भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಮರ

[ನಾ]ಯುದ್ಧ (ಅನೇಕ ನೃಪ ಶಿರಃ ಕಪಾಳ ಶಕಳ ಜರ್ಜರಿತಮುಂ ಪರಸ್ಪರ ಸಮರ ರಭಸಸಮುತ್ಸಾರಿತಮುಂ:ಪಂಪಭಾ, ೧೩. ೫೧ ವ)

ಸಮರತ

[ಗು]ಅನುರೂಪÀವಾದ ರತಿಯ ಅಭಿಲಾಷೆ (ಈಶ್ವರನುಂ ಪಾರ್ವತಿಯುಂ ಎನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನಾನುರಾಗಮಂ ಪಡೆಯೆ:ಪಂಪಭಾ, ೫. ೨೮ ವ)

ಸಮರಥ

[ನಾ]ಎದುರಿನ ಬಿಲ್ಗಾರನೊಡನೆ ಸಮಸಮನಾಗಿ ಯುದ್ಧಮಾಡಬಲ್ಲ ರಥಿಕ (ಧೃತಧವಳವಸನರ್ ಆರಾಧಿತಶಿವರ್ ಅರ್ಚಿತಸಮಸ್ತಶಸ್ತ್ರರ್ ನೀರಾಜಿತತುರಗರ್ ಒಪ್ಪಿದರ್ ಕೆಲರ್ ಅತಿರಥ ಸಮರಥ ಮಹಾರಥ ಅರ್ಧರಥರ್ಕಳ್:ಪಂಪಭಾ, ೧೦. ೩೭)

ಸಮರೂಪ

[ನಾ]ಸಮಾನ ಸುಂದರ ರೂಪ (ಈಶ್ವರನುಂ ಪಾರ್ವತಿಯುಂ ಎನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನಾನುರಾಗಮಂ ಪಡೆಯೆ:ಪಂಪಭಾ, ೫. ೨೮ ವ)

ಸಮರೈಕಮೇರು

[ನಾ][ಸಮರ+ಏಕ+ಮೇರು] ಯುದ್ಧದಲ್ಲಿ ಮೇರುವಿನಂತೆ ಸ್ಥಿರನಾದವನು (ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ ಬಾಯೊಳೆ ತೋಱೆ ಮೆಯ್ಮಱೆದು ನೋಡಿದಳ್ ಆ ಸಮರೈಕಮೇರುವಂ:ಪಂಪಭಾ, ೪. ೩೭)

ಸಮಱಿ ನೆಗಳ್

[ಕ್ರಿ]ಆಚಾರವಂತನಾಗಿ ನಡೆದುಕೊ (ಮಿಥ್ಯಾದೃಷ್ಟಿಯಪ್ಪಂ ತನ್ನನೆಂತುಂ ಸಮಱಿ ನೆಗೞ್ದೊಡಂ ಆತಂ ಅಪಾತ್ರಮೆ:ಆದಿಪು, ೧೦. ೯. ವ)

ಸಮಱಿಕೊಳ್

[ಕ್ರಿ]ನಯಗೊಳ್ಳು, ಲೆಕ್ಕಾಚಾರ ಹಾಕು (ಮುನ್ನ ಸಾಮಮನೆಮ್ಮ ಮನನ್ನೋಡಲ್ ನುಡಿದು ಭೇದಮಂ ದಂಡಮುಮಂ ನಿನ್ನಱಿವನಿತಂ ನುಡಿದೆ ಇದೇನ್ನುಡಿಗಳೊ ಸಮಱಿಕೊಂಡ ನುಡಿಗಳ್ ನಿನ್ನಾ:ಆದಿಪು, ೧೪. ೬೪)

