Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮೊಳೆವುಲ್
[ನಾ] ಎಳೆ ಹುಲ್ಲು (ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂತರಂ ಎಸೆದು ಒಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಂ ಒಪ್ಪಿರೆ: ಪಂಪಭಾ, ೭. ೨೩)
ಮೊೞ
[ನಾ] ಮೊಳ, ಒಂದೂವರೆ ಅಡಿಯಷ್ಟು ಉದ್ದದ ಅಳತೆ (ದ್ವಾವಿಂಶತ್ಯಂಬುಧಿಮಿತಜೀವಿತಮುಂ ಮೂಱು ಮೊೞದ ದಿವ್ಯಾಂಗಮುಂ ಆ ದೇವಂಗಾಯ್ತು: ಆದಿಪು, ೬. ೧೭)
ಮೊೞಗು
[ಕ್ರಿ] ಗರ್ಜಿಸು (ಕಾಳಾಂತ ಪವನಹತಿ ಕಲ್ಲೋಳವಿಳ ಜಳಧಿನಿನದಮೋ ನಿರ್ಘಾತಾಭೀಳತರರಭಸಮೋ ಲಯಕಾಳಾಂಬುದಘೋಷಮೋ ನೆಲಂ ಮೊೞಗಿದುದೋ: ಆದಿಪು, ೧೨. ೯೧); [ನಾ] ಗುಡುಗು (ಸಿಡಿಲಿಂ ಮಿಂಚಿ ಮೊೞಗಿಂ ಪಡೆಗುಳ್ಕಂ ಪಡೆವಹೀಂದ್ರರೆರ್ದೆಗಿಡುವಿನೆಗಂ: ಆದಿಪು, ೧೩. ೬೨); [ಕ್ರಿ] ಕೂಗು (ಪ್ರತಿಮೆಗಳೞ್ತು ಮೊೞಗಿದುದು ಅತಿರಭಸದೆ ಧಾತ್ರಿ ದೆಸೆಗಳುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೩); [ಕ್ರಿ] ಶಬ್ದಮಾಡು (ಆಗಳ್ ಕುಂಭಸಂಭವನುಲಿದ ಜನರ ಕಳಕಳರವಮುಮಂ ಮೊೞಗುವ ಪಱೆಗಳುಮಂ ಬಾರಿಸಿ: ಪಂಪಭಾ, ೨. ೭೪ ವ); [ನಾ] ವಾದ್ಯಘೋಷ (ಬದ್ದವಣದ ಪಱೆಗಳ್ ಕಿವಿ ಸದ್ದಂಗಿಡೆ ಮೊೞಗೆ ದೇವದುಂದುಭಿರವಂ ಒಂದು ಉದ್ದಾನಿ ನೆಗೞೆ ಮುಗುಳ ಅಲರ ಒದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್: ಪಂಪಭಾ, ೧೨. ೨೧೮)
ಮೊೞ್ಗು
[ಕ್ರಿ] ಬಾಗು (ಅೞ್ಗಿದ ಬಿಲ್ವಡೆ ಮಾಣದೆ ತಗ್ಗಿದ ರಥಂ ಎಯ್ದೆ ಬಗಿದ ಪುಣ್ಗಳ ಪೊಱೆಯಿಂ ಮೊೞ್ಗಿದ ಕರಿಘಟೆ: ಪಂಪಭಾ, ೧೧. ೬೪):
ಮೋಕ್ಷ
[ನಾ] [ಜೈನ] ‘ಸಪ್ತತತ್ವ’ಗಳಲ್ಲಿ ಒಂದು, ಎಲ್ಲದರಿಂದ ಬಿಡುಗಡೆ ಹೊಂದಿ ಆತ್ಮ ಪರಿಶುದ್ಧಗೊಳ್ಳುವುದು (ಮೂಲೋತ್ತರಾದಿ ಭೇದಭಿನ್ನ ಕರ್ಮಪ್ರಕೃತಿಗಳ ನಿರ್ಮೂಳೋಚ್ಛಿತ್ತಿ ಮೋಕ್ಷಮೆಂಬುದು: ಆದಿಪು, ೧೦. ೬೩ ವ)
