भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮದನಾರಿ

[ನಾ] [ಮದನ+ಅರಿ] ಕಾಮನ ಶತ್ರು, ಶಿವ (ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪು ಎರ್ದೆಗೊಳ್ವುದುಂ ನದೀಜಾತಂ ಉದಾತ್ತಭಕ್ತಿಯೊಳೆ: ಪಂಪಭಾ, ೧೦. ೧೧೮)

ಮದನಾವೇಶ

[ನಾ] ಕಾಮಾವೇಶ (ಇದಱೊಳ್ ಖೇಚರ ಕಿನ್ನರ ಅಮರಯುಗಂ ನಾನಾವಿನೋದಂಗಳಿಂ ಮದನಾವೇಶಕರಂಗಳಂ ಸಲಿಸುತುಂ: ಆದಿಪು, ೯. ೧೧೬)

ಮದನಾಸ್ತ್ರ

[ನಾ] ಕಾಮಬಾಣ (ಮದನಾಸ್ತ್ರಂ ಖರಸಾಣೆಗಾಣಿಸಿದುದು ಎಂಬಂತಾಗೆ ನಿನ್ನೊಂದು ಕಂದಿದ ಮೆಯ್ .. .. ರಾಗದಿಂ ಎನ್ನೊಳ್ ಸುಕಮಿರ್ಪುದು: ಪಂಪಭಾ, ೮. ೬೬)

ಮದನೋದಯ

[ನಾ] ಕಾಮಪ್ರಚೋದನೆ (ಮಾದೇವಿಯರೆಣ್ಬರ್ ಮದನೋದಯಮಂ ಕುಡೆ ಮನಃಪ್ರವೀಚಾರದೊಳಂತಾ ದೇವಂ: ಆದಿಪು, ೬. ೧೪)

ಮದನೋನ್ಮತ್ತೆ

[ನಾ] ಕಾಮದಿಂದ ಮದಿಸಿದವಳು (ಮನಮಂ ಪತ್ತಿಸಿ ಜೊತ್ತಿಸೆ ಮದನೋನ್ಮತ್ತೆಯರ್ ಅವಯವದೆ ಬಂದರ್ ಅರಸಿಯರ್ ಅರೆಬರ್: ಪಂಪಭಾ, ೫. ೫೯)

ಮದಪಟ್ಟ

[ನಾ] ಆನೆಯ ಕಪೋಲದ ಮೇಲೆ ಮದರಸ ಇಳಿಯುವುದರಿಂದಾದ ಗೆರೆ (ಸಮದಂ ಯಾನಮೆ ಮಂದಮಂದಗಮನಂ ಕಸ್ತೂರಿಕಾಪಂಕಪಟ್ಟಮೆ ಧಾರಾಮದ ಪಟ್ಟಮಾಯ್ತು ಎನಿಪಿನಂ: ಆದಿಪು ನರಸಿಂ, ೧೧. ೨೧)

ಮದಪಯಃಕಂಡೂಳಗಂಡಸ್ಥಳ

[ನಾ] ಮದೋದಕದಿಂದ ನವೆಯಾಗುವ ಕಪೋಲ (ಚಿರವಿಕ್ಷೋಭಿತ ಸಿಂಧುತೋಯ ಶಿಶಿರಂ ತತ್ತೀರನಾನಾಲತೋತ್ಕರ ಸಂಘಟ್ಟನಮಂಥರಂ ಮದಪಯಃಕಂಡೂಳಗಂಡಸ್ಥಳಂ: ಆದಿಪು, ೧೩. ೯)

ಮಂದಪವನ

[ನಾ] ಮೆಲುಗಾಳಿ (ಎಸಗಿತ್ತಂದು ಅನುಕೂಲ ಮಂದಪವನಂ: ಪಂಪಭಾ, ೯. ೯೬)

ಮಂದಯಿಸು

[ಕ್ರಿ] ಸಾಂದ್ರಗೊಳ್ಳು (ಪತ್ತಿತ್ತೆತ್ತಮಾಕಾಶದೊಳ್ ಆನಿಲಪಥಂ ಧಾರಿಣೀಚಕ್ರದೊಳ್ ಕಾಳಸೆಗೊಂಡತ್ತು ಎಂಬಿನಂ ಮಂದಯಿಸಿ: ಆದಿಪು, ೧೪. ೯೫)

ಮಂದರಕ್ಷುಭಿತ

[ನಾ] ಮಂದರಪರ್ವತದಿಂದ ಕಡೆಯಲ್ಪಟ್ಟ (ಬೇಗದೊಳಾ ಕಟಕಂಗಳೆಯ್ದೆ ಕೆಯ್ಕೊಂಡುವು ಮಂದರಕ್ಷುಭಿತ ದುಗ್ಧಪಯೋಧಿ ಗಂಭೀರನಾದಮಂ; ಪಂಪಭಾ, ೧೦. ೪೯)

ಮಂದರಧರ

[ನಾ] ವಿಷ್ಣು (ಕೊಂದೆನ್ನ ಮಗನಂ ಇಂ ಭಯದಿಂದಂ ರಸೆವೊಕ್ಕುಂ ಅಜನ ಗುಂಡಿಗೆವೊಕ್ಕುಂ ಮಂದರಧರನ ಈ ಪೊರ್ಕುೞ ಪೊಂದಾವರೆವೊಕ್ಕು ಮೇಣವಂ ಬರ್ದುಕುವನೇ: ಪಂಪಭಾ, ೧೧. ೧೨೧)

