Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಶುಷ್ಕತಾರ್ಕಿಕ
[ನಾ]ಒಣಕಲು ಚರ್ಚೆ ಮಾಡುವವನು (ಇರು ಮರುಳೆ ಶುಷ್ಕವೈಯಾಕರಣಂಗಂ ಶುಷ್ಕತಾರ್ಕಿಕಂಗಂ ಬೆಳ್ಳಕ್ಕರಿಗಂಗಂ ವಿಷಯಮೆ ಕಾವ್ಯರತ್ನಂ ಅತಿಚತುರಕವಿಕದಂಬಕವಿಷಯಂ:ಆದಿಪು,೧. ೨೪)
ಶುಷ್ಕಪತ್ರ
[ನಾ] ಒಣಕಲು ಎಲೆ, ತರಗೆಲೆ (ಹರಿತಾಂಕುರ ಪಲ್ಲವ ಪತ್ರರಾಜಿಯಂ ಬಿಸುಟು ಶುಷ್ಕಪತ್ರಂಗಳನಾದರದಿಂ ಮೇವ ಅಜಕುಳಮಂ: ಆದಿಪು, ೧೫. ೩೫)
ಶುಷ್ಯತ್
[ಗು] ಒಣಗಿದ (ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್: ಆದಿಪು, ೫. ೮೭ ವ)
ಶೂದ್ರ
[ನಾ] ಆದಿದೇವನು ವಿಭಾಗಿಸಿದ ಮೂರು ವರ್ಣಗಳಲ್ಲಿ ಮೂರನೆಯದು, ಕರ್ಮಕವರ್ಗ (ಮತ್ತಂ ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ: ಆದಿಪು, ೮. ೬೪ ವ)
ಶೂದ್ರಾನ್ವಯ
[ನಾ]ಶೂದ್ರವರ್ಣ (ಶೂದ್ರಾನ್ವಯಕ್ಕೆ ಬ್ರಾಹ್ಮಣಾದಿ ವರ್ಣತ್ರಯಕ್ಕಂ ಶುಶ್ರೂಷಾದ್ಯನೇಕ ಕರ್ಮಕರಣ ಉಪಜೀವನಮುಮಂ ನಿಱಿಪಿ:ಆದಿಪು, ೮. ೭೩)
ಶೂನ್ಯವಾದ
[ನಾ]ಬೌದ್ಧಮತ ದರ್ಶನ, ನಿರೀಶ್ವರವಾದ (ಶೂನ್ಯವಾದ ಪ್ರಕಾಶನಪರಂ ಆವುದಂತರ್ಬಹೀರೂಪದಿಂ ವಿಶದದರ್ಶನಾವಗಮ್ಯಂ ಅದೆಲ್ಲಂ ಅಸತ್ಯಾವಭಾಸಿ:ಆದಿಪು, ೨. ೯ ವ)
ಶೂನ್ಯಹಸ್ತ
[ನಾ]ಬರಿಗೈ, ಆಯುಧ ಹಿಡಿಯದೆ (ಶೂನ್ಯಹಸ್ತದೊಳ್ ಇರ್ವರುಂ ಪೆಣೆದು ಪಲವುಂ ಗಾಯದೊಳ್ ಆಯಂದಪ್ಪದೆ ಪಿರಿದುಂ ಪೊೞ್ತು ಸಲ್ತರ್ಪಿನಂ ಪೋರೆ:ಪಂಪಭಾ, ೮. ೨೧ ವ)
ಶೂನ್ಯೀಕೃತ
[ಗು]ಬರಿದಾಗಿ ಮಾಡಲ್ಪಟ್ಟ (ಅಂತು ನರನಾರಾಯಣರಿರ್ವರುಂ ಅನವರತ ಶರಾಸಾರಶೂನ್ಯೀಕೃತ ಕಾನನಮಾಗೆಚ್ಚು:ಪಂಪಭಾ, ೫. ೫೦ ವ)
ಶೂರ
[ನಾ]ಶ್ರೀಕೃಷ್ಣನ ತಾತ ಶೂರಸೇನ (ಮತ್ತಿತ್ತ ನೆಗೞ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ಮತ್ತಗಜಗಮನೆ ಯದುವಂಶೋತ್ತಮೆಯೆನೆ ಕುಂತಿ:ಪಂಪಭಾ,೧. ೮೮)
ಶೂರಂ ಭೇದೇನ ಯೋಜಯೇತ್
ಶೂರನನ್ನು ಭೇದೋಪಾಯದಿಂದ ಗೆಲ್ಲಬೇಕು (ಶೂರಂ ಭೇದೇನ ಯೋಜಯೇತ್ ಎಂಬ ನಯಮಂ ಕೆಯ್ಕೊಂಡು ವಿನಯಮನೆ ಮುಂದಿಟ್ಟು: ಪಂಪಭಾ, ೧೦. ೫೯ ವ)
