Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಶಕಟ
[ನಾ] ಬಂಡಿ, ರಥ (ಅನೇಕಶರಭರಿತ ಶಕಟಸಹಸ್ರಮನೊಂದು ಮಾಡಿ ಗಾಂಗೇಯನ ಪೆಱಗೆ ನಿಲಿಸಿದಾಗಳ್: ಪಂಪಭಾ, ೧೧. ೧೬ ವ)
ಶಕಟವ್ಯೂಹ
[ನಾ] ರಥದ ಆಕಾರದಲ್ಲಿ ಸೇನೆಯನ್ನು ನಿಲ್ಲಿಸುವ ಒಂದು ರಚನೆ (ಶಕಟವ್ಯೂಹದ ಪೆಱಗೆ .. .. ಅಧಿಕಬಲರಪ್ಪ ಸೌಬಲ ದುಶ್ಶಾಸನಾದಿ ಪ್ರಧಾನ ವೀರಭಟಕೋಟಿಯ ನಡುವೆ ಸಿಂಧುರಾಜನಂ ನಿರಿಸಿ: ಪಂಪಭಾ, ೧೧. ೧೩೨ ವ)
ಶಂಕರ
[ಗು] ಶುಭಕರ (ಪ್ರೀತಿಂಕರ ಶಂಕರ ವಿದ್ಯಾತಿಶಯನಿಧಾನ ನಿನ್ನ ದಯೆವೆರಸಿದತಿಪ್ರೀತಿಯೊಳ್ ಆಂ ಅತ್ಯುತ್ತಮ ಜಾತಿಗಳೊಳ್ ಪುಟ್ಟಿ ಸುಖಮನುಣುತುಂ ಬಂದೆಂ: ಆದಿಪು, ೫. ೭೩)
ಶಕಳ
[ನಾ] ಚೂರು, ತುಂಡು (ಅನೇಕ ನೃಪ ಶಿರಃ ಕಪಾಳ ಶಕಳ ಜರ್ಜರಿತಮುಂ ಪರಸ್ಪರ ಸಮರ ರಭಸಸಮುತ್ಸಾರಿತಮುಂ: ಪಂಪಭಾ, ೧೩. ೫೧ ವ)
ಶಂಕಾಕುಳಿತಚಿತ್ತ
[ನಾ] [ಶಂಕಾ+ಆಕುಳಿತಚಿತ್ತ] ಆತಂಕದಿಂದ ವಿಕಲಗೊಂಡ ಮನಸ್ಸು (ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ: ಪಂಪಭಾ, ೮. ೪೦ ವ)
ಶಂಕಾಂತರ
[ನಾ] ಸಂದೇಹಗಳು (ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)
ಶಂಕಾಪನಯನ
[ನಾ] [ಜೈನ] ಸಂದೇಹವಿಲ್ಲದಿರುವುದು (ಜಿನಮತ ಪದಾರ್ಥಶಂಕಾಪನಯನಮುಂ ಭೋಗಾಕಾಂಕ್ಷೆಯೊಳ್ ವಿಮುಖತೆಯುಂ: ಆದಿಪು, ೫. ೫೭)
ಶಂಕಾವಹ
[ಗು] ಸಂದೇಹವುಂಟುಮಾಡುವ (ಆಹವ ಮಹಾಹುಂಕಾರ ಕಾಳಕೂಟವಿಟಪಿಪ್ರದೋಹ ಶಂಕಾವಹ ನಾಭಿಕೂಪಾವಲಂಬಿತ ಕೂರ್ಚಕಳಾಪಂ: ಆದಿಪು, ೧೩. ೪೫ ವ)
ಶಂಕಿಸು
[ಕ್ರಿ] ಹೆದರು, ಹಿಂಜರಿ (ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆಂ ಆಂ ಎಂದೊಡೆ ಏಕೆ ಶಂಕಿಸಿದಪೈ ನೀಂ ಬೆಸವೇೞ್: ಪಂಪಭಾ, ೧೨. ೯೦)
ಶಂಕು
[ನಾ] ಈಟಿ (ವಿಜಯರಾಜಮಹಿಷೀ ಮಯೂರಾತಪತ್ರ ಶಂಕಾವಹಶಂಕುಸಂಕುಳಂಗಳಿಂದಂ: ಆದಿಪು, ೧೪. ೯೦ ವ)
ಶಕುನಂಗಳಂ ಕ್ರಮಮಂ ಬಗೆ
