भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವ್ಯೋಮಗ

[ಗು] ಆಕಾಶದಲ್ಲಿನ (ಅಮರಮನೋಹಾರಿ ಹೇಮಾದ್ರಿಯಂ ವ್ಯೋಮಗಕಲ್ಲೋಲಾಬ್ದಿಯಂ: ಆದಿಪು, ೮. ೨೬)

ವ್ಯೋಮಚರ

[ನಾ] ಖೇಚರ (ಇದನ್ನೆಮಗಂ ಅನುಭೂತಂ ಅದಲ್ಲದೆಯುಂ ವಯೋಧಿಕ ವ್ಯೋಮಚರಪ್ರತ್ಯಕ್ಷಂ: ಆದಿಪು, ೨. ೧೮ ವ)

ವ್ರಜ

[ನಾ] ಸಮೂಹ, ಗುಂಪು (ದೇವೇಂದ್ರನ ಸುರಭಿಯುಂ ಈಶ್ವರನ ನಂದಿಯುಂ ಉೞಿಯೆ ಗೋವ್ರಜಂಗಳುಮಂ ಇಂದ್ರಪ್ರಸ್ಥಕ್ಕೆ ತೆರಳ್ಚಿ: ಪಂಪಭಾ, ೬. ೩೩ ವ)

ವ್ರಣ

[ನಾ] ಹುಣ್ಣು, ಗಾಯ (ಕಾಲ ಸೊಪ್ಪುಳಂ ಆಲಿಸಿ ಸುರನದೀನಂದನಂ ಪೇೞಿಂ ಬಂದರಾರ್ ಎಂದು ಅನೇಕವ್ರಣ ವೇದನಾ ಪರವಶಶರೀರಂ ಬೆಸಗೊಳ್ವುದುಂ: ಪಂಪಭಾ, ೧೩. ೬೩ ವ)

ವ್ರಣವೈದ್ಯ

[ನಾ] ಹುಣ್ಣು ಚಿಕಿತ್ಸೆಮಾಡುವ ವೈದ್ಯ (ದುರ್ಯೋಧನಂ ಬಂದಿಕಾಱನಂತೆ ಸೆಱೆಗೆಯ್ದುಂ ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕೞಿವು ಉೞಿವನಱಿದುಂ ರಸವಾದಿಯಂತೆ ಕಟ್ಟಿಯುಂ ಪೆರ್ಜೋಡೆಯಂತೆ ನುಣ್ಣಿತಂ ಪೇೞ್ದು: ಪಂಪಭಾ, ೬. ೭೨ ವ)

ವ್ರತಚರ್ಯೆ

[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಹಿಂಸಾಚಾರ ವರ್ಜಿಸಿ ಅಧ್ಯಯನ ಕೈಗೊಳ್ಳುವುದು (ವ್ರತಚರ್ಯಾ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ವ್ರತತಿ

[ನಾ] ಬಳ್ಳಿ (ಕಲ್ಪವ್ರತತೀಸಂಯುಕ್ತ ಕಲ್ಪಕ್ಷಿತಿರುಹಮನೆ ಪೋಲ್ತಿರ್ದಂ ಆ ಕಾಂತೆಯರ್ ತಮ್ಮತಿರಾಗಂ ಪೆರ್ಚಿ ತನ್ನಿರ್ಕೆಲದೊಳಿರೆ: ಆದಿಪು, ೮. ೨೩)

ವ್ರತಹೀನ

[ನಾ] ವ್ರತವಿಲ್ಲದವನು (ಕ್ಷಿತಿಪತಿ ಬೇಱಿರಿಸಿ ಮಾನ್ಯರಂ ಮನ್ನಿಸೆ ತದ್ವ್ರತಹೀನರುಂ ಅಂದು ಅಖಿಳಬ್ರತಮಂ ಕೈಕೊಳ್ವ ಬಗೆಗೆ ಬಗೆಯಂ ತಂದರ್; ಆದಿಪು, ೧೫. ೧೩)

ವ್ರತಾವರಣ

[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಬ್ರಹ್ಮಚರ್ಯವ್ರತತ್ಯಾಗ (ಬ್ರಹ್ಮಚರ್ಯವ್ರತಾವರಣ .. .. ವಿಹಾರಯೋಗತ್ಯಾಗಾಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ವ್ರಾತ

[ನಾ] ಸಮೂಹ (ಆತಂ ನಿಜವಿಜಯಖ್ಯಾತಿಯನಾಳ್ದು ಆಳ್ದನಧಿಕಬಲನವನಿಪತಿವ್ರಾತ ಮಣಿ ಮಕುಟ ಕಿರಣದ್ಯೋತಿತ ಪಾದಂ ಸಪಾದ ಲಕ್ಷಕ್ಷಿತಿಯಂ: ಪಂಪಭಾ, ೧. ೧೬)

ವ್ರಾತ

[ನಾ] ಸಮೂಹ, ಧಾರೆ (ವಾತ್ಯಾದುರ್ಧರಗಂಧಸಿಂಧುರ ಕಟಸ್ರೋತಃ ಸಮುದ್ಯತ್ ಮದವ್ರಾತೇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕಶ್ರೇಯಸಃ: ಪಂಪಭಾ, ೯. ೯೭)

ವ್ರೀಹಿ

[ನಾ] ಬತ್ತ (ಆ ಪ್ರಸ್ತಾವದೊಳ್ ಫಳಪಾಕವಿರಾಮಂಗಳಪ್ಪ ಗರ್ಭಷಷ್ಟಿವ್ರೀಹಿ ಯವ ಗೋಧೂಮಾದಿ ಮಹೌಷಧಂಗಳುಂ: ಆದಿಪು, ೮. ೬೧ ವ)

Search Dictionaries

Loading Results

Follow Us :   
  Download Bharatavani App
  Bharatavani Windows App