भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವನೇಚರಾಧಿಪ

[ನಾ] ಬೇಟೆಗಾರರ ಮುಖಂಡ (ಅಲ್ಲಿ ಕೋಳ್ಮಿಗದ ವನೇಚರಾಧಿಪರ ದಾಯಿಗರತ್ತಣಿಂ ಅಪ್ಪ ಅಪಾಯಕೋಟಿಗೆ ಪವಣಿಲ್ಲ: ಪಂಪಭಾ, ೭. ೨೧)

ವನ್ಯಗಜ

[ನಾ] ಕಾಡಾನೆ (ಕೇಸರಿಣೀಸ್ತನ್ಯಮಂ ಅನ್ಯ ವನ್ಯಗಜಪೋತಾನೀಕಮುಂಡಾಡೆ: ಆದಿಪು, ೯. ೯೭)

ವನ್ಯಮತಂಗಜ

[ನಾ] ಕಾಡಾನೆ (ತುಂಗವನ್ಯಮತಂಗಜದಂತೆ ಆಘಾತ ನಿಪಾತಿತ ಸಲ್ಲಕೀಭಂಗಮಂ: ಪಂಪಭಾ, ೧. ೧೧೫)

ವಪು

[ನಾ] ದೇಹ (ಪಳುಕಿನ ಪಾಪೆಯನಮರ್ದಿಂ ತೊಳೆದಂತೆ ಒರ್ಮೊೞದ ದಿವ್ಯವಪು ಮಣಿಮಯಕುಂಡಳ ಮಕುಟ ಕಟಕ ಭೂಷಣವಿಳಾಸದಿಂದೇಂ ವಿಳಾಸಮಂ ತಾಳ್ದುದೋ: ಆದಿಪು, ೬. ೩೯)

ವಪ್ರ

[ನಾ] ಪ್ರಾಕಾರ, ಆಳುವೇರಿ (ಭಾಭಾಸುರಮೊಪ್ಪಿ ತೋಱುಗುಂ ಪಂಚರತ್ನಪಾಂಶೂಚ್ಚದೀಪ್ತಿದೀಪ್ರಂ ವಪ್ರಂ: ಆದಿಪು, ೬. ೧೦೩)

ವಯಲ್

[ನಾ] [ಯುದ್ಧದ] ಬಯಲು (ವಯಲ್ಗೆ ಮೆಯ್ದೋಱುವೆವೆಂಬ ಪೂಣಿಗರ್ ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು: ಪಂಪಭಾ, ೧. ೧೦೯)

ವಯಸ

[ನಾ] ಪ್ರಾಯ, ಹರೆಯ (ಈ ವಯಸಮನೀ ಶೀಲಮನೀ ವಿನಯಮನೆಯ್ದೆ ವಿದ್ಯೆಯಿಂ ಪುದಿದೊಡೆ ಮತ್ತೇವೇೞ್ವುದೊ: ಆದಿಪು, ೮. ೫೮)

ವಯೋಧಿಕ

[ನಾ] ವಯೋವೃದ್ಧ, ಹಿರಿಯ (ಇದನ್ನೆಮಗಂ ಅನುಭೂತಂ ಅದಲ್ಲದೆಯುಂ ವಯೋಧಿಕ ವ್ಯೋಮಚರ ಪ್ರತ್ಯಕ್ಷಂ: ಆದಿಪು, ೨. ೧೮ ವ)

ವರಂ

[ಅ] ವರೆವಿಗೂ (ಮನ್ಮಥನ ಮೋಹನಯಂತ್ರಮಿದಪ್ಪುದಲ್ಲದೆ ಅಂದಿನಿತುವರಂ ಮನಂಗೊಳಿಸದು: ಆದಿಪು, ೪. ೪೧)

ವರತೆ

[ನಾ] ವರಣ, ಪಾತ್ರತೆ (ಪುರುದೇವಂ ಮುಕ್ತಿವಧೂವರತೆಯಂ ಅಭಿಜಿನ್ಮುಹೂರ್ತದೊಳ್ ಕೈಕೊಂಡಂ: ಆದಿಪು, ೧೬. ೫೧)

