भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಂಬಳಿಗೆವೋಗು

[ಕ್ರಿ] ಸಂಪುಟವಾಗಿ ಹೋಗು, ಅದರಲ್ಲೇ ಅಡಗಿ ಹೋಗು (ಸಂಬಳಿಗೆವೋಯ್ತೆಂಬನ್ನೆಗಂ ಕೊಂಡುದು ಒಯ್ಯಗೆ ವೃಷಾಂಕನಂಬು: ಪಂಪಭಾ, ೮. ೧೬)

ಸಂಬೋಧಿಸು

[ಕ್ರಿ]ತಿಳಿವಳಿಕೆ ಹೇಳು (ಮುನ್ನ ಮಹಾಬಳನಾದಂದು ಎನ್ನಂ ಪ್ರಿಯಸಚಿವನಾಗಿ ಸಂಬೋಧಿಸಿ ಮಾನೋನ್ನತರೀಗಳ್ ಅೞ್ಕಱೊಳೆನ್ನಂ ಸಮಱಲ್ಕೆ ಬಂದರಿಂತುಟೆ: ಆದಿಪು,೫. ೬೭)

ಸಬ್ಬವ

[ನಾ]ಮೇಳ(ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ:ಪಂಪಭಾ, ೩. ೮೦)

ಸಬ್ಬವದ ಮಾತು

[ನಾ] ವಿನೋದದ ನುಡಿ (ಓತ ದೂತರೆ ತರೆ ಬಂದ ಸಬ್ಬವದ ಮತುಗಳಂ ಗುಡಿಗಟ್ಟಿ ಕೇಳರೇ: ಪಂಪಭಾ, ೪. ೧೦೧)

ಸಬ್ಬವದಾಕೆ

[ನಾ]ಮೇಳದ ಕೆಳದಿ(ಮತ್ತಂ ಒಂದೆಡೆಯೊಳ್ ಕುಂಟಣಿಯ ಉಪರೋಧಕ್ಕೆ ಪಿರಿದೀವ ಮುದುಪನಂ ಉೞಿಯಲಂಜಿ ತನ್ನ ಬೇಸಱಂ ತನ್ನ ಸಬ್ಬವದಾಕೆಗೆ ಇಂತೆಂದಳ್:ಪಂಪಭಾ, ೪. ೯೯ ವ)

ಸಬ್ಬಿಸಾಸಿರ

[ನಾ] ಪಂಪನಿಗೆ ಅರಿಕೇಸರಿಯಿತ್ತ ಅಗ್ರಹಾರವಿದ್ದ ಈ ಹೆಸರಿನ ನಾಡು (ಹರಿಗನ ಧರ್ಮಭಂಡಾರದಂತೆ ಸಾರಮಾದುದು ಬಿಟ್ಟಗ್ರಹಾರಂ ಆ ಸಬ್ಬಿಸಾಸಿರದೊಳಂ ಧರ್ಮವುರಂ: ಪಂಪಭಾ, ೧೪. ೫೬)

ಸಂಭವ

[ನಾ]ಹುಟ್ಟಿದಂತಹ (ಉಚ್ಚೈಶ್ರವಾನ್ವಯಸಂಭವನುಂ ಅಪ್ಪ ಪ್ರಶಸ್ತಲಕ್ಷಣಲಕ್ಷಿತನುಂ ಅಪ್ಪ ತ್ರಿಭುವನತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ:ಪಂಪಭಾ, ೧೪. ೨೦ ವ)

ಸಂಭವಾಮಯ

[ಗು]ಉಂಟಾಗುವ (ಶಸ್ತ್ರಪಾಷಾಣಆತಪವರ್ಷವಿಷಅಗ್ನಿಕಾಷ್ಠಕಂಟಕತ್ರಿದೋಷಸಂಭವಾಮಯಜರಾದಿಬಾಧಾವಿದೂರನುಂ:ಆದಿಪು,೮.೪ವ) [ಬಸವರಾಜುಮತ್ತುನರಸಿಂಹಶಾಸ್ತ್ರಿಅವರಆವೃತ್ತಿಗಳಲ್ಲಿ]

ಸಂಭವಿಸು

[ಕ್ರಿ]ಸಾಧ್ಯವಾಗು (ಅವಚಱದೊಂದೆ ಪದ್ಮದೊಳೆ ನೇಲ್ದೊಳಗಾದಳಿಗೆಮ್ಮ ವೃತ್ತಿ ಸಂಭವಿಸದು:ಆದಿಪು,೧೧. ೧೨೬)

ಸಭಾಕ್ಷೆÆÃಭ

[ನಾ] ಸಭೆಯಲ್ಲಿ ಗದ್ದಲ (ನೆಲಂ ಮೂರಿವಿಟ್ಟಂತೆ ಸಭಾಕ್ಷೆÆÃಭಮಾಗೆ ತಳರ್ದು ನಾನಾವಿಧವಾಹನಂಗಳನೇಱಿ ನಿಜನಿವಾಸಂಗಳ್ಗೆ ಪೋದರ್: ಪಂಪಭಾ, ೨. ೮೬ ವ)

