भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶ್ರುತಿ

[ನಾ]ಕಿವಿ (ಶ್ರುತಿಸೌಖ್ಯಾವಹ ವಲ್ಲಕೀಕ್ವಣಿತದೊಳ್ ಕರ್ಪೂರಪಾಳೀವಿಮಿಶ್ರಿತ ತಾಂಬೂಳರಸೋತ್ಕಟ ಪ್ರಮದದೊಳ್:ಆದಿಪು, ೯. ೧೧೮)

ಶ್ರುತಿಸ್ಮೃತಿ

[ನಾ] ವೇದ ಮತ್ತು ಧರ್ಮಶಾಸ್ತ್ರ (ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ: ಪಂಪಭಾ, ೨. ೩೬ ವ)

ಶ್ರೇಢಿ

[ನಾ]ಶ್ರೇಣಿ, ನಾಡುಗಳ ಸಮೂಹ (ದಕ್ಷಿಣೋತ್ತರ ಶ್ರೇಢಿಗಳ್ಗೆ ರಾಜಧಾನಿಗಳಾಗಿರ್ದ ರಥನೂಪುರಚಕ್ರವಾಳ ಗಗನವಲ್ಲಭಾದಿಗಳಪ್ಪ ನೂಱಿಪತ್ತುಂ ಪೊೞಲ್ಗಳಂ:ಆದಿಪು, ೧. ೬೨ ವ)

ಶ್ರೇಢೀಬದ್ಧ

[ಜೈನ] ನರಕಬಿಲಗಳಲ್ಲಿ ಒಂದು ಬಗೆ (ಆ ಬಿಲಂಗಳುಂ ಇಂದ್ರಕ ಶ್ರೇಢೀಬದ್ಧ ಪ್ರಕೀರ್ಣಕಂಗಳೆಂದು ಮೂಱು ತೆಱನಕ್ಕುಂ: ಆದಿಪು, ೫. ೮೩ ವ)

ಶ್ರೇಣಕಾ[ಕೆ]

[ನಾ]ಗುಂಪು (ಬುಧಜನಪ್ರೀಣನಾಗ್ರೇಸರ ಗ್ರಾಮಣಿಯಾದಮ ದಾನಚಿಂತಾಮಣಿ ಗುಣಮಣಿ ಶ್ರೇಣಿಕಾಶ್ರೇಣಿಯಿಂದಂ:ಆದಿಪು, ೧೨. ೧೫)

ಶ್ರೇಣಿ

[ನಾ] ಸಾಲು, ಗುಂಪು (ವಾಜಿರಾಜಿಶ್ರವಣ ಚಮರಜಶ್ರೇಣಿ ಸಂವೀಜಿತ ಆಶಾಂಬರಭಾಗಂ: ಆದಿಪು, ೪. ೨೪)

ಶ್ರೇಯಸಃ

ಶುಭವನ್ನುಳ್ಳ (ವಾತ್ಯಾದುರ್ಧರಗಂಧಸಿಂಧುರಕಟಸ್ರೋತಃಸಮುದ್ಯತ್ಮದವ್ರಾತೇಂದಿಂದಿರಚಂಡತಾಂಡವಕಲಸ್ವಾಭಾವಿಕಶ್ರೇಯಸಃ:ಪಂಪಭಾ,೯.೯೭)

ಶ್ರೇಯೋಗೃಹ

[ನಾ]ಶ್ರೇಯಾಂಸನ ಮನೆ ಮತ್ತು ಶ್ರೇಯಸ್ಸಿನ ಆಗರ (ಪೆರ್ಚಿದ ತನ್ನುತ್ತಮಭಕ್ತಿಯಿಂ ನಿಲಿಪುದುಂ ಶ್ರೇಯೋಗೃಹದ್ವಾರದೊಳ್ ನಿಧಿ ನಿಲ್ವಂತಿರೆ ನಿಂದಂ ಊರ್ಜಿತಗುಣಂ:ಆದಿಪು, ೯. ೧೩೩)

ಶ್ರೋತ್ರ

[ನಾ] ಕಿವಿ (ಶ್ರೋತ್ರಮಂ ಮುಟ್ಟಿದುದು ಎತ್ತಂ ರಾಜರಾಜಪ್ರಬಳಬಲಪಯೋರಾಶಿ ಗಂಭೀರನಾದಂ: ಆದಿಪು, ೧೪. ೯೩)

