भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಜ್ರಮುಷ್ಟಿ

[ನಾ] ಕೈಯಲ್ಲಿ ಹಿಡಿಯುವ ಒಂದು ಆಯುಧ (ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೋಳೊಳಂ ಉಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)

ವಜ್ರಲೇಪ

[ನಾ] ವಜ್ರದ ಲೇಪನ, ಗಟ್ಟಿಗೊಳಿಸುವುದು (ವಜ್ರಲೇಪದ ತಗುಳ್ಪಂ ಪೋಲ್ವಿನಂ ವಜ್ರನಾಭಿಗೆ ಅತಿಪ್ರೀತಿಯಂ ಉಂಟುಮಾಡಿದರವರ್ ಜನ್ಮಾಂತರಸ್ನೇಹದಿಂ: ಆದಿಪು, ೬. ೨೨)

ವಜ್ರವೃಷಭನಾರಾಚಸಂಹನನ

[ನಾ] [ಜೈನ] ವಜ್ರಕ್ಕೆ ಸಮಾನವಾದ ಅಸ್ತಿಪಂಜರವು ನಿರ್ಮಾಣವಾದ ಹಾಗೂ ವಜ್ರಸಮಾನವಾದ ಕೀಲುಗಳಿಂದ ಕೀಲಿತವಾದ ದೇಹ (ಅಂತು ನಿಸ್ವೇದ ನಿರ್ಮಲ ಕ್ಷೀರಗೌರಕ್ತತಜ ಸಮಚತುರಸ್ರಸಂಸ್ಥಾನ ವಜ್ರವೃಷಭನಾರಾಚ ಸಂಹನನುಂ: ಆದಿಪು, ೮. ೪ ವ)

ವಜ್ರಶರ

[ನಾ] ಸಿಡಿಲಿನಂತಹ ಬಾಣ (ಎಚ್ಚೊಡೆ ಅಸುರನಿಟ್ಟ ಬೆಟ್ಟಂ ಒಂದು ವಜ್ರಶರದಿಂ ಆರ್ದು ಎಚ್ಚು ದಿತಿಜನೆಚ್ಚ ಸಡಿಲ ಶರಮಂ ಉದಕಬಾಣದಿಂದೆಚ್ಚು: ಪಂಪಭಾ, ೧೨. ೧೩)

ವಜ್ರಹತಿ

[ನಾ] ಸಿಡಿಲ ಹೊಡೆತ, ವಜ್ರಾಯುಧದ ಹೊಡೆತ (ಕುಲಿಶಾಯುಧನಿತ್ತ ಶಕ್ತಿಯಿಂದೆ ಆತನ ಉರಸ್ಥಲಮನಿಡೆ ವಜ್ರಹತಿಯಿಂ ಕುಲಗಿರಿ ಕೆಡೆವಂತೆ ಕೆಡೆದನಾ ದನುತನಯಂ: ಪಂಪಭಾ, ೧೨. ೧೪)

ವಜ್ರಿ

[ನಾ] ಇಂದ್ರ (ಇದಿರೊಳ್ ನಿಂದೊಡೆ ವಜ್ರಿ ಸೈರಿಸಂ ಇರಲ್ವೇಡ ಎಮ್ಮೊಳೊಳ್ವೊಕ್ಕು ನಿಲ್ವುದು ನೀಂ ಎಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವು: ಪಂಪಭಾ, ೪. ೨೪)

ವಜ್ರಿಶರ

[ನಾ] ಇಂದ್ರಾಸ್ತ್ರ, ಶಕ್ತಿ (ನಿಶಾತವಜ್ರಿಶರದಿಂ ಸುರರಂಬರದೊಳ್ ತಗುಳ್ದು ಬಿಚ್ಚಳಿಸೆ ನದೀಜನುಚ್ಚಳಿಸೆ ಕಾದಿದಂ ಏಂ ಕಲಿಯೊ ಗುಣಾರ್ಣವಂ: ಪಂಪಭಾ, ೧೧. ೪೩)

ವಟವಿಟಪಿ

[ನಾ] ಆಲದ ಮರ (ಪುರಿಮತಾಳಪುರ ಬಹಿರ್ಭಾಗನಿಕಟ ಶಕಟೋದ್ಯಾನವಟವಿಟಪಿಯ ಕೆೞಗೆ ವಿಶಾಳ ನಿರಾಳ ಕುಳನಿರ್ಜಂತುಕ ನಿರ್ಮಲ ಶಿಲಾಪಟ್ಟದ ಮೇಲೆ: ಆದಿಪು, ೧೦. ೧೩ ವ)

ವಟು

[ನಾ] ಬ್ರಹ್ಮಚಾರಿ (ಆಗಳೆ ಕೈಗೂಡಿದ ವಟುವಾಕೃತಿಯೊಳೆ ಬೇಡಿದನಾ ಸಹಜಕವಚಮಂ ಕುಂಡಳಮಂ; ಪಂಪಭಾ, ೧. ೧೦೦)

ವಣಿಗ್ವಂಶ

[ನಾ] ಆದಿದೇವನು ವಿಭಾಗಿಸಿದ ಮೂರು ವರ್ಣಗಳಲ್ಲಿ ಒಂದು, ವಣಿಕರು ಎಂಬ ವರ್ಣ (ತನ್ನ ಪಡೆದ ಕ್ಷತ್ರಿಯವಣಿಕ್ಶೂದ್ರರೆಂಬ ಮೂಱುವರ್ಣಂಗಳೊಳಗೆ .. .. ವಣಿಗ್ವಂಶಕ್ಕೆ ಪಾಶುಪಾಲ್ಯ ಕೃಷಿ ಪಣ್ಯಕರ್ಮಂಗಳುಮಂ: ಆದಿಪು, ೮. ೬೪ ವ); [ನಾ] ವೈಶ್ಯವರ್ಣ (ವಣಿಗ್ವಂಶಕ್ಕೆ ಜಳಸ್ಥಳಯಾತ್ರಾಸಂವೃತಮರ್ಥ ಪ್ರವರ್ತನಮುಮಂ: ಆದಿಪು, ೮ ೭೩ ವ)

