Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಶಾಳಿವನ
[ನಾ] ಬತ್ತದ ಗದ್ದೆ (ಶಾಳಿವನಗಧಾಂಧದ್ವಿರೇಫಾಳಿ ಕಣ್ಗೊಳಿಸಿತ್ತೊರ್ಮೆಯೆ ಬಂದುದಂದು ಶರದಂ: ಪಂಪಭಾ, ೭. ೭೧)
ಶಿಕ್ಷಾವ್ರತ
[ನಾ] [ಜೈನ] ಶ್ರಾವಕರು ಅನುಸರಿಸಬೇಕಾದ ನಾಲ್ಕು ವ್ರತಗಳು: ಸಮತೆ [ಸಾಮಯಿಕ], ಪ್ರೋಷಧ [ಪ್ರೋಷಧೋಪವಾಸ], ಅತಿಥಿಸಂಗ್ರಹ [ಉಪಭೋಗಾತಿಥಿಸಂವಿಭಾಗ] ಮತ್ತು ಮರಣಕಾಲದಲ್ಲಿ ಸಂನ್ಯಾಸ ಸ್ವೀಕಾರ [ಪಶ್ಚಿಮ ಸಲ್ಲೇಖನ] (ವಿವಿಧ ಪ್ರಾಣಿಗಣಂಗಳೊಳ್ ಸಮತೆ ಸಂದಾಹಾರದಾನಂ ಜಿನಸ್ತವನಕ್ಕಂ ಜಿನಪೂಜೆಗಂ ಮನಮನೊಲ್ದೋರಂತೆ ತಂದಾದಮುತ್ಸವದಿಂ ನೋಂಪುದು ಜೀವಿತಾಂತ್ಯದೆಡೆಯೊಳ್ ಸನ್ಯಾಸಮಂ ಮಾೞ್ಪುದು ಎಂಬಿವು ನೇರ್ಪಟ್ಟೆಸೆವಿನೆಗಂ ನೆಗೞ್ದುವಂ ಶಿಕ್ಷಾವ್ರತಂ ನಾಲ್ಕುಮಂ: ಆದಿಪು, ೬. ೯)
ಶಿಖಂಡ
[ನಾ] ಮುಡಿ (ಆತ್ಮೀಯ ಶಿಖಂಡ ಮಣಿಮರೀಚಿಗಳಿಂ ನಿಜಪದಕಮಳದೊಡನೆ ವಸುಂಧರೆಯುಮಂ ಅಳಂಕರಿಸಿದ ವಸುಧರೆಯುಮಂ: ಆದಿಪು, ೪. ೨೪ ವ)
ಶಿಖಂಡಮಂಡನಮಣಿ
[ನಾ] ತಲೆಯಲ್ಲಿ ಧರಿಸುವ ಆಭರಣ (ಎಂದು ಮನುನರೇಂದ್ರವೃಂದಾರಕ ಶಿಖಂಡಮಂಡನ ಮಣಿಯೆನಿಸಿದ ಬಾಹುಬಲಿಕುಮಾರಂ: ಆದಿಪು, ೧೪. ೮೨ ವ)
ಶಿಖಂಡಮಣಿ
[ನಾ] ಶಿಖಂಡಮಂಡ£ಮಣಿ (ಆತ್ಮೀಯ ಶಿಖಂಡಮಣಿ ಮರೀಚಿಗಳಿಂ ನಿಜಪದಕಮಲದೊಡನೆ ವಸುಂಧರೆಯುಮಂ ಅಳಂಕರಿಸಿದ ವಸುಂಧರೆಯುಮಂ: ಆದಿಪು, ೪. ೨೪ ವ)
ಶಿಖಂಡರತ್ನ
[ನಾ] ತಲೆಮಣಿ (ಆಸ್ಥಾನಮಂಡಪ ಮಂಡನೀಭೂತ ಮಣಿಮಯಾಸನ ಪ್ರಾಚ್ಯಾಚಳ ಶಿಖಂಡರತ್ನಮಾಗಿರ್ದ ಕುಮಾರನಂ: ಆದಿಪು, ೮. ೮ ವ)
ಶಿಖಂಡಿ
[ನಾ] ನವಿಲು (ಶುಕ ಶಿಖಂಡಿ ಹಂಸ ಸಾರಸ ಕ್ರೌಂಚ ಕರಿ ಕಳಭ ಮಲ್ಲಾದ್ಯನೇಕ ಆಕಾರವಿಕೃತಾಮರಕುಮಾರ ಪರಿಪಠನ ನಟನ ಮೃದುಕೂಜಿತ: ಆದಿಪು, ೮. ೩ ವ); [ನಾ] ದ್ರುಪದನ ಮಗ, ನಪುಂಸಕ, ಷಂಡ (ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳ್: ಪಂಪಭಾ, ೧. ೮೦ ವ)
ಶಿಖಂಡಿತಾಂಡವ
[ನಾ] ನವಿಲ ಕುಣಿತ (ಪರಿಪಕ್ವ ರಾಜಜಂಬೂ ದ್ರುಮವಿಸ್ತಾರಂ ಶಿಖಂಡಿತಾಂಡವಸಾರಂ ನವಜಳದಸಮಯಂ ಏನೆಸೆದಪುದೋ: ಆದಿಪು, ೧೧. ೮೮)
ಶಿಖರ
[ನಾ] ತುದಿ (ತೃಣಶಿಖರ ಅಧ್ಯುಷಿತಾಂಭಃಕಣಸಂಚಳಂ ಅಮರಚಾಪಚಪಳಂ ವಿದ್ಯುತ್ ಕ್ಷಣಿಕಂ: ಆದಿಪು, ೪. ೭೫)
