Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಶಿವಪದ
[ನಾ] ಮುಕ್ತಿಸ್ಥಾನ (ಶಿವಪದಪರ್ಯಂತಂಬರಂ ಅಮೋಘಮುದ್ಧರಿಸುಗೆ ತಾತ್ಪರ್ಯದಿಂ ಅರ್ಹಂ ಸಿದ್ಧ ಆಚಾರ್ಯ ಉಪಾಧ್ಯಾಯ ಸರ್ವಸಾಧುಗಳೆಮ್ಮಂ: ಆದಿಪು, ೧. ೬)
ಶಿವಾ
[ನಾ] ನರಿ (ಪ್ರತಿಮೆಗಳೞ್ತು ಮೊೞಗಿದುದತಿರಭಸದೆ ಧಾತ್ರಿ ದೆಸೆಗಳುದುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೨)
ಶಿವಾಶಿವರವ
[ನಾ] [ಶಿವಾ+ಅಶಿವರವ] ನರಿಗಳ ಅಶುಭಕರ ಊಳು (ನೀಮುಂ ಈ ಮರದಡಿಯೊಳ್ ಶಿವಾಶಿವರವಂಗಳಿಂ ಎೞ್ಚಱರುವಂತುಟಾದುದೇ: ಪಂಪಭಾ, ೩. ೧೧)
ಶಿಶಿರ
[ಗು] ಶೀತಲ, ತಂಪಾದ (ಅಂತು ಕಾಳಿಂದೀಜಲಶಿಶಿರಶೀಕರ ವಾರಿಚಾರಿಯುಂ ಮೃಗಯಾಪರಿಭ್ರಮಶ್ರಮೋತ್ಥಿತ ಸ್ವೇದಜಲ ಲವಹಾರಿಯುಂ ಆಗಿ ಬಂದ ಮಂದಾನಿಲಕ್ಕೆ: ಪಂಪಭಾ, ೫. ೫೩ ವ)
ಶಿಶಿರಕರ
[ನಾ] ತಂಪುಕಿರಣ[ವುಳ್ಳವನು], ಚಂದ್ರ (ಬಾಳಕಳಹಂಸೆ ಬಾಳಮೃಣಾಳಂಗಳ ನಡುವೆ ಶಿಶಿರಕರ ಕರಶತದಾಂದೋಳಿರ್ಪಂತಿರ್ದುದು ಲೀಲೆಯಿಂ: ಆದಿಪು, ೧೧. ೪೯)
ಶಿಶಿರದ್ರವ್ಯ
[ನಾ] ತಂಪು ಸಾಮಗ್ರಿ (ಏಕೀಭೂತ ಸಕಲಭುವನ ಶಿಶಿರದ್ರವ್ಯ ಸಂಬಾರದ್ರವ್ಯ ಶಂಕಾಕರ ಶಿಖರಿಣೀ ರಮಣೀಯಮುಂ: ಆದಿಪು, ೧೧. ೨೬ ವ)
ಶಿಶಿರಶೀಕರಾಸಾರ
[ನಾ] ತಂಪು ತುಂತುರ ಸೋನೆ (ಅಂತು ಮಳಯಜ ರಸಶಿಶಿರಶೀಕರಾಸಾರಚಾರಿಯಾಗಿ ಬಂದ ಮಂದಾನಿಳನ ಬೞಿಯನೆ ಬಂದು: ಆದಿಪು, ೧೧. ೫೫ ವ)
ಶಿಶು
[ನಾ] ಮಗು (ಪುಟ್ಟುವುದುಂ ಧರ್ಮಮೊಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨)
ಶಿಂಶುಮಾರ
[ನಾ] ಮೊಸಳೆ (ಭಯಂಕರಶಿಂಶುಮಾರ ವಿಕಟದಂಷ್ಟ್ರಾ ಕ್ರಕಚಪಾಟ್ಯಮಾನ ನಾರಕನಿಕರ ರುಧಿರಚ್ಛಟ ಅಚ್ಛಾರುಣಿಸಲಿಲ ಹರಿಕಾನಿಕರಕರಾಳೆಯುಂ: ಆದಿಪು, ೫. ೮೭ ವ)
ಶಿಶುಮಾರ
