Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸಕ್ಕ
[ನಾ][ಸೃಕ್ವ] ಕಟವಾಯಿ, ಬಾಯಿಯ ಕೊನೆ (ಭಾರ್ಗವರ್ ಸುರಿಗಿಱಿವಂತಿಱಿಯೆ ಸೂಸುವ ಕೆನ್ನೆತ್ತರ್ ಕೞಲ್ದುದಿರ್ವ ಸಕ್ಕದ ಸಿಪ್ಪುಗಳುಂ .. .. ಅಗುರ್ವಂ ಪಡೆಯೆ:ಪಂಪಭಾ,೧೦. ೯೩ ವ)
ಸಕ್ಕಿ
[ನಾ]ಸಾಕ್ಷಿ (ಮದೀಯಾಯಾತಿಯ ದೊರೆಗೆ ನೀಂ ಸಕ್ಕಿಯೆಂಬಂತಿರೆ ನೀಳ್ಪಿಂ ಪರ್ವಿ ಪೂರ್ವಾಪರಜಳಧಿಗಳಂ ಮುಟ್ಟಿ ನಿಂದತ್ತಗೇಂದ್ರಂ:ಆದಿಪು, ೯. ೧೧೫)
ಸಕ್ಕಿಡು
[ಕ್ರಿ]ಸಾಕ್ಷಿಯಾಗಿರಿಸಿಕೊ, ಕಣ್ಣೆದುರಿಗಿರಿಸಿ (ಸೇನಾಪದವಿಯೊಳ್ ನೀನೆ ನಿಲ್ ನಾಳೆ ದುರ್ಯೋಧನನಂ ಸಕ್ಕಿಟ್ಟು ಮಾರಾಂತು ಅದಟರೊಳಳವಂ ತೋಱುವಂ ನೀನುಂ ಆನುಂ:ಪಂಪಭಾ, ೧೨. ೪೫)
ಸಕ್ಕಿಮಾಡು
[ಕ್ರಿ]ಸಾಟಿಮಾಡು (ನೀಮೆ ಗಂಭೀರರಿರ್ ಅಂತಸ್ಸಾರರಿರ್ ನೀಮಿರೆ ಪೆಱರೊಳರೇ ಸಕ್ಕಿಮಾಡಲ್ಕೆ ವಿಶ್ವಂಭರೆಯೊಳ್:ಆದಿಪು, ೯. ೧೧೫)
ಸಕ್ತ
[ಗು]ತಲ್ಲೀನ (ಸಾರಹಂಸಕೋಕಿಳಕುಳಧ್ಯಾನೋತ್ಕರಂ ಚೆಲ್ವನಾಯ್ತು ಕರಂ ಸಕ್ತನಿಳಿಂಪದಂಪತಿಗಳಿಂದಾ ನಂದನಂ ನಂದನಂ:ಪಂಪಭಾ,೫. ೮೦)
ಸಂಕ್ರಂದನನಂದನತನಯ
[ನಾ] ಇಂದ್ರನ ಮಗನಾದ ಅರ್ಜುನನ ಮಗ, ಅಭಿಮನ್ಯು (ಒಂದೆ ಸರಲಿಂದಮವನೆರ್ದೆಯಂ ದೊಕ್ಕನೆ ತಿಣ್ಣಮೆಚ್ಚು ಕೊಲಲೊಲ್ಲನೆ ಸಂಕ್ರಂದನನಂದನತನಯಂ ತಂದೆಯ ಪೂಣ್ಕೆಯನೆ ನೆನೆದು ದುಶ್ಶಾಸನನಂ: ಪಂಪಭಾ, ೧೧. ೯೬)
ಸಂಕ್ರಮ
[ನಾ] ಸೇತುವೆ (ಮಹಾನದಾವಗಾಹನಸಮಯ ನೌದ್ರೋಣಿ ಸಂಕ್ರಮಾದಿವಿಧಾನ ಪ್ರಾಗ್ಲಲ್ಭ್ಯನುಂ ಅನುಸ್ಮರಣಮಾತ್ರ ನಿಷ್ಪಾದಿತ ಸಪ್ತತಳಾದಿ ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)
