भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೊಕ್ಕುಮೊಕ್ಕೆನೆ

[ಅ] ಮೊಕ್ ಮೊಕ್ ಅಥವಾ ಪುಳುಕ್ ಪುಳುಕ್ ಎಂದು (ನಿಶಾತಶರಾಳಿಗಳ್ ಎಯ್ದೆ ಚಕ್ಕುಚಕ್ಕನೆ ಕೊಳೆ ಮೊಕ್ಕುಮೊಕ್ಕೆನೆ ಶಿರಂಗಳುಋಉಳ್ದುವು ವೈರಿಭೂಪರಾ: ಪಂಪಭಾ, ೧೨. ೧೧೯)

ಮೊಗ

[ನಾ] ಮುಖ (ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದೆ: ಪಂಪಭಾ, ೧. ೮೫ ವ)

ಮೊಗಂ ಮುರಿ

[ಕ್ರಿ] ಮುಖ ತಿರುಗಿಸು (ಮದ್ರರಾಜನಳಿಯನ ಪರಾಕ್ರಮಕ್ಕೊಸೆದು ಮೊಗಂಮುರಿಯದೆ ಪೆಱತುಂ ರಥಮಂ ತರಿಸಿ ಕನಲ್ವಡರ್ದು ಕದನಕಾಗಳೆ ನೆಱೆದಂ: ಪಂಪಭಾ, ೧೦. ೧೦೭)

ಮೊಗಂ ಮುಱಿ

[ಕ್ರಿ] ಮುಖ ಗಂಟಿಕ್ಕು (ಮೊಗಂ ಮುಱಿಯದೆ ಎಲ್ಲಮಂ ತೊಱೆದು ವಿಶ್ವವಿಶ್ವಂಭರಾದಿಗಂಬರತಟಂಬರಂ ಬಳಸೆ ಕೀರ್ತಿವಲ್ಲೀಚಯಂ: ಆದಿಪು, ೩. ೫೭)

ಮೊಗಂ ಸೋಲ್

[ಕ್ರಿ] ಮುಖ ಭಗ್ನಗೊಳ್ಳು (ಬಾಹುಬಲಿಯ ಸುರಕರಿಕರಾನುಕಾರಿಯಪ್ಪ ಬಾಹುಗಳಿಂದಂ ತುಳ್ಕಿದ ನೀರ್ಗೆ ಮೊಗಮನೊಡ್ಡಿ ಮೊಗಂ ಸೋಲ್ವುದುಂ: ಆದಿಪು, ೧೪. ೧೦೮ ವ)

ಮೊಗಂಗಿಡು

[ಕ್ರಿ] [ಮೊಗಂ+ಕಿಡು] ಮುಖ ಕೆಡಿಸಿಕೊ, ಅಸಹ್ಯಪಡು (ಮಿಡಿದೊಡೆ ತನಿಗರ್ವು ರಸಂ ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂಗಿಡುವುವು: ಪಂಪಭಾ, ೧. ೫೫)

ಮೊಗಂದಿರಿ

[ಕ್ರಿ] [ಮೊಗಂ ತಿರಿ] ಮುಖ ತಿರುಗಿಸು, ವಿಮುಖವಾಗು, ಎದುರಿಸದೆ ಇರು (ಭೀಷ್ಮಂಗೆ ಚಕ್ರಂ ಇಂತೇಕೆ ಮೊಗಂದಿರಿದುದೊ ನಿಮ್ಮಂ ಪಿಡಿದೆನಗೆರಿದೆನಲ್ ಅರಿದುಂಟೆ ಧುರದೊಳೇಂ ಅಸುರಾರೀ: ಪಂಪಭಾ, ೧೧. ೨೫)