ಸಂಭೃತ

[ಗು]ತುಂಬಿದ (ಕನಕಕಲಶ ಸಂಭೃತಶುಚಿಜಲಂಗಳಿಂದಂ ಆ ಮುನೀಶ್ವರನ ಪಾದಪದ್ಮಮಂ ಕರ್ಚಿ:ಪಂಪಭಾ, ೬. ೧೧ ವ)

ಸಂಭೋಗ

[ನಾ]ಕಾಮ ಕೂಟ (ಸ್ವರ್ಗಲಕ್ಷ್ಮಿಯ ಮೇಲೞ್ಕಱೊಳ್ ನಲಿದನೋ ಸಂಭೋಗಸಮ್ಮರ್ದ ನಿರ್ದಯ ನಿಷ್ಪೀಡಿತ ದೇವವಾರವನಿತಾ ಬಿಂಬಾಧರಂ ಶ್ರೀಧರಂ:ಆದಿಪು,೫. ೭೧)

ಸಂಭೋಗ್ಯ

[ಗು]ಅನುಭವಿಸಲು ತಕ್ಕುನಾದ (ಮಿಥುನಂಗಳ್ಗೆ ಸಂಭೋಗ್ಯಮಾಗಿ ಸಲೆ ಜಘನ್ಯಭೋಗಭೂಮಿಯ ಕಡೆಯ ಪಳಿತೋಪಮದೆಂಟನೆಯ ಭಾಗಂ ಅೞಿದುದೆಂಬನ್ನೆಗಂ:ಆದಿಪು,೬. ೪೮ ವ)

ಸಂಭ್ರಮ

[ನಾ]ತಾಕಲಾಟ (ಎನ್ನ ಬಗೆದ ಬಗೆಯನೊಡಂಬಡುಗುಂ ಒಡಂಬಡಂ ಎಂಬ ಸಂಭ್ರಮದೊಳ್ ಆಸ್ಥಾನಮಂಡಪ ಮಂಡನೀಭೂತ .. .. ಕುಮಾರನಂ:ಆದಿಪು, ೮. ೮ ವ);[ನಾ]ಸಡಗರ, ಆತುರ (ಮಹೀಪತಿನಿವೇದನ ಸಂಭ್ರಮಗಮನಸ್ಖಲಿತ ವೃದ್ಧಕಂಚುಕಿನಿಕರಮುಂ:ಆದಿಪು, ೮. ೩೫ ವ);[ನಾ]ಹೆದರಿಕೆ (ಅತ್ಯಾದರಃ ಸಂಭ್ರಮಂ ಉತ್ಪಾದಯತಿಯೆಂಬುದು:ಪಂಪಭಾ,೩. ೪ ವ);[ನಾ]ಕಳವಳ (ಅತಿಸಂಭ್ರಮ ಆಕುಳಿತಪರೀತ ಪರಿವಾರಜನ ಉಪನೀತ ಚಂದನಕರ್ಪುರ ಮಿಶ್ರಿತ ಹಿಮಶಿಶಿರಧಾರಾ ಪರಿಷೇಕದಿಂದೆ:ಪಂಪಭಾ, ೧೩. ೨ ವ)

ಸಮಂ ಮೇಲ್

ಸಮನಾಗಿ ಮಿಗಿಲಾದುದು, ಅಷ್ಟೇ ಅತಿಶಯವಾದುದು (ಮುಂ ಪೋದ ಜನ್ಮಾಭಿಷೇಕಕ್ಕೆ ಸಮಂ ಮೇಲೆಂಬಿನಂ ಕಣ್ಗೆಸೆದುದು ಜಗತೀರಾಜರಾಜ್ಯಾಭಿಷೇಕಂ: ಆದಿಪು, ೮. ೬೯)

