भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಮಗ್ರೇಕ್ಷಣ

[ನಾ]ಪೂರ್ಣ ನೋಟ (ಬಂದೆಱಗಿದ ರಾಜಚಕ್ರಮಂ ಅನುಕ್ರಮದೊಳೆ ನೇತ್ರತ್ರಿಭಾಗ ಕಟಾಕ್ಷ ಸಮಗ್ರೇಕ್ಷಣಭ್ರೂವಿಭ್ರಮ ದರಹಸಿತಾಳಾಪ:ಆದಿಪು, ೧೧. ೨೫ ವ)

ಸಮಗ್ರೋರಸ್ಥಳ

[ನಾ]ತುಂಬಿದ ಎದೆಯ ಪ್ರದೇಶವುಳ್ಳವನು (ಸಾಲ ಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ:ಪಂಪಭಾ, ೧. ೬೮)

ಸಮಚತುರಸ್ರ

[ನಾ]ಚಚ್ಚೌಕ (ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು:ಪಂಪಭಾ,೨. ೬೫ ವ)

ಸಮಚತುರಸ್ರಸಂಸ್ಥಾನ

[ನಾ][ಜೈನ] ಒಂದು ಶರೀರಾಕೃತಿವಿಶೇಷ; ಶರೀರವು ಎಲ್ಲ ಕಡೆಗಳಲ್ಲಿಯೂ ಪ್ರಮಾಣಬದ್ಧವಾಗಿರುವುದು (ಅಂತು ನಾಲ್ವತ್ತೊಂಬತ್ತು ದಿವಸದೊಳ್ ಸಮಚತುರಸ್ರಸಂಸ್ಥಾನ ಸಂವಾಹನಂಗಳ್ ಅಱುಸಾಸಿರ ಬಿಲ್ನಿಡಿಯವಾಗಿ:ಆದಿಪು, ೫. ೪೧ ವ)

ಸಮಂಚಿತ

[ಗು]ಕೂಡಿದ (ತಂತ್ರೀಸಮಂಚಿತ ವಿಪಂಚೀ ಮಂದ್ರ ತಾರಮಧುರಮೂರ್ಚ್ಛನಾಸನಾಥ ಪ್ರಯೋಗಂಗಳುಮಂ:ಆದಿಪು, ೧೧. ೭೪ ವ)

ಸಮಜ

[ನಾ]ಸಮೂಹ (ವಿಜಯಕಟಕಸಮದಗಜಸಮಜಂಗಳ ಕರ್ಪುಗಳೆಲ್ಲಮಂ ನೆರಂಬಡೆದು:ಆದಿಪು, ೧೨. ೪ ವ)

ಸಮಂತು

[ಗು]ಚೆಂದವಾಗಿ (ಪುದಿದೀ ಶ್ವೇತಾತಪತ್ರೋತ್ಕರದ ನಡುವಣಂ ವಜ್ರದಂತಂ ಸಮಂತು ಎತ್ತಿದ ಪಿಂಛಚ್ಛತ್ರಷಂಡಂಗಳ ನಡುವೆಸೆವಂ ವಜ್ರಬಾಹುಕ್ಷಿತೀಶಂ:ಆದಿಪು, ೪. ೨೫);[ಗು]ಚೆನ್ನಾಗಿ (ಪೊದಳ್ದಾಜ್ಞೆಗಂ ಪೆಸರ್ಗಂ ಮುನ್ನಮೆ ರೂಪುವೋದುದು ವಿಯಚ್ಚಕ್ರಂ ಸಮಂತೆಂಬಿನಂ ಜಸಮಾಪಾಂಡುರಮಾದುದು ನೃಪರೊಳಾರಾ ಪಾಂಡುರಾಜಂಬರಂ:ಪಂಪಭಾ,೧. ೧೧೦);[ಗು]ಅಚ್ಚುಕಟ್ಟಾಗಿ(ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ:ಪಂಪಭಾ, ೧. ೧೩೧)

ಸಮದ

[ಗು][ಸ+ಮದ] ಮದದಿಂದ ಕೂಡಿದ (ಸಮದಗಜಗಮನೆಯರ್ .. .. ನಡೆಯಲಾಱದೆ ಸುೞಿದರ್:ಪಂಪಭಾ,೭. ೮೪)

