भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವರ್ಷಂಬರಂ

[ಅ] ವರುಷದವರೆಗೂ, ವರುಷ ಕಾಲ (ಒಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳ್: ಪಂಪಭಾ, ೧. ೧೩೬ ವ)

ವರ್ಷವರ್ಧನದಿನ

[ನಾ] ಹುಟ್ಟಿದ ಹಬ್ಬ, ವರ್ಧಂತಿ (ತನ್ನ ವರ್ಷವರ್ಧನದಿನದೊಳ್ ಆಸ್ಥಾನಮಂಡಪದೊಳ್ .. .. ಒಡ್ಡೋಲಗಂಗೊಟ್ಟಿರೆ: ಆದಿಪು, ೨. ೨ ಮತ್ತು ೨ ವ)

ವರ್ಷವಾರಿದ

[ನಾ] ಮಳೆಯ [ಮಳೆಗಾಲದ] ಮೋಡ ಮಳೆಗಾಲ (ಕೌರವಕುಲ ಹಿಮಕರ ಆವಿಲಪ್ರಚಯ ವರ್ಷವಾರಿದನಪ್ಪ ಪವನತನಯಂ ಬದ್ಧವಪುವಾಗಿ: ಪಂಪಭಾ, ೧೨. ೧೪೪ ವ)

ವರ್ಷಾವಾಸ

[ನಾ] ಮಳೆಗಾಲದಲ್ಲಿ ವಾಸಿಸುವ ಮನೆ (ಮಹಾಘರ್ಮಾಂತಮೆಂಬ ಧಾರಾಗೃಹಮುಂ ಗೃಹಕೂಟಮೆಂಬ ವರ್ಷಾವಾಸಮುಂ: ಆದಿಪು, ೧೫. ೩ ವ)

ವಲಂ

[ಅ] ಅಲ್ಲವೇ (ಭವದಗ್ರಜದಿಗ್ವಿಜಯೋತ್ಸವಂ ಅಧಿಕಮಹೋತ್ಸವಂ ವಲಂ ನಿನಗಾದಂ ಶ್ರವಣಸುಖಮೆಂದೆ ದಿಙ್ಮಾತ್ರವರ್ಣನಂಗೆಯ್ವೆಂ: ಆದಿಪು, ೧೪. ೫೧); [ಅ] ನಿಜವಾಗಿಯೂ (ಮಜ್ಜನಂಬುಗದೆ ಆರೋಗಿಸಲೊಲ್ಲದೆ ಇರ್ಪ ಇರವಿದೇಂ ನಾಣಳ್ಕು ಇದೇಂ ಕಾಮನಂಬುಗಳ್ ಅತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ: ಪಂಪಭಾ, ೪. ೬೮)

ವಲ್ಕಲ

[ನಾ] ನಾರುಬಟ್ಟೆ (ಅಂತು ವಲ್ಕಲಾವೃತ ಕಟಿತಟನುಮಾಗಿರ್ದ ಜಟಾಕಲಾಪನುಂ ಆಗಿ ತಪೋವನಕ್ಕೆ ಪೋಪ ಭಾರ್ಗವಂ: ಪಂಪಭಾ, ೨. ೪೫ ವ)

ವಲ್ಕಲವಸನ

[ನಾ] ನಾರುಮಡಿಯುಟ್ಟವನು (ವಲ್ಕಲವಸನರುಂ ಕೌಪೀನಧಾರಿಗಳುಂ ಭಸ್ಮೋದ್ಧೂಳಿತಾಂಗರುಂ .. .. ಆಗಿ ತಮಗೆ ತಾವೇ ವನಪ್ರವೇಶಮಂ ಮಾಡಿ: ಆದಿಪು, ೯. ೯೩ ವ)

ವಲ್ಗತ್ತುರಗ

[ನಾ] [ವಲ್ಗತ್+ತುರಗ] ಬಿರುಗುದುರೆ (ಕುಂಕುಮಾಂಭ ಸ್ಫುರಿತ ಅಂಗೋತ್ತುಂಗ ವಲ್ಗತ್ತುರಗಬಲಮದೋದ್ದಾಮಮಂ: ಆದಿಪು, ೧೧. ೨೪)

ವಲ್ಲಕಿ

[ನಾ] ವೀಣೆ (ಶ್ರುತಿಸೌಖ್ಯಾವಹ ವಲ್ಲಕೀಕ್ವಣಿತದೊಳ್ ಕರ್ಪೂರಪಾಳೀವಿಮಿಶ್ರಿತ ತಾಂಬೂಲರಸೋತ್ಕಟ ಪ್ರಮದದೊಳ್: ಆದಿಪು, ೯. ೧೧೮)

ವಲ್ಲಬಿಕಾ[üಕೆ]

[ನಾ] ಹೆಂಡತಿ (ತ್ರಿಷಷ್ಟಿಸಂಖ್ಯಾತ ವಲ್ಲಭಿಕಾ ವಿಭ್ರಮಭ್ರೂಲತಾತ್ರಿಭಾಗಭಾಜನನುಮಾಗಿ: ಆದಿಪು, ೬. ೧೩ ವ)