ಸಮಱು

[ಕ್ರಿ]ನಯಗೊಳಿಸು (ಶ್ರುತಸ್ಕಂಧಮಾದಱಿವಿಂ ಗಣನಾಯಕರ್ ಸಮಱೆ ಭವ್ಯಶ್ರೇಣಿಗೆ ಅವ್ಯಾಜದಿಂದಱಿಯಲ್ಕೆ:ಆದಿಪು, ೧. ೩೯);[ಕ್ರಿ]ತಿದ್ದು (ಸಮಱಿದ ಮದನನ ಒಡ್ಡಣದಂತೆ ಸಮಱಿದ ಪುರ್ವುಂ ಪುರ್ಬೆಂಬ ಕರ್ಬಿನ ಬಿಲ್ಲಿಂ ಬರ್ದುಂಕಿದ ಮದನನಲರೆಂಬಿನಂ:ಆದಿಪು, ೪. ೪೧ ವ);[ಕ್ರಿ]ಸರಿಪಡಿಸು (ಮಾನೋನ್ನತರ್ ಈಗಳುಂ ಅೞ್ಕಱೊಳ್ ಎನ್ನಂ ಸಮಱಲ್ಕೆ ಬಂದರ್ ಇಂತುಟೆ ಮೋಹಂ:ಆದಿಪು, ೫. ೬೭);[ಕ್ರಿ]ಬಾಚು, ಹಿಕ್ಕು (ಜಿನಜನನಿಯವೊಲ್ಗುರುಳಂ ಸಮಱುವ ಕನ್ಯಕೆ ಕರಮೆಸೆದಳ್ ತಳಿರೊಳಳಿಗಳಂ ಮುಚ್ಚುವವೋಲ್:ಆದಿಪು, ೭. ೮);[ಕ್ರಿ]ನಾಶಮಾಡು (ನಿನಗರಸ ಬಹಿರ್ಮಂಡಲಮನೆ ಸಮಱಲ್ಕಿನಿತು ಬರಿಸಮುಂ ಪೋದುವು:ಆದಿಪು,೧೪. ೧೫);[ಕ್ರಿ]ಸಿದ್ಧಪಡಿಸು (ಮರುತ್ಸೂನು ಸಮಱಿದಂ ಕೊಳುಗುಳಮಂ:ಪಂಪಭಾ, ೧೩. ೯೨)

ಸಮವಕಾರ

[ನಾ]ದಶರೂಪಕಗಳಲ್ಲಿ ಒಂದು ಪ್ರಭೇದ, ದೇವಾಸುರ ಯುದ್ಧವಸ್ತುವಿನ ಮೂರಂಕ ಉಳ್ಳದ್ದು (ಭಗವಜ್ಜನ್ಮಾಭಿಷೇಕ ಸಂಬಂಧಿಯಾಗೆ ತನ್ನ ಪೊಸತೆ ಸಮೆದ ಸಮವಕಾರರೂಪಕಮಂ .. .. ಸುರಾಸುರಸಭೆಗಂ ಮೆಱೆಯಲೆಂದು:ಆದಿಪು,೭. ೧೧೫ ವ)

ಸಮವತೀರ್ಣ

[ಗು]ಕಾಣಿಸಿಕೊಂಡ (ಆ ತ್ರಿಲೋಕತಿಲಕನ ಜನ್ಮೋತ್ಸವದೊಳ್ ಏಕಸಮಯಸಮವತೀರ್ಣ ಸರ್ವರ್ತುಕ ನಂದನ ವಿಕಸತ್:ಆದಿಪು,೭. ೩೬ ವ)

ಸಮವಸರಣ

[ನಾ][ಜೈನ] ತೀರ್ಥಂಕರನು ಧರ್ಮೋಪದೇಶ ಮಾಡಲು ಕುಬೇರನು ನಿರ್ಮಿಸಿದ ಮಂಟಪ (ಸೌಧರ್ಮೇಂದ್ರಂ ಬಂದು ತನ್ನ ಬೆಸದೊಳ್ ಮುನ್ನಮೆ ಧನದವಿನಿರ್ಮಿತಮಾಗಿರ್ದ ಸಮವಸರಣಮಂ ಕಂಡಂ:ಆದಿಪು, ೧೦. ೨೨ ವ)

ಸಮವಸೃತಿ

[ನಾ][ಜೈನ] ಸಮವಸರಣ (ಕೈಳಾಸಗಿರೀಂದ್ರಸ್ಥಿತ ಸಮವಸೃತಿಯಂ ಸಂಸೃತಿಲತಾವಿಚ್ಛೇದಿಯಂ ಪೊಕ್ಕು:ಆದಿಪು, ೧೫. ೨೧ ವ)

