भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಿಪು

[ನಾ] ಶತ್ರು (ಇದಱ ಪೆಸರ್ ದೇವದತ್ತಮೆಂಬುದು ನಿನಗೆ ಅಭ್ಯುದಯಕರಂ ಶಂಖಂ ರಿಪುಹೃದಯ ಕವಾಟಪುಟ ವಿಘಟನಂ ನೋಡರಿಗಾ: ಪಂಪಭಾ, ೬. ೪)

ರಿಪುಕುರಂಗಕಂಠೀರವ

[ನಾ] ಶತ್ರುಗಳೆಂಬ ಜಿಂಕೆಗಳಿಗೆ ಸಿಂಹಪ್ರಾಯನಾದವನು (ರಿಪುಕುರಂಗಕಂಠೀರವನುಂ ಸಾಹಸಾಭರಣನುಂ ಎಮ್ಮನ ಗಂಧವಾರಣನುಂ ಪಡೆಮೆಚ್ಚೆ ಗಂಡನುಂ ಪರಸೈನ್ಯಭೈರವನುಂ ಎಂಬ ಪೆಸರ್ಗಳನನ್ವರ್ಥಂ ಮಾಡಿ: ಪಂಪಭಾ, ೧೦. ೧೨೪ ವ)

ರಿಪುಗಳಗ್ರಹ

[ನಾ] ಶತ್ರುಗಳ ಕೊರಳು ಹಿಡಿಯುವುದು (ಪೊದಳ್ದ ಲಯಾಂತಕ ತ್ರಿಶೂಲೋಪಮ ಭೀಷಣಭ್ರುಕುಟಿ ಮುನ್ನಮೆ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ: ಪಂಪಭಾ, ೭. ೬)

ರಿಪುತಂತ್ರಕ್ಷಯಕರ

[ನಾ] ವೈರಿ ಸೈನ್ಯವನ್ನು ನಾಶಮಾಡುವವನು (ಮಂತ್ರಾಕ್ಷರ ನಿಯಮದಿಂ ಅಭಿಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದು ಏಂ ಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನಂ ಎನಗೆ ಹಿತನಂ ಸುತನಂ: ಪಂಪಭಾ, ೧. ೧೨೪)

ರಿಪುನೃಪಶಲಭ

[ನಾ] ಶತ್ರು ರಾಜರೆಂಬ ಪತಂಗ (ಆ ಜಾಕವ್ವೆಗಂ ವಸುಧಾಜಯ ಸದ್ವಲ್ಲಭಂಗಂ ವಿಶದ ಯಶೋರಾಜಿತನೆನಿಪ ಅರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪುನೃಪಶಲಭಂ: ಪಂಪಭಾ, ೧. ೪೧)

ರುಚಿ

[ನಾ] ಪ್ರಭೆ, ಕಾಂತಿ (ಪ್ರಳಯಶಿಖಿಶಿಖಾನೀಕಮಂ ವಿಸ್ಫುಲಿಂಗಳುಮಂ ಬೀಱುತ್ತುಂ ಔರ್ವಜ್ವಳನರುಚಿಯುಮಂ ತಾನೆ ತೋಱುತ್ತುಂ: ಪಂಪಭಾ, ೧೨. ೨೧೩)

ರುಚಿರ

[ನಾ] ಸವಿಯಾದುದು (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಚಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ: ಪಂಪಭಾ, ೪. ೪೯ ವ)

ರುಚಿರುಳಿತಾಧರಪಲ್ಲವೆ

[ನಾ] ಸುಂದರವಾಗಿ ಬಾಗಿದ ಚಿಗುರಿನಂತಹ ತುಟಿಯವಳು (ಮತ್ತೊರ್ವಳ್ ಅತಿಸಂಭ್ರಮತ್ವರಿತದಿಂ ಮೇಖಳಾಕಳಿತ ರುಚಿರಲುಳಿತಾಧರಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು: ಪಂಪಭಾ, ೪. ೩೬ ವ)

ರುತಿ

[ನಾ] ಶಬ್ದ (ತಣ್ಣನೆ ತಣಿದು ಕಿವಿಯೊಳಮರ್ದಿನ ಪನಿ ಪನಿವಿನಂ ಎಸೆದರ್ ಅರೆಬರ್ ಅಳಿಕುಳರುತಿಯಿಂ: ಆದಿಪು, ೧೧. ೮೧)

ರುತು

[ನಾ] ಋತು (ಈ ಪೊೞ್ತಿಂಗೆ ಈ ರುತುವಿಂಗೆ ಈ ಪಸದನಂ ಇಂತುಟಪ್ಪ ಮೆಯ್ವಣ್ಣಕ್ಕೆ ಇಂತೀ ಪೂವಿನೊಳ್ ಈ ತುಡುಗೆಯೊಳ್ ಈ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ: ಪಂಪಭಾ, ೩. ೪೫)

ರುದಿತ

[ನಾ] ರೋದನ (ಮಾತಡಕಲೊಂದಿದ ದೂದವರಿಲ್ಲ ಅರಣ್ಯರುದಿತಂ ವಲವೆನ್ನೊಲವಿಂದುವಕ್ತ್ರೆಯಾ: ಪಂಪಭಾ, ೪. ೭೯)

