भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರತಿ

[ನಾ] ಸಂಭೋಗ (ಮಾಡೆಂ ಪಗಲ್ ರತಿಯಂ ಸ್ತ್ರೀಯರೊಳ್ ಎಂಬುದೊಂದು ನಿಯಮಂ: ಆದಿಪು, ೬. ೧೦)

ರತಿತಂತ್ರ

[ನಾ] ಕಾಮಶಾಸ್ತ್ರ (ಸರಭೇದ ರತಿತಂತ್ರ ಇಂದ್ರಜಾಲ ವಿವಿಧವಿದ್ಯೆಗಳೊಳಂ: ಪಂಪಭಾ, ೨. ೩೪ ವ)

ರತಿಶ್ರಮ

[ನಾ] ರತಿಕ್ರೀಡೆಯಿಂದಾದ ಆಯಾಸ (ನಲ್ಲಳ ರತಿಶ್ರಮ ವಿಶ್ಲಥ ಕೇಶಪಾಶದೊಳ್ ಸವಸವನಾಗಿ ತೋಱಿದಪುದು: ಪಂಪಭಾ, ೫. ೫೧)

ರತಿಶ್ರೀರಮ್ಯ

[ಗು] ರತಿಕ್ರೀಡೆಯ ಸಿರಿಯಿಂದ ರಮ್ಯವಾದ (ಮದಿರೋನ್ಮತ್ತ ನಿಳಿಂಪ ಕಿಂಪುರುಷಕಾಂತಾರಬ್ಧಸಂಗೀತಂ ಒಪ್ಪಿದುದಲ್ತೆ ಸುರಸಿದ್ಧದಂಪತಿರತಿಶ್ರೀರಮ್ಯಹೈಮಾಚಳಂ: ಪಂಪಭಾ, ೭. ೭೨)

ರತಿಸ್ವೇದ

[ನಾ] ಸಂಭೋಗದಿಂದ ಉಂಟಾಗುವ ಆಯಾಸದ ಬೆವರು (ಮೃಗಭೂ ಋದ್ಧ ವಿಳಾಸಿನೀ ಕಬರಿಕಾಬಂಧಗಳಂ ಪೊತ್ತು ಮಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿಸ್ವೇದಬಿಂದುಗಳೊಳ್ ನಾಂದು .. .. ಪಳಂಚಿ ಸುೞಿದತ್ತು ಅಂದೊಂದು ಮಂದಾನಿಳಂ: ಪಂಪಭಾ, ೪. ೮೦)

ರತುನ

[ನಾ] [ರತ್ನ] ಬೆಲೆಬಾಳುವ ಹರಳು (ಪಂಚರತುನದೊಳೆ ನೆಱೆದ ಪಸರದಿಂ ತೋರಣಂಗಳೊಳ್ ತೊಡರ್ದ ತಿಸರದಿಂ: ಪಂಪಭಾ, ೩. ೨೨)

ರತೋತ್ಸವ

[ನಾ] ಸುರತೋತ್ಸವ, ರತಿಕ್ರೀಡೆ (ಸಂದಹಿಕಟಕಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ: ಪಂಪಭಾ: ೧. ೪)

ರತ್ನಕರಂಡಕ

[ನಾ] ರತ್ನದ ಬುಟ್ಟಿ (ಭರತನಾಥದೂತಂ ಆತ್ಮಪಾರ್ಶ್ವಚರ ಕರತಳದಿಂ ಉಪಾಯನರತ್ನಕರಂಡಕಮಂ ಕೊಂಡು: ಆದಿಪು, ೧೪. ೪೫ ವ)

ರತ್ನಕುಂಡಲ

[ನಾ] ರತ್ನಗಳಿಂದ ಮಾಡಿದ ಕಿವಿಯ ಆಭರಣ (ಇವು ರತ್ನಕುಂಡಲಂ ಜಿತರವಿಮಂಡಲಂ ಇವು ತುಡಲ್ಕೆ ಯೋಗ್ಯಮೆ ನಿನಗೆ: ಆದಿಪು, ೧೨. ೧೦೭)

ರತ್ನತರು

[ನಾ] ರತ್ನಗಳನ್ನು ಬಿಡುವ ಮರ (ಉನ್ಮಿಷತ್ ರತ್ನ ಹಟಚ್ಛಾಯೆಯೊಳೆ ಮುಸುಕಿ ದೇಹಚ್ಛಾಯೆಯುಮಂ ಪುದಿಯೆ ರತ್ನತರುವನೆ ಪೋಲ್ತಂ: ಆದಿಪು, ೪. ೪೦)

ರತ್ನತ್ರಿತಯ

[ನಾ] [ಜೈನ] ರತ್ನತ್ರಯ, ಸಮ್ಯಕ್‌ಜ್ಞಾನ, ಸಮ್ಯಕ್‌ದರ್ಶನ ಮತ್ತು ಸಮ್ಯಕ್‌ಚಾರಿತ್ರಗಳು (ಕಣಿ ರತ್ನತ್ರಿತಯಕ್ಕೆ ಇದೇಂ ಪಿರಿದೆನಲ್ ರತ್ನಾಕರಂ ರತ್ನತೋರಣರತ್ನಾಸನ ರತ್ನವಿಭ್ರಮಣ: ಆದಿಪು, ೧೬. ೪)