[ನಾ] ಮೊಸಳೆ (ಬೆನ್ನಟ್ಟೆ ದುರ್ಮೋಹಮತ್ಸ್ಯಗಣಂಗಳ್ ಕಡಿದಿಕ್ಕೆ ಲೋಭಮಕರಾನೀಕಂಗಳ್ ಆಟಂದು ನುಣ್ಣಗೆ ನುಂಗುತ್ತಿರೆ ಮಾರರಾಗಶಿಶುಮಾರಂಗಳ್ ಮಹೋಗ್ರಂUಳ್ ಇನ್ನೆಗಂ ಓರಂತೆ ತೊೞಲ್ದೆಂ: ಆದಿಪು, ೯. ೬೦)
ಶಿಶುಶುಕ
[ನಾ] ಗಿಳಿಯ ಮರಿ (ಸುರಿವ ಸರಯಿಯರಲ ಮುಗುಳ್ಗೆ ಮೊಗಸಿದಳಿಕುಳಂಗಳಿಂ ತೊದಲ್ವ ಶಿಶುಶುಕಂಗಳಿಂ: ಪಂಪಭಾ, ೧. ೫೮)
ಶಿಳಾಪಟ್ಟಕ
[ನಾ] ಕಲ್ಲುಬಂಡೆ (ಆಕರ್ಣಾಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ ತತ್ಪತಾಕಿನೀಕುಂಜರ ಶಿರಶ್ಶಿಳಾ ಪಟ್ಟಕಂಗಳಂ ಇರ್ಬಗಿಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ)
ಶಿಳಾಯಂತ್ರ
[ನಾ] ಕಲ್ಲು ಚಿಮ್ಮುವ ಯಂತ್ರ (ಗಂಡಶೈಳಾಭೀಳ ಶಿಳಾಯಂತ್ರಭಯಂಕರಂಗಳುಂ: ಆದಿಪು, ೧೩. ೫೭ ವ)
ಶಿಳೀಮುಖ
[ನಾ] ಬಾಣ (ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತೆ ಶಿಳೀಮುಖಕ್ಕೆ ಗೆಂಟಾದುದು: ಪಂಪಭಾ, ೧೨. ೮೭)
ಶಿಳೀಮುಖಾಸನ
[ನಾ] ಬಿಲ್ಲು (ಅನೇಕವರ್ಷಕೋಟ್ಯಂತರದೊಳ್ ಸಪ್ತಶಿಳೀಮುಖಾಸನ ಉನ್ನತ ಅಪಘನನುಂ: ಆದಿಪು, ೬. ೫೭ ವ)
ಶೀಕರ
[ನಾ] ತುಂತುರು (ತಡಿಯ ಶೀಕರನಿಕರಂಗಳಂತೆ ಸೊಗಯಿಸುವ ಧವಳಾಕ್ಷತ ಸಿತಕುಸುಮ ಮಂಗಳಾಂಜಲಿಗಳುಮಂ: ಆದಿಪು, ೧೧. ೨೩ ವ)
ಶೀಘ್ರ
[ನಾ] ವೇಗ (ಪಾತಂ ಲಕ್ಷ್ಯಂ ಶೀಘ್ರಂ ಘಾತಂ ಬಹುವೇಗಂ ಎಂಬಿವಯ್ದೇಸಿನೊಳಂ ಅಂತು ಈತನ ದೊರೆಯಲ್ಲ: ಪಂಪಭಾ, ೧೨. ೧೮೫)
ಶೀತ
[ನಾ] ಚಳಿ (ಕ್ಷುತ್ಪಿಪಾಸಾಶೀತಾತಪಪ್ರಮುಖ ಪರೀಷಹಂಗಳಂ ಸೈರಿಸಲಾಱದೆ: ಆದಿಪು, ೯. ೮೮ ವ)
ಶೀತರುಚಿ
[ನಾ] ತಂಪಾದ ಕಾಂತಿ (ಹಿಮಕರಂ ಆತ್ಮ ಶೀತರುಚಿಯಂ ದಿನನಾಯಕಂ ಉಷ್ಣದೀಧಿತಿಕ್ರಮಮಂ ಅಗಾಧವಾರಿಧಿಯೆ ಗುಣ್ಪಂ ಇಳಾವಧು ತನ್ನ ತಿಣ್ಪಂ ಬಿಸುೞ್ವೊಡಂ; ಪಂಪಭಾ, ೧. ೮೩)
ಶೀತಳವಾರಿ