ಮೊಗಂನೋಡು

[ಕ್ರಿ] ಮುಖ ನೋಡು, [ಬೆಲೆಯ] ಪರಿಗಣನೆಯಿಲ್ಲದೆ (ಪರಿವೆಡೆಯ ತುಳಿವೆಡೆಯ ನೆಳಲಪಾಣಿಯ ಬಣ್ಣದ ಕಣದ ಬಣ್ಣವಣ್ಣಿಗೆಯ ಜವಳಿಗಳನೆ ಮೊಗಂನೋಡದೆ ಸೂಸಿದಾಗಳ್: ಆದಿಪು, ೪. ೩೪ ವ)

ಮೊಗಪೆ

[ನಾ] ರಾಟಾಳದಲ್ಲಿ ನಿರನ್ನು ಮೇಲೆತ್ತುವ ಪಾತ್ರೆ (ಖಳಸಂಸೃತಿಯೆಂಬುದೊಂದು ಱಾಟಣದೊಳಗಮ್ಮ ನೀಂ ಮೊಗಪೆಯಾಗದೆ ತಾಳ್ದಪವರ್ಗಮಾರ್ಗಮಂ: ಆದಿಪು, ೩. ೭೧)

ಮೊಗಂಬುಗಿಸು

[ಕ್ರಿ] ಮುಖಕ್ಕೆ ಮುಖ ಸೇರಿಸು, ಮುಖಾಮುಖಿಯಾಗಿಸು (ಅಂತಾ ದಂತಿಘಟೆಗಳಂ ಆರೋಹಕರ್ ತೋಱಿಕೊಟ್ಟು ಒಂದೊಂದರ್ಕೆ ಮೊಗಂಬುಗಿಸಿದಾಗಳ್ ಪಂಪಭಾ, ೧೦. ೯೩ ವ)

ಮೊಗರಾಗ

[ನಾ] ಮುಖಕಾಂತಿ (ಬರವಿನೊಳಾದೊಂದು ಮೊಗರಾಗಮೆ ಸಂತಸವಾತನಂತನಕ್ಷರಂ ಅಱಿಪುತ್ತುಮಿರ್ಪಿನೆಗಂ: ಆದಿಪು, ೩. ೮೫)

ಮೊಗವಡ

[ನಾ] ಮುಖವಾಡ (ಆಗಳೇಱಿಸಿದ ಬಿಸುಗೆಗಳುಂ ಇಕ್ಕಿದ ಲೋಹವಕ್ಕರೆಗಳುಂ ಉರ್ಚಿದ ಮೊಗವಡಂಗಳುಂ ಕಟ್ಟಿದ ಪೞಯಿಗೆಗಳುಂ: ಪಂಪಭಾ, ೧೦. ೫೧ ವ)

ಮೊಗಸು

[ಕ್ರಿ] ಆವರಿಸು (ಸುಯ್ಯ ಪರಿಮಳದ ಪೊದಳ್ಕೆಗೆ ಸೋಲ್ತು ಸೂೞಸೂೞದೆ ಮೊಗಸಿದುವೆರಡೆಡೆಗಂ ಅಲಸದೆ ಅಳಿಗಳ ಬಳಗಂ: ಆದಿಪು, ೧೦. ೩೧); [ಕ್ರಿ] ಹಿಂದಿರುಗು (ಅೞ್ಕಱಿನೊಳ್ ಅಯೋಧ್ಯೆಗೆ ಮೊಗಸಿದನಱಿಕೆಯ ಪಱಿ ಪಲವುಮೆಸೆಯೆ ಭರತಮಹೀಶಂ: ಆದಿಪು, ೧೪. ೨); [ಕ್ರಿ] ಮುತ್ತಿಕೊ (ಸುರಿವ ಸರಯಿಯರಲ ಮುಗುಳ್ಗೆ ಮೊಗಸಿದಳಿ ಕುಳಂಗಳಿಂ ತೊದಲ್ವ ಶಿಶುಶುಕಂಗಳಿಂ: ಪಂಪಭಾ, ೧. ೫೮)

