भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶೌಚಾಂಜನೇಯ

[ನಾ]ಬ್ರಹ್ಮಚರ್ಯಪಾಲನೆಯಲ್ಲಿ ಆಂಜನೇಯನಂತಿರುವವನು (ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕಂ ಅೞ್ಕದ ಶೌಚಾಂಜನೇಯನ ಶೌಚಕ್ಕಂ:ಪಂಪಭಾ, ೯. ೫೨ ವ)

ಶೌಂಡ

[ನಾ] ಆಸಕ್ತನಾದವನು, ಕುಶಲ (ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿಭೂಭೃತ್ ಮದವತ್ ಮಾತಂಗ ಕುಂಭಸ್ಥಳದಳನ ಖರೋಗ್ರ ಅಸಿಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಶೌರ್ಯ

[ನಾ]ಪ್ರತಾಪ(ದೇವರಂ ಅಡಿಗಡಿಗೆ ಎಱಗಿಸಿ ಸಕಳ ಅವನಿತಳದ ಅದಟರಂ ಪಡಲ್ವಡಿಸಿದ ಶೌರ್ಯ ಅವಷ್ಟಂಭದೊಳ್ ಆನಿರೆ ಗೋವಳಿಗಂಗೆ ಅಗ್ರಪೂಜೆಯಂ ನೀಂ ಕುಡುವಾ:ಪಂಪಭಾ, ೬. ೫೭)

ಶೌರ್ಯಮದ

[ನಾ]ಅಷ್ಟಮದಗಳಲ್ಲಿ ಒಂದು (ಅಂತು ಶೌರ್ಯಮದಜ್ವರಂ ಮಂತ್ರಿವರ್ಗವೈದ್ಯವಚನೌಷಧಿಗಳಂ ಪತ್ತುವಿಡೆ:ಆದಿಪು,೧೨. ೧೦೯ ವ)

ಶೌರ್ಯಾರ್ಥಿ

[ನಾ]ಪ್ರತಾಪಾಭಿಲಾಷಿ (ನಡೆ ಕುರುಕ್ಷ್ಮಾಪಾಳನಿರ್ದಲ್ಲಿಗೆ ಎಂದು ಅರವಿಂದಾಲಯೆಯಂ ಮಗುೞ್ಚಿದಂ ಆದೇನಾ ದ್ರೌಣಿ ಶೌರ್ಯಾರ್ಥಿಯೋ:ಪಂಪಭಾ, ೧೩. ೧೦೨)

ಶೌರ್ಯಾವಷ್ಟಂಭ

[ನಾ]ಪರಾಕ್ರಮದ ಹಿರಿಮೆ (ಸಕಳಾವನಿತಳದ ಅದಟರಂ ಪಡಲ್ವಡಿಸಿದ ಶೌರ್ಯಾವಷ್ಟಂಭದೊಳ್ ಆನಿರೆ ಗೋವಳಿಗಂಗೆ ಅಗ್ರಪೂಜೆಯಂ ನೀನು ಕುಡುವಾ:ಪಂಪಭಾ, ೬. ೪೭)

ಶ್ಮಶ್ರು

[ನಾ]ಮೀಸೆ (ಅಭಿನವ ಉದ್ಭಿಜ್ಯಮಾನ ಮೃದುಕುಟಿಲ ಶ್ಮಶ್ರು ಮಧುಕರ ಪಟಳಪರಿವೃತ ಮುಗ್ಧಮುಖಸರಸಿಜನುಂ:ಆದಿಪು, ೩. ೯೦ ವ)

ಶ್ಯಾಮಧೂಮ

[ನಾ] ಕಪ್ಪು ಹೊಗೆ (ಪರೆವಂತಾದುದು ಕಾಳಾಗರು ಧೂಪ ಶ್ಯಾಮಧೂಮಮಾತ್ತವ್ಯೋಮಂ: ಆದಿಪು, ೭. ೭೯)

ಶ್ಯಾಮಲಾಲಂಕೃತ

[ಗು]ಶ್ಯಾಮಲವರ್ಣದಿಂದ ಅಲಂಕಾರಗೊಂಡ (ಒಂದು ಕಾಳಾಗರುಧೂಪಧೂಮಮಲಿನ ಶ್ಯಾಮಲಾಲಂಕೃತ ವಿಚಿತ್ರಭಿತ್ತಿವಿರಾಜಿತಹರ್ಮ್ಯತಳದೊಳ್:ಪಂಪಭಾ, ೪. ೧೦೮ ವ)

ಶ್ಯಾಮಳ

[ನಾ]ಕಪ್ಪು, ಕಡುನೀಲಿ (ಪದಧೂಳೀಕ್ಷೆÆÃಭದಿಂ ದಿಗ್ಯುವತಿ ವದನಮಂ ಶ್ಯಾಮಳಂ ಮಾಡಿ:ಆದಿಪು, ೧೪. ೮೮)

ಶ್ಯಾಮಳಿತ

[ಗು] ಕಪ್ಪಾದ (ದವದಹನಧೂಮಾಧಿಕಶ್ಯಾಮಳಿತ ಉತ್ತಾಳತಾಳಕಾಯಂ ಅತಿವಿಚಿತ್ರತ್ರಪುಮಯ ಪತ್ರಖಚಿತ ಉಚ್ಚಂಡತಾಳಚಾಪದಂಡಂ: ಆದಿಪು, ೧೩. ೪೫ ವ)