ರತ್ನದೀಪ್ತಿ

[ನಾ] ರತ್ನಗಳ ಕಾಂತಿ (ನೆನೆವ ಮನಂ ಪೆಱಗುೞಿದತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದತ್ತೆನೆ ನೆಯ್ದಿಲ್ಗೊಳನಲರ್ದತ್ತೆನೆ ಕಣ್ಗಳ ಬಳಗಂ ಆಗಳ್ ಇಂದ್ರಂ ಬಂದಂ: ಪಂಪಭಾ, ೧೩೮)

ರತ್ನಪರೀಕ್ಷೆ

[ನಾ] ರತ್ನಗಳ ಮೌಲ್ಯಮಾಪನ, ಚೌಷಷ್ಠಿಕಲೆಗಳಲ್ಲಿ ಒಂದು (ಬಾಹುಬಲಿಗೆ ಕಾಮತಂತ್ರ ಸಾಮುದ್ರಿಕ ಅಯುರ್ವೇದ .. .. ರತ್ನಪರೀಕ್ಷೆಗಳುಮಂ .. .. ಉಪದೇಶಂಗೆಯ್ದಂ: ಆದಿಪು, ೮. ೬೦ ವ)

ರತ್ನರಶ್ನಿಪ್ರಕಟಮಕುಟ

[ನಾ] ರತ್ನಕಾಂತಿಯಿಂದ ಪ್ರಕಾಶಿಸುವ ಕಿರೀಟ (ಪೊಕ್ಕು ಉಡಿವೆಂ ಪಿಂಗಾಕ್ಷನ ಊರುದ್ವಯಮಂ ಉರು ಗದಾಘಾತದಿಂ ನುಚ್ಚು ನೂಱಾಗೆ ಒಡೆವೆಂ ತದ್ರತ್ನರಶ್ಮಿಪ್ರಕಟಮಕುಟಮಂ: ಪಂಪಭಾ, ೭. ೧೩)

ರತ್ನವಿಭ್ರಮಣ

[ನಾ] ರತ್ನದ ಬೀಸಣಿಗೆ (ಕಣಿ ರತ್ನತ್ರಯಕ್ಕಿದೇಂ ಪಿರಿದೆನಲ್ ರತ್ನಾಕರಂ ರತ್ನತೋರಣ ರತ್ನಾಸನ ರತ್ನವಿಭ್ರಮಣ ರತ್ನಾಶೋಕ ರತ್ನಪ್ರಭಾಮಣಿ: ಆದಿಪು, ೧೬. ೪)

ರತ್ನವಿಸ್ಫುರಿತ

[ಗು] ರತ್ನದಿಂದ ಹೊಳೆಯುತ್ತಿರುವ (ತನ್ನ ರತ್ನವಿಸ್ಫುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟಿನಾಮಮಂ ಸರಸದಿಂ ಆಗಳುಚ್ಚರಿಸಿ: ಪಂಪಭಾ, ೫. ೧೦೩)

ರತ್ನಶುಕ್ತಿ

[ನಾ] ಮುತ್ತಿನ ಚಿಪ್ಪು (ಮದನನ ಮಣಿದರ್ಪಣಕಂ ಮದನನದೀರತ್ನಶುಕ್ತಿಗಂ ಸೆಣಸುವುದಂ: ಆದಿಪು, ೪. ೪೫)

ರತ್ನಾಕರ

[ನಾ] [ಜೈನ] ಸಾಗರ, ಒಂದು ನೀಳ ಅವಧಿ (ಆ ದಿವಿಜನುಂ ಏಕರತ್ನಾಕರೋಪಮಾಯುರವಸಾನದೊಳ್: ಆದಿಪು, ೩. ೫೮ ವ)

ರತ್ನಾವಳಿತಪ

[ನಾ] [ಜೈನ] ಒಂದು ಉಪವಾಸ ಎರಡು ಪಾರಣೆ, ಒಂದು ಉಪವಾಸ ಮೂರು ಪಾರಣೆ, ಒಂದು ಉಪವಾಸ ನಾಲ್ಕು ಪಾರಣೆ, ಒಂದು ಉಪವಾಸ ಐದು ಪಾರಣೆ, ಐದು ಉಪವಾಸ ಒಂದು ಪಾರಣೆ, ನಾಲ್ಕು ಉಪವಾಸ ಒಂದು ಪಾರಣೆ, ಮೂರು ಉಪವಾಸ ಒಂದು ಪಾರಣೆ, ಎರಡು ಉಪವಾಸ ಒಂದು ಪಾರಣೆ, ಒಂದು ಉಪವಾಸ ಒಂದು ಪಾರಣೆ ಹೀಗೆ ೩೦ ಉಪವಾಸ ಹಾಗೂ ೩೦ ಪಾರಣೆ ಮಾಡುವ ವ್ರತ (ಪ್ರಭಾವತಿಯುಂ ಪದ್ಮಾವತಿ ಆರ್ಯಿಕಾ ಪಾದಮೂಲದೊಳ್ ಉಪಾರ್ಜಿತ ರತ್ನಾವಳಿತಪದೊಳ್ ಅಚ್ಯುತಕಲ್ಪದೊಳ್ ಪ್ರತೀಂದ್ರಪದವಿಯಂ ಪಡೆದಳ್: ಆದಿಪು, ೩. ೫೮ ವ)

ರಥಕಲ್ಪ

[ನಾ] ರಥದ ಚಾಲನೆಯ ಬಗೆಗಿನ ಶಾಸ್ತ್ರ (ಅನುಕೂಲ ಶೂರ ರಥಕಲ್ಪಪರಿಣತ ರಥಚೋದಕ ಪರಿಭ್ರಾಜಿತಮುಂ ಆಗಿ: ಆದಿಪು, ೧೧. ೧೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App