ಶೂಲ
[ನಾ]ಈಟಿ (ಜಾನುಭಂಜನಿಶೂಲಪ್ರಕರ ಪರಿವೃತಂಗಳುಂ ಕೂಪ ಕೂಟ ಅವಪಾತ ಲೋಹಕಂಟಕ ಸಂಕಟಂಗಳುಂ:ಆದಿಪು, ೧೩. ೫೭ ವ)
ಶೂಲಕಪಾಲಪಾಣಿ
[ನಾ] ತ್ರಿಶೂಲ ಹಾಗೂ ತಲೆಬುರುಡೆಯನ್ನು ಹಿಡಿದವನು, ಶಿವ (ನಿನ್ನೀ ಶರಾಸನದೊಳ್ ಶೂಲಕಪಾಲಪಾಣಿ ದಯೆಯಿಂ ಬಂದು ಇರ್ದಂ: ಪಂಪಭಾ, ೧೦. ೧೨೦)
ಶೃಂಗ
[ನಾ]ಬೆಟ್ಟದ ಕೋಡು (ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ:ಪಂಪಭಾ, ೧. ೧೧೫)
ಶೃಂಗಕ
[ನಾ]ಪಿಚಕಾರಿ (ಸರಸಿಜ ನೀಲೋತ್ಪಲ ಕರಿಕರ ಹಂಸೀ ವದನರೂಪದಿಂ ನೆರೆದು ಅಂತಃಪುರ ಕಾಂತಾಕರತಳದೊಳ್ ಕರಮೆಸೆದುವು ಕನಕಶೃಂಗಕಂಗಳ್ ಪಲವುಂ:ಆದಿಪು, ೧೧. ೧೪೩)
ಶೃಂಗಾಟಕ
[ನಾ] ಒಂದು ಬಗೆಯ ಮುಳ್ಳುಗಿಡ (ತಾಳಪತ್ರ ಶೃಂಗಾಟಕನಿಚಿತಂಗಳುಂ ಶ್ವದಂಷ್ಟ್ರಾರ್ಗಳೋಪರಿಮ ಸಂಛನ್ನಂಗಳುಂ: ಆದಿಪು, ೧೩. ೫೭ ವ)
ಶೃಂಗಾಟಕವ್ಯೂಹ
[ನಾ]ಒಂದು ಸೇನಾರಚನೆ, ನಾಲ್ಕು ದಾರಿ ಸೇರುವ ಸೇರುವಂತಹ ರಚನೆ (ಸಮಭೂಮಿಯೊಳ್ ಚತುರ್ಬಲಂಗಳನೊಂದು ಮಾಡಿ ಶೃಂಗಾಟಕವ್ಯೂಹಮನೊಡ್ಡಿ ನಿಂದಾಗಳ್:ಪಂಪಭಾ,೧೨. ೧೬ ವ)
ಶೃಂಗಾರವಾರಾಶಿ
[ನಾ]ಸಿಂಗಾರವೆಂಬ ಸಮುದ್ರ (ಶೃಂಗಾರವಾರಾಶಿ ಭೋಂಕನೆ ಬೆಳ್ಳಂಗೆಡೆದತ್ತೊ ಕಾಮನ ಎಱೆ ಮೆಯ್ವೆರ್ಚಿತ್ತೊ ಪೇೞ್ ಈಕೆಗೆ ಎಂಬಿನಂ:ಪಂಪಭಾ, ೪. ೪೨)
ಶೇಖರ
[ಗು] ಮುಡಿದ, ಧರಿಸಿದ (ಅನೇಕ ಮಕುಟಬದ್ಧ ಶೇಖರಸಹಸ್ರಪರಿಸ್ರಸ್ತ ಕುಸುಮಕೇಸರರಜಮುಂ: ಆದಿಪು, ೧೧. ೩೫ ವ); ಶಿರೋಭೂಷಣ (ತನು ಕಿಱಿದಾದೊಡಂ ಉದ್ಯತ್ ತನುಪ್ರಭಾಪ್ರಸರಮೆಸೆದು ಪಸರಿಸಿ ಸಿಂಹಾಸನಮಂ ಪುದಿದಿರೆ ದೇವಂ ಕನಕಕನಚ್ಛಿಖರಿಶಿಖರಶೇಖರನಾದಂ: ಆದಿಪು, ೭. ೭೭)
ಶೇಷ
[ನಾ]ಆದಿಶೇಷ (ಸುದತಿಯ ಮೃದು ಪದವಿನ್ಯಾಸಮುಮಂ ಶೇಷಂ ಆನಲಾರದೆ ಸುಯ್ದಂ ಬೇಸಱಿಂ ಎಂದೊಡೆ ಗರ್ಭದ ಕೂಸಿನ ಬಳೆದಳವಿಯಳನಳೆವರುಂ ಒಳರೇ:ಪಂಪಭಾ,೧. ೧೨೬);(ಸಮಸ್ತ ಉರ್ವೀಧರ ಅಶೇಷ ಶೇಷ ಮಹಾನಾಗಫಣಾಮಣಿದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ:ಪಂಪಭಾ, ೫. ೭೬)
ಶೇಷಾಕ್ಷತೆ