Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ವಕುಳ
[ನಾ] ನಾಗಕೇಸರ, ಪಗಡೆ ಗಿಡ (ಮತ್ತೊರ್ವಳ್ ವಕುಳ ಮುಕುಳಾಸವವದನಪರಿಮಳೆ: ಆದಿಪು, ೧೧. ೧೨೩ ವ)
ವಕ್ತ್ರಪದ್ಮ
[ನಾ] ಮುಖಕಮಲ (ಅದಱ ಪೊದಳ್ದು ನೀಳ್ದ ಲುಳಿತಾಳಕೆ ತನ್ನ ವಕ್ತ್ರಪದ್ಮದಿನೊಸೆದಾಂತೊಡೆ ಆಕೆಯ ಕಪೋಲದೊಳ್ ನವಧೂಮಲೇಖೆ ಚೆಲ್ವಿದಿರ್ಗೊಳೆ ಗಾಡಿವೆತ್ತು: ಪಂಪಭಾ, ೩. ೭೬)
ವಕ್ತ್ರಮಂಡನ
[ನಾ] ಮುಖಾಲಂಕಾರ (ಜಲಲವಮಂಜರಿಯಂ ಉಟುಮಾಡಿದುವು ದಿಶಾಲಲನೆಯರ ವಕ್ತ್ರಮಂಡನ ವಿಲಾಸದೊಳ್ ನೆಗೞ್ವ ಕರ್ಣಪೂರಶ್ರೀಯಂ: ಆದಿಪು, ೭. ೯೫)
ವಕ್ರ
[ನಾ] ತಡೆ (ಜವನಾಣೆಗಂ ಆಜ್ಞೆಗಂ ಉಂಟೆ ವಕ್ರಂ ಆ ಖಳನ ತುೞಿವುಮಂ ಸೋಂಕುಮಂ ಆರವಧರಿಪರ್: ಆದಿಪು, ೪. ೬೭); [ನಾ] ಅಡ್ಡಿ, ತೊಂದರೆ (ಚಕ್ರದೊಳೇಂ ಮತ್ತೇಜಶ್ಚಕ್ರಮೆ ಮುಂದಕ್ಕೆ ದಂಡರತ್ನಂಬರಂ ಆರ್ ವಕ್ರಮೆನಗೆ ಅಖಿಳ ಧರಣೀಚಕ್ರದೊಳ್: ಆದಿಪು, ೧೨. ೭೨)
ವಕ್ರಿಸು
[ಕ್ರಿ] ಅಡ್ಡಿಮಾಡು (ಅದಿನ್ನೆನಗೆ ತಪ್ಪುದು ತನ್ಮುನಿಶಾಪದಿಂದಂ ಇನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆಂ: ಪಂಪಭಾ, ೧. ೧೧೪); [ಕ್ರಿ] ವಕ್ರವಾಗು, ಬೇರೆಯಾಗು (ನಿಮ್ಮೀ ಕ್ರಮಕಮಲಕ್ಕೆ ಎಱಗದೆ ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಂ ಒಳರೇ: ಪಂಪಭಾ, ೧೧. ೩೦); ಪ್ರತಿಭಟಿಸು, ಎದುರಿಸು (ವೈರಿನರಾಧಿಪಸೈನ್ಯವಾರ್ಧಿಯಂ ಪೊಸೆದೊಡೆ ಪುಟ್ಟಿದೀ ನಿನಗೆ ವಕ್ರಿಸಲೆನ್ನಂ ಅದೆಂತು ತೀರ್ಗುಮೋ: ಪಂಪಭಾ, ೧೩. ೧೦೧)
ವಕ್ರೋಕ್ತಿ
[ನಾ] ಸುಂದರವಾದ ಮಾತು, ಆಲಂಕಾರಿಕ ಮಾತು (ಎಂದೆಂದು ಓರೊರ್ವರ್ ಆಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು: ಪಂಪಭಾ, ೩. ೪೬ ವ)
ವಕ್ರೋಕ್ತಿನಿಪುಣ
[ನಾ] ಚತುರತೆಯಿಂದ ಮಾತಾಡುವುದರಲ್ಲಿ ಬಲ್ಲಿದ (ಜನಪದಸಮಭಿಜಾತನುಂ ಅನ್ವಯಾಗತನುಂ ಅಭಿರೂಪನುಂ ಪ್ರತ್ಯುತ್ಪನ್ನಪ್ರತಿಭನುಂ ವಕ್ರೋಕ್ತಿನಿಪುಣನುಂ: ಆದಿಪು, ೧೪. ೪೩ ವ)
ವಕ್ಷೋಜ
[ನಾ] ಮೊಲೆ (ವಿಜಯಲಕ್ಷ್ಮೀಲಲನಾವಕ್ಷೋಜ ಸ್ಪರ್ಶನಮಂ ಅನಕ್ಷರಮಱಿಪಿದುದು ಪತಿಗಮಂದಸ್ಪಂದಂ; ಆದಿಪು, ೧೧. ೧೧)
ವಚನರಚನೆ
[ನಾ] ಮಾತಿನ ಜೋಡಣೆ (ನಿನ್ನ ಬಗೆಯಂ ಬಗೆದಂತೆ ತೀರ್ಚುವೆಂ ಎಂದು ಅನೇಕ ಪ್ರಕಾರ ವಚನರಚನೆಗಳಿಂದಾಕೆಯ ಮನಮಂ ಆಱೆ ನುಡಿಯುತ್ತಿರ್ಪಿನಂ: ಪಂಪಭಾ, ೪. ೬೯ ವ)
ವಚನಾಮೃತವಾರ್ಧಿ
