Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮೊದಲಾಗು
[ಕ್ರಿ] ಆರಂಭಗೊಳ್ಳು (ರಾಜ್ಯಲಕ್ಷ್ಮಿ ಮೊಱೆಯಲ್ತೆನಗೆ ಅಂತದು ಪೆಂಡಿರೆಂಬರೊಳ್ ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಂ: ಪಂಪಭಾ, ೧. ೭೩)
ಮೊದಲಿಗೆ
[ನಾ] ಆರಂಭಿಸಿದವಳು (ದೇವಲೋಕದೊಳಿನಿತಾನುಂ ಕಾಲಮನನುಭವಿಸಿದನುಭವಕ್ಕೆ ಮೊದಲಿಗೆಯೆನಿಸಿದಾ ಸ್ವಯಂಪ್ರಭೆಯಂ ನೆನೆನೆನೆದು: ಆದಿಪು, ೩. ೧೧ ವ)
ಮೊದಲಿಡು
[ಕ್ರಿ] ಮೊದಲಿಕ್ಕು, ಆರಂಭಿಸು (ಮೊದಲಿಟ್ಟಂ ಕೊಲಲೆಂದು ಕೌರವರಂ . .. ಪರಿತಂದು ತಾಗಿ ತಗರ್ದಂ ಗಂಗಾಸುತಂ ಭೀಮನಂ: ಪಂಪಭಾ, ೧೦. ೧೦)
ಮೊದಲುರ
[ನಾ] ಎದೆಯ ಕೆಳಭಾಗ (ಪುಗಿಲ ಪುಲ್ಲೆಯ ಮೊದಲ ರವಮುಮಂ ಪೆಱಗಣ ಪುಲ್ಲೆಯ ನಡುವುಮಂ ಅಯ್ದಱೊಳ್ ಮೂಱುಮಂ ಮೂಱಱೊಳ್ ಎರಡುಮಂ ಎರಡಱೊಳ್ ಒಂದುಮಂ ಎಚ್ಚು: ಪಂಪಭಾ, ೫. ೪೭ ವ)
ಮೊದಲ್
[ನಾ] ನೆಲೆ (ಚದುರ ಪುಟ್ಟಿದನೆಲ್ಲಿದನೆಲ್ಲಿದಂ ವಿನೋದದ ಮೊದಲೆಲ್ಲಿದಂ ಸೊಬಗಿನಾಗರಮೆಲ್ಲಿದಂ: ಆದಿಪು, ೩. ೧೫); [ನಾ] ಆರಂಭ, ನಾಂದಿ (ಬಲಸ್ಥನೊಳ್ ಬಲಮನೆ ಪೂಣ್ವುದುಂ ಪರಿಭವಕ್ಕೆ ಮೊದಲ್ ಸುರಸೈನ್ಯನಾಯಕಾ: ಆದಿಪು, ೧೨. ೧೦೩); [ನಾ] ಮರದ ಬುಡ (ಒಂದು ದಿವಸಂ ಮರಗೆರಸಿಯಾಡಲೆಂದು ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು: ಪಂಪಭಾ, ೨. ೩೦ ವ); [ನಾ] ಅಗ್ರಭಾಗ (ಅಂತು ಒರ್ವರೊರ್ವರ ಕಿಱುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು: ಪಂಪಭಾ, ೩. ೭೫ ವ)
ಮೊದಲ್ಗಿಡು
[ಕ್ರಿ] ಬೇರು[ಸಹಿತ] ಹಾಳಾಗು (ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಂ ಏಕವಿಂಶತಿ ಪರಿಸಂಖ್ಯೆಯಿಂ ತವಿಸಿ: ಪಂಪಭಾ, ೨. ೪೫); [ಕ್ರಿ] ನಿಂತುಹೋಗು (ಘನಾಗಮಂ ಮೊದಲ್ಗಿಡೆ ಶರದಾಗಮಂ ನೆಱೆಯೆ ಪರ್ಬೆ ಸಮಸ್ತಮಹೀವಿಭಾಗಮಂ: ಪಂಪಭಾ, ೭. ೬೯); [ಕ್ರಿ] ಕಡಿಮೆಯಾಗು, ಕ್ಷೀಣಿಸು (ತುಂಬಿಯ ಗಾವರಂಗಳಂ ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರಲ್ಮಿಡಿದು ಗುಣಾರ್ಣವಂ ನೆಱೆಯೆ ನಿಟ್ಟಸಿದಂ ಬೆಳಗಪ್ಪ ಜಾವಮಂ ಪಂಪಭಾ, ೪. ೧೧೦)
