भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರೌದ್ರ

[ನಾ] ಭಯಂಕರವಾದುದು (ಅಧಿಕರಿಪುನೃಪಬಳ ನವರುಧಿರಜಳಸ್ಫುರಿತರೌದ್ರಮೀ ಈ ಗದೆ: ಪಂಪಭಾ, ೬. ೫); ಭಯಂಕರನಾದವನು (ಏಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನುಂ ಅಪ್ಪ ಅಶ್ವತ್ಥಾಮಂ ಏವದೊಳ್ ಕಣ್ಗಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ: ಪಂಪಭಾ, ೧೩. ೩೯ ವ)

ರೌದ್ರಧ್ಯಾನ

[ನಾ] [ಜೈನ] ಕೆಟ್ಟುದರಲ್ಲಿ ಕಾಣುವ ಸಂತೋಷ; ಇದರಲ್ಲಿ ಹಿಂಸಾನಂದ, ಮೃಷಾನಂದ, ಸ್ತೇಯಾನಂದ, ಪರಿಗ್ರಹಾನಂದ ಎಂಬ ನಾಲ್ಕು ಬಗೆ (ಬಹ್ವಾರಂಭ ಸುರಂಭ ರೌದ್ರಧ್ಯಾನಪರಿಣತಂ: ಆದಿಪು, ೨. ೧೧ ವ)

ರೌದ್ರಶರ

[ನಾ] ಭಯಂಕರ ಅಸ್ತ್ರ (ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪುರಿಗಣೆಯ ದೊಣೆಗೆ ಕೆಯ್ಯಂ ನೀಡದೆ ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್: ಪಂಪಭಾ, ೧೨. ೧೯೦ ವ)

ರೌದ್ರಶಾಪ

[ನಾ] ಭಯಂಕರವಾದ ಶಾಪ (ಒಱಲ್ದು ನಲ್ಲಳೊಳ್ ನೀನ್ನಡೆ ನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋಗಿನ್ನೆನೆ ರೌದ್ರಶಾಪಪರಿತಾಪವಿಳಾಪದೊಳಾ ಮಹೀಶ್ವರಂ: ಪಂಪಭಾ, ೧. ೧೧೨)

ರೌದ್ರಸಾಧನ

[ನಾ] ಭಯಂಕರವಾದ ಸೈನ್ಯ (ತದ್ಗಿರೀಂದ್ರಕಂದರ ಕನಕಾಚಳಂಗಳ್ ಎನಿತುಂಟು ಅನಿತಂ ತವೆ ಹೇಮರೇಣುಗಳ್ವೆರಸು ಕಡಂಗಿ ಪೊತ್ತು ನಡೆದಿತ್ತು ಘಟೋತ್ಕಚ ರೌದ್ರಸಾಧನಂ: ಪಂಪಭಾ, ೬. ೩೨)

ರೌಪ್ಯಾಚಳ

[ನಾ] ಹಿಮತ್ಪರ್ವತ (ಇಳಾಚಕ್ರವಿಖ್ಯಾತ ಭೂಭೃತ್ಪ್ರಭು ಚಕ್ರಾಧೀಶನೊಳ್ ಮಚ್ಚರಿಪವೊಲೆಸೆದಿರ್ದತ್ತು ರೌಪ್ಯಾಚಳೇಂದ್ರಂ: ಆದಿಪು, ೧೩. ೪೬)

Search Dictionaries

Loading Results

Follow Us :   
  Download Bharatavani App
  Bharatavani Windows App