भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಸ್ತುಸ್ತವ

[ನಾ] ಮಹಾಪುರುಷನ ಗುಣಸ್ತವ (ಗುಣಸ್ತವಮುದಾತ್ತವೃತ್ತ ಭವದೀಯ ವಸ್ತುಸ್ತವಂ: ಆದಿಪು, ೧೩. ೯೦)

ವಸ್ತುಸ್ಥಿತಿ

[ನಾ] ವಸ್ತುಗಳ ಸ್ವರೂಪ (ನೃಸುರ ಅಸುರಪರಿಷತ್ ಸಸ್ಯಸಂಕುಳಂ ಜಿನವಚೋಮೃತಸಾರಂ ಅದು ಅಸದಳಮೆ ಬಯಸೆ ಭರತಂ ಬೆಸಗೊಂಡಂ ಜಿನನಂ ಅಖಿಳವಸ್ತುಸ್ಥಿತಿಯಂ: ಆದಿಪು, ೧೦. ೬೨)

ವಸ್ತ್ರಾಂಗ

[ನಾ] [ಜೈನ] ಕಲ್ಪಕುಜಗಳಲ್ಲಿ ಒಂದು, ಬೇಕಾದ ಬಟ್ಟೆಯನ್ನು ನೀಡುವಂಥದು (ವಸ್ತ್ರಾಂಗದ ಭೂಷಣಾಂಗದಳವಂ ಚಕ್ರಶ್ವರಂ ತಾಳ್ದಿದಂ: ಆದಿಪು, ೪. ೩೫)

ವಹತ್

[ಗು] ಹೊತ್ತ (ತತ್ಕುಂಜಸಂಜಾತಭೂಜ ಗಳತ್ಪುಷ್ಪಪರಾಗ ಸೌರಭವಹತ್ ಮಂದಾನಿಲಂ: ಆದಿಪು, ೧೩. ೧೦)

ವಳನ

[ನಾ] ಹೊರಳುವಿಕೆ (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ: ಪಂಪಭಾ, ೪. ೨೫)

ವಳಭಿಚ್ಛಂದ

[ನಾ] ಇಳಿಜಾರು ಚಾವಣಿ, ಉಪ್ಪರಿಗೆಗಳುಳ್ಳ ವಾಸ್ತುವಿನ್ಯಾಸ (ಛಂದೋವಿದ್ಯೆಯಂತೆ ನಾನಾಚ್ಛಂದಮಪ್ಪ ವಳಭಿಚ್ಛಂದಂಗಳೊಳಂ: ಅದಿಪು, ೬. ೧೦೬ ವ)

ವಳಯ

[ನಾ] ಸಮೂಹ (ಕಳಹಂಸೀಲೀಲೆ ನೀಲೋತ್ಪಳರುಚಿ ಕನಕಾಂಭೋಜಿನೀಲಕ್ಷ್ಮಿ ಭೃಂಗೀವಳಯಂ ಶ್ರೀಚಕ್ರವಾಕದ್ವಯವಿಳಸನಂ: ಆದಿಪು, ೧೧. ೧೪೧)

ವಳಯಾಕೃತಿ

[ನಾ] ಗುಂಡಗಿನ ಆಕಾರ (ವಳಯಾಕೃತಿಯಿಂದಿದನೇಂ ಬಳಸಿದುದೊ ಸುರೇಂದ್ರಚಾಪಮಂಡಳಮೆನೆ: ಆದಿಪು, ೧೦. ೨೩);

ವಳಿತ್ರಯ

[ನಾ] ಹೊಟ್ಟೆಯ ಮೇಲಿನ ಚರ್ಮದ ಮಡಿಕೆ (ಆಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಂ ಒಡನೊಡನೆ ಕೆಟ್ಟುವು: ಪಂಪಭಾ, ೧. ೧೪೧ ವ)

ವಳಿಭಂಗ

[ನಾ] ವಳಿರೇಖೆ ಕಾಣದಂತಾಗುವುದು (ಒದವಿದ ಕರ್ಪನೆಯ್ದೆ ಪರಿವೃತ್ತಪಯೋಧರಚೂಚುಕಕ್ಕೆ ಮಾಡದೆ ವಳಿಭಂಗಮಂ ಕೞಿಯೆ ತೋರ್ಪುದನಂತೆ ತನೂದರಕ್ಕೆ ಮಾಡದೆ: ಆದಿಪು, ೮. ೪೭)

ವಳಿರೇಖೆ

[ನಾ] ವಳಿತ್ರಯ (ತನು ವಳಿರೇಖೆಗಳ್ ಕಿಡೆಯುಂ ಎೞ್ದ ಬೆಡಂಗಿನದೊಂದು ರೇಖೆಯಂ ತನಗೆಡೆಮಾಡಿ ಪೊಂಗೆ: ಆದಿಪು, ೮. ೪೬)

ವೞಿಯದೇಂ

[ವೞಿ+ಅದೇಂ] ಬೇರೆ ದಾರಿ ಎಲ್ಲಿದೆ (ಎಗ್ಗರೆಯ್ದೆ ಕಣ್ದೆಱೆವಿನಂ ಆರ್ ವೞಿಯದೇಂ ಎಳೆಯಂ ಕಿಡಿಸಲ್ಕೆ ಬಲ್ಲರೋ: ಪಂಪಭಾ, ೪. ೯೫)

