भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶಿಬಿಕಾ

[ನಾ] ಮೇನೆ, ಪಲ್ಲಕ್ಕಿ (ಸುರಶಿಲ್ಪಿಗಳಿಂ ಶಿಬಿಕಾವಿರಚನೆ ದೆಸೆಗೆಸೆಯುತ್ತಿರ್ದುದತ್ತೊಂದೆಡೆಯೊಳ್ ನರಶಿಲ್ಪಿಗಳಿಂ ಮಂಡಪವಿರಚನೆ ನೆಗೞುತ್ತುಮಿರ್ದುದಿತ್ತೊಂದೆಡೆಯೊಳ್: ಆದಿಪು, ೯. ೬೮)

ಶಿರ

[ನಾ] ತಲೆ (ಅನೇಕ ನೃಪ ಶಿರಃ ಕಪಾಳ ಶಕಳ ಜರ್ಜರಿತಮುಂ ಪರಸ್ಪರ ಸಮರ ರಭಸಸಮುತ್ಸಾರಿತಮುಂ: ಪಂಪಭಾ, ೧೩. ೫೧ ವ)

ಶಿರಃಕಂಪ

[ನಾ] ತಲೆಯಾಡಿಸುವಿಕೆ (ಅಮರೀಮಧುರಗೀತ ನಿನಾದಕ್ಕೆ ಆದಂ ಒಱಲ್ದಿರ್ದ ಶಿರಃಕಂಪದೊಳ್: ಆದಿಪು, ೪. ೯ ವ)

ಶಿರಃಪದ್ಮ

[ನಾ] ತಲೆಯೆಂಬ ತಾವವರೆ (ಸೂೞ್ ಸೂೞೊಳ್ ಎಚ್ಚಾಗಳ್ ಅರ್ಚಿಸಿದಂತೆ ಇರ್ದುದು ಉರುಳ್ದ ಕೌರವಶಿರಃಪದ್ಮಂಗಳಿಂ ಕೊಳ್ಗುಳಂ: ಪಂಪಭಾ, ೧೨. ೧೪೫)

ಶಿರೀಷಕುಸುಮ

[ನಾ] ಬಾಗೆ [ಹೂ] (ಆ ಶಿರೀಷಕುಸುಮದಾಮ ಸುಕುಮಾರ ಬಾಹುಲತೆಯರೊಳ್ ಆ ಪರಿಘಪರಿವೃತ್ತ ದೀರ್ಘಬಾಹುಯುಗಳಂ: ಆದಿಪು, ೮. ೨೩ ವ)

ಶಿರೀಷಕುಸುಮಾಭ

[ಗು] ಬಾಗೆ ಹೂವಿನಂತಹ [ಬಣ್ಣ] (ವನಭೃತ್ಕುಂತಳೆಯಾ ಶಿರೀಷಕುಸುಮಾಭಾಂಗಕ್ಕೆ ಕಂದಂ ಕನತ್‌ಕನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ: ಪಂಪಭಾ, ೪. ೬೪)

ಶಿರೀಷಕೋಮಲೆ

[ನಾ] ಬಾಗೆ ಹೂವಿನಂತೆ ಕೋಮಲೆಯಾದವಳು (ಮಲೆಮಲೆದುರ್ಕಿ ಸೊರ್ಕಿ ಸಭೆಯೊಳ್ ಕುಲಪಾಂಸುಲಂ ಈ ಶಿರೀಷಕೋಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳ್: ಪಂಪಭಾ, ೭. ೫೭)

ಶಿರೋಜ

[ನಾ] ತಲೆಗೂದಲು (ಕರವಾಳಂ ಘರವಟ್ಟಿಸಿ ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂತಿರೆ ಪಿರಿದು ಪೊಯ್ದಂ ಎಂತಪ್ಪರೊಳಂ ಮುಳಿಸು ಅಱಿವಂ ಆಗಲೇನಿತ್ತಪುದೇ: ಪಂಪಭಾ, ೧೨. ೩೦)

ಶಿರೋದಳನ

[ನಾ] ತಲೆಯನ್ನು ಕತ್ತರಿಸುವಿಕೆ (ಅರಿಕೇಸರಿಗಾತ್ಮಜರ್ ಅರಿನರಪ ಶಿರೋದಳನಪರಿಣತ ಉಗ್ರಾಸಿ ಭಯಂಕರಕರರ್: ಪಂಪಭಾ, ೧. ೨೨)

ಶಿರೋಧರೆ

[ನಾ] ಕೊರಳಿನವಳು (ಉದ್ಘಪಯೋಧರೆಯ ಮನೋಜರಾಗರಸಪೂರಿತ ಬಿಂಬಾಧರೆಯ ಕಂಬುಕಮ್ರ ಶಿರೋಧರೆಯ ಬೆಡಂಗಂ ಆರುಮೇನೆಯ್ದುವರೇ: ಆದಿಪು, ೪. ೪೬)

ಶಿರೋಂಬುಜ

[ನಾ] ಕಮಲದಂತಿರುವ ತಲೆ (ಜವ ಅರ್ಘ್ಯಮೆತ್ತಿದಂತಿರ್ದ ಶಿಶುಪಾಲನ ಶಿರೋಂಬುಜಮಂ ಕಂಡು ಅೞಲ್ದು: ಪಂಪಭಾ, ೬. ೬೪ ವ)

