भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶ್ರಾವಕ

[ನಾ] [ಜೈನ] ಜೈನ ಗೃಹಸ್ಥ (ಮೂಱುಲಕ್ಕೆ ದೃಢಬ್ರತಾದಿ ಶ್ರಾವಕರುಂ ಅಯ್ದುಲಕ್ಕೆ ಸುವ್ರತೆ ಮೊದಲಾಗೆ ಅಯ್ದು ಲಕ್ಕೆ ಪರಮಶ್ರಾವಕಿಯರುಂ: ಆದಿಪು, ೧೬. ೪೦ ವ)

ಶ್ರಾವಕವ್ರತ

[ನಾ] [ಜೈನ] ಜೈನ ಗೃಹಸ್ಥರು ಅನುಸರಿಸಬೇಕಾದ ಕಟ್ಟಳೆಗಳು: ಪಂಚಾಣುವ್ರತಗಳು, ಮೂರು ಗುಣವ್ರತಗಳು, ನಾಲ್ಕು ಶಿಕ್ಷಾವ್ರತಗಳು (ಆ ಮುಮುಕ್ಷÄಗಳ ಸಮಕ್ಷದೊಳವರ ಪೇೞ್ದ ಮಾೞ್ಕೆಯೊಳೆ ಪರಮಜಿನಪತಿ ಪರಿಭಾಷಿತಮಪ್ಪ ಸಕಳಶ್ರಾವಕವ್ರತಂಗಳಂ: ಆದಿಪು, ೩. ೪೦ ವ)

ಶ್ರಾವಕಾಗ್ರಣಿ

[ನಾ] [ಜೈನ] ಶ್ರೇಷ್ಠ ಜೈನಗೃಸ್ಥ (ಕ್ರಿಯಾಮಂತ್ರಂಗಳಿಂದಂ ಆತ್ಮಸಮಾನ ಶ್ರಾವಕಾಗ್ರಣಿಗಳ್ಗೆ ಕನ್ಯಾ ಭೂಮಿ ಸುವರ್ಣ ಹಸ್ತಿ ಅಶ್ವ ರಥ ರತ್ನಾದಿಗಳಂ ಕುಡುವ ಸಮದತ್ತಿಯುಂ: ಆದಿಪು, ೧೫. ೧೩ ವ)

ಶ್ರಾವಕಿ

[ನಾ] [ಜೈನ] ಜೈನ ಗೃಹಸ್ಥೆ (ಮೂಱುಲಕ್ಕೆ ದೃಢಬ್ರತಾದಿ ಶ್ರಾವಕರುಂ ಅಯ್ದುಲಕ್ಕೆ ಸುವ್ರತೆ ಮೊದಲಾಗೆ ಪರಮಶ್ರಾವಕಿಯರುಂ: ಆದಿಪು, ೧೬. ೪೦ ವ)

ಶ್ರಾವಿಕಾ

[ನಾ] [ಜೈನ] ಶ್ರಾವಕಿ, ಗೃಹಸ್ಥಧರ್ಮಗಳನ್ನು ಪಾಲಿಸುವವಳು (ಮುನಿನಾಥರ್ ಕಲ್ಪಕಾಂತಾಜನತತಿ ಗಣಿನೀಶ್ರಾವಿಕಾಸಂಕುಳಂ ಭಕ್ತಿನಮಜ್ಜ್ಯೋತಿಷ್ಕದೇವೀಪ್ರತತಿ: ಆದಿಪು, ೧೦. ೩೬)

ಶ್ರೀ

[ನಾ] ಲಕ್ಷ್ಮಿ (ತಾಮರಸಕರಪಯೋಜಾಶ್ರಿತ ಶ್ರೀಯಂ ಆಳೋಕಗತಾಂಶುವ್ರಾತರತ್ನೋಜ್ಜ್ವಳಸುರತರುವಂ ಸ್ವಪ್ನದೊಳ್ ದೇವಿ ಕಂಡಳ್: ಆದಿಪು, ೮. ೨೬); [ನಾ] ಐಶ್ವರ್ಯ (ಶ್ರೀಗೆ ನೆಗೞ್ತೆಗೆ ವೀರಶ್ರೀಗಾಗರಂ ಅಪ್ಪೆನೆಂಬ ಕಳಕಳವಿಜಯೋದ್ಯೋಗದೊಳೆ ನೆಗೞ್ವೆನೆಂಬುದ್ಯೋಗಿಗೆ: ಪಂಪಭಾ, ೯. ೧)