ಮೊನೆ
[ನಾ] ಯುದ್ಧ (ಅಲರಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲೊಳಗಣಿಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗೆ: ಪಂಪಭಾ, ೪. ೩೮ ವ); [ನಾ] ಸೈನ್ಯದ ಮುಂಭಾಗ (ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀಮನ ಮೊನೆಯಂ ವನೀಪಕರಂ ಆರಯಲಟ್ಟಿ: ಪಂಪಭಾ, ೧೦. ೫೮); [ನಾ] ತುದಿ (ಬೇಱೊಂದು ಮೊನೆಯೊಳ್ ಕಾದುತ್ತಿರ್ದ ಅಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ: ಪಂಪಭಾ, ೧೨. ೩೦ ವ)
ಮೊನೆಗಾಱ
[ನಾ] ಯುದ್ಧಪ್ರವೀಣ (ಅರಸಿಯರಂ ಅಣುಗರಂ ಬೇೞ್ಪರುಮಂ ಮೊನೆಗಾಱರಂ ಪ್ರಗೀತರಂ ಇಂಬಾಗಿರೆ ಚೌಪಳಿಗೆಗಳೊಳ್ ಕುಳ್ಳಿರಿಸಿದರ್ ಪಡನೆಸೆಯೆ ನೆರೆದ ಪುರಜನಸಹಿತಂ: ಪಂಪಭಾ, ೨. ೬೭)
ಮೊನೆಯಂಬು
[ನಾ] ಒಂದು ಬಗೆಯ ಬಾಣ, ಮೊನಚಾದ ಬಾಣ ? (ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ: ಪಂಪಭಾ, ೧೩. ೩೯)
ಮೊಮ್ಮ
[ನಾ] ಮೊಮ್ಮಗ (ನವನಿಧಿವಲ್ಲಭಂ ಆನತದಿವಿಜಗಣಂ ನೆಗೞ್ದ ನಾಭಿರಾಜನ ಮೊಮ್ಮಂ: ಆದಿಪು, ೧೩. ೭೩)
ಮೊರೆ
[ಕ್ರಿ] ಅಬ್ಬರಿಸು (ಮೊರೆದೆಱಗಿ ಕೊಳ್ವ ಮೞೆ ಭೋರ್ಗರೆದೂದುವ ಗಾಳಿ ಸಿಡಿದು ಪೊಯ್ವ ಸಿಡಿಲ್: ಆದಿಪು, ೬. ೩೨); [ಕ್ರಿ] ಝೇಂಕರಿಸು (ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ: ಪಂಪಭಾ, ೧. ೧೧೫ ವ); [ಕ್ರಿ] ಸದ್ದುಮಾಡು (ಒಣಗಿದುದೊಂದು ಪೆರ್ವಿದಿರ ಪೆರ್ವೊದಱಿಂ ಮೊರೆದು ಉರ್ವಿದ ಆಶುಶುಕ್ಷಿಣಿಯವೊಲ್: ಪಂಪಭಾ, ೧೧. ೯೪)
ಮೊರ್ಮೊರಂ
[ಅ] ಚಟಪಟ, ಮರಮರ ಎಂಬ ಅನುಕರಣ ಶಬ್ದ (ಕಾಯ್ದ ಕಾವಲಿಗಳೊಳ್ ಮೊರ್ಮರನಾಗೆ ತಾಳಿಸುವರುಂ: ಆದಿಪು, ೫. ೮೫ ವ)
