Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ರಕ್ಕಸವಡೆ
[ನಾ] [ರಕ್ಕಸ + ಪಡೆ] ರಾಕ್ಷಸ ಸೈನ್ಯ (ಮೂಱುಂ ಯೋಜನದಳವಿಯ ಸಭಾಮಂಟಪಮನೊಂದು ಲಕ್ಕ ರಕ್ಕಸವಡೆಯಿಂ ಪೊತ್ತು ತರಿ: ಪಂಪಭಾ, ೬. ೨ ವ)
ರಕ್ಕಸಿ
[ನಾ] ರಾಕ್ಷಸಿ (ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರಕ್ಕಸಿಯರ ಕಂಡ ಕುಂಬಳದ ಮಾೞ್ಕೆವೊಲಾಗಿರೆ: ಪಂಪಭಾ, ೯. ೪೮)
ರಕ್ಕಸಿಯರ ಕಂಡ ಕುಂಬಳ
ರಾಕ್ಷಸಿಯರ ದೃಷ್ಟಿ ಬಿದ್ದ ಕುಂಬಳ, ಹೊರಗೆ ಸರಿಯಾಗಿ ಕಾಣಿಸಿದರೂ ರಾಕ್ಷಸಿಯ ದೃಷ್ಟಿ ಬಿದ್ದು ತಿರುಳು ಕೊಳೆತಿರುವ ಹಾಗೆ (ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರಕ್ಕಸಿಯರ ಕಂಡ ಕುಂಬಳದವೊಲಾಗಿರೆ: ಪಂಪಭಾ, ೯. ೪೮)
ರಕ್ತಕಂಠೀಜನ
[ನಾ] ಇನಿದನಿಯ ಸ್ತ್ರೀಯರು (ಗೀತಾರಾವದಿಂದಂ ನೆಱೆಯೆ ನೆಱಗೊಳಲ್ ರಕ್ತಕಂಠೀಜನಂ ಬಂದಿರೆ ವಂದಿವ್ರಾತಮೆತ್ತಂ ಬಗೆಗೊಳಲಿರೆ ಚೆಲ್ವಾದುದಾಸ್ಥಾನರಂಗಂ: ಆದಿಪು, ೨. ೩)
ರಕ್ತತುಳುಂಕು
[ಕ್ರಿ] ಕೋಪದಿಂದ ಕೆಂಪಾಗು (ಉಮ್ಮನೆ ಬೆಮರುತ್ತುಂ ಇರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು: ಪಂಪಭಾ, ೭. ೫ ವ)
ರಕ್ತತೆ
[ನಾ] ಕೆಂಬಣ್ಣ (ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟಂ ಆಗಳಂಬುಜಮಿತ್ರಂ: ಪಂಪಭಾ, ೩. ೨೩)
ರಕ್ತಮೋಕ್ಷ
[ನಾ] ರಕ್ತದ ಬಿಡುತೆ (ವೃಕೋದರನಿಂ ಆ ರಣರಂಗದೊಳಾದ ದುಷ್ಟದುಶ್ಶಾಸನ ರಕ್ತಮೋಕ್ಷದೊಳೆ ದೋಷವಿಮೋಕ್ಷಂ ಅದೇಕೆ ಕೊಂಡಪೈ: ಪಂಪಭಾ, ೧೩. ೬೮)
ರಕ್ತರುಚಿ
[ನಾ] ಕೆಂಪು ಕಾಂತಿ (ಇತ್ತ ವಂದ ಸಂಧ್ಯಾಸಮಯಾತ್ತ ರಕ್ತರುಚಿ ಪಿಂಗೆ: ಪಂಪಭಾ, ೩. ೮೧)
ರಕ್ತಾಂಭೋಜ
[ನಾ] [ರಕ್ತ+ಅಂಭೋಜ] ಕೆಂದಾವರೆ (ಯೋಗಾಭ್ಯಾಸದೊಳ್ ಅರೆಮುಗುಳ್ದ ರಕ್ತಾಂಭೋಜದಳ ವಿಳಾಸ ಉಪಹಾಸಿಗಳಪ್ಪ ಕಣ್ಗಳಂ ಒತ್ತಂಬದಿಂ ತೆಱೆದು: ಪಂಪಭಾ, ೧೩. ೬೩ ವ)
ರಕ್ತಾಶೋಕ
[ನಾ] ಕೆಂಪು ಅಶೋಕ (ಭವ್ಯಹೃತ್ಕಮಳಕ್ಕಂ ಮುದಮಂ ಜಪಾಪ್ರಸವ ರಕ್ತಾಶೋಕ ಬಂಧೂಕ ಶೋಣಮಣಿ ಜ್ಯೋತಿಗಳೆಕ್ಕೆಯಿಂ ಕುಡೆ: ಆದಿಪು, ೧೬. ೩)
