Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಲಂಕಾಧಿಪತಿ
[ನಾ] ಲಂಕೆಯ ಒಡೆಯ, ರಾವಣ (ತನ್ನ ದೋರ್ಗರ್ವದ ಅಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತು ಎತ್ತಿದೊಡೆ ಇತ್ತಂ ಮೆಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಳಕಂಠಂ: ಪಂಪಭಾ, ೭. ೭೪)
ಲಕುಟ
[ನಾ] ದೊಣ್ಣೆ (ಪಾಪಸತ್ವಂಗಳ್ ಕಾಡೆ ಲಕುಟಯಷ್ಟ್ಯಾದಿ ವಿಧಿಯನುಪದೇಶಂಗೆಯ್ದಾತಂ ಕ್ಷೇಮಂಧರನೆಂಬ ಪೆಸರಂ ಪಡೆದಂ: ಆದಿಪು, ೬. ೫೬ ವ)
ಲಕ್ಕ
[ನಾ] ಲಕ್ಷ ಎಂಬ ಸಂಖ್ಯೆ (ಪಟ್ಟಂಗಟ್ಟಿದ ಇಳಾಧಿನಾಥರೆ ಪಯಿಂಛಾಸಿರ್ವರ್ ಒಳ್ಳಾನೆಗಳ್ ಪಟ್ಟಂಗಟ್ಟಿದುವು ಒಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ: ಪಂಪಭಾ, ೧೦. ೧೧೭)
ಲಕ್ಕಣ
[ನಾ] ಲಕ್ಷಣ (ಬೂದಿ ಜೆಡೆ ಲಕ್ಕಣಂ ತಪಕೆ ಆದುವು ಎರೞ್ದೊಣೆ ಶರಾಸನಂ ಕವಚಂ ಇದೆಂತಾದುವೋ ಮುತ್ತುಂ ಮೆೞಸುಂ ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ: ಪಂಪಭಾ, ೭. ೯೨); [ನಾ] ದುರ್ಯೋಧನನ ಮಗನ ಹೆಸರು (ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಱಿದು ಬಳಸಿ ಬರೆ: ಪಂಪಭಾ, ೧೦. ೨೭ ವ)
ಲಕ್ಕೆ
[ನಾ] ಲಕ್ಷ ಎಂಬ ಸಂಖ್ಯೆ (ಒಂದೊತ್ತಂ ನಡೆಯಿಸುವುದೊಂದೊತ್ತಿನ ಲಯಕೆ ಲಕ್ಕೆ ತೆಱನಾಡುವುದೇನೆಂದಾಂ ಬಣ್ಣಿಸುವೆನೊ: ಆದಿಪು, ೯. ೩೩); [ನಾ] ಗುರಿ, ಉದ್ದೇಶ (ಅತಿವೇಗದಿಂ ಪರಿವ ಪಾಱುವ ಲಕ್ಕೆಯನೊಡ್ಡುವ ಒಳ್ಪು ತನ್ನನೆ ನಡೆ ನೋಡಿಸುತ್ತುಮಿರೆ: ಆದಿಪು, ೧೧. ೩೧)
ಲಕ್ಷ್ಮ
[ನಾ] ಕಲಂಕ, ಗುರುತು (ಧವಳಾಪಾಂಗ ವಿಲೋಕನಾಮೃತಮಯಂ ಭ್ರೂಲಕ್ಷ್ಮರಮ್ಯಂ ಮನೋಭವ ರಾಜ್ಯೋದಯಹೇತು: ಆದಿಪು, ೬. ೮೮)
ಲಕ್ಷ್ಮಿ
[ನಾ] ಕಾಂತಿ, ಸೊಗಸು (ಜಿನಸವನಾಂಬುವಿನೊಳ್ ಭೋಂಕೆನೆ ಚಂದ್ರಂ ತೇಂಕಿ ಹಂಸವೃದ್ಧನಂ ಇನಿಸಂ ನೆನೆಯಿಸಿ ಕೊಳದೊಳಗಣ ಸಿತವನರುಹಲಕ್ಷ್ಮಿಯುಮಂ ಇನಿಸು ತನಗೊಳಕೊಂಡಂ: ಆದಿಪು, ೭. ೯೯)
ಲಕ್ಷ್ಮೀದಯಿತಂ
[ನಾ] ಸಿರಿಯೊಡೆಯ (ಜಳಧಿಯುಮಂ ಲಕ್ಷ್ಮೀದಯಿತಂ ನೀರ್ವರಿಯಿಂದಾದಮೆ ಕಿಱಿದೆಂದು ಬಗೆದು ನೋಡಿದನಾಗಳ್: ಆದಿಪು, ೧೨. ೭೫)
ಲಕ್ಷ್ಯ
[ನಾ] ಗುರಿಯ ವಸ್ತು (ಭರತಕುಲತಿಳಕರಿರ್ ವರಶರಾಸನ ವ್ಯಗ್ರಹಸ್ತರಿರ್ ಬಳಯುತರಿರ್ ನೆರೆದಿನಿಬರುಂ ಇರದೆ ಈ ಲಕ್ಷ್ಯಮಂ ಇರದಕ್ಕಟ ಸರದೆ ತೆಗೆಯಲಾರ್ತರುಮಿಲ್ಲಾ: ಪಂಪಭಾ, ೨. ೫೨)