ಮೋಕ್ಷಪ್ರಾಸಾದ
[ನಾ] [ಜೈನ] ಮುಕ್ತಿಯ ಸ್ಥಿತಿ (ಮೋಕ್ಷಪ್ರಾಸಾದಾರೋಹಣ ನಿಶ್ರೇಣೀಭೂತ ಕ್ಷಪಕ ಶ್ರೇಣಿಪ್ರಾಯೋಗ್ಯಾಧಃಪ್ರವೃತ್ತಿಕರಣಪರಿಣತಂ ಅಪೂರ್ವಕರಣ ಕ್ಷಪಕಂ ಪ್ರಥಮಶುಕ್ಲಧ್ಯಾನಪರಿಣತನಾಗಿರ್ದ: ಆದಿಪು, ೧೦. ೧೪ ವ)
ಮೋಕ್ಷಮಾರ್ಗ
[ನಾ] ತಪಸ್ಸಿನ ದೀಕ್ಷೆ (ವಿಂಶತಿಸಹಸ್ರ ಸಮಾಜಂಬೆರಸು ಮಂದರಸ್ಥವಿರರೆಂಬ ಮುಮುಕ್ಷುಗಳ ಸಮಕ್ಷದೊಳ್ ಮೋಕ್ಷಮಾರ್ಗಮಂ ಕೈಕೊಂಡು: ಆದಿಪು, ೩. ೭೨ ವ)
ಮೋಘ
[ನಾ] ವ್ಯರ್ಥ (ಮಚ್ಚರಮುಂ ಮೋಘಂ ಎಡಂಬಡುಂ ಕಲುಷಮುಂ ಮುನ್ನುಳ್ಳುದು .. .. ನಿಷ್ಕಾರಣಂ ಕಾಯ್ವರೇಂ: ಪಂಪಭಾ, ೭. ೩೫)
ಮೋದ
[ನಾ] [ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು (ಆದಾನ ಪ್ರೀತಿ ಸುಪ್ರೀತಿ ಧೃತಿ ಮೋದ .. .. ಎಂಬ ಅಯ್ವತ್ಮೂಱು .. .. ಗರ್ಭಾನ್ವಯಕ್ರಿಯೆಗಳುಂ: ಅದಿಪು, ೧೫. ೧೫ ವ)
ಮೋದಕ
[ನಾ] ಕಡುಬು (ಅತ್ಯಂತಕೋಮಳ ತಾಳುತಳ ಸಂಘಟ್ಟಮಾತ್ರ ಕ್ಷೋದನೀಯ ಮೋದಕಮುಮಂ: ಆದಿಪು, ೧೧. ೨೬ ವ)
ಮೋದು
[ಕ್ರಿ] ತುಳಿ (ಫಲವ್ರಾತದಿಂ ನೆಲನಂ ಮೋದುವ ಮಾತುಳುಂಗಮೆಸೆಗುಂ ವಿದ್ಯಾಧರೋದ್ಯಾನದೊಳ್: ಆದಿಪು, ೧. ೬೭); [ಕ್ರಿ] ಒದೆ (ಆದಿತ್ಯನನಿಳಿಪ ತೇಜರಿರ್ ಪಾರ್ವನ ಕಾಲ್ ಮೋದೆ ನಡುತಲೆಯಲಿರ್ಪುದುಂ ಆದುದು ನಿಮಗೆಂದು ನುಡಿದು ಕಾಯ್ಪಿನೊಳೊದೆದಂ: ಪಂಪಭಾ, ೨. ೬೪); [ಕ್ರಿ] ಹೊಡೆ (ಗೆಡೆವೆಚ್ಚಿರ್ವರ್ ಮನಗೊಂಡು ಒಡನೊಡನೋರಂತು ಮೋದಲೆಂದಿರ್ದೆಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩)
ಮೋದುವೆಱು
[ಕ್ರಿ] ಪೆಟ್ಟು ತಿನ್ನು (ನೂಪುರರವವಿಳಸತ್ ವಾಮಪಾದಪ್ರಹಾರಕ್ಕಿದಱೊಳ್ ಪಕ್ಕಾಗಿ ಗೋತ್ರಸ್ಖಲನೆ ನೆಗೞೆ ಪೂಮಾಲೆಯಿಂ ಮೋದುವೆತ್ತೆಂ: ಆದಿಪು, ೪. ೯)
ಮೋಪು