ಮೊಗೆ

[ಕ್ರಿ] ತುಂಬಿಕೊ, ಸೆರೆಹಿಡಿ (ಚಾರುವೀರಭಟಕೋಟಿಗೆ ರಾಗರಸಂ ಪೊದಳ್ದು ತುಳ್ಕುತ್ತಿರೆ ಬಂದು ಮೊಗೆದಂ ವಿಭು ಗೋಕುಲಮಂ ವಿರಾಟನಾ: ಪಂಪಭಾ, ೮. ೯೨)

ಮೊಗ್ಗು

[ಕ್ರಿ] ಸಾಧ್ಯ, ಸುಲಭ (ಶಕ್ತಿಯನದಂ ಕರ್ಣಂ ನರಂಗೆಂದು ಬಯ್ತು ಅವಂ ಇಂದೆ ಅೞಿವೆಯ್ದೆ ವಂದೊಡೆ ಅದಱಿಂದಾತನಂ ಕೊಂದಂ ಇನ್ನಿವನಂ ಕೊಲ್ವುದು ಮೊಗ್ಗು: ಪಂಪಭಾ, ೧೨. ೧೬)

ಮೊಗ್ಗೇ

[ಅ] [ಮೊಗ್ಗು+ಏ] ಸಾಧ್ಯವೇ, ಸುಲಭವೇ ? (ಗಾಳು ಗೊರವಂ ತಗುಳ್ಚಿ ಪಳಾಳಮಂ ಏನೊಂದನಪ್ಪೊಡಂ ಗೞಪಿದೊಡೆ ಆ ಬೇಳುನುಡಿ ಕೇಳ್ದು ಕೆಮ್ಮನೆ ಬೇಳಲ್ ನಿಮಗಂತು ರಾಜಸೂಯಂ ಮೊಗ್ಗೇ: ಪಂಪಭಾ, ೬. ೨೪)

ಮೊಚ್ಚೆಯ

[ನಾ] ಪಾದರಕ್ಷೆ (ಪೆಱಗೇಱಿ ಬರ್ಪ ಕನ್ನಡಿವಿಡಿದಾಕೆ ಚಿನ್ನದ ಸವಂಗಂ ಅಪೂರ್ವದ ಮೊಚ್ಚೆಯಂ ಪವಣ್ಬಡೆದ ಸುವರ್ಣಪಾರಿವದ ಕುಪ್ಪಸಮೊಪ್ಪೆ: ಪಂಪಭಾ, ೯. ೧೦೩)

ಮೊಟ್ಟನಪ್ಪಿನಂ

[ಅ] ಮಟ್ಟಸವಾಗುತ್ತಿರಲು, ನೆಲಸಮವಾಗುತ್ತಿರಲು (ದೇವಕಿನ್ನರಪನ್ನಗಾವಳಿ ಮೊಟ್ಟನಪ್ಪಿನಂ ಎಚ್ಚು ಕೊಂದು ಏವರ್ ಎಂದು ಉಱದಿರ್ದಂ ಒರ್ವಂ: ಪಂಪಭಾ, ೫. ೯೪)

ಮೊಟ್ಟನಾಗು

[ಕ್ರಿ] ಕಿರಿದಾಗು, ಕುಗ್ಗು (ದೆಸೆಗಳ್ ಪೆರ್ಚದೆ ಮೊಟ್ಟನಾದುವಗಲಕ್ಕೆಂಬನ್ನೆಗಂ .. .. ಅದ್ರೀಂದ್ರಂಗಳಂ ತಂದು ಕೀಲಿಸಿದಂ ನಿಶ್ಚಳಮಪ್ಪಿನಂ: ಆದಿಪು, ೧೫. ೫೦)

ಮೊತ್ತಮೊದಲ್

[ಅ] ಎಲ್ಲಕ್ಕಿಂತ ಮೊದಲು (ನಿರಂತರಂ ಸುಖವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ: ಪಂಪಭಾ, ೧. ೧೪೯)

Search Dictionaries

Loading Results

Follow Us :   
  Download Bharatavani App
  Bharatavani Windows App