भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವನನಿಧಿ

[ನಾ] [ಜೈನ] ಸಾಗರದಷ್ಟು ಅವಧಿ (ಮೂವತ್ತಮೂಱು ಸಾಸಿರವರ್ಷಕ್ಕತಿಶಯಸುಧಾಶಯದೊಳ್ ವನನಿಧಿ ಮೂವತ್ತಮೂಱುಮಂ ಸಲೆ ಬಾೞ್ವಂ: ಆದಿಪು, ೬. ೪೭); [ನಾ] ಸಮುದ್ರ (ಎನಗೆ ಪೊಸಂತಿಲೀ ನೆಗೞ್ದ ವಜ್ರದ ವೇದಿಕೆ ಗೋಷ್ಪದಂ ದಲೀ ವನನಿಧಿ ಪಾಯ್ದು ಮಾಗಧನನೀಗಳೆ ಕಟ್ಟುವೆಂ: ಆದಿಪು, ೧೨. ೭೧)

ವನಪಥ

[ನಾ] ಕಾಡಿನ ಹಾದಿ (ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತಕ್ಕುಂ: ಆದಿಪು, ೮. ೧೨)

ವನಪಾಲಕ

[ನಾ] ಉದ್ಯಾನದ ಮೇಲ್ವಿಚಾರಕ (ಶಿಖಾಕಳಾಪದ ಕೋಳುಮಂ ಎಂತಾನುಂ ಬಂಚಿಸಿ ಬಲೆಪಱಿದ ಕೋಕನಂತೆ ಒರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು: ಪಂಪಭಾ, ೫. ೯೩ ವ)

ವನಭೃತ್

[ನಾ] ಮೋಡ (ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನತ್‌ಕನಕಾಂಭೋಜ ನಿಭಾನನಕ್ಕೆ ಪಿರಿದುಂ ದೀನತ್ವಮಂ: ಪಂಪಭಾ, ೪. ೬೪)

ವನಮದಕರಿ

[ನಾ] ಮದಿಸಿದ ಕಾಡಾನೆ (ಉತ್ತಮ ವನಮದಕರಿ ಕರಟಭಿತ್ತಿಗಳಿಂ ಸಿರುವ ಮದದ ಬಂಧುರಗಂಧಂ ಕತ್ತುರಿಮೃಗಮದದೊಳ್ ಪುದಿದು: ಆದಿಪು, ೯. ೧೨೦)

ವನಮಹಿಷಿ

[ನಾ] ಕಾಡೆಮ್ಮೆ (ದೆಸೆಗಳ್ಗೆ ಬೆರ್ಚಿ ಮೂಂಕಿಱಿವ ವನಮಹಿಷಿಗಳಿಂ ಮದಹಸ್ತಿಯಂತೆ ಮರವಾಯ್ವ ಪುಲಿಗಳಂ ಅತಿಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು: ಪಂಪಭಾ, ೭. ೨೯ ವ)

ವನಮಾತಂಗ

[ನಾ] ಕಾಡಾನೆ (ಸಿಂಗದ ಮುಪ್ಪುಂ ನೆಗೞ್ದೀ ಗಾಂಗೇಯರ ಮುಪ್ಪುಂ ಇಳಿಕೆವಡೆಗುಮೇ ವನಮಾತಂಗಂಗಳಿಂ ಅಸುಹೃತ್ ಚತುರಂಗಬಲಂಗಳಿಂ: ಪಂಪಭಾ, ೧೦. ೧೯)

ವನಮೃಗ

[ನಾ] ಕಾಡುಮೃಗ (ವನಖಗ ವನಮೃಗ ವನತರು ವನಚರ ವನವನಜನಿವಹಮುಳ್ಳನಿತುಂ ಸೀರನಿತುಂ ಅಣಂ ಉೞಿದುದಿಲ್ಲ: ಪಂಪಭಾ, ೫. ೯೭)

ವನರಾಜಿಕ್ರೀಡೆ

[ನಾ] ವನವಿಹಾರ (ವನರಾಜಿಕ್ರೀಡೆಯಂ ಯೌವನವನದೊಳೆ ತೋಱಲ್ ಜಲಕ್ರೀಡೆಯಂ ನಚ್ಚಿನ ಲಾವಣ್ಯಾಚ್ಛತೋಯಾಶಯದೊಳೆ ಮೆಱೆಯಲ್: ಆದಿಪು, ೧. ೮೩)

ವನರುಹಗರ್ಭ

[ನಾ] ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ (ವನರುಹಗರ್ಭನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂಗನೆಯಿನದೆಂತುಟಾದುದು ಎನೆ: ಪಂಪಭಾ, ೭. ೮೧)

ವನಲತಾಂಗಿ

[ನಾ] ವನವೆಂಬ ಹೆಣ್ಣು, ವನದೇವತೆ (ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ ಸುರಿವ ಅಲರೋಳಿ ತತ್ ವನಲತಾಂಗಿಯ ಸೂಸುವ ಸೇಸೆಯಾಯ್ತು: ಪಂಪಭಾ, ೫. ೫೨)