ವಲ್ಲರಿ

[ನಾ] ಗೊಂಡೆ, ತುರುಗಲು (ತಲೆಯೊಳ್ ಸೀರೆಯನಿಕ್ಕಿ ಕೆಮ್ಮನಿತಂ ಪೂಣ್ದಿರ್ಪಮುಗ್ರಾರಿ ವಂಶಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱೆ: ಪಂಪಭಾ, ೩. ೩೩); [ನಾ] ಬಳ್ಳಿ (ಪೂತಚೂತಮಂ ನೆರ್ಮಿದ ಅಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ ಸೋರ್ಮುಡಿಯೊಳ್ ತಗುಳ್ಚಿದೊಡೆ: ಪಂಪಭಾ, ೫. ೮೨)

ವಲ್ಲೀವನ

[ನಾ] ಬಳ್ಳಿಗಳ ವನ, ಬಳ್ಳಿಗಳ ಸಮೂಹ (ಭಂಗಿ ಭಂಗಿಯನೆ ಪೋಲೆ ದೇವೀವಿಳಾಸಮಂ ನಿಜವಿಳಾಸದಿಂ ನಗುವುವಲ್ಲಿ ವಲ್ಲೀವನಂ: ಆದಿಪು, ೧೦. ೨೭)

ವಂಶ

[ನಾ] ಆನೆಯ ಹೆಗಲಿನ ಬೆನ್ನುಮೂಳೆ (ಅನುಪೂರ್ವ ಧನುರಾಕಾರವಂಶನುಂ ಋಜುಪರಿಪೂರ್ಣ ಹ್ರಸ್ವಗ್ರೀವನುಂ .. .. ಅಪ್ಪ ವಿಜಯಪರ್ವತ ಗಜೇಂದ್ರಂ: ಆದಿಪು, ೧೨ ೫೬ ವ); [ನಾ] ಬಿದಿರು (ಇಭಖಡ್ಗಿವ್ರಾತ ನಾನಾ ಹರಿಮಯ ಕಟಕಭ್ರಾಜಿತಂ ತುಂಗವಂಶಪ್ರಭವಂ ಸಿಂಹಾಸನಶ್ರೀ ಸಮುಚಿತಂ: ಆದಿಪು, ೧೩. ೪೬); [ನಾ] ಕುಲ (ಆತನಿಂದವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಮೆಂಬುದಾಯ್ತು: ಪಂಪಭಾ, ೧. ೬೦ ವ)

ವಂಶಜರಾಜ್ಯ

[ನಾ] ವಂಶಪಾರಂಪರ್ಯವಾದ ರಾಜ್ಯ (ಆತ್ಮಬಾಷ್ಪಜಳೌಘಂಗಳಿನಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂಶಜರಾಜ್ಯಾಭಿಷವೋತ್ಸವಂ ನೆಗೞ್ದುದೆಂಬ ಆಶಂಕೆಯಂ ಮಾಡಿದಂ: ಆದಿಪು, ೧೪. ೧೩೩)

ವಶಮಾಗು

[ಕ್ರಿ] ಶಕ್ಯವಾಗು (ಗಂಧೇಭಚರ್ಮಂಗಳಂ ಪಸರಂಗೆಯ್ದನೊ ಶಂಭುವೆಂಬ ಬಗೆಯಿಂದೆ ತಳ್ಪೊಯ್ದು ಕೞ್ಪೇಱಿ ಸೂಚಿಸಲಾರ್ಗಂ ವಶಮಾಗದಂತು ಕವಿದತ್ತು ಉದ್ದಾಮಭೀಮಂ ತಮಂ: ಪಂಪಭಾ, ೪. ೪೯)

ವಂಶಾರಾಮ

[ನಾ] [ವಂಶ+ಆರಾಮ] ಬಿದಿರ ಮೆಳೆ (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನಂ ಉಗ್ರ ಪರಶುಪಾಟಿತರಿಪುವಂಶಾರಾಮನಂ ಇಷುವಿದ್ಯಾಪಾರಗಂ ಎನಿಸಿದುದು ಬಲ್ಮೆ ವೈಕರ್ತನನಾ: ಪಂಪಭಾ, ೧. ೧೦೪)

ವಂಶಾವತಾರ

[ನಾ] ಕುಲದ ಆರಂಭ (ಸಮಸ್ತವಸ್ತುವಿಸ್ತಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ ನೆಗೞ್ದ ಭರತಕುಲತಿಲಕರ ವಂಶಾವತರಮೆಂತಾದುದೆಂದೊಡೆ: ಪಂಪಭಾ, ೧. ೫೮ ವ)

ವಶೀಕರಣ

[ನಾ] ಆಕರ್ಷಿಸುವುದು, ಮನಸ್ಸನ್ನು ಗೆಲ್ಲುವುದು (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ವಶ್ಯ

[ಗು] ವಶಮಾಡಿಕೊಳ್ಳಬೇಕಾದುದು, ವಶೀಕರಣ (ಜಗತ್ತಿಳಕ ಭವತ್ಪದಚಂದನತಿಳಕಂ ತ್ರೈಲೋಕ್ಯವಶ್ಯಮಕ್ಕುಂ ಅವಶ್ಯಂ: ಆದಿಪು, ೧೦. ೬೦)

ವಷಟ್ಕಾರ

[ನಾ] ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಹೇಳುವ ಮಂತ್ರ (ಚಾರುತರಯಜ್ಞವಿದ್ಯಾಪಾರಗರ ರವಂಗಳಿಂ ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರಧ್ವನಿ ನೆಗೞೆ ನೆಗೞ್ದುದಾಹುತಿಧೂಮಂ: ಪಂಪಭಾ, ೬. ೩೪)

Search Dictionaries

Loading Results

Follow Us :   
  Download Bharatavani App
  Bharatavani Windows App