भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಷೋಡಶರಾಜ

[ನಾ] ಪ್ರಖ್ಯಾತರಾದ ಹದಿನಾರು ಮಂದಿ ಮಹಾರಾಜರು (ಎಂದು ಷೋಢಶರಾಜೋಪಾಖ್ಯಾನಮಂ ಅಱಿಪಿ ಧರ್ಮಪುತ್ರನ ಶೋಕಮಂ ಆಱೆ ನುಡಿದು: ಪಂಪಭಾ, ೧೧. ೧೦೮ ವ) [ಈ ಮಹಾರಾಜರ ಪಟ್ಟಿಗೆ ನೋಡಿ, ‘ಷೋಡಶಾವನಿಪ’]

ಷೋಡಶವರ್ಷ

[ನಾ]ಹದಿನಾರು ವರ್ಷ (ಈಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದೆ ಆಗಳೆ ಷೋಡಶವರ್ಷದ ಕುಮಾರನಾಗಿರೆ:ಪಂಪಭಾ, ೩. ೨೦ ವ)

ಷೋಡಶಸಹಸ್ರ

[ನಾ]ಹದಿನಾರು ಸಾವಿರ (ಕರಂ ಪರಕೆಗಳಂ ತಳ್ಪೊಯ್ಯೆ ಸೇಸಿಕ್ಕಿತು ಇಂದ್ರತನೂಜಂಗಿದಿರ್ವಂದು ಷೋಡಶಸಹಸ್ರಾಂತಃಪುರಂ ಕೃಷ್ಣನಾ:ಪಂಪಭಾ, ೪. ೩೯)

ಷೋಡಶಾವನಿಪ

[ನಾ] ಕೀರ್ತಿಶಾಲಿಗಳಾದ ಮರುತ್ರ, ಸುಹೋತ್ರ, ಅಂಗ, ಶಿಬಿ, ದೌಷ್ಯಂತಿ ಭರತ, ದಾಶರಥಿರಾಮ, ಭಗೀರಥ, ದಿಲೀಪ, ಮಾಂಧಾತ, ಯಯಾತಿ, ಅಂಬರೀಷ, ಶಶಬಿಂದು, ಗಯ, ರಂತಿದೇವ, ಸಗರ, ಪೃಥು ಹದಿನಾರು ಮಂದಿ ರಾಜರು (ಸತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾ ಗುಣಾರ್ಣವಂ ಕವಿತೆಯೊಳಗ್ಗಳಂ ಗುಣದೊಳಗ್ಗಳಂ ಎಲ್ಲಿಯುಮೀ ಗುಣಾರ್ಣವಂ: ಪಂಪಭಾ, ೧. ೧೦)

Search Dictionaries

Loading Results

Follow Us :   
  Download Bharatavani App
  Bharatavani Windows App