भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಧುವಿರ್

[ನಾ] ಸ್ತ್ರೀಯರು (ಎರಡು ರಥದ ಗಾಲಿಯ ಕೋಳಿಂದಾದ ರಜಃಪಟಲಂ ಕವಿದು ಆದಮೆ ತೀವಿದುದು ದಿವಿಜವಧುವಿರ ಕಣ್ಣೊಳ್: ಪಂಪಭಾ, ೫. ೭೯)

ವಧೂವರ

[ನಾ] ವಧುಶ್ರೇಷ್ಠಳು (ಎಣ್ಬರುಂ ಆಶಾವಧೂವರರಂ ಆದಿಪುರುಷಾಂಬಿಕೆಗೆ ಗಾಯಕೀನಾಯಕಿಯರಾಗಿ: ಆದಿಪು, ೭. ೩ ವ)

ವಧೂವರತೆ

[ನಾ] ವಧುವಿಗೆ ವರನಾಗುವಿಕೆ (ಮಾಘಮಾಸಂ ಬರೆ ಕೃಷ್ಣಚತುರ್ದಶೀದಿನಂ ಸಮನಿಸೆ ತತ್ಪುರುದೇವಂ ಮುಕ್ತಿವಧೂವರತೆಯಂ ಅಭಿಜಿನ್ಮುಹೂರ್ತದೊಳ್ ಕೈಕೊಂಡಂ: ಆದಿಪು, ೧೬. ೫೧)

ವಧೆ

[ನಾ] ಕೊಲೆ (ಹಿಡಿಂಬವಧೆ ಬಕಾಸುರವಧೆ .. .. ಪೆಱವುಮುಪಾಖ್ಯಾನಕಥೆಗಳೊಳಮೊಂದುಂ ಕುಂದಲೀಯದೆ ಪೇೞ್ವೆಂ: ಪಂಪಭಾ, ೧೪. ೫೨ ವ)

ವಧ್ಯಕ್ರಮ

[ನಾ] ಕೊಲ್ಲುವ ಬಗೆ (ಒಂದೊಂದರ್ಕೆ ಮೊಗಂಬುಗಿಸಿದಾಗಳ್ ಉಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವರ್ ಸುರಿಗಿಱಿವಂತಿಱಿಯೆ: ಪಂಪಭಾ, ೧೦. ೯೩ ವ)

ವಂಧ್ಯಾಸ್ತನಂಧಯಸಮಾಗಮ

ಬಂಜೆ ಮತ್ತವಳ ಮಗು ಸೇರುವುದು, ಅಸಂಭವ (ಅದಱಿಂದಮೆನ್ನ ಬಯಸಿದ ಬಯಕೆಯಪ್ಪುದು ವಂಧ್ಯಾಸ್ತನಂಧಯ ಸಮಾಗಮಸಮಾನಂ: ಆದಿಪು, ೩. ೪೩ ವ)

ವನ

[ನಾ] ಕಾಡು (ಎತ್ತ ವನಂ ಎತ್ತ ಮೃಗಯಾವೃತ್ತಕಂ ಈ ತಪಸಿಯೆತ್ತ ಮೃಗಂ ಎಂದು ಎಂತು ಆನೆತ್ತಚ್ಚೆನ್ ಆತ್ಮಕರ್ಮಾಯತ್ತಂ ಪೆಱತಲ್ತಿದು ಎಲ್ಲಂ ಅಘಟಿತಘಟಿತಂ: ಪಂಪಭಾ, ೧. ೧೧೩); [ನಾ] ನೀರು (ರಂಗತ್ತುಂಗತರಂಗ ಭಂಗುರಲಸತ್ ಗಂಗಾಜಳಂ ನರ್ಮದಾಸಂಗ ಸ್ವಚ್ಛವನಂ: ಪಂಪಭಾ, ೧೪. ೩೧)

ವನಕ್ರೀಡೆ

[ನಾ] ವನಕೇಳಿ (ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯುಂ ಅಪ್ಪುದಱಿಂ ವನಕ್ರೀಡಾನಿಮಿತ್ತದಿಂ ಪೋಗಿ: ಪಂಪಭಾ, ೨. ೧೫ ವ)

ವನಖಗ

[ನಾ] ಕಾಡುಹಕ್ಕಿ (ವನಖಗ ವನಮೃಗ ವನತರು ವನಚರ ವನವನಜನಿವಹಮುಳ್ಳನಿತುಂ ಸೀರನಿತುಂ ಅಣಂ ಉೞಿದುದಿಲ್ಲ: ಪಂಪಭಾ, ೫. ೯೭)