ವನವಧು

[ನಾ] [ಜೈನ] ವ್ಯಂತರ ದೇವತೆ (ವನವಧೂಬ್ರಾತಂ ಔತ್ಸುಕ್ಯವದ್ಭಾವನಭಾಮಾರಾಜಿ ತದ್ಭಾವನಸುರರ್ ಅಖಿಳ ವ್ಯಂತರ ಜ್ಯೋತಿರಿಂದ್ರರ್: ಆದಿಪು, ೧೦. ೩೬)

ವನವೀಥಿ

[ನಾ] ಕಾಡಿನ ದಾರಿ (ಉತ್ತುಂಗ ತೋರಣದ್ವಾರದಿಂದಂ ನುಗುಳ್ದು ವನವೀಥಿವಿಡಿದು ಬಂದು: ಆದಿಪು, ೧೩. ೧೧ ವ)

ವನಶ್ರೀ

[ನಾ] ಕಾಡಿನ ಚೆಲುವು (ಕಾಯ್ತು ಕರೆವಂತಿರ್ದುದು ಚೆಂದೆಂಗು ಸಾರಲೆವಂತಿರ್ದುದು ಬಂದ ಕರ್ಬು ಎನೆ ವನಶ್ರೀ ಬಣ್ಣಿಸಲ್ಬರ್ಕುಮೇ: ಆದಿಪು, ೧೧. ೬೮)

ವನಸಿಂಹನ್ಯಾಯ

[ನಾ] ಒಂದು ಲೌಕಿಕನ್ಯಾಯ: ವನ ಸಿಂಹಗಳ ಪರಸ್ಪರ ರಕ್ಷಣೆ (ಧರಣಿಗುಹಾಸಿಂಹರ್ ನೀಮುಮೀಗಳ್ ವನಸಿಂಹನ್ಯಾಯಮಂ ದುರ್ಗದೊಳೆ ಬಲಿದು ನಿಂದಲ್ಲಿ ಬಂದೊತ್ತಿ ಚಕ್ರೇಶನ ತಂತ್ರಂ ನಿಲ್ಕುಂ: ಆದಿಪು, ೧೩. ೫೮)

ವನಸುಮ

[ನಾ] ಕಾಡು ಹೂ (ವನಸುಮಸ್ತಬಕದ ನೆೞಲಿನಿಸಚ್ಛಾಂಬುವಿನೊಳೆಸೆಯೆ ಮಧುಕರಮದು ಭೋಂಕೆನೆ ಪಾಯ್ದು ಎಱಂಕೆ ನಾಂದೊಡೆ ಜಿನುಂಗಿ ನೆಲಸಿದುದು ವಿಕಚಕನಕಾಬ್ಜಿನಿಯೊಳ್: ಆದಿಪು, ೧೧. ೬೨)

ವನಾಂತರ

[ನಾ] ಕಾಡಿನ ಒಳಭಾಗ (ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂತರಂ ಎಸೆದು ಒಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಂ ಒಪ್ಪಿರೆ: ಪಂಪಭಾ, ೭. ೨೩)

ವನಾಂತರಾಳ

[ನಾ] ವನಾಂತರ (ಜಲಜಲನೆ ಒೞ್ಕುತಿರ್ಪ ಪರಿಕಾಲ್ ಪರಿಕಾಲೊಳ್ ಅಳುರ್ಕೆಗೊಂಡ ನೈದಿಲ ಪೂ .. .. ಸಿರಿ ನೋಡುಗುಮಾ ವನಾಂತರಾಳದೊಳ್: ಪಂಪಭಾ, ೧. ೫೨)

ವನಾಧೀಶ

[ನಾ] ಕಾಡಿನ ರಾಜ (ಕಸ್ತೂರಿಕಾಂಡಕಂ ವನಹಸ್ತಿರದಂ ಹಸ್ತಿಮಸ್ತಕೋದ್ಭವ ಮುಕ್ತಾವಿಸ್ತಾರಮೆಂದು ತಂದು ಸಮಸ್ತ ವನಾಧೀಶರ್ ಅವನಿಪತಿಯಂ ಕಂಡರ್: ಆದಿಪು, ೧೨. ೬೭)

ವನೀಪಕ

[ನಾ] ಯಾಚಕ (ಎಡಱು ಅಱಿದು ಈವ ಕಲ್ಪತರುವೆಂದು ವನೀಪಕಕೋಟಿ ಸಂತಸಂಬಡೆ ಪೊಡೆವ ಒಂದಕಾಳವಿಳಯಾಶನಿ ಎಂದು ವಿರೋಧಿಗಳ್ ಮನಂಗಿಡೆ: ಪಂಪಭಾ, ೨. ೯೮); [ನಾ] ಭಿಕ್ಷುಕ ವೇಷದ ಗೂಢಚಾರ (ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀಮನ ಮೊನೆಯಂ ವನೀಪಕರಂ ಆರಯಲಟ್ಟಿ: ಪಂಪಭಾ, ೧೦. ೫೮)

Search Dictionaries

Loading Results

Follow Us :   
  Download Bharatavani App
  Bharatavani Windows App