[ನಾ] ಕಾವ್ಯವೆಂಬ ಹಾಲ್ಗಡಲು, ಅಮೃತಸಾಗರ (ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ: ಪಂಪಭಾ, ೧. ೧೩)
ವಂಚನೆ
[ನಾ] ಮೋಸ (ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಂ ಆಸನಂ ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದ ಏರ್ವೆಸನದೊಳಾದ ಬಲ್ಮೆಯೊಳ್: ಪಂಪಭಾ, ೧೦. ೭೮)
ವಚಃಪ್ರಸರ
[ನಾ] ಮಾತುಗಳ ಸಮೂಹ (ಉಚಿತಪೀಠನಿವಿಷ್ಟಂ ಭುವನೇಶಂ ಬೆಸಗೊಳೆ ವಿನಯವಚಃಪ್ರಸರಂಗಳ್ ಎಸೆದೊಡಂಬಡೆ ನುಡಿದಂ: ಆದಿಪು, ೧೩. ೨೪)
ವಜ್ಜರಿಗೞ್ತೆ
[ನಾ] ಹೇಸರಗತ್ತೆ (ಕರಿಯ ಪಿರಿಯ ಮೆಯ್ಯ ನಿಡಿಯ ಕಿವಿಯ ಕುಣಿದು ಮೆಟ್ಟುವ ವಜ್ಜರಿಗೞ್ತೆಗಳುಮಂ ವ್ಯೂಹದೊಳ್ ನಿಟ್ಟೆವಟ್ಟು: ಆದಿಪು, ೪. ೫೪ ವ)
ವಜ್ಜರಿಗೆ
[ನಾ] ಹೇಸರಗತ್ತೆ (ಅವಯವದೆ ಕುಣಿದು ಮೆಟ್ಟಿವ ಸವಡಿಯ ವಜ್ಜರಿಗೆ ಪಿಡಿದ ಸತ್ತಿಗೆಯ ವಿಳಾಸವದು ಅಮರ್ದ ಲೀಲೆಯಿಂ: ಆದಿಪು, ೧೧. ೪೧) [ನರಸಿಂಹಶಾಸ್ತ್ರಿಗಳು ‘ಬಿಜ್ಜಣಿಗೆ’ ಎಂಬ ಪಾಠವನ್ನೂ ಎಲ್. ಬಸವರಾಜು ‘ಬಜ್ಜರಿಗೆ ಎಂಬ ಪಾಠವನ್ನೂ ಸ್ವೀಕರಿಸುತ್ತಾರೆ]
ವಜ್ರ
[ಗು] ಗಟ್ಟಿಯಾದ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬); [ನಾ] ಇಂದ್ರನ ವಜ್ರಾಯುಧ (ಮಗನೆನಗೆಂದು ಪೇೞ್ ಪಿಡಿದು ಕಟ್ಟದೆ ಮಾಣ್ಬನೆ ಪಾರ್ಥನಂ ಧರಿತ್ರಿಗೆ ಗುರುವೆಂದು ವಜ್ರದೊಳ್ ಉರುಳ್ಚದೆ ಮಾಣ್ಬೆನೆ ಚಕ್ರಿಯಂ: ಪಂಪಭಾ, ೫. ೧೦೧); [ನಾ] ನವರತ್ನಗಳಲ್ಲಿ ಒಂದು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್: ಪಂಪಭಾ, ೧೪. ೨೦)
ವಜ್ರಕವಾಟ
[ನಾ] ತೆಗೆಯಲಾಗದ ಬಾಗಿಲು (ಒಡೆವುದೆ ವಜ್ರಕವಾಟಮಂ ಅಡರ್ವುದೆ ವಿಜಯಾರ್ಧಗಿರಿಯಂ .. .. ಎಮ್ಮನೆ ಬೆಸಸಾ: ಆದಿಪು, ೧೩. ೨೧)
ವಜ್ರಕೀಟ
[ನಾ] ಕಲ್ಲು ಮರಗಳನ್ನೂ ಕೊರೆಯಬಲ್ಲ ಮೂತಿಯುಳ್ಳ ಅಲರ್ಕ ಎಂಬ ಒಂದು ಹುಳು, ದುಂಬಿ (ಪರಶುರಾಮಂ ಮಱೆದು ಒರಗಿದಾ ಪ್ರಸ್ತಾವದೊಳ್ ಆ ಮುನಿಗೆ ಮುನಿಸಂ ಮಾಡಲೆಂದು ಇಂದ್ರಂ ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್: ಪಂಪಭಾ, ೧. ೧೦೪ ವ)
ವಜ್ರತುಂಡ
[ನಾ] ಗಟ್ಟಿಯಾದ ಕೊಕ್ಕು (ವಿನತಾಪುತ್ರನ ವಜ್ರತುಂಡಹತಿಗಂ ಮೇಯ್ಯಾಂತು .. .. ನಾಗಾನಂದಮಂ ಮಾಡಿದಂ; ಪಂಪಭಾ, ೪. ೨೬)
ವಜ್ರದಾಳಿ
[ನಾ] [ವಜ್ರ+ತಾಳಿ] ವಜ್ರಖಚಿತ ಮಾಂಗಲ್ಯ (ತಿಸರಮಿದಾವುದಕ್ಕ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕಣ್ಗೆಸೆವುದಿದಾವುದು: ಪಂಪಭಾ, ೪. ೮೬)
ವಜ್ರಮಯ