ವರದ

[ನಾ] ವರವನ್ನು ದಯಪಾಲಿಸುವವನು (ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತಸುಂದರನಾಗಿಯುಂ ಜಾತ್ಯಂಧನಕ್ಕುಂ: ಪಂಪಭಾ, ೧. ೮೫ ವ)

ವರಪ್ರಸಾದ

[ನಾ] ವರವನ್ನು ದಯಪಾಲಿಸುವುದು (ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲಿಕೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು: ಪಂಪಭಾ, ೧. ೮೪ ವ)

ವರಪ್ರಸಾದಕಾಲ

[ನಾ] ವರವನ್ನು ದಯಪಾಲಿಸುವ ಸಮಯ (ವರಪ್ರಸಾದಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗಂ ಅತ್ಯಂತಸುಂದರನಾಗಿಯುಂ ಜಾತ್ಯಂಧನಕ್ಕುಂ: ಪಂಪಭಾ, ೧. ೮೫ ವ)

ವರಾರೋಹೆ

[ನಾ] ಸುಂದರಿ (ಮಾಣಿಕ್ಯಕಾಂಚೀರುಚಿರುಚಿರ ವರಾರೋಹೆಯರ್: ಆದಿಪು, ೮. ೫೬)

ವರಾಹ

[ನಾ] ಹಂದಿ (ಶಾರ್ದೂಲ ವರಾಹ ಗೋಲಾಂಗೂಲ ನಕುಳಂಗಳಂ ನೋಡುತ್ತುಂ ಅವರ್ಕೆ ಭಕ್ಷ್ಯಾಪೂಪಂಗಳಂ ತರಿಸಿ ನೀಡುತ್ತುಂ ಇರ್ದು: ಆದಿಪು, ೫. ೨ ವ)

ವರಿಸು

[ಕ್ರಿ] ಬರಿಸು, ಬರುವಂತೆ ಮಾಡು (ಆ ಪಾಣ್ಬನಂ ನಂಬೆ ನುಡಿದು ಆ ಪೊೞ್ತಿಂಗೆ ಎನ್ನನಲ್ಲಿಗೆ ವರಿಸು ಅವಂಗೆ ತಕ್ಕುದನಾನೆ ಬಲ್ಲೆಂ: ಪಂಪಭಾ, ೮. ೭೨ ವ)

ವರುಣಾನಿ

[ನಾ] ವರುಣನ ಹೆಂಡತಿ, ವಾರುಣಿ (ವರುಣನ ಮಕರಮಂ ವರುಣಾನಿಯ ಕೊರಲೊಳ್ ಅಯ್ದೆಮಿನುಗುಂ ಉೞಿಯೆ ಉೞಿದ ವಸ್ತುಗಳೆಲ್ಲಮಂ ಕವರ್ದುಕೊಂಡು: ಪಂಪಭಾ, ೬. ೩೨ ವ)

ವರುಣಾಶಾ

[ನಾ] ವರುಣನ ದಿಕ್ಕು, ಪಶ್ಚಿಮದಿಕ್ಕು (ತನ್ಮಹೀಧರ ವರುಣಾಶಾ ವಿಶೇಷಕಮಾಗಿರ್ದ .. .. ಎಂಬ ದ್ವಿಗುಣ ಚತುಃಕೂಟಂಗಳೊಳಂ: ಆದಿಪು, ೭. ೩ ವ)

ವರೂಥ

[ನಾ] ರಥ (ತೆರೆಯಿಲ್ಲದೆಡೆಯೊಳ್ ವರೂಥಮವಯವದೆ ತಡಿಯನೆಯ್ದಿದುದಾಗಳ್: ಆದಿಪು, ೧೨. ೧೨೭)

ವರೂಥಿನಿ

[ನಾ] ಸೈನ್ಯ (ಪುರನಿಧಿಶಯ್ಯಾಸನ ರಾಜ್ಯ ರತ್ನ ವಾಹನ ವರೂಥಿನೀ ನಾಟ್ಯ ಸಭಾಪರಿಕರಸಹಿತಂ ಭರತೇಶ್ವರಂಗೆ ಸಮಸಂದುದೀ ದಶಾಂಗಂ ಭೋಗಂ: ಆದಿಪು, ೧೫. ೫)

Search Dictionaries

Loading Results

Follow Us :   
  Download Bharatavani App
  Bharatavani Windows App