ಪಾಂಡವರೊಳ್ ನೀಂ ಮೇಳಿಸಿ ನಣ್ಪನೆ ಬಗೆದಿರ್: ಪಂಪಭಾ, ೧೧. ೧೫)
ಮೈತ್ರ
[ನಾ] ಮಿತ್ರತ್ವ, ಗೆಳೆತನ (ಪೞವೆಗಂ ಪಾಗುಡಕ್ಕಂ ಪಳಬದ್ದಕ್ಕಂ .. .. ವೈವಾಹಿಕಸಂಬಂಧಕ್ಕಂ ಮೈತ್ರಕ್ಕಂ .. .. ಮಹಾನದಿಗಳ್ ಕೂಡುವಂತೆ: ಪಂಪಭಾ, ೯. ೯೫ ವ)
ಮೈತ್ರಾವರುಣ
[ನಾ] ಯಜ್ಞದಲ್ಲಿ ಭಾಗವಹಿಸುವ ಒಬ್ಬ ಪುರೋಹಿತ (ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜ ಬ್ರಹ್ಮ ಅಧ್ವರ್ಯು ಅಗ್ನೀಧ್ರ ಮೈತ್ರಾವರುಣ ಅಗ್ನಿಪರಿಚಾರಕ: ಪಂಪಭಾ, ೬. ೩೩ ವ)
ಮೈತ್ರಾಸನವೃತ್ತಿ
[ನಾ] ಸ್ನೇಹಿತರಾಗಿ ಉದಾಸೀನರಾಗಿರುವ ರೀತಿ (ಮತ್ತಮಲ್ಲಿ ಕೆಲರಂ ಮೈತ್ರಾಸನವೃತ್ತಿಯೊಳ್ ನಿಱಿಸಿ ಕೆಲರಂ ಉತ್ಖಾತಪ್ರತಿರೋಪಿತರ್ಮಾಡಿ ಕೆಲರಂ ಉಚ್ಚಾಟಿಸಿ ಸರ್ವಹರಣಂಗೆಯ್ದು: ಪಂಪಭಾ, ೬. ೩೦ ವ)
ಮೈತ್ರಿ
[ನಾ] ಸ್ನೇಹ (ಜಗತ್ಕಾಯಸ್ವಭಾವ ಭಾವನಾಪರಂ ಸಕಳಶರೀರಗುಣಾಧಿಕ ದುಃಖಾರ್ದಿತ ಅವಿನೀತರೊಳ್ ಮೈತ್ರಿ ಪ್ರಮೋದ ಕಾರುಣ್ಯ ಮಾಧ್ಯಸ್ಥವೃತ್ತಿಗಳಂ ಭಾವಿಸುತ್ತುಂ: ಆದಿಪು, ೯. ೧೨೯ ವ)
ಮೈಂದವಾೞೆ
[ನಾ] ಒಂದು ಬಗೆಯ ಬಾಳೆ, ಮಹೇಂದ್ರ ಬಾಳೆ (ಗೊಲೆಯೊಳ್ಪಣ್ತುದು ಮೈಂದವಾೞೆ ಪಥಿಕರ್ಬರ್ಕೆಂದು ಭೃಂಗಂಗಳಿಂದುಲಿವಂತಿರ್ದುದು ಪಣ್ತ ಬಕ್ಕೆ ತನಿವಣ್ಣಾಗಿರ್ದುದು: ಆದಿಪು, ೧೧. ೬೮)
ಮೈಮೆ
[ನಾ] [ಮಹಿಮೆ] ವೈಭವ (ಸತಿ ಯಶಸ್ವತಿ ವಿಶ್ವಮಹೀತಳಂ ಗುಣಂಗೊಳೆ ಪಡೆದಳ್ ತದಗ್ರಮಹಿಷೀಪದದೊಳ್ ಪಿರಿದೊಂದು ಮೈಮೆಯಂ: ಆದಿಪು, ೮. ೪೫)
ಮೈಮೈಯೊಡಂಬಡು
[ಕ್ರಿ] ದೇಹಕ್ಕೆ ದೇಹವನ್ನು ಸೇರಿಸು (ನೆಲನಂ ಪರ್ವುವ ಬಳ್ಳಿಗಂ ಚದುರನೊಳ್ ಮೈಮೈಯೊಡಂಬಟ್ಟು ತಳ್ತ ಲತಾಕೋಮಳೆಗಂ: ಆದಿಪು, ೧೨. ೧೮)
ಮೈಯನಿಕ್ಕು
[ಕ್ರಿ] ಹಾಸಿಗೆಯ ಮೇಲೆ] ದೇಹವನ್ನು ಚಾಚು, ಮಲಗಿಕೊ (ಮೆಯ್ಯನಿಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱಿದಂತೆ ಕಾಮನ ಬೇಟದಚ್ಚುಗಳ ಮಾೞ್ಕೆಯೊಳ್ ಇರ್ದುದು ಮೆಯ್ ಸುಭದ್ರೆಯಾ: ಪಂಪಭಾ, ೫. ೧೭)
ಮೈಯಿಕ್ಕು
[ಕ್ರಿ] ನಮಸ್ಕರಿಸು (ಮಕುಟಬದ್ಧಾಧೀಶರಾಗಳ್ ವಸುಂಧರೆಯಂ ಪರ್ವಿರೆ ಮೈಯನಿಕ್ಕೆಯುಂ ಉದಾತ್ತೋತ್ಸಾಹದಿಂ ರಾಜಮಂದಿರಮಂ ಪೊಕ್ಕನುದಾರ ಸಾರವಿಭವಂ ಸಂಸಾರಸಾರೋದಯಂ: ಆದಿಪು, ೧೨. ೧೨೯)
ಮೈಯೆಱಗು
[ಕ್ರಿ] ಮೈ ಬಾಗು (ಅಱಿಮರುಳಂತುಟೆ ಸೊರ್ಕಿನ ತೆಱನಂತುಟೆ ಮನಮೊಱಲ್ದು ಎರ್ದೆಯುರಿವುದು ಮೆಯ್ಯೆಱಗುವುದು ಪದೆವುದು ಆನಿದನಱಿಯನಿದೇಕೆಂದು ಕನ್ನೆ ತಳವೆಳಗಾದಳ್; ಪಂಪಭಾ, ೪. ೭)
ಮೈವಿಡಿ
[ಕ್ರಿ] [ಮೈ+ಪಿಡಿ] ಸಾಕಾರವಾಗು (ಕರಮೆ ಮಱುಗಿ ಮೆಯ್ವಿಡಿದು ಉರಿವ ಎನ್ನೀ ಎರ್ದೆಯನಾಱಿಸಲ್ ನೀಂ ಬಾಯೊಳ್ ತಂಬುಲಮನಪ್ಪೊಡಂ ದೆಗೆಯ್ವೋ: ಪಂಪಭಾ, ೮. ೬೯)
ಮೊಕ್ಕಳಂ