ಸಮವಾಯ

[ಗು]ಬೇರ್ಪಡಿಸಲಾರದಂತೆ ಕೂಡಿಕೊಂಡಿರುವುದು (ಸಮವಾಯಮಪ್ಪುದಲ್ತೆಂದು ಮನಂ ಬಸಮಾಡಿ ದೋಷವಿರಹಿತಂ ಆಪ್ತಂ ಕ್ರಮದೆ ಆಪ್ತನೆ ಪೇೞ್ದುದೆ ಆಗಮಂ:ಆದಿಪು, ೫. ೫೪)

ಸಮವೃತ್ತ

[ನಾ]ಸಮವೂ ಗುಂಡಗಿನದೂ ಆದ ಆಕೃತಿ (ಸಮವೃತ್ತಮುಂ ಎನಿಸಿದ ಈಷತ್ಪ್ರಾಗ್ಭಾರದ ಮೇಗಣ ಘನೋದಧಿ ಘನಾನಿಳ ತನುವಾತತ್ರಿತಯಭಾಗದೊಳ್:ಆದಿಪು, ೧೬. ೫೧ ವ)

ಸಮಸತ್ವ

[ನಾ]ಒಂದೇ ಬಗೆಯ ಸಾಮರ್ಥ್ಯ (ಈಶ್ವರನುಂ ಪಾರ್ವತಿಯುಂ ಎನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನಾನುರಾಗಮಂ ಪಡೆಯೆ:ಪಂಪಭಾ, ೫. ೨೮ ವ)

ಸಮಸಮಾಯೋಗ

[ನಾ]ಹೊಂದಾಣಿಕೆ (ಸದೃಶಾಕಾರರ್ ಇವರಂ ಕೂಡಿ ಪಯೋರುಹಜಂಗೆ ಅಕ್ಕೆ ಸಮಸಮಾಯೋಗಯಶಂ:ಆದಿಪು, ೪. ೨೯)

ಸಮಸಲ್

[ಕ್ರಿ]ಸಮಾನವಾಗಿ ಕೂಡಿಕೊ, ಉಂಟಾಗು (ಸಮಸಂದುದಾ ಪರಮಯೋಗಿಗೆ ಯೋಗನಿಯೋಗ ಭಾವನಂ:ಆದಿಪು, ೧೦. ೧೪)

ಸಮಸ್ತಭಾರತ

[ನಾ] ಭಾರತ ಕಾವ್ಯ, ಸಮಕಾಲ ಪ್ರಸ್ತುತ ಭಾರತ (ಕತೆಯ ಮೆಯ್ಗೆಡಲೀಯದೆ ಮುಂ ಸಮಸ್ತಭಾರತಮಂ ಅಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ:ಪಂಪಭಾ,೧. ೧೧)

ಸಮಾಕರ್ಣಿತ

[ಗು]ಚೆನ್ನಾಗಿ ಕೇಳಿಸಿಕೊಂಡ (ಭರತೇಶ್ವರಂ ತಾನುಂ ಮುನ್ನೆ ಭಟ್ಟಾರಕರ ಸಮಕ್ಷದೊಳ್ ಸಮಾಕರ್ಣಿತ ಉಪಾಸಕ ಅಧ್ಯಯನನಪ್ಪುದಱಿಂದಂ:ಆದಿಪು,೧೫. ೧೩ ವ)

ಸಮಾಕಾರ

[ನಾ]ಸಾಕಾರನಾದವನು(ಅಮೂರ್ತರ್ ಚರಮತನು ಸಮಾಕಾರರ್ ಉದ್ಧೂತಲೇಪರ್ ಪ್ರಣುತರ್ .. .. ಸ್ವಕೀಯಪ್ರಭುತೆಯನೆಮಗಂ ಮಾೞ್ಕೆ ಅತಿಪ್ರೀತಿಯಿಂದಂ:ಆದಿಪು, ೧. ೨)

Search Dictionaries

Loading Results

Follow Us :   
  Download Bharatavani App
  Bharatavani Windows App