भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮತ್ಸ್ಯಪುರ

[ನಾ] ವಿರಾಟನಗರ (ನಮಗಿನ್ನುಂ ಪೊಕ್ಕಿರಲಿಂಬು ಮತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯಂ: ಪಂಪಭಾ, ೮. ೫೦)

ಮಂಥನ

[ನಾ] ಕಡೆಯುವುದು (ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತಘೋಷಂ ಆದಂ ಒರ್ಮೊದಲೆ ಪಯೋಧಿಮಂಥನ ಮಹಾರವಮಂ ಗೆಲೆ: ಪಂಪಭಾ, ೩. ೩೮)

ಮಂಥರ

[ನಾ] ಮಂದವಾದ ಚಲನೆಯುಳ್ಳ (ಚಿರವಿಕ್ಷೋಭಿತ ಸಿಂಧುತೋಯಶಿಶಿರಂ ತತ್ತೀರನಾನಾಲತೋತ್ಕರ ಸಂಘಟ್ಟನ ಮಂಥರಂ .. .. ವಿಜಯಾರ್ಧೋಪಾಂತ ಮಂದಾನಿಳಂ: ಆದಿಪು, ೧೩. ೯)

ಮಥ್ಯಮಾನ

[ಗು] ಕಡೆಯಲ್ಪಟ್ಟ (ಒಳಗೆ ವೇದನಾದದಿಂ ಎತ್ತಂ ಎಯ್ದೆ ಶೋಭಿಸೆ ಸುರಮಥ್ಯಮಾನ ವನಧಿಕ್ಷುಭಿತಾರ್ಣವ ಘೋಷದಂತೆ: ಪಂಪಭಾ, ೧೪. ೫೭)

ಮದ

[ನಾ] ಆನೆಯ ಮದೋದಕ (ಕಾಯ್ಗಳಿಂದಮಿಂಬಾಗಿರೆ ಸೋರ್ದ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋಡಾಗಿರೆ ಕೋಡುಗೊಂಡು ಪರಿದತ್ತು ವಸಂರಗಜಂ: ಪಂಪಭಾ, ೨. ೧೫)

ಮದಕರಿ

[ನಾ] ಮದ್ದಾನೆ (ಮದಕರಿಕರೇಣುತುರಗಾದಿ ನಾನಾ ವಿಧ ವಾಹನಂಗಳಂ ಏಱಿ ಮಯ್ದುನಂಗಿದಿರ್ವಂದು: ಪಂಪಭಾ, ೪. ೩೩ ವ)

ಮದಗಜಗಮನೆ

[ನಾ] ಮದಿಸಿದ ಆನೆಯ ನಡಿಗೆಯವಳು (ಮತ್ತಿತ್ತ ನೆಗೞ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ಮತ್ತಗಜಗಮನೆ ಯದುವಂಶೋತ್ತಮೆಯೆನೆ ಕುಂತಿ: ಪಂಪಭಾ, ೧. ೮೮)

ಮದಗಜೇಂದ್ರಪುರ

[ನಾ] ಹಸ್ತಿನಾವತಿ (ನಿಯತಿಃ ಕೇನ ಲಂಘ್ಯತೇ ಎಂಬ ನುಡಿಯಂ ನನ್ನಿಮಾಡಿ ಮದಗಜೇಂದ್ರಪುರಮನೆಯ್ದೆ ಬರೆ: ಪಂಪಭಾ, ೬. ೬೮ ವ)

ಮಂದಗಮನ

[ನಾ] ನಿಧಾನವಾದ ನಡಿಗೆ (ಆಕೆಯ ಮಂದಗಮನಮುಂ ಪಗೆವರ ಮನಂಗಳುಂ ಒಡನೊಡನೆ ಅಲಸಿಕೆಯಂ ಕೈಕೊಂಡುವು: ಪಂಪಭಾ, ೧. ೧೪೧ ವ)

ಮದದ ನೀರು

[ನಾ] ಆನೆಯ ಮದೋದಕವೆಂಬ ನೀರು (ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚು ನೀರ್ದಳಿದಾಗಳ್: ಪಂಪಭಾ, ೧. ೪೩)

ಮದದಂತಿ

[ನಾ] ಮದಿಸಿದ ಆನೆ (ಅದು ಮದದಂತಿ ದಂತಮುಸಲ ಪ್ರವಿಭಗ್ನ ಮಹಾ ಮಹೀರುಹಾಸ್ಪದಂ: ಪಂಪಭಾ, ೩. ೧೦)

