भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶೀರ್ಷಕ

[ನಾ] ತಲೆಯ ಆಭರಣ (ಪ್ರತ್ಯೇಕ ಶೀರ್ಷಕ ಅವಘಾಟಕ ಪ್ರಕಾಂಡ ತರಳತರ ಬಂಧ ಉಪಪದಪಂಚಕ ಸಮೇತಂಗಳಾಗಿ: ಆದಿಪು, ೮. ೫೪ ವ)

ಶೀಲವ್ರತ

[ನಾ] [ಜೈನ] ಮುನಿಗಳ ವ್ರತಾಚರಣೆ (ದರ್ಶನವಿಶುದ್ಧನಾಗಿಯುಂ ಶಿಲವ್ರತಭಾವನಾರಹಿತಂ ಅಸಂಯುತಂ ಜಘನ್ಯಪಾತ್ರಂ: ಆದಿಪು, ೧೦. ೯ ವ)

ಶುಕ

[ನಾ] ಗಿಳಿ (ಶುಕ ಶಿಖಂಡಿ ಹಂಸ ಸಾರಸ ಕ್ರೌಂಚ ಕರಿ ಕಳಭ ಮಲ್ಲಾದ್ಯನೇಕ ಅನೇಕಾಕಾರವಿಕೃತಾಮರಕುಮಾರ: ಆದಿಪು, ೮. ೩ ವ)

ಶುಕಕಾಮಿನಿ

[ನಾ] ಹೆಣ್ಣುಗಿಳಿ (ಚೂಷಿತಕಮಂ ಔಪರಿಷ್ಟಕರತಂಗಳ ಭೇದದೊಳೊಂದಿದ ಆಮ್ರಚೂಷಿತಕಮನಾಮ್ರಪಕ್ವಫಳದೊಳ್ ಶುಕಕಾಮಿನಿ ಚೆಲ್ವುದೋಱಿದಳ್: ಆದಿಪು, ೧೧. ೯೯)

ಶುಕ್ತಿಪುಟ

[ನಾ] ಮುತ್ತಿನ ಚಿಪ್ಪು (ಯಶಸ್ವತಿ ಮಹಾದೇವಿಯ ಗರ್ಭಾವಾಸದೊಳ್ ಶುಕ್ತಿಪುಟೋದರ ವರ್ತಿಯಪ್ಪ ನಿರ್ಮಳೋದಕಬಿಂದುವಿನಂತೆ ಸಂಕ್ರಮಿಸೆ: ಆದಿಪು, ೮. ೨೯ ವ)

ಶುಕ್ಲ

[ನಾ] ರೇತಸ್ಸು (ಉತ್ತಮ ಪಾತ್ರದಾನಾನುಮೋದಫಲದಿಂದಲ್ಲಿ ಪುಟ್ಟುವ ಜೀವಂಗಳ್ ನಾರಿಪುರುಷಸಂಯೋಗನಿಯೋಜಿತ ಶುಕ್ಲಾರ್ತವಂಗಳೊಳ್ ಜೀವಯುಗಳಂಗಳಾಗಿ ನೆಲಸಿ: ಆದಿಪು, ೫. ೪೧ ವ)

ಶುಕ್ಲಧ್ಯಾನ

[ನಾ] [ಜೈನ] ಪರಿಶುದ್ಧವಾದ ಆತ್ಮಜ್ಞಾನ: ಪೃಥಕ್ತ್ವವಿತರ್ಕವಿಚಾರ, ಏಕತ್ವವಿತರ್ಕವಿಚಾರ, ಸೂಕ್ಷ್ಮಕ್ರಿಯಾ ಪ್ರತಿಪಾತಿ, ವ್ಯುಪರತ ಕ್ರಿಯಾನಿವೃತ್ತಿ ಎಂಬ ನಾಲ್ಕು ಬಗೆಯ ಶುಕ್ಲಧ್ಯಾನಗಳು (ಚತುರ್ವಿಧಶುಕ್ಲಧ್ಯಾನದೊಳ್ ಪೂರ್ವಾಪರವಿಷಯ ವಿವಿಕ್ತಾರ್ಥವ್ಯಂಜನವೀರ್ಯ ವಿಧಿವ್ಯಂಜನಯೋಗ ಸಂಕ್ರಮಣಲಕ್ಷಣಲಕ್ಷಿತಮಪ್ಪ ಪೃಥಕ್ತ್ವವಿತರ್ಕವಿಚಾರಮೆಂಬ ಮೊದಲ ಶುಕ್ಲಧ್ಯಾನದೊಳ್: ಆದಿಪು, ೬. ೩೪ ವ)

ಶುಕ್ಲಲೇಶ್ಯಾ

[ನಾ][ಜೈನ] ಕರ್ಮಸಂಬಂಧವಾದ ಬಣ್ಣಗಳಲ್ಲಿ ಒಂದು; ಅತಿನಿದ್ದೆಯ ಸಂಕೇತವಾದ ಬಿಳಿ; ಆರು ಲೇಶ್ಯೆಗಳಲ್ಲಿ ಒಂದು, ಶುಭಭಾವ (ಶುಭಭಾವಶುಕ್ಲಲೇಶ್ಯಾನುಭಾವದಿಂ ಧವಳಪುಂಡರೀಕ ನಿಕಾಶಪ್ರಭೆ ದೊರೆಕೊಂಡುದು ಪರಿಣಾಮಭೇದಮೇಂ ಚಿತ್ರವಿಧಮೊ ತನುಭೃದ್ಗಣದಾ:ಆದಿಪು, ೬. ೪೨)