ಶಿರೋರುಹ

[ನಾ] ಶಿರೋಜ, ತಲೆಗೂದಲು (ಕದಳೀಗರ್ಭಶ್ಯಾಮಂ ಮೃದುಕುಟಿಲ ಶಿರೋರುಹಂ ಸರೋರುಹವದನಂ ಮೃದುಮಧ್ಯಮತನು ಹಿತಮಿತಮೃದುವಚನಂ ಲಲಿತಮಧುರ ಸುಂದರವೇಷಂ: ಆದಿಪು, ೧. ೨೯)

ಶಿರೋವೇಷ್ಟನ

[ನಾ] ತಲೆಗೆ ಸುತ್ತುವ ವಸ್ತ್ರ (ಮಹೀತಳಾಶ್ಲಿಷ್ಟ ಜಾನು ಲಲಾಟಪಟ್ಟರ್ ಪ್ರಣಾಮಾರ್ಪಣಪುರಸ್ಸರಂ ಶಿರೋವೇಷ್ಟನ ಪ್ರಲಂಬಚೇಳಾಂಚಳಪಿಹಿತವದನರಾಗಿ: ಆದಿಪು, ೧೦. ೪೮ ವ)

ಶಿರೋವ್ಯೂಢ

[ನಾ] ತಲೆಯವರೆಗೆ, ಆಳುದ್ದ (ಶಿರೋವ್ಯೂಢ ಧಾನ್ಯಸಂಚಯೋಪಭೋಗಿ ಜನನಿವಾಸಿಗಳಪ್ಪ ಸಂವಾಹಂಗಳುಮಂ: ಆದಿಪು, ೮. ೬೩ ವ)

ಶಿಲಾ

[ನಾ] ಬಂಡೆ (ತುಂಗವನ್ಯಮತಂಗಜದಂತೆ ಆಘಾತನಿಪಾತಿ ಸಲ್ಲಕೀಭಂಗಮಂ ಮಣಿಮೌಕ್ತಿಕ ನೀಳಸ್ಥೂಳಶಿಲಾಪ್ರವಿಭಾಸಿತ ಉತ್ತುಂಗಮಂ: ಪಂಪಭಾ, ೧. ೧೧೫)

ಶಿಲಾಪಟ್ಟ

[ನಾ] ಕಲ್ಲಿನ ಪೀಠ (ನಿರ್ಮಲ ಶಿಲಾಪಟ್ಟದೊಳ್ ನಿಬಿಡಬದ್ಧಪಲ್ಯಂಕಾಸನನುಂ ಪೂರ್ವಾಭಿಮುಖನುಂ ಆಗಿರ್ದಾಗಳ್: ಆದಿಪು, ೧೦. ೧೩ ವ)

ಶಿಲಾಭೇದಿ

[ಗು] ಕಲ್ಲನ್ನೇ ಸೀಳುವ (ಕುಲಿಶನಿಭ ಶಿಲಾಭೇದಿ ಬಾಣಂಗಳುಂ ಭೇದಿಸವು ಎಂಬಂತಾಯ್ತು ಅತಿಕ್ಷೋಭದಿಂ ಉಭಯಬಲಕ್ಷೋಭ ಧೂಳೀಪ್ರತಾನಂ: ಆದಿಪು, ೧೪. ೯೫)

ಶಿಲೆಯೊಳ್ ಪೊಯ್

[ನಾ] ನಾಶಮಾಡು (ಸುಧರ್ಮಮುನಿ ಪದಪದ್ಮಕ್ಕೆಱಗಿ ಜಿನರೂಪಮೆಂಬೊಂದಱ ಅಡಿವಿಡಿದು ಅಘಬಲಮಂ ಅಲೆದು ಶಿಲೆಯೊಳ್ ಪೊಯ್ದಂ: ಆದಿಪು, ೩. ೫೧)

ಶಿಲ್ಪ

[ನಾ] ಚಿತ್ರರಚನೆ, ಎಲೆ ಮುಂತಾದುವುಗಳನ್ನು ಕತ್ತರಿಸುವ ಕಲೆ (ಹಸ್ತಕೌಶಲಕಳಿತಮಪ್ಪ ಚಿತ್ರಕಳಾಪಪರಿಚ್ಛೇದ್ಯಾದಿ ಸಮನ್ವಿತಮಪ್ಪ ಶಿಲ್ಪಮುಮಂ: ಆದಿಪು, ೮. ೬೪ ವ)

ಶಿಲ್ಪಕರ್ಮ

[ನಾ] ಕುಶಲಕಲೆ (ಅಸಿ ಮಸಿ ಕೃಷಿ ವಣಿಕಗ್ವಿದ್ಯಾ ಶಿಲ್ಪಕರ್ಮಂಗಳಂ ಶುದ್ಧವೃತ್ತಿಯಿಂದ ಅರ್ಥೋಪಾರ್ಜನಂ ಗೆಯ್ವ ವಾರ್ತೆಯುಂ: ಆದಿಪು, ೧೫. ೧೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App