ಮದನ

[ನಾ] ಮನ್ಮಥ (ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ: ಪಂಪಭಾ, ೧. ೧೩೯ ವ)

ಮಂದನಡಿಂಡಮ

[ನಾ] ಆನೆಗೆ ಮದ ಬರಿಸಲು ಬಾರಿಸುವ ವಾದ್ಯ ವಿಶೇಷ (ಮಣಿಕಿಂಕಿಣಿಗಣಝಂಕಾರಮೆ ಮದನಡಿಂಡಿಮ ರವಾಡಂಬರಂ ಆಳೋಳತುಳಾಕೋಟಿ ಕ್ವಣಿತಮೆ ನಿಗಳಾಂದುಕಾರವಮಾಗೆ: ಆದಿಪು, ೧೧. ೨೦ ವ)

ಮದನದವಾನಲ

[ನಾ] ಕಾಮವೆಂಬ ಕಾಳ್ಗಿಚ್ಚು (ಮದನದವಾನಲಾರ್ಚಿ ತನುವಂ ಸುಡೆ ತಳ್ತೆಮೆಯೊಳ್ ಪಳಂಚಿ ಬೀಗಿದ ಬೆಳರ್ವಾಯೊಳ್ ಉಚ್ಚಳಿಸಿ: ಪಂಪಭಾ, ೫. ೯)

ಮದನದ್ರವ

[ನಾ] ಮದನಜಲ, ಸಂಭೋಗಸಮಯದಲ್ಲಿ ಸ್ತ್ರೀ ಸ್ರವಿಸುವ ದ್ರವ (ತೆಗೆದಪ್ಪಿದೊಡೆ ಉನ್ನಿದ್ರಾಂಭೋಜಾಸ್ಯೆಗೆ ಮದನದ್ರವಮುಂ ಕಣ್ಣನೀರುಂ ಉಣ್ಮಿದುವಾಗಳ್: ಆದಿಪು, ೧೨. ೪೪)

ಮದನಭವನ

[ನಾ] ಮನ್ಮಥನ ಆವಾಸ, ಮನೆ (ಇದೆ ಮದನಭವನಂ ಇಂತಿದೆ ಮದನಾಮೃತಂ ಇದುವೆ ಮದನಸಾಯಕಂ ಪೋ ಮದನಮಹೋತ್ಸವಪದಂ ಎನಿಸಿದುದು ಕಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ: ಪಂಪಭಾ, ೮. ೬೧)

ಮದನರಸ

[ನಾ] ಮದನಜಲ (ವದನರಸಂ ಮದನರಸಂ ಪೊದಳ್ದುದೆನಿಸುವಿನಂ ಅಮರಿ ನರ್ತಿಸೆ ಚೆಲ್ವಂ ಪುದಿದುದುರಚೆಲ್ಲಿಯೊಳೆಸೆದುದು ತದುರೋಜಸರೋಜ ಮುಕುಳಯುಗಸಂಚಳನಂ: ಆದಿಪು, ೭. ೧೯)

ಮದನರಾಗ

[ನಾ] ಕಾಮವಾಂಛೆ (ಪರಿಮಳಿತಸೌಂದರಂ ಬಂಧುರಗಂಧಂ ಮದನರಾಗವರ್ಧನಕರಂ ಈ ಮರುವಂ: ಆದಿಪು, ೧೧. ೧೨೭)

ಮದನಸಾಯಕ

[ನಾ] ಮನ್ಮಥನ ಬಾಣ, ಹೂಬಾಣ (ಇದೆ ಮದನಭವನಂ ಇಂತಿದೆ ಮದನಾಮೃತಂ ಇದುವೆ ಮದನಸಾಯಕಂ ಪೋ ಮದನಮಹೋತ್ಸವಪದಂ ಎನಿಸಿದುದು ಕಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ: ಪಂಪಭಾ, ೮. ೬೧)

ಮದನಾಗ್ನಿ

[ನಾ] ಕಾಮವೆಂಬ ಬೆಂಕಿ (ತ್ರಿದಶಸ್ತ್ರೀಜನದೊಳಂ ಅಮೃತದೊಳಂ ಅಣಂ ಮೞ್ಗದುರಿವ ಮದನಾಗ್ನಿಯ ಕೊರ್ಬು ಉದರಾಗ್ನಿಯ ಪೆರ್ಚು: ಆದಿಪು, ೯. ೫೬)

Search Dictionaries

Loading Results

Follow Us :   
  Download Bharatavani App
  Bharatavani Windows App