ಶುಚಿ

[ನಾ]ಶೌಚಗುಣ (ಪೇೞ್ ಏವುದೊ ಶುಚಿಯಿಲ್ಲದವನ ಗಂಡುಂ ತೊಂಡುಂ:ಪಂಪಭಾ, ೮. ೮೨)

ಶುಂಡಾಳ

[ನಾ] ಸೊಂಡಿಲು (ಕ್ರೀಡಾವಖಂಡಿತ ಉಚ್ಚಂಡ ಶುಂಡಾಳ ಗಾತ್ರ ಅಪರ ಪತಿಬಾಳ ಕದಳಿಕಾ ಕಾಂಡ ಲೀಲಾಚ್ಛಿನ್ನ: ಆದಿಪು, ೧೩. ೪೫ ವ)

ಶುದ್ಧ

[ನಾ]ಪೂರ್ವರಂಗದ ಒಂದು ಬಗೆ (ಸುರಾಸುರಸಭೆಗಂ ನಾಭಿರಾಜಾದಿ ಮನುಜಸಭೆಗಂ ಮೆಱೆಯಲೆಂದು ಶುದ್ಧಂ ವಿಚಿತ್ರಂ ಎಂಬ ಪೂರ್ವರಂಗಪ್ರಸಂಗದೊಳ್:ಆದಿಪು, ೭. ೧೧೫ ವ), ನೋಡಿ, ‘ಪೂರ್ವರಂಗ’

ಶುದ್ಧಾಕ್ಷರ

[ನಾ]ವರ್ಣಮಾಲೆಯ ಮೂಲ ಅಕ್ಷರಗಳು (ಅಂತಕಾರಾದಿ ಹಕಾರಾಂತಸ್ವರವ್ಯಂಜನಭೇದಭಿನ್ನ ಶುದ್ಧಾಕ್ಷರಂಗಳುಮಂ ಆಯೋಗವಾಹಕಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು:ಆದಿಪು, ೮. ೫೯ ವ)

ಶುದ್ಧಾಂತ

[ನಾ]ಅಂತಃಪುರ (ಅತ್ಯಂತ ಸೌಂದರ ಶುದ್ಧಾಂತ ವಧೂಕದಂಬಕಮನೇಂ ಮೆಯ್ವೆರ್ಚಿಸಲ್ಕಾರ್ತುದೋ:ಆದಿಪು, ೧೧. ೪೨)

ಶುಭ

[ನಾ] ಮಂಗಳ (ಉತ್ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ಸೌಭಾಗ್ಯಂ ಇಷ್ಟಾಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ: ಪಂಪಭಾ, ೧೪. ೬೫)

ಶುಭತಿಥಿ

[ನಾ]ಶುಭಕರವಾದ ದಿನ (ಶುಭತಿಥಿ ಶುಭನಕ್ಷತ್ರ ಶುಭವಾರ ಶುಭಮುಹೂರ್ತಮೆನೆಗಣಕಂ ಇಳಾಪ್ರಭುವೊಗೆದಂ:ಪಂಪಭಾ,೧. ೧೨೭)

ಶುಂಭತ್

[ಗು] ಒಡೆಯುವ, ಸೀಳುವಂತಹ (ಮುಂದಣ ಕಜ್ಜದ ಬಿಣ್ಪುಮಂ ಅಱಿದು ಅಂಭೋರುಹನಾಭಂ ಶುಂಭತ್ ಅಂಭೋಧರಧ್ವನಿಯಿನಿಂತೆಂದಂ: ಪಂಪಭಾ, ೬. ೨೨ ವ)

ಶುಭದ

[ನಾ]ಶುಭಕರವಾದ (ಬರೆ ಚೈತ್ರಂ ಕೃಷ್ಣಪಕ್ಷಂ ದೊರೆಕೊಳೆ ನವಮೀವಾಸರಂ ಪೊರ್ದೆ ಲೋಕೋತ್ತರಮಾಗಿರ್ದ ಉತ್ತರಾಷಾಢದೊಳ್ ಅತಿಶುಭದಂ ಬ್ರಹ್ಮಯೋಗಂ ಮನಂಗೊಂಡಿರೆ:ಆದಿಪು, ೭. ೩೬)

ಶುಭಲಗ್ನೋದಯ

[ನಾ]ಶುಭಲಗ್ನದ ಆರಂಭ (ಗ್ರಹಂಗಳೆಲ್ಲಂ ತಂತಮ್ಮ ಉಚ್ಚಸ್ಥಾನಂಗಳೊಳಿರ್ದು ಷಡ್ವರ್ಗಸಿದ್ಧಿಯಂ ಉಂಟುಮಾಡೆ ಶುಭಲಗ್ನೋದಯದೊಳ್:ಪಂಪಭಾ, ೧. ೧೪೪ ವ)

ಶುಶ್ರೂಷಾನಿಯೋಗ

[ನಾ] ಸೇವಾಕಾರ್ಯ (ಮತ್ತಂ ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ .. .. ಉಪದೇಶಂಗೆಯ್ದು: ಆದಿಪು, ೮. ೬೪ ವ)

ಶುಶ್ರೂಷೆ

[ನಾ]ಸೇವೆ (ಆ ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂಗೊಳೆ ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ:ಪಂಪಭಾ,೧. ೮೮ ಮತ್ತು ೧. ೮೯)

Search Dictionaries

Loading Results

Follow Us :   
  Download Bharatavani App
  Bharatavani Windows App