ಶ್ರೌತ

[ಗು]ಶ್ರಾವ್ಯ, ಕೇಳಲ್ಪಡುವ, ಶ್ರೇಷ್ಠ (ಶ್ರೌತಮಿದು ತನಗೆ ಗಂಗಾಸ್ರೋತದವೊಲ್ ಅಳುಂಬಮಾಗಿ ಗೆಡೆಗೊಳ್ಳದೆ ವಿಖ್ಯಾತ ಕವಿವೃಷಭ ವಂಶೋದ್ಭೂತಮೆನಲ್ ಬರಿಸದೊಳ್ ಸಮೆವಿನೆಗಂ:ಪಂಪಭಾ, ೧೪. ೫೨)

ಶ್ಲಕ್ಷ್ಣ

[ಗು]ನುಣುಪಾದ (ಅಪ್ರಿಣಾಕ ಭಾವಿಳಶ್ಲಿಸ್ಥಿತಚಳನುಂ ಶ್ಲಕ್ಷ್ಣ ಸ್ನಿಗ್ಧ ಮೃದು ಬಹಳಚ್ಛವಿಯುಂ ಬಂಧುಜೀವ ಶಾಕ ಪುಷ್ಟ ಸಪದ್ಮಮಹಾರಜಶಂಖಾಸತಳವೆಂಬ ಸಪ್ತದ್ವಾಸ್ಥಿತನುಂ:ಆದಿಪು, ೧೨. ೫೬ ವ)

ಶ್ವದಂಷ್ಟ್ರ

[ನಾ]ನಾಯಿಯ ಹಲ್ಲು (ಶ್ವದಂಷ್ಟ್ರಾರ್ಗಳೋಪರಿಮ ಸಂಛನ್ನಂಗಳುಂ ಅಪ್ಪ ಯಂತ್ರಾಯುಧಾವರಣೋಪಕರಣ ಪರಿಣತಂಗಳಾಗಿರ್ದ ದುರ್ಗಂಗಳೊಳ್:ಆದಿಪು, ೧೩. ೫೭ ವ)

ಶ್ವಭ್ರ

[ನಾ]ನರಕ (ಧರ್ಮಕೃತಿದ್ರೋಹನುಂ ಖಳನುಂ ಕಳ್ಕುಣಿಯುಂ ಘಳುಮ್ಮನಿೞಿಗುಂ ಶ್ವಭ್ರಾಂತಮಂ ತಾಪಿನಂ:ಆದಿಪು, ೫. ೮೧)

ಶ್ವಯು

[ನಾ]ಹೆಬ್ಬಾವು (ಶ್ವಯುವಾಗಿ ಪುಟ್ಟಿ ಸುೞಿಗುಂ ಮುಂ ಬಯ್ತ ಭಂಡಾರದೊಳ್:ಆದಿಪು, ೨. ೧೫)

ಶ್ವಸನ

[ನಾ] ಮಾರುತ, ಗಾಳಿ (ಯಮುನಾನದೀತರಂಗಮಂ ಅಮುಂಕಿ ವನಲತೆಯ ಮನೆಗಳಂ ಸೋಂಕಿ ವನಭ್ರಮಣ ಪರಿಶ್ರಮಮಂ ಮುನ್ನಮೆ ಕಳೆದುದು ಬಂದದೊಂದು ಮಂದಶ್ವಸನಂ: ಪಂಪಭಾ, ೫. ೫೩)

ಶ್ವೇತಕೃಷ್ಣಕಾರಕ

[ನಾ]ಬಿಳಿಯಾದುದನ್ನು ಕರಿಯದಾಗಿ ಮಾಡುವವನು, ವಂಚಕ (ಈತಂ ಅಜಮುಖವ್ಯಾಘ್ರಂ ಶ್ವೇತಕೃಷ್ಣಕಾರಕಂ ಈತನ ಮಾತು ಮಾತಲ್ಲ:ಪಂಪಭಾ, ೫. ೭೨ ವ)

ಶ್ವೇತಾತಪತ್ರ

[ನಾ] [ಶ್ವೇತ+ಆತಪತ್ರ] ಬೆಳ್ಗೊಡೆ (ಇದಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದೞ್ಕಾಡಿತ್ತು: ಪಂಪಭಾ, ೧೨. ೧೫೬)

ಶ್ವೇತಾಶ್ವ

ಬಿಳಿಯ ಕುದುರೆ (ದಿವ್ಯಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯರಥಮುಮಂ ದಧೀಚಿಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ .. .. ಕೆಯ್ಕೊಂಡು:ಪಂಪಭಾ, ೫. ೭೭ ವ)

Search Dictionaries

Loading Results

Follow Us :   
  Download Bharatavani App
  Bharatavani Windows App