ವಾಕ್ಚಂದ್ರಿಕಾ[ಕೆ]

[ನಾ] ಮಾತೆಂಬ ಬೆಳುದಿಂಗಳು (ಪರಮಜಿನೇಂದ್ರ ಮುಖಚಂದ್ರ ವಾಕ್ಚಂದ್ರಿಕಾ ಪ್ರಸರಪ್ರಸಾದೋದೀರ್ಣ ಸೂಕ್ತಿಕಲ್ಲೋಲ ಮಾಲಾಕೀರ್ಣ: ಆದಿಪು, ೧. ಆಶ್ವಾಸಾಂತ್ಯ ಗದ್ಯ)

ವಾಕ್ಶ್ರೀ

[ನಾ] [ವಾಕ್+ಶ್ರೀ] ಸರಸ್ವತಿ (ತನ್ನ ಕೈಗೊಂಡ ಬೆಳ್ಪಸದನದೊಳ್ ಕೀರ್ತಿಶ್ರೀಯುಂ ವಾಕ್ಶ್ರೀಯುಮಂ ಅನುಕರಿಸಿ ಮಂತ್ರಾಕ್ಷರನಿಯಮದೊಳ್ ಇಂದ್ರನಂ ಬರಿಸಿ: ಪಂಪಭಾ, ೧. ೧೩೭ ವ); [ನಾ] ವಾಗ್ವಿಭೂತಿ, ವಿದ್ಯೆಯ ಆಧಿಕ್ಯ (ಶ್ರೀಗೆ ಫಳಂ ಚಾಗಂ ವಾಕ್‌ಶ್ರೀಗೆ ಫಳಂ ಸರ್ವಶಾಸ್ತ್ರಪರಿಣತಿ ವೀರಶ್ರೀಗೆ ಫಳಂ ಆಯಂ ಎಂದಿಂತಾಗಳುಂ ಅಱಿದೆಸೆಗಿದಂ ಪರಾಕ್ರಮಧವಳಂ: ಪಂಪಭಾ, ೬. ೧)

ವಾಕ್ಶ್ರೀಸುಭಗ

[ನಾ] [ವಾಕ್+ಶ್ರೀ] ವಾಕ್‌ಸಂಪತ್ತಿನಿಂದ ಸುಂದರವಾದ (ಆ ಸಕಳಾರ್ಥಸಂಯುತಂ ಅಳಂಕೃತಯುಕ್ತಮುದಾತ್ತ ವೃತ್ತಿ ವಿನ್ಯಾಸಮನೇಕ ಲಕ್ಷಣ ಗುಣ ಪ್ರಭವಂ ವಾಕ್ಶ್ರೀಸುಭಗಂ: ಪಂಪಭಾ, ೧. ೯)

ವಾಕ್ಸೌಂದರ್ಯ

[ನಾ] ಮಾತಿನ ಸೊಬಗು (ಇದು ಭರತಯಶೋದುಂದುಭಿರವಮೆನಿಸಿ ದೆಸೆಗೆ ಪೊಣ್ಮುವ ನಿಜ ವಾಕ್ಸೌಂದರ್ಯದೆ ಪೋಲ್ತಂ ಪುರುನಂದನನಂ ಪೊಗೞ್ದ ಮಾಗಧಂ ಮಾಗಧನಂ: ಆದಿಪು, ೧೨. ೧೧೫)

ವಾಗಮಳರ್

[ನಾ] ನಿರ್ಮಲವಾಕ್ಕುಳ್ಳವರು (ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್ ಸುರೇಂದ್ರಧಾರಕರ್ ಆ ವಾಗಮಳರ್ ನೆಗೞ್ದಿರ್ದರ್ ಪುಲಹ ಮರೀಚಿ ಅತ್ರಿ ಅಂಗಿರಸ್ ಪುಳಸ್ತ್ಯ ಕ್ರತುಗಳ್: ಪಂಪಭಾ, ೧. ೬೦)

ವಾಗಾಡಂಬರ

[ನಾ] ಮಾತಿನ ಡೌಲು (ಕದನಕರ್ಕಶಕ್ಷತ್ರಿಯಂಗೆ .. .. ನಿಷ್ಕಾರಣ ಕಾಯಕಂಪನಮುಂ ನಿರಾಲಂಬನ ವಾಗಾಡಂಬರಮುಂ ತಕ್ಕುದಲ್ತು: ಆದಿಪು, ೧೪. ೮೧ ವ)

ವಾಗ್ಮಿ

[ನಾ] ಚಮತ್ಕಾರವಾಗಿ ಮಾತಾಡುವವನು (ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ: ಪಂಪಭಾ, ೩. ೮೦)

ವಾಗ್ವಧೂ

[ನಾ] ಸರಸ್ವತಿ (ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರನ ಚರಿತದೊಳ್ ವಾಕ್ಯಮಾಣಿಕ್ಯಕೋಶಂ: ಆದಿಪು, ೧೬. ೮೦)

Search Dictionaries

Loading Results

Follow Us :   
  Download Bharatavani App
  Bharatavani Windows App