भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶೇಷಾಶೇಷ

[ನಾ] [ಶೇಷ+ಅಶೇಷ] ಇರುವ ಮತ್ತು ಹೊಸತಾದ (ಭಗವಜ್ಜನ್ಮಾಭಿಷೇಕ ಸಂಬಂಧಿಯಾಗೆ ತನ್ನ ಪೊಸತೆ ಸಮೆದ ಸಮವಕಾರ ರೂಪಕಮುಂ ದಶಾವತಾರರೂಪಗರ್ಭ ಸಂದರ್ಭಂಗಳಪ್ಪ ಶೇಷಾಶೇಷರೂಪಕಂಗಳುಮಂ: ಆದಿಪು, ೭. ೧೧೫ ವ)

ಶೇಷಾಹಿ

[ನಾ] ಆದಿಶೇಷ (ಕಡಲಂ ಪೊಕ್ಕೊಡೆ ಪೀರ್ದಪೆಂ ಕಡಲಂ ಆ ಪಾತಾಳಮಂ ಪೊಕ್ಕನಪ್ಪೊಡೆ ಶೇಷಾಹಿಯ ಪಲ್ಗಳಂ ಮುಱಿದಪೆಂ: ಪಂಪಭಾ, ೧೩. ೭೬)

ಶೈತ್ಯ

[ಗು] ತಂಪು (ಎಸಗಿದುದು ಸಮೀರಂ ಶೈತ್ಯಸೌರಭ್ಯ ಮಾಂದ್ಯಾವಸಥಂ: ಆದಿಪು, ೮. ೩೫)

ಶೈಲ

[ನಾ] ಪರ್ವತ, ಬೆಟ್ಟ (ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ: ಪಂಪಭಾ, ೧೪. ೨೭)

ಶೈಲೂಷ

[ನಾ]ನರ್ತಕ, ನಟ (ಜೀವಂಗಳ್ ಶುಭಾಶುಭಕರ್ಮ ಶೈಲೂಷಪ್ರೇರಿತಂಗಳಾಗಿ ಚತುರ್ಗತಿ ಸಂಸಾರಗಳೊಳ್ .. .. ಪರಿಭ್ರಮಿಸುಗುಂ:ಆದಿಪು, ೧೬. ೫೭ ವ)

ಶೈಲೂಷವೇಷ

[ನಾ]ನಟನೆ, ತೋರಿಕೆ (ಎಲ್ಲಿ ಪುಟ್ಟಿದಳೊ ಮತ್ ಪ್ರಾಣೇಶೆ ಎಂದು ಇಲ್ಲದ ಉಬ್ಬೆಗಮಂ ಭಾವಿಸಿ ಪಲವನಾ ಶೈಲೂಷವೇಷಂಗಳಂ:ಆದಿಪು, ೩. ೮೮)

ಶೈಲೇಳಾಕಲ್ಪಕಾಳ

[ನಾ] [ಶೈಲ+ಇಳಾ+ಆಕಲ್ಪಕಾಳ] ಬೆಟ್ಟ ಭೂಮಿಗಳಿರುವಷ್ಟು ಕಾಲ, ಹೆಚ್ಚು ಕಾಲ (ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ: ಪಂಪಭಾ, ೧೪. ೨೭)

ಶೈಳೇಂದ್ರ

[ನಾ]ಹಿಮಾಲಯ (ಷಟ್ಖಂಡಕಿಂತಿದಱಿಂದಿತ್ತೆಯೆ ಮೇರೆ ನೋಡಿಮೆಮಗೀ ಶೈಳೇಂದ್ರಮೆಂದಂದು ತೋಱಿದನಾ ತನ್ನೊಡವಪ್ ಭೂಪನಿಕರಕ್ಕೆ ಉತ್ತುಂಗ ಹೈಮಾಧ್ರಿಯಂ:ಆದಿಪು,೧೩. ೬೯)

ಶೋಕ

[ನಾ] ದುಃಖ (ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ ಸರೋಜದಳಾಯತಾಕ್ಷೀ: ಪಂಪಭಾ, ೨. ೨೮)

ಶೋಕವ್ಯಗ್ರ

[ನಾ] ದುಃಖದಿಂದ ಕಳವಳಗೊಂಡವನು (ಕೋಟಲೆಗೊಳ್ವ ಕೌರವೇಶ್ವರನಂ ಎಯ್ದೆ ಪೋಗಿ ಹಸ್ತಪ್ರಹಸ್ತಮಂಡಲಾಗ್ರನುಂ ಶೋಕವ್ಯಗ್ರನುಂ ಆಗಿ: ಪಂಪಭಾ, ೧೩. ೧೦೨ ವ)