ರುಂದ್ರ

[ಗು] ಭಾರಿ (ಅದೊಂದು ಮಂದಾರದ ಸರಿ ವಿರುವದ್ಭೃಂಗಸಂಗೀತಿ ಚೆಲ್ವಂ ನೀಡಿತ್ತು ಆ ರುಂದ್ರದೇವಾನಕದೊಡನೆ: ಆದಿಪು, ೭. ೨೫); [ಗು] ವಿಪುಲ (ಸುರಾಸುರೇಂದ್ರಮುನೀಂದ್ರ ರುಂದ್ರಸಭೆಯ ನಡುವೆ ಸಿಂಹಾಸನಮಸ್ತಕದೊಳಿರ್ದ ಜಗತ್ತ್ರಿತಯತಿಲಕನ ಪಾದಪದ್ಮಂಗಳ್ಗೆ: ಆದಿಪು, ೧೩. ೮೨ ವ); [ಗು] ವಿಸ್ತಾರವಾದ (ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ: ಪಂಪಭಾ, ೧. ೧೩)

ರುದ್ರಾವತಾರ

[ನಾ] ರುದ್ರನ ಅಂಶಸಂಭೂತ, ಅಶ್ವತ್ಥಾಮ (ಆ ರುದ್ರಾವತಾರನ ಕೆಲದೊಳ್ ಕಿಕ್ಕಿಱಿಗಿಱಿದ ತೞೆದುಱುಗಲ ನಡುವೆ ಪೊನ್ನ ರಥಮನೇಱಿ ನಿಂದಂ: ಪಂಪಭಾ, ೧೦. ೫೭ ವ)

ರುಧಿರ

[ನಾ] ರಕ್ತ (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ: ಪಂಪಭಾ, ೪. ೪೯ ವ)

ರುಧಿರಚ್ಛಟ

[ನಾ] [ರುಧಿರತ್+ಛಟ] ರಕ್ತರಾಶಿ (ಭಯಂಕರ ಶಿಂಶುಮಾರ ವಿಕಟದಂಷ್ಟ್ರಾ ಕ್ರಕಚಪಾಟ್ಯಮಾನ ನಾರಕನಿಕರ ರುಧಿರಚ್ಛಟ ಅಚ್ಛಾರುಣಿಸಲಿಲ ಹರಿಕಾನಿಕರಕರಾಳೆಯುಂ: ಆದಿಪು, ೫. ೮೭ ವ)

ರುಧಿರಮುಖಿ

[ನಾ] ಇಂದ್ರನು ಭೀಮನಿಗೆ ಕೊಟ್ಟ ಗದೆಯ ಹೆಸರು (ಗದೆ ಪೆಸರಿಂ ರುಧಿರಮುಖಿಯೆಂಬುದು ಅಂದು ಅದಂ ಅಧಿಕಬಳಸ್ಥಂಗೆ ಭೀಮಸೇನಂಗಿತ್ತಂ: ಪಂಪಭಾ, ೬. ೫)

ರುವತ್

[ಗು] ಝೇಂಕರಿಸುವ (ರುವತ್ ಭೃಂಗಾಳಿಯಿಂ ಪತ್ತುವಿಟ್ಟುಡುಗಿರ್ದಬ್ಜಮನೆಯ್ದೆ ಪೋಲ್ತುದು ಭವತ್ ವಕ್ತ್ರಾಬ್ಜಂ ಅಬ್ಜಾನನೇ: ಆದಿಪು, ೩. ೩೧)

ರೂಕ್ಷ

[ಗು] ಒರಟಾದ, ಕೆದರಿದ (ಮನೋಭವಂಗೆ ಆಳುಮಿರ್ಪವೊಲಿರ್ದ ಅತಿರಕ್ತಾಶೋಕದ ಸುತ್ತಿನೊಳಿರ್ದ ರೂಕ್ಷಾಳಕಂಗಳಂ ಓಸರಿಸುತ್ತುಂ ಮೆಲ್ಲನೆ ಮೇಳಿಸಿ ಕನ್ನೆಯಂ ನುಡಿದಳ್: ಆದಿಪು, ೩. ೩೦)

ರೂಪ

[ನಾ] ಕಣ್ಣಿಗೆ ಕಾಣುವ ಆಕಾರ (ಅಂತು ಪರಮಾತಿಶಯ ರೂಪ ರಸ ಗಂಧ ಸ್ಪರ್ಶ ಗುಣವತ್ ಪರಮಾಣು ಪರಿನಿರ್ವೃತಮೂರ್ತಿಯಪ್ಪ ಪರಮನ: ಆದಿಪು, ೮. ೬ ವ); [ನಾ] ಚೆಲುವು (ತನು ರೂಪ ವಿಭವ ಯೌವನ ಧನ ಸೌಭಾಗ್ಯ ಆಯುರಾದಿಗಳ್ಗೆಣೆ ಕುಡುಮಿಂಚಿನ ಪೊಳೆಪು ಮುಗಿಲ ನೆೞಲ್ ಇಂದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ: ಆದಿಪು, ೯. ೪೬)

ರೂಪಗರ್ಭ

[ನಾ] ಸ್ವರೂಪವನ್ನೊಳಗೊಂಡ (ಭಗವಜ್ಜನ್ಮಾಭಿಷೇಕ ಸಂಬಂಧಿಯಾಗೆ ತನ್ನ ಪೊಸತೆ ಸಮೆದ ಸಮವಕಾರ ರೂಪಕಮುಂ ದಶಾವತಾರರೂಪಗರ್ಭ ಸಂದರ್ಭಂಗಳಪ್ಪ ಶೇಷಾಶೇಷರೂಪಕಂಗಳುಮಂ: ಆದಿಪು, ೭. ೧೧೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App