ಸಮದಗಜ

[ನಾ]ಸ್ವಾಭಿಮಾನವೆಂಬ ಆನೆ (ಬಗೆಗೊಂಡ ಕುಲಧನಂ ಸಮದಗಜಂ ಜಾತ್ಯಶ್ವಮೆಂಬಿವಂ ಮತ್ತೊರ್ಬಂ ಪಗೆವಂಗೆ ಕೊಟ್ಟು ಚಿಃ ಕೆಮ್ಮಗೆ ಬೆಸೆವವಂ ಅರಸದೆಂತೊ ಪಗರಣದರಸಂ:ಆದಿಪು, ೧೨. ೯೮)

ಸಮದತ್ತಿ

[ನಾ] [ಜೈನ] ತನಗೆ ಸಮಾನರಾದ ಶ್ರಾವಕಶ್ರೇಷ್ಠರಿಗೆ ನೀಡುವ ದಾನ (ಕ್ರಿಯಾಮಂತ್ರಂಗಳಿಂದಂ ಆತ್ಮಸಮಾನ ಶ್ರಾವಕಾಗ್ರಣಿಗಳ್ಗೆ ಕನ್ಯಾ ಭೂಮಿ ಸುವರ್ಣ ಹಸ್ತಿ ಅಶ್ವ ರಥ ರತ್ನಾದಿಗಳಂ ಕುಡುವ ಸಮದತ್ತಿಯುಂ: ಆದಿಪು, ೧೫. ೧೩ ವ)

ಸಮಧಿಗತ ಪಂಚಮಹಾಶಬ್ದ

[ಗು]ಪಂಚ ಮಹಾಶಬ್ದಗಳ ಗೌರವವನ್ನು ಸಂಪಾದಿಸಿದ (ಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ ಮಹಾಶಬ್ದ ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳ್ ಅರಿಗನೊಳ್ ಸಾಮಂತರ್:ಪಂಪಭಾ,೧. ೪೯), ನೋಡಿ, ‘ಪಂಚಮಹಾಶಬ್ದ’

ಸಮನಿಸು

[ಕ್ರಿ] ಈಡೇರು, ನೆರವೇರು (ಸಮನಿಸಲಿವರ ಮನೋರಥಂ ಅಮರೀನೃತ್ಯಪ್ರಸಂಗಕ್ಕಂ ಅಭವ: ಆದಿಪು, ೯. ೧೧); [ಕ್ರಿ] (ಉಂಟಾಗು (ದೊರೆಕೊಂಡ ಮಾಘಮಾಸಂ ಬರೆ ಕೃಷ್ಣಚತುರ್ದಶೀ ದಿನಂ ಸಮನಿಸೆ ಇತ್ಪುರುದೇವಂ ಮುಕ್ತಿವಧೂವರತೆಯಂ ಅಭಿಜಿನ್ಮುಹೂರ್ತದೊಳ್ ಕೈಕೊಂಡಂ: ಆದಿಪು, ೧೬. ೫೧)

ಸಮನ್ವಿತ

[ಗು]ಹೊಂದಿದವನು (ಮೊದಲೊಳ್ ಕುಡುವಂ ಶ್ರದ್ಧಾದಿಗುಣಸಮನ್ವಿತನಕ್ಕುಂ:ಆದಿಪು, ೧೦. ೯)

ಸಮನ್ವೀತಮನ

[ನಾ]ಏಕಾಗ್ರಚಿತ್ತವುಳ್ಳವನು (ನಿಷ್ಪಂದನಾಗಿ ಸಮನ್ವೀತಮನಂ ಗುಣಂಗೊಳಿಸಿದಂ ಯೋಗೀಂದ್ರ ವೃಂದಂಗಳಂ:ಆದಿಪು, ೬. ೩೪)