ರಂಗ
[ನಾ] ನರ್ತನರಂಗ (ಧರೆ ರಂಗಂ ಗಗನಂ ಮನೋಹರತರಂ ನಾಟ್ಯಾಲಯಂ ನರ್ತಕಂ ಸುರರಾಜಂ: ಆದಿಪು, ೭. ೧೨೭); [ನಾ] ವೇದಿಕೆ (ಸಂಗತದಿಂ ಈಗಳ್ ಇಂತೀ ರಂಗಮೆ ರಣರಂಗಮಾಗೆ ಕಾದುವಂ ಅಳವಂ ಪೊಂಗದಿರ್ ಇದಿರ್ಚು ಅದೇಂ ಗಳ ರಂಗಂಬೊಕ್ಕಾಡುವಂತೆ ಪೆಂಡಿರ್ ಗಂಡರ್: ಪಂಪಭಾ, ೨. ೮೦)
ರಂಗತ್
[ಗು] ನರ್ತಿಸುವ, ಕುಣಿಯುವ (ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ಗಾಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ: ಪಂಪಭಾ, ೧. ೮೪)
ರಂಗಬಲಿ
[ನಾ] ರಂಗೋಲಿ (ಅಂಗಣರಚಿತಮೌಕ್ತಿಕ ರಂಗಬಲಿಯುಂ ಬಲಿಕುಸುಮ ನಿಪತದಳಿಕುಳಾರಬ್ಧಗೀತಮುಂ: ಆದಿಪು, ೪. ೫೮ ವ)
ರಂಗಂಬೊಗು
[ಕ್ರಿ] ಪ್ರದರ್ಶನ ನೀಡಲು ವೇದಿಕೆಯನ್ನು ಪ್ರವೇಶಿಸು (ನಾಟ್ಯವಿದಯಾಚಾರ್ಯನಂ ಪೋಲ್ತು ರಂಗಂಬೊಕ್ಕು ಲೋಕಾಕಾರಮಂ ಅಭಿನಯಿಪಾಕಾರಂ ನೆಗೞೆ: ಆದಿಪು, ೭. ೧೧೫ ವ)
ರಂಗಭೂಮಿ
[ನಾ] ವೇದಿಕೆ (ರತ್ನದಿಂ ಬೆರಸಿದ ಬಣ್ಣದೊಳ್ ಮೆಱೆಯೆ ಕಟ್ಟಿಸಿ ಘಟ್ಟಿಸಿ ರಂಗಭೂಮಿಯಂ: ಪಂಪಭಾ, ೩. ೪೦)
ರಂಗವಲಿ
[ನಾ] ರಂಗೋಲಿ (ಕತ್ತುರಿಯ ಸಗಣನೀರ್ ಬಿಡುಮುತ್ತಿನ ರಂಗವಲಿ ಮಿಳಿರ್ವ ದೇಗುಲದ ಗುಡಿ .. .. ಮನೆಗಳೊಳೆಲ್ಲಂ: ಪಂಪಭಾ, ೩. ೨)
ರಂಗವಲ್ಲಿ
[ನಾ] ರಂಗೋಲಿ (ತಳ್ತು ಕಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ ಸುದತಿಯರಿಕ್ಕೆ ಚಾಮರಮಂ: ಪಂಪಭಾ, ೫. ೧೦೫)
ರಂಗಿತ
[ನಾ] [ಮಗುವಿನ] ಹರಿದಾಟ, ಚಲನೆ (ದರಹಸಿತಂ ಹಸಿತಂ ಸುಂದರಮನ್ಮನಲಪಿತರುಚಿತರಂಗಿತಮೆಂಬೀ ಪರಿವಿಡಿಯ ಬಾಲಕೇಳಿಯೆ ಕರಮೆ ಮರುಳ್ಚಿದುದು ತಾಯುಮಂ ತಂದೆಯುಮಂ: ಆದಿಪು, ೮. ೩೮)
ರಜ
[ನಾ] ಧೂಳು (ರಸರಸದ ಬಾವಿ ಮನೆಮನೆಗೆ ಬೇಱೆ ಕಿಸುಗಲ್ಗಳ ರಜದ ಕಣಿವೆರಸು ತೋಱೆ: ಪಂಪಭಾ, ೪. ೧೦); [ನಾ] ರಜೋಗುಣ (ಸತ್ತ್ವರಜಸ್ತಮಂಗಳುಂ ಕಾಣಲಾದುವು ಎರಡುಂ ಪಡೆಯೊಳ್: ಪಂಪಭಾ, ೧೦. ೬೯); ಪರಾಗ (ಸುರಿವ ಅಜರಪ್ರಸೂನರಜದಿಂ ಕವಿಲಾದ ಶಿರೋರುಹಂ: ಪಂಪಭಾ, ೧೨. ೨೨೧)
ರಜಃಕಷಾಯ