ಶಿಖರಿ
[ನಾ] ಶಿಖರವುಳ್ಳದ್ದು, ಬೆಟ್ಟ (ಗಗನತಳಮಂ ತಱುಂಬುವಂತಿರ್ದ ಶಿಖರಿಶಿಖರಂಗಳಿಂದಂ: ಪಂಪಭಾ, ೭. ೨೯ ವ)
ಶಿಖರಿಣಿ
[ನಾ] ಒಂದು ಭಕ್ಷ್ಯ, ಸೀಕರಣೆ (ಏಕೀಭೂತ ಸಕಳಭುವನ ಶಿಶಿರದ್ರವ್ಯಸಂಬಾರದ್ರವ್ಯಶಂಕಾಕರ ಶಿಖರಿಣೀ ರಮಣೀಯಮುಮಂ: ಆದಿಪು, ೧೧. ೨೬ ವ)
ಶಿಖಾಕಳಾಪ
[ನಾ] ಬೆಂಕಿಯ ನಾಲಗೆಗಳ ಸಮೂಹ (ಅಗ್ನಿದೇವನ ಶಿಖಾಕಳಾಪದ ಕೋಳುಮಂ ಎಂತಾನುಂ ಬಂಚಿಸಿ ಬಲೆಪಱಿದ ಕೋಕನಂತೆ ಒರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು: ಪಂಪಭಾ, ೫. ೯೩ ವ)
ಶಿಖಾನೀಕ
[ನಾ] [ಶಿಖಾ+ಆನೀಕ] ಜ್ವಾಲೆಗಳ ಮಾಲೆ (ಮುಳಿದೆಚ್ಚಾಗಳ್ ಮಹೋಗ್ರಪ್ರಳಯ ಶಿಖಿಶಿಖಾನೀಕಮಂ ವಿಸ್ಫುಲಿಂಗಂಗಳುಮಂ ಬೀಱುತ್ತುಂ: ಪಂಪಭಾ, ೧೨. ೨೧೩)
ಶಿಖಾವಳ
[ನಾ] ನವಿಲು (ಪೊಳೆವಿನಕಿರಣಂ ಮೆಯ್ಗಳನಳುರೆ ಕನಲ್ದಗಿದು ಸೋಗೆಯಂ ಪರಪಿ ನೆೞಲ್ಗಳನಾಸೆವಡೆ ಶಿಖಾವಳಕುಳತಾಂಡವಮೆಸೆದುದು ಶರತ್ಸಮಯದೊಳ್: ಆದಿಪು, ೧೧. ೫೧)
ಶಿಖಿ
[ನಾ] ಬೆಂಕಿ (ಕ್ರಂದತ್ ಸ್ಯಂದನ ಜಾತ ನಿರ್ಗತ ಶಿಖಿಜ್ವಾಳಾಸಹಸ್ರಂಗಳ್ ಆಟಂದೆತ್ತಂ ಕವಿದೇೞ್ವ ಬೇವ ಶವಸಂಘಾತಂಗಳಂ: ಪಂಪಭಾ, ೧೩. ೭೧); [ನಾ] ನವಿಲು (ಭವ್ಯನೃಪನಿಕರಮದೇನೆಂಬುತ್ಸಾಹದೆ ನಲಿದುದೊ ಸಾಂಬುಪಯೋಧರಕೆ ನಲಿವ ಶಿಖಿನಿಕರದವೊಲ್: ಆದಿಪು, ೧೦. ೧೨)
ಶಿಖೆ
[ನಾ] ಜ್ವಾಲೆ (ಬನಮನಿತುಂ ಶಿಖೆಗಳಲುರೆ ಬೆಂಕೆಯ ಪೊಯ್ದುರ್ವಿನೊಳೆ ಕೊರಗಿರ್ದ ಲತೆಗಳ ನನೆಕೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ: ಪಂಪಭಾ, ೫. ೮೭)
ಶಿಂಜಿತ
[ನಾ] ಧ್ವನಿ (ಸುರಗಣಿಕಾ ಗುಂಜನ್ಮಣಿ ರಶನಾಮಣಿ ಮಂಜೀರ ಮಂಜುಶಿಂಜಿತಂ ರಂಜಿಸುಗುಂ: ಆದಿಪು, ೮. ೧೮)
ಶಿತಶರ
[ನಾ] ಹರಿತವಾದ ಬಾಣ (ಪೂಣ್ದಂತೆ ಊಡು ಪೂಡು ಶಿತಶರಸಂತತಿಯಂ ಬಿಲ್ಲೊಳೇಕೆ ನೀಂ ತಡೆದಿರ್ಪಯ್: ಪಂಪಭಾ, ೫. ೮೩)
ಶಿತಾಸ್ತ್ರ
[ನಾ] ಚೂಪಾದ ಬಾಣ [ಆಯುಧ] (ದಿವಿಜರ್ ವಾಯುಪಥದೊಳ್ ಶಿತಾಸ್ತ್ರಂಗಳಂ ಪೊಂಕಂಗಿಡಿಸೆ ಸುಗಿದಂ ಭಾರ್ಗವಂ ಇದೇಂ ಪ್ರತಿಜ್ಞಾಗಾಂಗೇಯಂಗೆ ಅದಿರದಿದಿರ್ ನಿಲ್ವನ್ನರೊಳರೇ: ಪಂಪಭಾ, ೧. ೮೦)
ಶಿತಿಕಂಠ