ವನಚರ

[ನಾ] ಕಾಡಿನಲ್ಲಿ ಓಡಾಡುವ ಪ್ರಾಣಿಗಳು (ವನಖಗ ವನಮೃಗ ವನತರು ವನಚರ ವನವನಜನಿವಹಮುಳ್ಳನಿತುಂ ಸೀರನಿತುಂ ಅಣಂ ಉೞಿದುದಿಲ್ಲ: ಪಂಪಭಾ, ೫. ೯೭); [ನಾ] ಬೇಟೆಗಾರ (ವನಚರನಾಗಿ ಶಂಭು ಗಿರಿಜಾತೆಯಂ ಓತು ಪುಳಿಂದಿ ಮಾಡಿ ನಚ್ಚಿನ ಗುಹನಂ ಕಿರಾತಬಲನಾಯಕನಾಗಿರೆ ಮಾಡಿ: ಪಂಪಭಾ, ೮. ೧೪)

ವನಜವನ

[ನಾ] ತಾವರೆಯ ವನ (ತುಱುಗಿದ ಹಿಮಬಿಂದುಗಳಿಂದೆ ಎಱಗಿದ ನವವನಜವನದವೋಲ್ ಶೋಕದಿಂ ಅಂದೊಱೆವ ನಯನೋದಬಿಂದುವಿಂ ಎಱಗಿದುದೊರ್ಮೊದಲೆ ಬಂಧುಮುಖವನಜವನಂ: ಪಂಪಭಾ, ೨. ೨೯)

ವನಜಳಕೇಳಿ

[ನಾ] ಕಾಡಿನ ನೀರಾಟ (ಕಡುಪಗಲಾದುದು ಬೀಡಂ ಬಿಡಿಸುವುದು ಈ ಪುಣ್ಯನದಿಯ ತಡಿಯೊಳ್ ದೇವರ್ ನಡೆವುದು ವನಜಳಕೇಳಿಗೆ: ಆದಿಪು, ೧೧. ೬೯)

ವನತರು

[ನಾ] ಕಾಡುಮರ (ವನಖಗ ವನಮೃಗ ವನತರು ವನಚರ ವನವನಜನಿವಹಮುಳ್ಳನಿತುಂ ಸೀರನಿತುಂ ಅಣಂ ಉೞಿದುದಿಲ್ಲ: ಪಂಪಭಾ, ೫. ೯೭)

ವನದಂತಿ

[ನಾ] ಕಾಡಾನೆ (ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷಧ್ವಜಮನುಡಿದು ಕೆಡೆವಿನಂ ಎಚ್ಚಾಗಳ್: ಪಂಪಭಾ, ೧೨. ೨೦೮ ವ)

ವನದಹನ

[ನಾ] ಕಾಡುಗಿಚ್ಚು (ವನದಹನಂ ವನಾಂತರಮಂ ಒರ್ಬಳಸಾಗಿರೆ ಮುತ್ತಿ ಸುತ್ತಿ ನಡುವಿರ್ದುಂ ಆ ಮರನನೞ್ವಿದುದು: ಆದಿಪು, ೯. ೫೯)

ವನದುರ್ಗ

[ನಾ] ಕಾಡಿನ ಮಧ್ಯದಲ್ಲಿರುವ ಕೋಟೆ (ಆ ಮಾಧವೀಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂಬುಗುವಂತೆ ಪೊಕ್ಕು: ಪಂಪಭಾ, ೫. ೬ ವ)

ವನಧಿ

[ನಾ] ಸಮುದ್ರ (ವನಧಿಪರೀತಭೂತಳದೊಳೀತನೆ ಸೋಲದ ಗಂಡಂ: ಪಂಪಭಾ, ೧. ೨೬)

ವನಧಿಧ್ವಾನ

[ನಾ] ಸಮುದ್ರಘೋಷ (ವನಧಿಧ್ವಾನಮನೊಡ್ಡಿಸುತ್ತಿರೆ ನದದ್ಗಂಭೀರಭೇರೀಬೃಹದ್ಧ್ವನಿ: ಆದಿಪು, ೧೪. ೧೪೯)

ವನಧಿಪರೀತ

[ಗು] ಸಮುದ್ರದಿಂದ ಸುತ್ತುವರಿದ (ವನಧಿಪರೀತ ಭೂತಳದೊಳೀತನೆ ಸೋಲದ ಗಂಡಂ: ಪಂಪಭಾ, ೧. ೧೬)

ವನಧಿಪ್ರಧ್ವಾನ

[ನಾ] ಸಮುದ್ರಘೋಷ (ವನಧಿಪ್ರಧ್ವಾನದಿಂ ಮಂಗಳಪಟಹರವಂ ಪೆರ್ಚೆ ಮಾಂಗಲ್ಯಗೇಯಧ್ವನಿಯಿಂದೆ ಆಶಾಂತರಂ ಘೂರ್ಣಿಸಿ ಸೊಗಯಿಸೆ: ಪಂಪಭಾ, ೧೪. ೧೮)

Search Dictionaries

Loading Results

Follow Us :   
  Download Bharatavani App
  Bharatavani Windows App