ಮೊಱಡು
[ನಾ] ದಿಣ್ಣೆ (ಮೞೆ ಕದಡಿ ಬರ್ಪ ತೊಱೆ ಬೆಟ್ಟು ತೆವರ್ ಮೊಱಡುಪಜಲಧಿಗಳೆನೆ ಜನಮಱಿಯಱಿಯೆ ದಲ್ ಉದ್ದಬಿದ್ದಮಾಯ್ತವನಿತಳಂ: ಆದಿಪು, ೬. ೬೨)
ಮೊಱೆ
[ನಾ] ಶರಣ್ಯ ವಸ್ತು (ದುರ್ವ್ಯಸನಿಯ ಮಾಡಿದೋದೆ ನಿಮಗಾಗಮಮಾಗಿರೆ ಸತ್ಯಮಂ ಪೊಸಯಿಸಿ ಜೀವನಿಲ್ಲ ಮೊಱೆಯಿಲ್ಲ ಅಱನಿಲ್ಲ ಪರತ್ರೆಯಿಲ್ಲ: ಆದಿಪು, ೨. ೧೧); [ಕ್ರಿ] ಶರಣು ಕಾಪಾಡು (ಕಾಯ್ದು ಕೆಮ್ಮಗೆ ಬೞಿಸಂದು ಕೊಂದಪನಕಾರಣದಿಂ ಮೊಱೆಯೋ ಮನೋಭವಾ: ಆದಿಪು, ೧೨. ೩೩); [ನಾ] ಸಂಬಂಧ (ಎನಗೆ ವೀರಶ್ರೀಯುಂ ಕೀರ್ತಿಶ್ರೀಯುಂ ಅಲ್ಲದೆ ಉೞಿದ ಪೆಂಡಿರ್ ಮೊಱೆಯಲ್ಲ ನೀವಿದನೇಕಾಗ್ರಹಂಗೆಯ್ವಿರಿ: ಪಂಪಭಾ, ೧. ೭೮ ವ);
ಮೊಱೆಯಿಡು
[ನಾ] ಆಕ್ರಂದನ ಮಾಡು (ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್ .. .. ಸುರರ್ ಮೊಱೆಯಿಟ್ಟರ್: ಪಂಪಭಾ, ೧೩. ೧೯೨)
ಮೊಲಗೞ್ತಲೆ
[ನಾ] ಭ್ರಮೆ, ಭ್ರಾಂತಿ (ನಿನ್ನ ಮೊಲಗೞ್ತಲೆಗಾಂ ಬೆಱಗಾದೆನಿಂದು ಪೇೞ್ ಈಗಳೊ ಬಯ್ಗೆಯೊ ಪೊಗಸೊ ನಾಳೆಯೊ ನಾಡಿದೊ ನಿನ್ನ ಜೀವಿತಂ: ಆದಿಪು, ೩. ೬೩); [ನಾ] ಚಂದ್ರನ ಮೊಲದ ಗುರುತಿನಿಂದಾಗುವ ಕತ್ತಲೆ (ರಣಗೞ್ತಲೆಯ ಮೊಲಗೞ್ತಲೆಯಂ ಮಾಡೆ ನೇಸಱ್ ಪಟ್ಟತ್ತು ವಿಜಯಂ ಸೋಲ್ತನೆಂದು ಕೌರವಬಲಂ ಆರ್ದೊಡೆ: ಪಂಪಭಾ, ೧೧. ೧೪೮ ವ)
ಮೊಲೆವಾಲ್
[ಕ್ರಿ] ತಾಯಿಯ ಎದೆಹಾಲು (ಮದಮನಾಳ್ದ ಅವಿವೇಕತೆಯಿಂದಮಲ್ತೆ ತೊೞ್ತಿನ ಮೊಲೆವಾಲನುಂಡ ಗುಣಂ ಇಂತಿವನಾರ್ ಕಿಡಿಪರ್ ನರೇಂದ್ರರೊಳ್: ಪಂಪಭಾ, ೧೨. ೯೩)
ಮೊಲ್ಲೆ
[ನಾ] ಮೊಲ್ಲೆ ಎಂಬ ಹೂ (ಚೆಲ್ವಿನ ಮೊಲ್ಲೆ ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ: ಪಂಪಭಾ, ೨. ೯)
ಮೊಸರಣ್ಕೆ
[ನಾ] ಕಳಶಕ್ಕೆ ಮಾಡುವ ಮೊಸರ ಲೇಪನ (ರನ್ದ ಕನ್ನಡಿವೆರಸು ಸರ್ವಧಾನ್ಯದ ನಡುವಿರೆ ಮೊಸರಣ್ಕೆವೆರಸಿದ ಎಳದಳಿರ್ಗಳಸಂ: ಆದಿಪು, ೪. ೩೩)
ಮೊಳೆ