भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಸಂತಕ

[ನಾ] ವಸಂತ [ಮಾಸ] (ಮಲ್ಲಿಗೆ ಪಸುರ್ನನೆದೋಱಿದುದು ಎಂದು ನಾಡೆ ಬಿನ್ನವಿಸಲೊಡಂ ವಸಂತಕನದೇಂ ಗುಡಿತೋರಣಶೋಭೆ ಪೊಯ್ವ ಬದ್ದವಣಂ ಅಳುಂಬಮಾದುದೊ: ಆದಿಪು, ೧೧. ೧೦೮)

ವಸಂತಕಾಂತೆ

[ನಾ] ವಸಂತನ ಹೆಣ್ಣು (ಎಂದು ಬಗೆಗೆ ವಂದ ಪೂಗಳೊಳ್ ಪೂದುಡುಗೆಯಂ ಮಾಡಿ ವಸಂತಕಾಂತೆಯರಂತೆ ನೆಱೆಯೆ ಕಯ್ಗೆಯ್ದಾಗಳ್: ಆದಿಪು, ೧೧. ೧೨೮ ವ)

ವಸಂತದೂತಿ

[ನಾ] ಮಾಧವಿ ಪುಷ್ಪ, ಇರುವಂತಿಗೆ (ಇದಿರೊಳ್ ನನೆದೋಱಿ ವಸಂತದೂತಿಯೆನೆ ತಾನೆ ನೆಗೞ್ದ ಮಾಧವಿಯೆನೆ ಸಂದದಿರ್ಮುತ್ತೆಯ ಪೂಗೊಂಚಲ ಪುದುವಿನೊಳೆಱಗಿದ ಮದಾಳಿಗಳ್ ಮಱೆದಪುವೇ: ಆದಿಪು, ೧೧. ೧೧೨)

ವಸನ

[ನಾ] ವಸ್ತ್ರ, ಬಟ್ಟೆ (ಪರಮೌದಾರಿಕದಿವ್ಯಮೂರ್ತಿ ವಸನಾಳಂಕಾರ ಮಂದಾರಶೇಖರರಮ್ಯಂ: ಆದಿಪು, ೮. ೫)

ವಸನಾಂಗಕುಜ

[ನಾ] [ಜೈನ] ಬೇಕಾದ ಬಟ್ಟೆಯನ್ನು ನೀಡುವ ಕಲ್ಪಕುಜ (ಪೞಿ ಚಿತ್ರವೞಿ ಜೋಗಂ ಪೞಿಯಂ ದೇವಾಂಗಮೆಂಬ ವಸನಂಗಳನೇಂ ಫಳಿಯಿಸುವುವೋ .. .. ವಸನಾಂಗಕುಜಂ: ಆದಿಪು, ೫. ೩೪)

ವಸನೋಪಾಂತ

[ನಾ] ಬಟ್ಟೆಯ ಚುಂಗು, ಕೊನೆ (ನಯನಜಲಂಗಳಂ ಉತ್ತರೀಯವಲ್ಕಲ ವಸನೋಪಾಂತದೊಳ್ ಒತ್ತುತ್ತುಂ: ಪಂಪಭಾ, ೮. ೩)

ವಸಿಯಿಸು

[ಕ್ರಿ] ವಾಸಮಾಡು (ಇದಱೊಳ್ ಮಧ್ಯಮಕೂಟದೊಳ್ ವಸಿಯಿಪೆಂ ನಿನ್ನಾಜ್ಞೆ ಪೂಮಾಲೆಯಂದದೆ ನಿಂದಿರ್ಪುದು ಮತ್ಕಿರೀಟತಟದೊಳ್: ಆದಿಪು, ೧೩. ೧೬)

ವಸುಂಧರೆ

[ನಾ] ಭೂಮಿ (ಆತ್ಮೀಯ ಶಿಖಂಡ ಮಣಿಮರೀಚಿಗಳಿಂ ನಿಜಪದಕಮಳದೊಡನೆ ವಸುಂಧರೆಯುಮಂ ಅಳಂಕರಿಸಿದ ವಸುಂಧರೆಯುಮಂ: ಆದಿಪು, ೪. ೨೪ ವ)

ವಸುಧಾಂಗನೆ

[ನಾ] ಭೂದೇವಿ (ಇದು ಪೆಱತಲ್ತು ಭೂತಲಮನಾಂ ತರಲ್ ಆದಿವರಾಹನಾದೆಂ ಅಂದು ಅದಱ ವಿಷಾಣಮಂ ಬೞಿಯಂ ಆ ವಸುಧಾಂಗನೆಗಿತ್ತೆಂ: ಪಂಪಭಾ, ೧೧. ೭೮)

ವಸುಧಾಜಯ

[ನಾ] ಭೂಮಿಯನ್ನೆಲ್ಲ ಗೆದ್ದಿರುವ (ಆ ಜಾಕವ್ವೆಗಂ ವಸುಧಾಜಯ ಸದ್ವಲ್ಲಭಂಗಂ ವಿಶದ ಯಶೋರಾಜಿತನೆನಿಪ ಅರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪುನೃಪಶಲಭಂ: ಪಂಪಭಾ, ೧. ೪೧)

