भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಣಿರಶನಾ

[ನಾ] ರತ್ನದ ಡಾಬು (ಸುರಗಣಿಕಾ ಗುಂಜನ್ಮಣಿರಶನಾ ಮಣಿಮಂಜೀರ ಮಂಜುಶಿಂಜಿತಂ ರಂಜಿಸುಗುಂ: ಆದಿಪು, ೮. ೧೮)

ಮಣಿವಳಯ

[ನಾ] ರತ್ನಕಂಕಣ (ಮೃದುಕರತಳವದನದ ಚೆಲ್ವೊದವಿರೆ ಮಣಿವಳಯಕಳರವಂ ಸೊಗಯಿಸೆ ಚೆಲ್ವಿದಿರ್ಗೊಳೆ: ಆದಿಪು, ೭. ೬)

ಮಣಿವಿಷ್ಟರ

[ನಾ] ರತ್ನದ ಪೀಠ (ಆದರದಿಂದ ಅನರ್ಘ್ಯ ಮಣಿವಿಷ್ಟರದೊಳ್ ಕುಳ್ಳಿರ್ದು: ಆದಿಪು, ೧೫. ೪೨)

ಮತ

[ನಾ] ಇಷ್ಟ (ಅತಿಮೃದುರವದಾಯಿಗಳಂ ತತ ಘನ ಸುಷಿರ ಅವನದ್ಧ ವಾದ್ಯಂಗಳಂ ಏಂ ಮತಮಱಿದು ಓಲಗಿಪುದೊ ದಂಪತಿಗೆಂದುಂ ಅವಾರ್ಯವೀರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫); [ನಾ] ಅಭಿಪ್ರಾಯ, ಸಲಹೆ (ಕೊಂತಿ ಹರಿಯ ಮತದಿಂ ಕಾಯಲ್ಕೊಡರಿಸಿ ಬಂದಳ್ ಸುತರಂ ಕುಡದಿರ್ ಪುರಿಗಣೆಯಂ ಎನಿತು ಲಲ್ಲೈಸಿದೊಡಂ: ಪಂಪಭಾ, ೯. ೭೮)

ಮತಂಗಜ

[ನಾ] ಮದ್ದಾನೆ (ಬೆಡಂಗೊಳಕೊಳೆ ಸೊರ್ಕಿದ ಅಂಗಜಮತಂಗಜದಂತಿರೆ ಬರ್ಪ ಮಾದ್ರಿಯಂ: ಪಂಪಭಾ, ೨. ೧೭)

ಮತಂಗಜರಿಪು

[ನಾ] ಮದ್ದಾನೆಯ ವೈರಿ, ಸಿಂಹ (ಗಜ ವೃಷಭ ಅಂಕುಶ ಚಕ್ರ ಅಂಬುಜ ಹಂಸ ಮಯೂರ ಮತ್ಸ್ಯ ಫಣಿವೈರಿ ಮತಂಗಜರಿಪು ಚಿಹ್ನ ವಿಶಾಲಧ್ವಜಂಗಳಿಂ ಧ್ವಜಮಹೀತಳಂ ಸೊಗಯಿಸುಗುಂ: ಆದಿಪು, ೧೦. ೩೩)

ಮಂತಣ

[ನಾ] ಆಲೋಚನೆ (ಅದಱಿಂದಂ ಪೆಱತು ಮಂತಣಕ್ಕೆಡೆಯಿಲ್ಲ: ಪಂಪಭಾ, ೧೨. ೪೮ ವ )

ಮಂತಣಮಿರ್

[ಕ್ರಿ] ಆಲೋಚಿಸು (ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱನನೇಕೆ ಬಯಸುಗುಂ ಎಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಮಿರ್ದಳ್: ಪಂಪಭಾ, ೬. ೬೮ ವ); [ಕ್ರಿ] ಸಮಾಲೋಚನೆ ಮಾಡು (ದುಶ್ಶಾಸನ ಕರ್ಣ ಶಕುನಿ ಸೈಂದವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು: ಪಂಪಭಾ, ೬. ೬೭ ವ)

ಮತಿ

[ನಾ] ಅರಿವು, ಬುದ್ಧಿ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಮತಿಜ್ಞಾನ

[ನಾ] [ಜೈನ] ಎಂಟು ವಿಧವಾದ ಜ್ಞಾನಗಳಲ್ಲಿ ಒಂದು, ಪಂಚೇಂದ್ರಿಗಳಿಂದಲೂ ಮನಸ್ಸಿನಿಂದಲೂ ಉಂಟಾಗುವ ಜ್ಞಾನ (ಇರ್ಪತ್ತೊಂದು ಮತಿಜ್ಞಾನಭೇದಮುಮಂ .. .. ಯಥೋಚಿತವಿಧಿಯಿಂ ನೋಂತು: ಆದಿಪು, ೩. ೪೦ ವ)

ಮತ್

[ಗು] ನನ್ನ (ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದೆ ಇರ್ಪವನುಂ ತುಱುಕಾಱನಾಗೆ ಮತ್ ಸ್ಯಂದನ ಚೋದನಕ್ರಮಮದುಂ ಪೊಲೆಯಂಗೆ ಅಮರ್ದು ಇರ್ಕುಂ: ಪಂಪಭಾ, ೧೨. ೯೪)