ಶೋಕಾನಲ

[ನಾ]ದುಃಖವೆಂಬ ಬೆಂಕಿ (ಪರಲೋಕ ಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ:ಪಂಪಭಾ,೧. ೮೦ ವ)

ಶೋಣ

[ನಾ]ಕೆಂಪು ಬಣ್ಣ (ಲೀಲಾಕಮಲಾಕರಾನೀಕ ರಕ್ತಕಮಳಂಗಳಂ ಆಸ್ಯಾನುಶೋಣಿತ ಶೋಣ ರಿಪುನೃಪ ಶಿರಂಗಳೆಂದು ತುೞಿಯಿಸಿಯುಂ:ಆದಿಪು, ೮. ೪೧ ವ)

ಶೋಣಮಣಿ

[ನಾ]ಮಾಣಿಕ್ಯ (ಭವ್ಯಹೃತ್ಕಮಳಕ್ಕಂ ಮುದಮಂ ಜಪಾಪ್ರಸವ ರಕ್ತಾಶೋಕ ಬಂಧೂಕ ಶೋಣಮಣಿ ಜ್ಯೋತಿಗಳೆಕ್ಕೆಯಿಂ ಕುಡೆ:ಆದಿಪು, ೧೬. ೩)

ಶೋಣಾಶ್ವ

[ನಾ]ಕೆಂಪು ಕುದುರೆ(ಶೋಣಾಶ್ವಂಗಳ್ ರಜತರಥಮಂ ಪೂಡೆ ಕುಂಭಧ್ವಜಂ ಗೀರ್ವಾಣಾವಾಸಂಬರಂ ಅಡರೆ ಮಾಱೊಡ್ಡು ದಲ್ ಸಾಲದು ಎನ್ನೀ ಬಾಣಾವಾಸಕ್ಕೆ ಎನುತುಂ:ಪಂಪಭಾ, ೧೧. ೫೬)

ಶೋಣಿತ

[ನಾ] ರಕ್ತ (ಲೀಲಾಕಮಲಾಕರಾನೀಕ ರಕ್ತಕಮಳಂಗಳಂ ಆಸ್ಯಾನುಶೋಣಿತ ಶೋಣರಿಪುನೃಪಶಿರಂಗಳೆಂದು ತುೞಿಯಿಸಿಯುಂ: ಆದಿಪು, ೮. ೪೧ ವ)

ಶೋಣಿತವಾರಿ

[ನಾ] ರಕ್ತವೆಂಬ ನೀರು (ಭೂತಾಂಗನಾನಿಕರಂ ಶೋಣಿತವಾರಿಯಂ ಕುಡಿದು ಅಗುರ್ವಪ್ಪನ್ನೆಗಂ ಸೂಸೆ: ಪಂಪಭಾ, ೧೨. ೨೫)

ಶೋಣಿತಾರ್ದ್ರ

[ಗು] ರಕ್ತದಿಂದ ತೊಯ್ದ (ವೃಕೋದರ ಗದಾಸಂಚೂರ್ಣಿತ ಊರುಯುಗಳನುಂ ಭೀಮಸೇನಚರಣ ಪ್ರಹರಣಗಳಿತ ಶೋಣಿತಾರ್ದ್ರ ಮೌಳಿಯುಂ ಆಗಿ: ಪಂಪಭಾ, ೧೩. ೧೦೨ ವ)

ಶೋಭನವಿಧೇಯ

[ಗು] ಮಂಗಳಕ್ಕೆ ಅಧೀನವಾದ (ಇಂದಿನ ವಾಸರಮೆ ಶೋಭನವಿಧೇಯವಾಸರಂ ಇಂದಿನ ದಿವಸಮೆಶುಭದಿವಸಾಗ್ರೇಸರಂ: ಆದಿಪು, ೪. ೩೦ ವ)

ಶೋಷಣ

[ನಾ] ಒಣಗಿಸುವ (ಅಶೇಷವಿದ್ಯಾನದೀಶೋಷಣ ಗ್ರೀಷ್ಮಾಂಶುಮಾಲಿ ಮಯೂಖಮಾಲೆಯುಂ: ಆದಿಪು, ೧೪. ೧೨೨ವ)

ಶೌಚ

[ನಾ]ಶುಚಿತ್ವ, ಬ್ರಹ್ಮಚರ್ಯ (ನಡೆದುದು ಬಾಳಕಾಲದೊಳೆ ತೊಟ್ಟು ಎನಗೆ ಅಂಕದ ಶೌಚವೀಗಳ್ ಓಗಡಿಪುದೆ:ಪಂಪಭಾ, ೧೧. ೪೬)

Search Dictionaries

Loading Results

Follow Us :   
  Download Bharatavani App
  Bharatavani Windows App