ಶ್ರೀಖಂಡ

[ನಾ]ಶ್ರೀಗಂಧ (ವೀರಶ್ರೀಭುಜಂಗೀಸಮಾಶ್ರಯಶ್ರೀಖಂಡಕಾಂಡಗಳುಮಪ್ಪದೋರ್ದಂಡಂಗಳಿಂದಂಅತಿನಿಬಿಡಾಲಿಂಗನಂಗೆಯ್ದುಕಾರ್ಯಮಂಬೆಸಸಿರ್ಕುಂ:ಆದಿಪು,೧೪.೪೬ವ)

ಶ್ರೀಖಂಡಷಂಡ

[ನಾ]ಶ್ರೀಗಂಧದ ಮರಗಳ ತೋಪು (ಸಿದ್ಧದಂಪತಿಗಳ್ ಕ್ರೀಡಿಸುತ್ತಿರ್ಪರೀ ನಗತಟ ಶ್ರೀಖಂಡಷಂಡಂಗಳೊಳ್:ಆದಿಪು, ೯. ೧೧೮)

ಶ್ರೀತಾಳಿಕ

[ನಾ]ತಾಳೆಮರ (ಮನಸಿಜ ವಿಜಯಪ್ರಶಸ್ತಿ ಲೇಖನೋಚಿತಚ್ಛದ ಶ್ರೀತಾಳಿಕಮುಮಪ್ಪ ವೇಳಾವನದೊಳ್ ಆವಾಸಿತವಿಜಯಕಟಕನಾಗಿ:ಆದಿಪು, ೧೩. ೩ ವ)

ಶ್ರೀದಯಿತ

[ನಾ]ಲಕ್ಷ್ಮೀಪತಿ, ಭರತಚಕ್ರವರ್ತಿ (ಶ್ರೀದಯಿತಂ ಮನುಕುಲಗಗನಾದಿತ್ಯಂ ಹಿಮಮನೆಯ್ದೆ ಷಟ್ಖಂಡಮುಮಂ ಸಾಧಿಸಿ ಜಿತದಿಙ್ಮಂಡಲನಾದ ಮಹಾತ್ಮಂ ಸರಸ್ವತೀ ಮಣಿಹಾರಂ:ಆದಿಪು, ೧೫. ೧)

ಶ್ರೀನಾರೀವಲ್ಲಭ

[ನಾ]ಸಂಪತ್ತೆಂಬ ಸ್ತ್ರೀಗೆ ಒಡೆಯ, ಅರ್ಜುನ (ಶ್ರೀನಾರೀವಲ್ಲಭಂ ಅಭಿಮಾನಧನಂ ಹರಿಗಂ:ಪಂಪಭಾ, ೧೦. ೧)

ಶ್ರೀಪತಿ

[ನಾ] [ಜೈನ] ವೃಷಭಸ್ವಾಮಿ (ಶ್ರೀಪತಿ ಸುರದಾರಕರೊಡನಾಪೊತ್ತುಂ ನೆರೆದು ರತ್ನಧೂಳೀ ಪಟಲವ್ಯಾಪಿತತನು ಮೃದುಮುಗ್ಧಾಳಾಪಂ ಬಳೆದಂ: ಆದಿಪು, ೮. ೧)

ಶ್ರೀಪ್ರಭ

[ನಾ] ಆ ಹೆಸರಿನ ವಿಮಾನ (ಇದು ದೇವೇಂದ್ರನಿವಾಸಂ ಎನ್ನ ನೆಲೆಯುಂ ಶ್ರೀ ಶ್ರೀಪ್ರಭಂ ಮುಂದೆ ನಿಂದಿದು ದೇವವ್ರಜಂ: ಆದಿಪು, ೨. ೬೭)

ಶ್ರೀರಾಮಾ

[ನಾ]ಲಕ್ಷ್ಮಿ ಎಂಬ ವನಿತೆ (ಶ್ರೀರಾಮಾಲಂಗಿತ ವಿಪುಳೋರಸ್ಕಂ ಭಾಸ್ಕರಪ್ರತಾಪಂ ನಿಜದೋರ್ಮೇರುಮಥಿತ ಅರಿಬಳಕೂಪಾರಂ:ಪಂಪಭಾ, ೧೪. ೧)

ಶ್ರೀವಧು

[ನಾ]ಲಕ್ಷ್ಮಿ(ತವೆ ಮಾಱಾಂತ ಬಲಂ ಕಱುತ್ತಿಱಿದು ತನ್ನಾಳ್ದಂ ಕರಂ ಮೆಚ್ಚೆ ಗೆಲ್ದವನಂ ಶ್ರೀವಧು ಪತ್ತುಗುಂ:ಪಂಪಭಾ, ೧೦. ೪೪)

