भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವ್ಯಾಜ

[ನಾ] ತೋರಿಕೆ (ನಿಶ್ಚಳಧೈರ್ಯವ್ಯಾಜತಿರ್ಯಗ್ವಳನತರಳಿತಂ ದೃಷ್ಟಿ ಪೇೞ್ದತ್ತು ನಿರ್ವ್ಯಾಕುಳಮಾಗಳ್: ಆದಿಪು, ೪. ೫೨); [ನಾ] ನೆಪ, ಕಾರಣ (ಮೃಗಯಾವ್ಯಾಜದಿನೊರ್ಮೆ ಶಂತನು ತೊೞಲ್ತರ್ಪಂ ಪಳಂಚಲ್ಕೆ ತನ್ಮೃಗಶಾಬಾಕ್ಷಿಯ ಕಂಪು ತಟ್ಟಿ: ಪಂಪಭಾ, ೧. ೭೦)

ವ್ಯಾನಪದ

[ನಾ] ಆವರಿಸಲ್ಪಟ್ಟ ಪಾದವುಳ್ಳವನು (ದಾನವಮಾನವ ಸುರೇಂದ್ರ ಮಣಿಮಕುಟತಟಾವ್ಯಾನಪದಂಗೆ ಆ ನೆಗೞ್ದುದಂ ಆನೇತಱೊಳ್ ಎಂತುಂ ನೀಗುವೆಂ: ಪಂಪಭಾ, ೮. ೨೫)

ವ್ಯಾಪಾರ

[ನಾ] ಚಟುವಟಿಕೆ, ಕಾರ್ಯ (ಅಂತು ನರನಾರಾಯಣರಿರ್ವರುಂ .. .. ಮೃಗವ್ಯ ವ್ಯಾಪಾರದಿಂ ಬೞಲ್ದು ಪರಿವ ಜಾತ್ಯಶ್ವಂಗಳನೇಱಿ ಬರೆವರೆ: ಪಂಪಭಾ, ೫. ೫೦ ವ)

ವ್ಯಾಪಿತ

[ಗು] ವ್ಯಾಪಿಸಿದ, ತುಂಬಿದ (ಶ್ರೀಪತಿ ಸುರದಾರಕರೊಡನೆ ಆಪೊತ್ತುಂ ನೆರೆದು ರತ್ನಧೂಳೀಪಟಲ ವ್ಯಾಪಿತತನು ಮೃದುಮುಗ್ಧಾಳಾಪಂ ಬಳೆದಂ: ಆದಿಪು, ೮. ೧)

ವ್ಯಾಬಾಧೆ

[ನಾ] ಕಾಟ (ದಿತಿಸುತವ್ಯಾಬಾಧೆಗಳ್ ದೇವರ್ಗಿಲ್ಲವಲಾ: ಪಂಪಭಾ, ೬. ೧೫)

ವ್ಯಾಭಾಸಿ

[ನಾ] ಹೊಳಪಿನಿಂದ ಕೂಡಿದುದು (ಸಸ್ಪೃಹ ಸಾನಂದ ಸಲೀಲ ಸಸ್ಮಿತಮುಖವ್ಯಾಭಾಸಿ ನೋಡಿಂತು ಸನ್ನಿಹಿತಂ ಸೌಂದರರೂಪಮಿನ್ನುಮೆರ್ದೆಯೊಳ್ ಮಜ್ಜೀವಿತಾಧೀಶನಾ: ಆದಿಪು, ೩. ೪೨)

ವ್ಯಾಮೋಹ

[ನಾ] ಒಂದು ಕಾಮಾವಸ್ಥೆ (ಮನೋವೈಕಲ್ಯ ರೋಮಾಂಚಕ ಸ್ತಂಭ ಕಂಪ ಸ್ವೇದ ವೈವರ್ಣ್ಯ ಸಂತಾಪನ ಆಹಾರ ವ್ಯಾಮೋಹ ಗದ್ಗದ ಅಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳಂ ಒಡನೊಡನೆ ತೋಱುವುದುಂ: ಪಂಪಭಾ, ೪. ೫೯ ವ)

ವ್ಯಾಲಗಜ

[ನಾ] ತುಂಟ ಆನೆ, ಮದ್ದಾನೆ (ನಿಧೀಶ್ವರಸೈನ್ಯ ವ್ಯಾಲಗಜಂಗಳ್ ವನಗಜಲೀಲೆಯನನುಕರಿಸಿ ಕಣ್ಗೆವಂದುವು ಪಲವುಂ: ಆದಿಪು, ೧೩. ೨)

ವ್ಯಾಲಗ್ನ

[ಗು] ವಿಶೇಷವಾಗಿ ಕೂಡಿದ, ಸೇರಿದ (ಆಡುವಲ್ಲಿ ಮಕುಟ ವ್ಯಾಲಗ್ನರತ್ನಪ್ರಭಾ ಪರಿವೇಷಂ ಲಲಿತೇಂದ್ರಚಾಪ ರುಚಿಯಂ ಮಾಡಿತ್ತು ದಿಕ್ಷಕ್ರದೊಳ್: ಆದಿಪು, ೭. ೧೨೦)