ವಣಿಗ್ವಂಶಾಗ್ರಣಿ

[ನಾ] ವ್ಯಾಪಾರಿವಂಶ ಶ್ರೇಷ್ಠ (ಆ ಪುರದೊಳ್ ವಣಿಗ್ವಂಶಾಗ್ರಣಿ ಕುಬೇರನಿಂದ ಅಧಿಕನೆನಿಸಿದ ಕುಬೇರದತ್ತಂಗಂ ಅನಂತಮತಿಗಂ ಧನದೇವನೆಂಬ ಪ್ರಿಯತನೂಭವನಾದಂ: ಆದಿಪು, ೬. ೨೧ ವ)

ವಣಿಗ್ವ್ಯವಹಾರ

[ನಾ] [ವಣಿಕ್+ವ್ಯವಹಾರ] ವ್ಯಾಪಾರಿಗಳ ಕಾರ್ಯ (ಸೇವಾಧರ್ಮೋಚಿತಮೆನಿಸುವ ಅಸಿಕರ್ಮಮುಮಂ ಅನೇಕ .. .. ಶಾಸ್ತ್ರಾನುಗತಮಪ್ಪ ವಿದ್ಯೆಯುಮಂ ವಣಿಗ್ವ್ಯವಹಾರಾನುಕಾರಿಯಪ್ಪ ವಾಣಿಜ್ಯಮುಮಂ: ಆದಿಪು, ೮. ೬೪ ವ)

ವದನ

[ನಾ] ಮುಖ (ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್: ಆದಿಪು, ೫. ೮೭ ವ); [ನಾ] ಬಾಯಿ (ಮಹೀತಳಾಶ್ಲಿಷ್ಟಜಾನುಲಲಾಟಪಟ್ಟರ್ ಪ್ರಣಾಮಾರ್ಪಣಪುರಸ್ಸರಂ ಶಿರೋವೇಷ್ಟನ ಪ್ರಲಂಬ ಚೇಳಾಂಚಳ ಪಿಹಿತವದನರಾಗಿ: ಆದಿಪು, ೧೦. ೪೮ ವ)

ವಂದನಮಾಳಾ

[ನಾ] ತೋರಣ (ಸಂಛನ್ನ ವಂದನಮಾಳಾ ಲಲಿತಾಂಸುಕಧ್ವಜವಿಳಾಸಾಕೀರ್ಣಮಂ ಮೆಚ್ಚಿ ಪೊಕ್ಕಂ ಅಯೋಧ್ಯಾಪುರಮಂ: ಆದಿಪು, ೧೪. ೧೪೯) [ವಂದನಕ್ಕಾಗಿ ಭರತನು ಮಾಡಿಸಿದ ಕಾರಣದಿಂದ ಇದಕ್ಕೆ ವಂದನಮಾಲೆ ಎಂಬ ಹೆಸರು ಉಂಟಾಯಿತು: ಆದಿಪು, ೧೬. ೩೯]

ವದನರಸ

[ನಾ] ಜೊಲ್ಲು (ವದನರಸಂ ಮದನರಸಂ ಪೊದಳ್ದುದೆನಿಸುವಿನಮಮರಿ ನರ್ತಿಸೆ: ಆದಿಪು, ೭. ೧೯)

ವದನಾರವಿಂದೆ

[ನಾ] ಕಮಲಮುಖಿ, ಅರಳಿದ ಕಮಲದಂತಹ ಮುಖದವಳು (ಅಂಬಿಕೆಯ ಸೂಳೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಿಂದಾಕೆಯ ಮಗಂ ವಿದುರನೆಂಬಂ ಅನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಂ: ಪಂಪಭಾ, ೧. ೮೫ ವ)

ವಂದಾರು

[ನಾ] ಸ್ತುತಿಕಾರ, ಹೊಗಳುವವನು (ವಂದಾರು ಮುನೀಂದ್ರ ವೃಂದಾರಕವೃಂದಸೌಂದರಮುಂ ಆಸನ್ನಭವ್ಯ ವ್ಯೋಮಚರ ಭೂಚರನಿಚಯನಿಚಿತಮುಂ ಆಗಿ: ಆದಿಪು, ೩. ೪೫ ವ)

ವಂದಿ

[ನಾ] ಹೊಗಳು ಭಟ್ಟ (ಸೂತ ನಟ ವಂದಿಮಾಗಧ ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರ ಉದ್ಭೂತರವಂ ಎಸೆಯೆ: ಪಂಪಭಾ, ೧೨. ೧೦೬)

ವಂದಿಜನ

ಹೊಗಳುಭಟ್ಟರ ಗುಂಪು (ನಿರಂತರಂ ಕಡಿಕಡಿದಿತ್ತ ಪೊನ್ನೆ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋಡೆ ಎಡಱದೆ ಬೇಡಿಂ ಓಡಿಂ ಇದು ಚಾಗದ ಬೀರದ ಮಾತು ಕರ್ಣನಾ: ಪಂಪಭಾ, ೧. ೯೯);

ವಧಾರ್ಥ

[ನಾ] ಕೊಲ್ಲುವ ಉದ್ದೇಶ (ಅಂಬೆಯೆಂಬ ದುಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಂ ಅಗ್ನಿಶರೀರಿಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App