ಲಂಗಿಸು
[ಕ್ರಿ] [ಲಂಘಿಸು] ಹಾರು, ನೆಗೆ (ಪೊಗೆ ಪುಗೆ ಕಣ್ಣಂ ಸಿಂಗಂಗಳ್ ಅಳುರೆ ಗರ್ಜಿಸಿ ಲಂಗಿಸಿ ಪುಡಪುಡನೆ ಪುೞ್ಗಿ ಸತ್ತುವು ಪಲವುಂ: ಪಂಪಭಾ, ೫. ೯೨)
ಲಗ್ನ
[ನಾ] ಮದುವೆ (ವಸುಂಧರಾಸೌಂದರಿಯುಂ ತಾನುಂ ಪ್ರಿಯತನಯನ ವಿವಾಹೋತ್ಸವಲಗ್ನಚಿತ್ತರಾಗಿ ಲಗ್ನಮನೆ ಪಾರುತ್ತುಮಿರ್ದರ್: ಆದಿಪು, ೪. ೩೦ ವ); [ಗು] ಅಂಟಿಕೊಂಡ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹ ಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್: ಆದಿಪು, ೫. ೮೯); [ಗು] ಕೂಡಿದ, ಸೆರಿದ (ತತ್ಕಮಳಕಾನನಕಂಟಕಲಗ್ನಪಾದಮಾದವೊಲ್ ಉಡುಗುತ್ತುಂ ಆತ್ಮಕರಮಂ ರವಿ ಪೊರ್ದಿದಂ ಅಸ್ತಶೈಲಮಂ: ಪಂಪಭಾ, ೪. ೪೬)
ಲಘು
[ಗು] ಹಗುರ, ಕ್ಷುಲ್ಲಕ (ತಂದೆ ಕುಡೆ ರಾಜ್ಯಮಂ ತೃಣದಿಂದಂ ಲಘುವಾಗೆ ಬಗೆದು ಬಗೆದರ್ ತಾಮುಂ ತಂದೆಯ ಬಗೆದುದಂ: ಆದಿಪು, ೪. ೮೮)
ಲಜ್ಜಾಳೋಳಂ
[ನಾ] ಲಜ್ಜೆಯಲ್ಲಿ ಆಸಕ್ತವಾದ (ಮುಕುಳೀಕೃತಂ ಲಳಿತಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂದಳಿತಂ ಅಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ: ಪಂಪಭಾ, ೪. ೭೭)
ಲಟಹ
[ನಾ] ಲಾವಣ್ಯ (ಸ್ಫುಟವೈಶಾಖಸ್ಥಾನಂ ಕಟಿತಟವಿನ್ಯಸ್ತ ಹಸ್ತಯುಗನಾಗಿ ಮಹಾಲಟಹಂಬೆರಸಿರ್ದೊಪ್ಪುವ ನಟನಾಕೃತಿ ತಾನೆ ಲೋಕದೊಂದಾಕಾರಂ: ಆದಿಪು, ೧. ೪೫)
ಲಟಹನರ್ತನ
[ನಾ] ರಮಣೀಯ ನೃತ್ಯ (ವಾರವಿಲಾಸಿನೀ ಲಟಹನರ್ತನ ಚಂಚಳಕಾಂಚಿದಾಮಮಂ ಜೀರಕಕಿಂಕಿಣೀ ರಣಿತದಿಂ .. .. ಏಂ ಸೊಗಯಿಸಿರ್ದುದೊ: ಆದಿಪು, ೮. ೫೦)
ಲತಾಂಗಿ
[ನಾ] ಬಳ್ಳಿಯಂತೆ ಸಪೂರಳಾದವಳು, ಸುಂದರ ಹೆಣ್ಣು (ಮನ್ಮಥಮಹೀಭುಜನೋವದೆ ತೋಱಿಕೊಟ್ಟುದೊಂದಾನೆಯೆ ತನ್ನನಾನೆಗೊಲೆಗೊಂದಪುದೆಂದು ಲತಾಂಗಿ ಬೆರ್ಚಿದಳ್: ಪಂಪಭಾ, ೪. ೫೮)
ಲತಾಗೃಹೋದರ
[ಗು] ಬಳ್ಳಿಮಾಡದ ಒಳಗಡೆ (ವೇಳಾವನ ಲತಾಗೃಹೋದರ ಪುಳಿನಸ್ಥಳಪ್ರದೇಶದೊಳ್ ತೊೞಲಲುಂ ಅೞ್ತಿಯಾಗೆ: ಪಂಪಭಾ, ೧. ೧೪೨ ವ)
ಲತಾಂತ
[ನಾ] ಹೂ (ಅಮರಗಣಿಕೆಯರ ಮನಂ ವಿರುವತ್ ಅಳಿನಿಕರದೊಡನಿರದೆ ಎಱಗಿದುವು ಅಮರತರು ಲತಾಂತಾವಳಿಯೊಳ್: ಆದಿಪು, ೭. ೬೮)
ಲತಾಪ್ರತಾನ
[ನಾ] ಬಳ್ಳಿಗಳ ಗುಂಪು (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ ಸಮುಚ್ಚಳತ್ ಮಣಿಗಣ ಆತ್ತ ಮರೀಚಿಲತಾಪ್ರತಾನಸಂವಳಿಯಿತ: ಪಂಪಭಾ, ೪. ೨೫)
ಲತಾಭವನ