[ನಾ] ಪ್ರೀತಿ (ಮತ್ತೊರ್ವ ಬೇಟಕಾತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು: ಪಂಪಭಾ, ೪. ೯೮ ವ); [ನಾ] ಹೋರಾಡುವ ತೀಟೆ (ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚವಣಿಗೆಯ ಅಂಕಕಾಱರ ಎಕ್ಕತುಳಕ್ಕೆಕ್ಕೆಯಿಂ ಸೂೞೇಱಿಱಿವಂತೆ ಒರ್ವರೊರ್ವರೊಳ್ ಕಾದೆ: ಪಂಪಭಾ, ೧೨. ೭೬ ವ); [ನಾ] ಈರ್ಷ್ಯೆ (ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚವಣಿಗೆಯ ಅಂಕಕಾಱರ್ ಎಕ್ಕತುಳಕ್ಕೆ ಎಕ್ಕೆಯಿಂ ಸೂೞೇಱಿಱಿವಂತೆ ಒರ್ವರ್ ಒರ್ವರೊಳ್ ಕಾದೆ: ಪಂಪಭಾ, ೧೨. ೭೬ ವ)
ಮೋಹತಮಃಪಟ
[ನಾ] ಮೋಹವೆಂಬ ಕತ್ತಲಿಂದ ಕಟ್ಟಿಹಾಕುವ (ಭವದೀಯ ರೂಪಲಂಪಟವಿಟರಂ ಮರುಳ್ಗೊಳಿಸಿತು ಉತ್ಕಟ ಮೋಹತಮಃಪಟಂ ಪಟಂ: ಆದಿಪು, ೩. ೯೦)
ಮೋಹನಯಂತ್ರ
[ನಾ] ಸಮ್ಮೋಹನಗೊಳಿಸುವ ತಾಯಿತ (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)
ಮೋಹನೀಯಕರ್ಮ
[ನಾ] [ಜೈನ] ಆತ್ಮನನ್ನು ಬಂಧಿಸುವ ಎಂಟು ಮೂಲಕರ್ಮಗಳಲ್ಲಿ ಒಂದು (ಬೞಿಯಂ ಮೋಹನೀಯ ಕರ್ಮೋಪಶಮದೊಳ್ ವಿಶುದ್ಧಾತಿಶಯ ವಿಶೇಷದಿಂ ಉಪಶಮಶ್ರೇಣ್ಯಾರೋಹಣಂಗೆಯ್ದು: ಆದಿಪು, ೬. ೩೩ ವ), ನೋಡಿ ‘ಕರ್ಮ’
ಮೋಹಿಸು
[ಕ್ರಿ] ಆಕರ್ಷಣೆಯುಂಟುಮಾಡು (ನೀಲಾಂಜನೆ ತನ್ನಾಟಮನೊಱಲ್ದು ನೋಡುವ ನೋಟಕರಂ ತವದ ಮಾೞ್ಕೆಯಿಂ ಮೋಹಿಸಿದಳ್: ಆದಿಪು, ೯. ೩೮); [ಕ್ರಿ] ಪ್ರಜ್ಞೆ ತಪ್ಪಿಸು (ಒರ್ಮೆಯೆ ವಿಶ್ವರೂಪಮಂ ತೋಱಿದಂ ಇರ್ದರಂ ನೆಱೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ: ಪಂಪಭಾ, ೯. ೬೦)
ಮೌಕ್ತಿಕ
[ನಾ] ನವರತ್ನಗಳಲ್ಲಿ ಒಂದು, ಮುತ್ತು (ಮಣಿಮೌಕ್ತಿಕ ನೀಳಸ್ಥೂಳ ಶಿಲಾಪ್ರವಿಭಾಸಿತ .. .. ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫)
ಮೌಕ್ತಿಕದಾಮ
[ನಾ] ಮುತ್ತಿನ ಹಾರ (ಪರಸ್ಪರಸ್ಪರ್ಧಮಾನ ಪರಿಕ್ಷಿಪ್ತ ಮಲ್ಲಿಕಾಮುಕುಳ ಮುಕ್ತಾಫಳೋಪಶೋಭಿತದೊಳ್ ಇಂದ್ರನೀಲಮಣಿ ಕುಟ್ಟಿಮಸಂಕ್ರಾಂತ ಮೌಕ್ತಿಕದಾಮ ಅಭಿರಾಮದೊಳ್: ಆದಿಪು, ೮. ೬೭ ವ)
ಮೌನವ್ರತ