ಮಂದರಾಚಲ

[ನಾ] ಮಂದರಪರ್ವತ (ಅಬ್ಧಿಮಥನಪ್ರಾರಂಭದೊಳ್ ಮಂದರಾಚಲಮಂ ತಂದವನಾವಂ ಆತನೆ ವಲಂ ತಕ್ಕಂ ಪೆಱರ್ ತಕ್ಕರೇ: ಪಂಪಭಾ, ೬. ೪೧)

ಮಂದರಾದ್ರೀಂದ್ರಾಭಿಷೇಕ

[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಮಂದರಪರ್ವತದಲ್ಲಿ ಮಾಡುವ ಜಿನಶಿಶುವಿನ ಅಭಿಷೇಕ (ಮಂದರಾದ್ರೀಂದ್ರಾಭಿಷೇಕ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಮದಲೇಖೆ

[ನಾ] ಮದಪಟ್ಟ (ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತೆ .. .. ಸೊಗಯಿಸುತಿರ್ದುದು: ಪಂಪಭಾ, ೧. ೫೭ ವ)

ಮದವಟ್ಟೆ

[ನಾ] [ಮದ+ಪಟ್ಟೆ] ಕಾಮದ ಸೊಕ್ಕು ತೋರಿಸುವ ಪಟ್ಟೆಯಾಕಾರದ ಗೆರೆ (ನವಧೂಮಲೇಖೆ ಚೆಲ್ವಿದಿರ್ಗೊಳೆ ಗಾಡಿವೆತ್ತು ಕತ್ತುರಿಯೊಳ್ ಮದವಟ್ಟೆಯಂ ವಿಳಾಸದೆ ತೆಗೆದಂತೆ ಕಣ್ಗೆಸೆದು ತೋಱಿದುದಾ ಕದನತ್ರಿಣೇತ್ರನಾ: ಪಂಪಭಾ, ೩. ೭೬)

ಮದವಟ್ಟೆ

[ನಾ] ಮದಪಟ್ಟಿಕೆ, ಕೆನ್ನೆಯ ಮೇಲೆ ಬರೆದ ರೇಖೆಗಳು (ಕಪೋಲದೊರ್ಳ ನವಧೂಮಲೇಖೆ ಚೆಲ್ವಿದಿರ್ಗೊಳೆ ಗಾಡಿವೆತ್ತು ಅಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾಸದೆ ತೆಗೆದಂತೆ: ಪಂಪಭಾ, ೩. ೭೬)

ಮದವತ್

[ಗು] ಮದಿಸಿದ, ಮದದಿಂದ ಕೂಡಿದ (ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿಭೂಭೃತ್ ಮದವತ್ ಮಾತಂಗ ಕುಂಭಸ್ಥಳದಳನ ಖರೋಗ್ರ ಅಸಿಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಮದವತ್

[ಗು] ಮದಿಸಿದ, ಮದದಿಂದ ತುಂಬಿದ (ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿಭೂಭೃತ್ ಮದವತ್ ಮಾತಂಗಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಮದವದ್ದಂತಿ

[ನಾ] [ಮದವತ್+ದಂತಿ] ಸೊಕ್ಕೇರಿದ ಆನೆ (ಮದವದ್ದಂತಿಗಳಂ ಕಱುತ್ತು ಅಸಗವೊಯ್ವೊಯ್ದು ಆಜಿಯೊಳ್ ಭೀಮಂ ಆರ್ದು ಒದೆದು ಈಡಾಡಿದೊಡೆ ಅತ್ತ ಅಜಾಂಡತಟಮಂ ತಾಪನ್ನೆಗಂ: ಪಂಪಭಾ, ೧೧. ೬೭) [‘ವೊಯ್ವೊಯ್ದಾಜಿಯೊಳ್‌’ ಎಂಬ ಪಾಠದ ಬದಲು ಪರಿಷತ್ತಿನ ಆವೃತ್ತಿಯಲ್ಲಿ ‘ವೊಯ್ಲ್ಪೊಯ್ದಾಜಿಯೊಳ್‌’ ಎಂಬ ಪಾಠವಿದೆ]

ಮದವನ್ಮಾತಂಗ

[ನಾ] [ಮದವತ್+ಮಾತಂಗ] ಸೊಕ್ಕಿದ ಆನೆ (ಉಗ್ರವೈರಿ ಮದವನ್ಮಾತಂಗಕುಂಭ ಆರ್ದ್ರ ಮೌಕ್ತಿಕ ಲಗ್ನೋಜ್ಜ್ವಲಬಾಣನಂ ಪ್ರವಿಲಸತ್ ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣಕಳಾಪ್ರವೀಣನಂ ಇಳಾಭಾರಕ್ಷಮ ಅಕ್ಷೋಣನಂ: ಪಂಪಭಾ, ೧. ೧೩೪)

Search Dictionaries

Loading Results

Follow Us :   
  Download Bharatavani App
  Bharatavani Windows App