ವ್ಯಾಸನೆನ್

ವ್ಯಾಸನೇ ಆಗಿದ್ದೇನೆ (ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ: ಪಂಪಭಾ, ೧. ೧೩)

ವ್ಯಾಳ

[ನಾ] ನಾಗಿನಿ (ವ್ಯಾಳಸುರಸೌಂದರೀಜನಿತ ಬಹುಮಾನಮಂ: ಆದಿಪು, ೭. ೨೭ ರಗಳೆ)

ವ್ಯಾಳಗಜ

[ನಾ] ವ್ಯಾಲಗಜ (ವ್ಯಾಳಗಜಂಗಳುಮಂ ಅಂಕದ ಬರ್ದೆಯರುಮಂ ಉಗಿಬಗಿಮಾಡಿದ ಸಂತೋಷದೊಳ್: ಪಂಪಭಾ, ೨. ೩೯ ವ)

ವ್ಯಾಳದಂತಿ

[ನಾ] ತುಂಟ ಆನೆ (ಒಂದೊಂದರ್ಕೆ ಮೊಗಂಬುಗಿಸಿದಾಗಳ್ ಉಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವರ್ ಸುರಿಗಿಱಿವಂತಿಱಿಯೆ: ಪಂಪಭಾ, ೧೦. ೯೩ ವ)

ವ್ಯಾಳಿಕಾ

[ನಾ] ನಾಟಕದ ಒಂದು ಭಾಗ (ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ: ಪಂಪಭಾ, ೨. ೩೪ ವ)

ವ್ಯುಚ್ಛಿತ್ತಿ

[ನಾ] ವಿನಾಶ (ಘೋರಸಂಸಾರ ನಾನಾವ್ಯಸನ ವ್ಯುಚ್ಛಿತ್ತಿಯೊಳ್ ಧಾರ್ಮಿಕಜನಜನಿತಾನಂದಸಂದೋಹ ವಿದ್ಯಾರಸದೊಳ್: ಆದಿಪು, ೧೬. ೮೦)

ವ್ಯುಷ್ಟಿ

[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಮೊದಲ ವರ್ಷದ ಹುಟ್ಟುಹಬ್ಬ (ವ್ಯುಷ್ಟಿ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ವ್ಯೂಢ

[ಗು] ಹರಹಾದ (ಕೋಮಳವಂಶಶ್ಯಾಮಂ ಅಂಭೋಧರರವಂ ಅಳಿನೀಕುಂತಲಂ ವ್ಯೂಢವಕ್ಷಸ್ಸ್ಥಳಂ: ಆದಿಪು, ೮. ೫೧)

ವ್ಯೂಢೋರಸ್ಕ

[ನಾ] ವಿಶಾಲವಾದ ಎದೆಯುಳ್ಳುದು (ಧನುರಾಕಾರ ವಂಶನುಂ ಋಜುಪರಿಪೂರ್ಣ ಹ್ರಸ್ವಗ್ರೀವನುಂ ವ್ಯೂಢೋರಸ್ಕನುಂ ವಿಪುಳಾಂಚಿತಾಂಸನುಂ: ಆದಿಪು, ೧೨. ೫೬ ವ)

ವ್ಯೂಹ

[ನಾ] ಸಮೂಹ (ಪರಿಪೂರ್ಣಭಾವರಸಮಂ ಸಂಗೀತಮಂ ತೋಱಿ ಮೆಚ್ಚಿಸಲ್ ಓರಂತೆ ಸಮಸ್ತದೇವಕುಪಿತವ್ಯೂಹಂ ತೆರಳ್ದಿರ್ದುದು: ಆದಿಪು, ೯. ೧೨); [ನಾ] ಸೈನ್ಯ (ಪರವ್ಯೂಹಭಯಂಕರಂ ನೆಗೆದು ಪಾರ್ದಾರ್ದು ಎಚ್ಚೊಡೆ: ಪಂಪಭಾ, ೧೧. ೧೭); [ನಾ] ಸೇನಾ ರಚನೆ (ಇದು ಚಕ್ರವ್ಯೂಹಂ ಈ ವ್ಯೂಹಮನೊಡೆವದಟಂ ಪಾರ್ಥಂ ಅಂತಾತನುಂ ಗೆಂಟಿದಂ ಎಮ್ಮೀ ನಾಲ್ವರುಂ ಭೇದಿಸಲಱಿಯೆವು: ಪಂಪಭಾ, ೧೧. ೮೭)

ವ್ಯೋಮ

[ನಾ] ಆಕಾಶ (ಶ್ರೀಮಚ್ಚಳುಕ್ಯವಂಶ ವ್ಯೋಮಾಮೃತ ಕಿರಣನೆನಿಪ ಕಾಂತಿಯನೊಳಕೊಂಡೀ ಮಹಿಯೊಳಾತ್ಮ ವಂಶಶಿಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ: ಪಂಪಭಾ, ೧. ೧೫)

Search Dictionaries

Loading Results

Follow Us :   
  Download Bharatavani App
  Bharatavani Windows App