[ಕ್ರಿ] ಪ್ರಕೃತಿಯ ಕೆಟ್ಟ ಸೂಚನೆಗಳ ಸ್ವರೂಪವನ್ನು ಗಮನಿಸು, ಅರ್ಥಮಾಡಿಕೊ (ಅವರ ಮನದ ಪುಲ್ವಗೆಯಂ ಪೊಲ್ಲಮೆಯುಮಂ ಅಱಿಯದೆ ಸಮಸ್ತಬಳೋದ್ಯುಕ್ತನಾಗಿ ಶಕುನಂಗಳ ಕ್ರಮಮಂ ಬಗೆಯದೆ: ಪಂಪಭಾ, ೬. ೬೮ ವ)
ಶಕುನದ ನಯ
[ನಾ] ಶಕುನಶಾಸ್ತ್ರ (ಬಿಡೆ ತಿರ್ದಿದ ಶಕುನದ ನಯದಡಿವಿಡಿದು ಪುರೋಹಿತಂ ನೃಪಂಗೀ ನುಡಿಯಂ ನುಡಿದಂ: ಆದಿಪು, ೫. ೬)
ಶಕುನಿ
[ನಾ] ಗಾಂಧಾರಿಯ ಸೋದರನಾದ ಗಾಂಧಾರರಾಜ ಸೌಬಲನ ಮಗ (ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು: ಪಂಪಭಾ, ೧, ೮೭, ವ)
ಶಕ್ತಿ
[ನಾ] ಒಂದು ಆಯುಧ, ಶಕ್ತ್ಯಾಯುಧ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)
ಶಕ್ರಕಾರ್ಮುಕ
[ನಾ] ಕಾಮನ ಬಿಲ್ಲು (ಪೊನಲ್ಗಳ ಕೆಂಪು ಪಸುರ್ಪು ಕರ್ಪು ಬೆಳ್ಪು ಒಳಕೊಳೆ ಶಕ್ರಕಾರ್ಮುಕವಿಳಾಸಮಂ ಏನೆರ್ದೆಗೊಂಡು ಬೇಟದತ್ತಳಗಮಂ ಉಂಟುಮಾಡಿದುದೋ: ಪಂಪಭಾ, ೭. ೨೫)
ಶಕ್ರನೃತ್ಯ
[ನಾ] [ಜೈನ] ಜಿನ ಜನ್ಮಾಭಿಷೇಕಕಾಲದಲ್ಲಿ ಸೌಧರ್ಮೇಂದ್ರನು ಮಾಡುವ ಆನಂದನೃತ್ಯ (ಶಕ್ರನೃತ್ಯದೊಳೊಡಂಬಡೆ ನರ್ತಿಸುವಲ್ಲಿ ಜತ್ತವಟ್ಟದ ಮಣಿಯಂತದೇಂ ಪದುಳಮಾದುದೊ ದಿವ್ಯವಧೂಕದಂಬಕಂ: ಆದಿಪು, ೭. ೧೨೫)
ಶಕ್ರಪುತ್ರ
[ನಾ] ಇಂದ್ರನ ಮಗ, ಅರ್ಜುನ (ಆ ಶಕ್ರಪುತ್ರನಂ ಆ ಕೊಂದೊಡೆ ಧರ್ಮಪುತ್ರನೞಿಗುಂ ತಾಯೆಂದೆ ಮುಂ ಕೊಂತಿ ಬಂದಿನಿಸಂ ಪ್ರಾರ್ಥಿಸಿ ಪೋದಳ್ ಎನ್ನಂ ಅದಂ ನಾಂ ಮಾಣ್ದಿರ್ದೆಂ: ಪಂಪಭಾ, ೧೨. ೧೯೬)
ಶಂಖ
[ನಾ] [ಜೈನ] ಶಂಖದ ಹುಳು, ಚರ್ಮ, ನಾಲಗೆಗಳನ್ನುಳ್ಳ ದ್ವೀಂದ್ರಿಯ ಜೀವಿ (ಸ್ಪರ್ಶನ ರಸನೇಂದ್ರಿಯೋಪೇತಂಗಳಪ್ಪ ಶಂಖಾದಿ ದ್ವೀಂದ್ರಿಯಂಗಳ್: ಆದಿಪು, ೧೦. ೬೩ ವ)
ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ
[ನಾ] ಶಂಖ, ಚಕ್ರ, ಚಾಮರ, ನೇಗಿಲುಗಳ ಗುರುತಿರುವ ಪಾದದ ಆಕಾರ, ಎಂದರೆ ಚಕ್ರವರ್ತಿಯ ಪಾದ (ಅರಿನೃಪಾಲಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ: ಪಂಪಭಾ, ೬. ೨೯)
ಶಂಖದೊಳ್ ಪಾಲೆಱೆ