ವಸುಧಾಭೋಗ

[ನಾ] ಭೂವಿಸ್ತಾರ (ಕೂಡಿತ್ತುದ್ದಾಮ ರತ್ನಾಂಶುಗಳೊಳೆ ವಸುಧಾಭೋಗಮಾಗಳ್ ಬೆಡಂಗು ಮಾಡಿತ್ತದೊಂದು ಮಂದಾರದ ಸರಿ: ಆದಿಪು, ೭. ೨೫ ) [ಎಲ್. ಬಸವರಾಜು ಆವೃತ್ತಿ]

ವಸುಧಾರೆ

[ನಾ] ಚಿನ್ನದ ಮಳೆ (ವಸುಧಾರೆ ನಾಡೆಯುಂ ಕಣ್ಗಸದಳಮಾಯ್ತು ಅಮರಕರಪರಿಚ್ಯುತಮೆತ್ತಂ: ಆದಿಪು, ೧೦. ೨)

ವಸುಧೆ

[ನಾ] ಭೂಮಿ (ಅಗುೞ್ದಿರಲ್ ಆ ಕುೞಿಯೊಳ್ ತೊಟ್ಟಗೆ ನಿಧಿಗಂಡಂತೆ ವಸುಧೆಗೆ ಅಸದಳಮಾಯ್ತು ಆ ಮಗನ ಅಂದಂ: ಪಂಪಭಾ, ೧. ೯೭)

ವಸುಮತಿ

[ನಾ] ಭೂಮಿ (ಯಮನಂದನನಲ್ತೆ ನೆತ್ತದೊಳ್ ಬಸನಿಗಂ ಆತನಂ ಬರಿಸಿ ನೆತ್ತಮನಾಡಿ ಗೆಲ್ದುಕೊಳ್ವಂ ಈ ವಸುಮತಿಯಂ: ಪಂಪಭಾ, ೬. ೬೮)

ವಸುಷೇಣ

[ನಾ] ಕರ್ಣನಿಗೆ ಸಾಕು ತಂದೆತಾಯಿಯರು ಇಟ್ಟ ಹೆಸರು (ವಸುಧೆಗಸದಳಮಾಯ್ತು ಆ ಮಗನಂದಂ ಎಂದು ಲೋಗರ್ ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್: ಪಂಪಭಾ, ೧. ೯೭)

ವಸ್ತುಕವಿತ್ವ

ವಸ್ತುಕಕಾವ್ಯ, ಮಾರ್ಗಕಾವ್ಯ, ಚಂಪೂ (ಎಂದು ಬೇಟಮನೆ ವಸ್ತುಮಾಡಿಯೆ ವಸ್ತುಕವಿತ್ವ ವರ್ಣಕವಿತ್ವ ಕಾಮತತ್ತ್ವವಿದನೆನಿಸಿದ ಅತಿವಿದಗ್ಧಂ ಒರ್ವನಿಂತೆಂದಂ: ಆದಿಪು, ೧೨. ೨೨ ವ)

ವಸ್ತುಕೃತಿ

[ನಾ] ವಸ್ತುಕವಿತ್ವ (ಆದಿಪುರಾಣವಸ್ತುಕೃತಿಯಂ ಪೇೞ್ದಂ ಬೆಡಂಗಪ್ಪ ಮಾರ್ಗದೊಳಂ ದೇಸಿಯೊಳಂ ಪೊದಳ್ದೆಸೆವಿನಂ ಸಂಸಾರಸಾರೋದಯಂ: ಆದಿಪು, ೧೬. ೭೯) [ಈ ಶಬ್ದಕ್ಕೆ ಎಲ್. ಬಸವರಾಜು ಅವರು ‘ತಾತ್ವಿಕ ಗ್ರಂಥ’ ಎಂದು ಅರ್ಥ ನೀಡುತ್ತಾರೆ]

ವಸ್ತುಮಾಡು

[ಕ್ರಿ] ಕಾವ್ಯದ ವಿಷಯವಾಗಿಸಿಕೊ (ಬೇಟಮನೆ ವಸ್ತುಮಾಡಿಯೆ ಕವಿತ್ವ ವರ್ಣಕವಿತ್ವ ಕಾಯತತ್ತ್ವವಿದನೆನಿಸಿದ ಅತಿವಿದಗ್ಧನೊರ್ವನಿಂತೆಂದಂ: ಆದಿಪು, ೧೨. ೨೨ ವ)

ವಸ್ತುವಿದ

[ನಾ] ತತ್ವವಿದ (ಮೋಹಿಸಿದಪೈ ನಿರ್ವಾಣಸಕ್ತಂಗೆ ವಸ್ತುವಿದರ್ ನಿನ್ನವೊಲಾರ್ ಪೆಱರ್ಭುವನದೊಳ್: ಆದಿಪು, ೧೬. ೫೯)

ವಸ್ತುವಿದ್ಯೆ

[ನಾ] ವಸ್ತುನಿಷ್ಠ ಕಲೆ (ಪುದಿದ ಜಸಂ ಪೊದಳ್ದ ಚಳಂ ಒಂದಿದ ಅಳಂಕೃತಿ ಕೈತ ದೇಸಿ ಎಂಬುದಂ ಎನೆ ವಸ್ತುವಿದ್ಯೆಯೆನೆ: ಪಂಪಭಾ, ೧೪. ೫೯)

Search Dictionaries

Loading Results

Follow Us :   
  Download Bharatavani App
  Bharatavani Windows App