ಸಮಕಟ್ಟು

[ಕ್ರಿ]ನಿರ್ಮಿಸು ಮತ್ತು ವ್ಯವಸ್ಥೆಮಾಡು (ಜನಪದಂಗಳನೆಯ್ದೆ ಮಾಡಿ ಪುರಂಗಳಂ ಸಮಕಟ್ಟಿ ಮೂಱೆನಿಸಿ ವರ್ಣಮನಿಂತು ಮುಂ ಸಮಕಟ್ಟಿಯುಂ:ಆದಿಪು, ೮. ೬೫);[ನಾ]ಆಸ್ತಿಯ ಭಾಗ (ಎಮಗಂ ಎಮಗಪ್ಪ ಭಾಗದ ಸಮಕಟ್ಟಂ ದೇವ ಕುಡಲೆವೇೞ್ಪುದು ನಂಟರ್ ನಿಮಗೆ ಎಮ್ಮಿಂದಂ ಅಗ್ಗಳಮಾರ್:ಆದಿಪು, ೯. ೯೯);[ಕ್ರಿ]ಬಿಗಿದು ಕಟ್ಟು (ಮಸೆಯಿಪ ಶಸ್ತ್ರಕೋಟಿ ಸಮಕಟ್ಟುವ ಸನ್ನಣಂ ಅೞ್ತಿಯಿಂದಂ ಅರ್ಚಿಸುವ ತುರಗದಂತಿರಥಸಂಕುಳಂ ಏಱುವ ದರ್ಭಶಯ್ಯೆ:ಆದಿಪು, ೧೪. ೯೦);[ಕ್ರಿ]ನಿರ್ಧರಿಸು (ಸಮಸ್ತಜನಸಂಹರಣ ಕಾರಣಮಪ್ಪ ರಣದೊಳೇವಂದಪುದೆಂದು ಧರ್ಮಯುದ್ಧಮನೆ ತಮ್ಮೊಳ್ ಸಮಕಟ್ಟಿ:ಆದಿಪು, ೧೪. ೧೦೦ ವ);[ನಾ]ಸಮಾನತೆ (ನೀಂ ನಿನ್ನ ತಾಯಿ ತಂದೆಯ ದೆಸೆಯಂ ಭಾವಿಸದೆ ಕರ್ಣ ನುಡಿವಂತೆ ಆವುದು ಸಮಕಟ್ಟು ನಿನಗಂ ಅರಿಕೇಸರಿಗಂ:ಪಂಪಭಾ, ೨. ೮೨);[ನಾ]ವ್ಯವಸ್ಥೆ (ಈ ಸರಸೀರುಹಂಗಳ ಅವನೀಪದದೊಳ್ ಬಿಸುಟೆಂತು ಪೋಪೆವೆಂಬೀ ಸಮಕಟ್ಟಿನೊಳ್ ನೆಲಸಿದಂತೆರಗಿರ್ದುವು ಷಟ್ಪದಂಗಳ್:ಪಂಪಭಾ, ೪. ೪೭);[ನಾ]ಹೋಲಿಕೆ (ಸಮಕಟ್ಟಿಂಗೆ ಒರೆಗೆ ಆರುಂ ಇಲ್ಲ ಅರಿಗ ಕೇಳ್ ನಿನ್ನೊಳ್:ಪಂಪಭಾ, ೫. ೭೬);[ನಾ]ಕ್ರಮಬದ್ಧತೆ (ಸಮಕಟ್ಟಱಿಯದೆ ಹರಿಗೆ ಅರ್ಘ್ಯಮೆತ್ತಿ ನಿಂದಿರ್ದ ಯಜ್ಞಮದು ಮೊದಲೊಳ್ ತಾನಮರ್ದುಂ ಅದಿರದೆ ತಣಿಯುಂಡು ಅಮರ್ದಂ ಗೋಮೂತ್ರದಿಂದೆ ಬಾಯ್ವೂಸಿದವೋಲ್:ಪಂಪಭಾ, ೬. ೪೮):[ಕ್ರಿ]ಏರ್ಪಡಿಸು (ದಾಯಿಗರಪ್ಪೊಡೆ ಕರಂ ಪೆರ್ಚಿದರ್ ಅವರ ಪೆರ್ಚಿಂಗೇಗೆಯ್ವಂ ಬಸನಂಗಳಂ ಸಮಕಟ್ಟುವಂ:ಪಂಪಭಾ, ೬. ೬೭ ವ)

ಸಮಕಟ್ಟುಗೆಡು

[ಕ್ರಿ]ಕ್ರಮ ತಪ್ಪಿಹೋಗು (ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದು ಎಚ್ಚು ಮಿಟ್ಟುಂ ಇಱಿದು ತಱಿದು ಘಟ್ಟಿಸೆಯುಂ:ಪಂಪಭಾ, ೧೦. ೭೦ ವ)

ಸಮಕೊಳಿಸು

[ಕ್ರಿ]ಸರಿಮಾಡು (ಸಮಕೊಳಿಸಲಾರ್ತುದಿಲ್ಲ ದಲಮರೇಂದ್ರನದೊಂದು ಮುಖಪರಿಮ್ಲಾನತೆಯಂ:ಆದಿಪು, ೬. ೧೯)

ಸಮಕ್ಷ

[ನಾ]ಎದುರು(ಸುಪ್ರಭೆಯುಂ ಸುದರ್ಶನ ನಾಮ ಗಣಿನೀಸಮಕ್ಷದೊಳ್ ರತ್ನಾವಳಿಯಂ ನೋಂತು ಅಚ್ಯುತ ಕಲ್ಪದೊಳ್ ದೇವನಾಗಿ ಪುಟ್ಟಿದಳ್:ಆದಿಪು, ೩. ೬೫ ವ)

ಸಮಕ್ಷಮ

[ನಾ]ಎದುರು (ಪುರೋಹಿತಪ್ರಾಜ್ಯ ಆಜ್ಯಾಹುತಿ ಹುತವಹಸಮಕ್ಷಮದೊಳ್ ಕೆಯ್ನೀರೆಱೆದು ಪಾಣಿಗ್ರಹಂಗೆಯ್ಸೆ:ಪಂಪಭಾ, ೩. ೭೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App