ಶ್ರುತ

[ಗು] ಕೇಳಿದ (ಅವರನೆ ತಿಳಿಪುವ ಬಗೆಯಿಂ ದೃಷ್ಟ ಶ್ರುತ ಅನುಭೂತಕಥೆಗಳಂ ತದನ್ವಯಸಂಬಂಧಿತಂಗಳಂ ಇಂತೆಂದು ಪೇೞಲ್ ತಗುಳ್ದಂ: ಆದಿಪು, ೨. ೧೧ ವ); [ನಾ] ವಿದ್ಯೆ (ಅಭಯರ್ ನಿರೋಗರುಂ ಶ್ರುತವಿಭವಸಮನ್ವಿತರುಮಪ್ಪರ್ ಎಂಬುದು ಪಿರಿದಲ್ತು ಭವಾಂಬುಧಿಯುಮನೀಸುವರ್ ಅಭಯೌಷಧಶಾಸ್ತ್ರದಾನಫಳವಿಳಸನದಿಂ: ಆದಿಪು, ೧೦. ೧೧)

ಶ್ರುತಜ್ಞಾನ

[ನಾ] [ಜೈನ] ಓದಿ ಕೇಳಿ ಪಡೆಯುವ ಜ್ಞಾನ (ನೋಂಪಿಯ ವಿಶ್ರುತಶ್ರುತಜ್ಞಾನಮುಮಂ ಯಥೋಚಿತವಿಧಿಯಿಂ ನೋಂತು ಮದೀಯ ಆಯುಷ್ಯಾವಸಾನದೊಳ್ ಈಶಾನಕಲ್ಪದೊಳ್: ಆದಿಪು, ೩. ೪೦ ವ)

ಶ್ರುತದೇವಿ

[ನಾ] ಸರಸ್ವತಿ (ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂಧಸಂತತಿ ಶಶ್ವಚ್ಛ್ರುತಪಾರಗಶ್ರುತಿ ಮಹೋರ್ಮ್ಯುಲ್ಲಾಸಿ: ಪಂಪಭಾ, ೧೪. ೩೨)

ಶ್ರುತಪಾರಗ

[ನಾ]ವೇದಪಾರಂಗತ (ಒಡಮೆಯನರ್ಥಿಗಿತ್ತೆಂ .. .. ಈಗಳೊಂದಕ್ಕೆಡೆಯಿಲ್ಲ ಕೈಯೊಳೆರೆದಂ ಶ್ರುತಪರಗನೆಂತು ಸಂತಸಂಬಡಿಸುವೆಂ .. .. ಕುಂಭಸಂಭವಾ:ಪಂಪಭಾ,೨. ೪೬)

ಶ್ರುತಸ್ಕಂದ

[ನಾ][ಜೈನ] ತೀರ್ಥಂಕರರ ಉಪದೇಶದಿಂದ ಗಣಧರರು ಬರೆದ ದ್ವಾದಶಾಂಗ ಸೂತ್ರಗಳು: ಇದರಲ್ಲಿ ನಾಲ್ಕು ವಿಭಾಗ: ತ್ರಿಷಷ್ಟಿಶಲಾಕಾಪುರುಷರ ಚರಿತ್ರೆಗಳನ್ನೊಳಗೊಂಡ ಮೊದಲ ವಿಭಾಗ [ಪ್ರಥಮಾನುಯೋಗ], ಮೂರುಲೋಕಗಳ ಪ್ರಮಾಣ ಮೊದಲಾದ ವಿವರಗಳಿರುವ ಎರಡನೆಯ ವಿಭಾಗ [ಕರಣಾನುಯೋಗ], ಜೈನಮುನಿಗಳೂ ಶ್ರಾವಕರೂ ಅನುಸರಿಸಬೇಕಾದ ಆಚಾರಗಳ ವಿವರವಿರುವ ಮೂರನೆಯ ವಿಭಾಗ [ಚರಣಾನುಯೋಗ] ಮತ್ತು ಜೀವಾದಿದ್ರವ್ಯಗಳ ವಿವರಣೆಯಿರುವ ನಾಲ್ಕನೆಯ ವಿಭಾಗ [ದ್ರವ್ಯಾನುಯೋಗ] (ಅನುಯೋಗಕುಸುಮಪಾದಪಂ ಅನೇಕನಯಲತಿಕ ಮಂಗಳಫಲಮಹೀಜಂ ಸದ್ವನಜವನಮೆಮಗೆ ವಿಶ್ರಮವನಮಕ್ಕತಿವಿಶ್ರುತ ಶ್ರುತಸ್ಕಂಧವನಂ:ಆದಿಪು, ೧. ೧೦)

Search Dictionaries

Loading Results

Follow Us :   
  Download Bharatavani App
  Bharatavani Windows App