ಸಮಪಾದ

[ನಾ]ಬಿಲ್ಗಾರನು ಕುಳಿತುಕೊಳ್ಳುವ ಒಂದು ಭಂಗಿ (ಆಲೀಢ ಪ್ರತ್ಯಾಲೀಡ ಸಮಪಾದಂಗಳೆಂಬ ಆಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳ್ ಅತಿ ಪ್ರವೀಣರುಂ ಜಾಣರುಂ ಆಗಿ:ಪಂಪಭಾ, ೧೩. ೩೮ ವ) [“ಸಮಾನಾಂತರದಲ್ಲಿ ೨೪ ಅಂಗುಲ ಪಾದಗಳನ್ನಿಟ್ಟು ನಿಲ್ಲುವುದು” ದೀಪಿಕೆ, ಪು. ೫೨೪]

ಸಮಪಾರ್ಶ್ವ

[ನಾ]ಎಲ್ಲ ಕಡೆ ಪ್ರಮಾಣಬದ್ಧವಾಗಿ ಬೆಳೆದ ಆನೆ (ಸಮಪಾರ್ಶ್ವನುಂ ಅಜಕುಕ್ಷಿಯುಂ ಗೋಧೂತ್ರಿಷ್ಟನುಂ ಮೋಹಜಘನಾಪರನುಂ .. .. ಅಪ್ಪ ವಿಜಯಪರ್ವತ ಗಜೇಂದ್ರಂ:ಆದಿಪು, ೧೨. ೫೬ ವ)

ಸಮಭಿಜಾತ

[ನಾ]ಒಳ್ಳೆಯ ಕುಲದಲ್ಲಿ ಹುಟ್ಟಿದವನು (ಜನಪದಸಮಭಿಜಾತನುಂ ಅನ್ವಯಾಗತನುಂ ಅಭಿರೂಪನುಂ ಪ್ರತ್ಯುತ್ಪನ್ನಪ್ರತಿಭನುಂ .. .. ಪ್ರಸಿದ್ಧನುಮಪ್ಪ ಮಹತ್ತರನ ಕೈಯೊಳ್:ಆದಿಪು, ೧೪. ೪೩ ವ)

ಸಮಯ

[ನಾ][ಜೈನ] ಒಂದು ಕಾಲಪ್ರಮಾಣ, ಒಂದು ಪರಮಾಣುವು ಮಂದಗತಿಯಿಂದ ಒಂದು ಪ್ರದೇಶಕ್ಕೆ ಸರಿಯುವಷ್ಟು ಕಾಲ (ಅದು ಸಮಯ ಆವಳಿಕ ಉಚ್ಛ್ವಾಸ ಸ್ತೋಕ ನಿಮೇಷ ನಾಳಿಕಾ ಮುಹೂರ್ತ ದಿವಸ ಪಕ್ಷ ಮಾಸ ಋತು ಅಯನ ಸಂವತ್ಸರಾದಿ ಗಣನಾನುಕ್ರಮದಿಂ:ಆದಿಪು, ೬. ೪೮ ವ)

ಸಮಯಾಹೂತ

[ಗು][ಸಮಯ+ಆಹೂತ] ಪದ್ಧತಿಯನ್ನು ಆರಂಭಿಸಿದ (ಆದಿದೇವಂ ಇಕ್ಷÄರಸಸಂಗ್ರಹಣ ಸಮಯಾಹೂತ ಭೂತಳನಪ್ಪುದಱಿಂ ಇಕ್ಷ್ವಾಕುಕುಳತಿಳಕನುಂ:ಆದಿಪು, ೮. ೭೫ ವ)

ಸಮಯಿ

[ನಾ]ಧರ್ಮಾನುಯಾಯಿ (ಸಮಯಿಗಳುಂ ಚಾತುರ್ವರ್ಣಮುಂ ಉಚಿತಚರಿತ್ರಮಂ ಬಿಸುಟ್ಟು ಆದಂ ಪೊಲ್ಲಮೆಯೊಳ್ ಸಲೆ ನಡೆವರ್ ದುಷ್ಷಮಮೆಂಬ ಅಯ್ದನೆಯ ಕಾಲದೊಳ್:ಆದಿಪು, ೧೫. ೩೬)

Search Dictionaries

Loading Results

Follow Us :   
  Download Bharatavani App
  Bharatavani Windows App