ಮತ್ತ

[ಗು] ಮದಿಸಿದ, ಸೊಕ್ಕಿದ (ಭೃಂಗರವಂ ಅದೊಂದು ಮಂಗಳರವಕ್ಕೆಣೆಯಾಯ್ತು ಮನೋನುರಾಗದಿಂ ಕರೆವವೊಲಾಯ್ತು ಮತ್ತ ಕಳಹಂಸರವಂ: ಪಂಪಭಾ, ೫. ೫೨); ಅಮಲೇರಿದ (ಆಮಂತ್ರಿತ ಡಾಕಿನೀ ದಶನಘಟ್ಟನಜಾತವಿಭೀಷಣಂ ಮದೇಭ ಅಂತ್ರನಿಯಂತ್ರಿತ ಅಶ್ವಶವಮಾಂಸರಸಾಸವಮತ್ತ ಯೋಗಿನೀತಂತ್ರಂ: ಪಂಪಭಾ, ೧೨. ೧೨೦)

ಮತ್ತಂ

[ಅ] ಪುನಃ (ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ ಮಾತು ತಪ್ಪುಳ್ಳೊಡಂ ಮತ್ತಂ ಅದಂ ನುಡಿಯಿಸುಗುಂ: ಪಂಪಭಾ, ೪. ೫೬); [ಅ] ಇನ್ನೂ (ಈ ಪಂದೆಗಳ್ ಪ್ರಾಣದಿಂದೊಳರ್ ಇನ್ನುಂ ತಲೆ ಮತ್ತಂ ಅಟ್ಟೆಗಳ ಮೇಲಿರ್ದಪ್ಪುವು: ಪಂಪಭಾ, ೭. ೧೪); [ಅ] ಅಲ್ಲದೆ (ಎಂತು ಈಗಳಾನಿಱಿವೆಂ ನೋಡಿರೆ ಮತ್ತಂ ಒಂದಂ ಇಸಲುಂ ಕೈಯೇೞದು ಏಕೆಂದುಂ ಆನಱಿಯೆಂ: ಪಂಪಭಾ, ೧೨. ೨೦೭)

ಮತ್ತದ್ವಿಪ

[ನಾ] ಮದ್ದಾನೆ (ಮದಂ ಸುರಿಯುತ್ತಿರ್ಪುದುಂ ಒಪ್ಪೆ ಚಕ್ರಿಯ ಮನಂಗೊಡತ್ತು ಮತ್ತದ್ವಿಪಂ: ಆದಿಪು, ೧೨. ೫೮)

ಮತ್ತನಯರ್

[ನಾ] [ಮತ್+ತನಯರ್] ನನ್ನ ಮಕ್ಕಳು (ಮತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ: ಪಂಪಭಾ, ೨. ೨೬)

ಮತ್ತಪ್ಪುದು

ಇನ್ನೂ ಇದೆ (ಮತ್ತಪ್ಪುದೆನಲೊಡಂ ಮಾಣ್ ಮತ್ತತ್ತಣ ಕಾರ್ಯಮಱಿಯಲಾದುದು: ಆದಿಪು. ೧೪. ೪೭)

ಮತ್ತರ್

[ನಾ] ಮತ್ತರು, ಹಿಂದಿನ ಕರ್ನಾಟಕದ ಭೂಮಿಯ ಒಂದು ಅಳತೆ (ಒಂದು ದಿವಸಂ ಮರಗೆರಸಿಯಾಡಲೆಂದು ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು: ಪಂಪಭಾ, ೨. ೩೦ ವ)

ಮತ್ತವಾರಣ

[ನಾ] ಮನೆಯ ಮುಂದಣ ಕೈಸಾಲೆ (ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಂ: ಪಂಪಭಾ, ೪. ೮೪ ವ); [ನಾ] ಮದಿಸಿದ ಆನೆ (ಖೞ್ಗನಿವಹಕ್ಕೆ ರಥಕ್ಕೆ ದೞಕ್ಕೆ ಮತ್ತವಾರಣನಿವಹಕ್ಕೆ ತಕ್ಕಿನ ಅಭಿಮನ್ಯುವ ಕೂರ್ಗಣೆ ಪಾಯ್ದು ನುಂಗಲುಂ ನೊಣೆಯಲುಂ ಉರ್ಚಿಮುಕ್ಕಲುಂ ಇದೇಂ ನೆಱೆ ಕಲ್ತುವೊ ಯುದ್ಧರಂಗದೊಳ್: ಪಂಪಭಾ ಪರಿಷತ್ತು, ೧೧. ೯೪)

ಮತ್ತಹಸ್ತಿ

[ನಾ] ಮದ್ದಾನೆ (ಸುಖಮಿರ್ಪನ್ನೆಗಂ ಒಂದು ದೆವಸಂ ಒಂದು ಮಾಯಾಮತ್ತಹಸ್ತಿ: ಪಂಪಭಾ, ೮. ೩೬ ವ)

ಮತ್ತಾಲಂಬನ

[ನಾ] ಒರಗುದಿಂಬು (ರಾಜ್ಯಲಕ್ಷ್ಮೀ ಲೀಲಾಲಂಬನಂ ಎನಿಸಿದ ಬಿಸುಗೆಯ ಮತ್ತಾಲಂಬನಮಂ ಅವಳಂಬಿಸಿ: ಆದಿಪು, ೧೪. ೧೦೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App