भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವರೂಥಿನೀಪತಿ

[ನಾ] ಸೇನಾಪತಿ (ಪ್ರಪಾತಗುಹಾಸಮೀಪದೊಳ್ ಬೀಡಂ ಬಿಟ್ಟು ಮುನ್ನಿನ ಮಾೞ್ಕೆಯೊಳೆ ವರೂಥಿನೀಪತಿಯಂ ಬೆಸಸಿದೊಡೆ: ಆದಿಪು, ೧೩. ೭೮ ವ)

ವರ್

[ಕ್ರಿ] ಬರು, ಆಗಮಿಸು (ಮಂಗಳಜಳಂಗಳಿಂದಂ ಮಿಸಿಸೆ ಮಿಂದು ಅಳಂಕಾರಮಂದಿರಕ್ಕೆ ವಂದು ನೆಱೆಯೆ ಕೆಯ್ಗೆಯ್ಯೆ: ಆದಿಪು, ೪. ೩೫ ವ)

ವರ್ಣ

ಪ್ರಾಚೀನ ಸಾಮಾಜಿಕ ವ್ಯವಸ್ಥೆಯ ಒಂದು ಪಂಗಡ (ತನ್ನ ಮುನ್ನ ಪಡೆದ ವರ್ಣತ್ರಯಕ್ಕಂ ಭರತನಿಂದನಿಂದಮಿನ್ನಪ್ಪ ವಿಪ್ರವರ್ಣಕ್ಕಂ ಯಥೋಚಿತ ವೃತ್ತಿಗಳಂ ಅಱುಪಲು: ಆದಿಪು, ೮. ೭೨ ವ); [ನಾ] ಭಾಷೆಯಲ್ಲಿನ ಧ್ವನಿ (ಅಂದು ಅಪಗತ ತಾಲು ಓಷ್ಠಸ್ಪಂದನಂ ಅಸ್ಪೃಶ್ಯಕರಣವರ್ಣಂ ಜಗದಾನಂದಕರಂ ಜಳಧರರವಸೌಂದರಂ: ಆದಿಪು, ೧೦. ೬೩)

ವರ್ಣಕ

[ನಾ] ವರ್ಣನೆಗಳು, ವರ್ಣನಾಪ್ರಧಾನ ಕಾವ್ಯ, ದೇಸಿ ಛಂದಸ್ಸಿನ ಕಾವ್ಯ (ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೆೞ್ವೊಡೆ ಪಂಪನೆ ಪೇೞ್ಗುಂ: ಪಂಪಭಾ, ೧. ೧೧)

ವರ್ಣಕವಿತ್ವ

[ನಾ] ದೇಸೀಶೈಲಿಯ ಕಾವ್ಯ (ಬೇಟಮನೆ ವಸ್ತುಮಾಡಿಯೆ ಕವಿತ್ವ ವಸ್ತುಕವಿತ್ವ ಕಾಮತತ್ವವಿದನೆನಿಸಿದ ಅತಿವಿದಗ್ಧನೊರ್ವಂ ಇಂತೆಂದಂ: ಆದಿಪು, ೧೨. ೨೨ ವ)

ವರ್ಣಕ್ರಮ

[ನಾ] ಬಣ್ಣ ಹಾಕುವಿಕೆಯ ವಿನ್ಯಾಸ (ನೋಡುವಂತೆ ಉಸಿವಂðತೆ ಇರ್ದುದು ರೇಖೆ ಕೋಮಲತೆಯಂ ತಾಳ್ದಿತ್ತು ವರ್ಣಕ್ರಮಂ: ಆದಿಪು, ೪. ೪)

ವರ್ಣಕ್ರಮಂಗೆಯ್

[ಕ್ರಿ] ಬಣ್ಣ ಹಾಕು (ಸೊಗಯಿಸುವ ಸಾಮಂತಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು: ಪಂಪಭಾ, ೨. ೩೯ ವ)

ವರ್ಣಚತುಷ್ಕ

[ನಾ] ನಾಲ್ಕು ವರ್ಣಗಳು: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ (ವರ್ಣಚತುಷ್ಕಮಂ ಕುಮತಿಗಳ್ ತತ್‌ಸ್ಥಾನದೊಳ್ ಮುನ್ನ ಪುಟ್ಟಿದುವೆಂಬರ್: ಆದಿಪು, ೮. ೭೩)

ವರ್ಣತ್ರಯ

[ನಾ] [ಜೈನ] ಆದಿದೇವನು ಸ್ಥಾಪಿಸಿದ ಕ್ಷತ್ರಿ, ವೈಶ್ಯ ಮತ್ತು ಶೂದ್ರರೆಂಬ ಮೂರು ವರ್ಣಗಳು (ತನ್ನ ಮುನ್ನ ಪಡೆದ ವರ್ಣತ್ರಯಕ್ಕಂ ಭರತನಿಂದಮಿನ್ನಪ್ಪ ವಿಪ್ರವರ್ಣಕ್ಕಂ ಯಥೋಚಿತವೃತ್ತಿಗಳನಱಿಪಲೆಂದು: ಆದಿಪು, ೮. ೭೨ ವ)