ಶ್ಯಾಮಾಕ

[ನಾ]ಸಾವೆ (ಕಳಮ ಷಷ್ಟಿಕಾವ್ರೀಹಿ ಯವ ಯಾವನಾಳ ಗೋಧೂಮ ಕಂಗು ಶ್ಯಾಮಾಕ ಕೋದ್ರವ ನೀವಾರ ತಿಳ ಅತಸಿ ಮಸೂರಿಕಾ:ಆದಿಪು,೬. ೭೨ ವ)

ಶ್ಯಾಮಾಂಗಿ

ಕಪ್ಪು ದೇಹದವಳು (ಬನಮಂ ಕೋಗಿಲೆ ಜಕ್ಕವಕ್ಕಿ ಪಗಲಂ .. .. ನೆನೆವಂತೆ ಆಂ ನೆನೆವೆಂ ಸರೋಜಮುಖಿಯಂ ಶ್ಯಾಮಾಂಗಿಯಂ ನಲ್ಲಳಂ: ಆದಿಪು, ೧೨. ೩೧)

ಶ್ರಮಾಂಬುಲವ

[ನಾ]ಬೆವರ ಕಣ (ದುಗ್ಧಸಿಂಧುಪ್ಲವಂ ಶ್ರಮಾಂಬುಲವಮೊಂದುಮಂ ನಿನಗೆ ಪುಟ್ಟಿಸಲ್ಕಾರ್ತುದಿಲ್ಲ:ಆದಿಪು, ೧೩. ೮೩)

ಶ್ರಮಾಂಭಃಕಣ

[ನಾ]ಬೆವರ ಹನಿ (ಚಮರರುಹ ಪವನ ಪರಂಪರೆಯೊಳಂ ಆಱದೆ ನೃಪಸೌಂದರೀಶ್ರಮಾಂಭಃ ಕಣಂಗಳುಣ್ಮಿದವಾಗಳ್:ಆದಿಪು, ೧೧. ೫೨)

ಶ್ರಯಣೀಯ

[ನಾ]ಆಶ್ರಯಿಸಿದವನು, ಸೇರಿದವನು (ನಯಶಾಲಿ ವತ್ಸಗೋತ್ರ ಶ್ರಯಣೀಯಂ ಅನೇಕ ಸಕಳಶಾಸ್ತ್ರಾರ್ಥ ವಿನಿಶ್ಚಯಂ ಅತಿಕೃತಿ ಮಾಧವಸೋಮಯಾಜಿ ಸಲೆ ನೆಗೞ್ದಂ;ಪಂಪಭಾ,೧೪. ೪೨)

ಶ್ರವಣ

[ನಾ] ಶ್ರವಣೇಂದ್ರಿಯ, ಕಿವಿ (ವಾಜಿರಾಜಿಶ್ರವಣ ಚಮರಜಶ್ರೇಣಿಸಂವೀಜಿತ ಆಶಾಂಬರಭಾಗಂ: ಆದಿಪು, ೪. ೨೪); [ನಾ] ಕೇಳುವಿಕೆ (ಅಂತು ನಿಜತನೂಜನ ಮರಣಶ್ರವಣಾಶಘಾತನಿಘಾತದಿಂ ಕುಳಶೈಲಂ ಕೆಡೆವಂತೆ ಕೆಡೆದು: ಪಂಪಭಾ, ೧೧. ೧೦೬ ವ)

ಶ್ರವಣಸುಖ

[ನಾ]ಕೇಳಲು ಹಿತಕರವಾದುದು (ಭವದಗ್ರಜ ದಿಗ್ವಿಜಯೋತ್ಸವಂ ಅಧಿಕಮಹೋತ್ಸವಂ ವಲಂ ನಿನಗಾದುದು ಶ್ರವಣಸುಖಮೆಂದೆ ದಿಙ್ಮಾತ್ರ ವರ್ಣನಂಗೆಯ್ವೆಂ ಉಂತದೇನೆನ್ನಳವೇ:ಆದಿಪು, ೧೪. ೫೧)

ಶ್ರವ್ಯ

[ನಾ]ಕೇಳಲು ಯೋಗ್ಯವಾದ (ವಿಚಾರಕ್ಷಮಂ ಉಚಿತಪದಂ ಶ್ರವ್ಯಂ ಅವ್ಯಾಕುಲಂ ವ್ಯಾಪ್ತದಿಗಂತಂ ಕಾವ್ಯಮೆಂದು ಅನ್ವಿತಸುಕವಿಜನಂ ಮೆಚ್ಚೆ ನಿಚ್ಚಂ:ಆದಿಪು,೧. ೨೬);[ನಾ]ನಾಟಕ ಪ್ರಯೋಗದ ಒಂದು ಭಾಗ ? (ದೃಶ್ಯಶ್ರವ್ಯ ದೃಢಸೂತ್ರಾದಿ ಪ್ರಯೋಗಂಗಳೊಳಂ ನಾನಾವಿಧ ವಾದ್ಯಂಗಳೊಳಂ:ಆದಿಪು, ೭. ೧೧೫ ವ)

ಶ್ರಾಂತ

[ಗು]ಬಳಲಿದ (ವಿದಿತ ಪ್ರತ್ಯಕ್ಷನಾಶಾಕರಿನಿಕಟತಟ ಶ್ರಾಂತದಾನಂ ಭರಂಗೆಯ್ದಿದಿರೊಳ್ ವಿಕ್ರಾಂತತುಂಗಂ ಹರಿಗನಿರೆ:ಪಂಪಭಾ,೬. ೭೭)

Search Dictionaries

Loading Results

Follow Us :   
  Download Bharatavani App
  Bharatavani Windows App