ವರ್ಣಲಾಭ

[ನಾ] [ಜೈನ] ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ಬ್ರಾಹ್ಮಣತ್ವವನ್ನು ಪಡೆಯುವುದು (ವಿವಾಹ ವರ್ಣಲಾಭ .. .. ವಿಹಾರಯೋಗ್ಯತಾನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾಧಿನಿರ್ವಾಣಪರ್ಯಂತಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ವರ್ಣಸಂಕರ

[ನಾ] ಮದುವೆಯ ಮೂಲಕ ಜಾತಿಗಳು ಬೆರಕೆಯಾಗುವುದು (ಯಥಾಯೋಗ್ಯಮುಪದೇಶಂಗೆಯ್ದು ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿ: ಆದಿಪು, ೮. ೬೪ ವ)

ವರ್ಣಾಶ್ರಮ

[ನಾ] ವರ್ಣದಲ್ಲಿನ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸನ್ಯಾಸಗಳೆಂಬ ಬದುಕಿನ ನಾಲ್ಕು ಘಟ್ಟಗಳು (ಪೂರ್ವಾಪರ ವಿದೇಹಸ್ಥಿತಿ ಸಮಾನಮಾಗೆ ಷಟ್ಕರ್ಮಂಗಳುಮಂ ವರ್ಣಾಶ್ರಮವಿಭಾಗಂಗಳುಮಂ ಗ್ರಾಮಗೃಹಾದಿ ಭೇದಂಗಳುಮಂ: ಆದಿಪು, ೮. ೬೨ ವ)

ವರ್ತಿ

[ಗು] ಇರುವ (ದ್ವೈತವನಕ್ಕೆ ಬಂದು ತದ್ವನೋಪಕಂಠ ವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗೆದು: ಪಂಪಭಾ, ೭. ೨೯ ವ)

ವರ್ಧಸ್ವ

ವರ್ಧಿಸಲಿ (ಅತಿಮಧುರಂ ಒರ್ಮೊದಲೊಗೆದುದು ಜಯ ಜೀಯ ನಂದ ವರ್ಧಸ್ವ ರವಂ: ಆದಿಪು, ೨. ೬೪)

ವರ್ಪಂ

[ನಾ] ಬರುವವನು (ಅಂತು ವರ್ಪನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂ: ಪಂಪಭಾ, ೫. ೬೮ ವ)

ವರ್ಮ

[ನಾ] ಅಂಗರಕ್ಷಣೆಯ ಕವಚ (ಭೂತಳನಾಥಾನೀಕ ವರ್ಮೋತ್ಕರಖಚಿತ ಮಣಿಶ್ರೇಣಿರತ್ನಪ್ರದೀಪಾವಳಿದೀಪ್ತಿ ವ್ರಾತದಿಂದಂ: ಆದಿಪು, ೧೪. ೯೬)

ವರ್ಮಹರ

[ನಾ] ಪ್ರಾಪ್ತವಯಸ್ಕ (ಜಯವರ್ಮಂ ವರ್ಮಹರನಾದ ನಿಜತನೂಜನಜಿತಂಜಯಂಗೆ ಜಯಜಯನಿನಾದಪೂರ್ವಕಂ ಉರ್ವೀಭಾರಮಂ ಕೊಟ್ಟು: ಆದಿಪು, ೩. ೬೫ ವ)

ವರ್ಷ

[ನಾ] ಮಳೆ (ಶಸ್ತ್ರ ಪಾಷಾಣ ಆತಪ ವರ್ಷ ವಿಷ ಅಗ್ನಿ ಕಾಷ್ಠ ಕಂಟಕ ತ್ರಿದೋಷಸಂಭವಾಮಯ ಜರಾದಿ ಬಾಧಾವಿದೂರನುಂ: ಆದಿಪು, ೮. ೪ ವ) [ಬಸವರಾಜು ಮತ್ತು ನರಸಿಂಹಶಾಸ್ತ್ರಿ ಅವರ ಆವೃತ್ತಿಗಳಲ್ಲಿ]

ವರ್ಷಧರ

[ನಾ] ನಪುಂಸಕ, ಅಂತಃಪುರದ ಸೇವಕ (ಅಂತಃಪುರ ಪರಿಜನ ನಿರ್ದಯಸಂಮರ್ದನಪತಿತ ಕುಬ್ಜ ವಾಮನ ವರ್ಷಧರನಿಕುರುಂಬಮಂ: ಆದಿಪು, ೮. ೩೫ ವ)

ವರ್ಷಧರ ಮಹೀಧರ

[ನಾ] ಮೋಡಗಳಿಂದ ಕೂಡಿದ ಬೆಟ್ಟಗಳು (ಆರು ಕುಲಶೈಲಗಳು ಹಿಮವನ್, ಮಹಾಹಿಮವನ್, ನಿಷಧ, ನೀಳ, ರುಗ್ಮಿ, ಶಿಖರಿಗಳೆಂಬ ವರ್ಷಧರ ಮಹೀಧರಂಗಳಿಂದಂ: ಆದಿಪು, ೧. ೪೮ ವ)

Search Dictionaries

Loading Results

Follow Us :   
  Download Bharatavani App
  Bharatavani Windows App