ಸಂಕ್ರಮಿಸು
[ಕ್ರಿ]ಸೇರು (ಯಶಸ್ವತಿ ಮಹಾದೇವಿಯ ಗರ್ಭಾವಾಸದೊಳ್ ಶುಕ್ತಿಪುಟೋದರವರ್ತಿಯಪ್ಪ ನಿರ್ಮಳೋದಕಬಿಂದುವಿನಂತೆ ಸಂಕ್ರಮಿಸೆ:ಆದಿಪು, ೮. ೨೯ ವ);[ಕ್ರಿ]ಸೇರಿಸು (ಕುಂತಿಯ ದಿವ್ಯಗರ್ಭೋದರಮೆಂಬ ಶುಕ್ತಿಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದಬಿಂದುವಂ ಇಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದಂ:ಪಂಪಭಾ,೧. ೧೩೯ ವ)
ಸಂಕ್ರಾಂತ
[ಗು] ಕೂಡಿದ (ಪರಸ್ಪರಸ್ಪರ್ಧಮಾನ ಪರಿಕ್ಷಿಪ್ತ ಮಲ್ಲಿಕಾಮುಕುಳ ಮುಕ್ತಾಫಳೋಪಶೋಭಿತದೊಳ್ ಇಂದ್ರನೀಲಮಣಿ ಕುಟ್ಟಿಮಸಂಕ್ರಾಂತ ಮೌಕ್ತಿಕದಾಮಾಭಿರಾಮದೊಳ್: ಆದಿಪು, ೮. ೬೭ ವ)
ಸಂಕ್ರುದ್ಧ
[ಗು] ಕೋಪೋದ್ರಿಕ್ತ (ಸಮದಾರಾತಿಮರಾಳನೀರದರವಂ ಸಂಕ್ರುದ್ಧವೈವಸ್ವತೋಪಮ ವಿದ್ವಿಷ್ಟಫಣೀಂದ್ರಚಂದ್ರಕಿರವಂ: ಆದಿಪು, ೧೧. ೧೦)
ಸಂಕ್ಲೇಶ
[ನಾ] ತೊಂದರೆ, ಕಷ್ಟ (ಅವರೋದುವಾವಾಸದೊಳ್ ಸಂಕ್ಲೇóಶಮಾಗೆ ಸಾರಮೇಯಪೂತಿ ಕಳೇವರಮಂ ಇಕ್ಕಿದೊಡೆ: ಆದಿಪು, ೩. ೩೮ ವ)
ಸಂಗ
[ನಾ]ಸಮಾಗಮ (ಅಭಿನವಸಂಗಸಮುತ್ಪನ್ನ ಸಾಧ್ವಸ ರಸರಮಣೀಯತರ ಮುಗ್ಧವಧೂವದನವಿಲೋಕನ ಸುಖಮನನುಭವಿಸಿ:ಆದಿಪು, ೪. ೫೧ ವ);[ನಾ]ಸಂಪರ್ಕ (ಜಿನಸ್ನಪನಾಂಬು ತಜ್ಜಿನತನುಶ್ರೀಸಂಗದಿಂ ತಾನೆ ಪಾವನಮಾಯ್ತೇ:ಆದಿಪು, ೭. ೯೬)
ಸಂಗಡ
[ನಾ]ಸಹವಾಸ (ಎಮ್ಮೊಳಾದೀ ಸಂಗಡಮಂ ನೀಮೆ ಮನಂಗೊಂಡು ಎಮ್ಮ ಕಿಸುರ್ ಪಿಂಗುಗೆ ಅಗಲ್ವೆಡೆಯೊಳ್:ಆದಿಪು, ೧೧. ೧೩೩)
ಸಂಗಡಂಗೊಳ್
[ಕ್ರಿ] ಜೊತೆಗೂಡು (ಪಚ್ಚೆಯ ಪಸಲೆಯ ಪಸುರನಸಕಳಿದು ನಿಮಿರ್ದ ನೆಲವಡಲಗೆಯ ಜಾಗಂಗಳುಮವನೆ ಸಂಗಡಂಗೊಂಡಿರ್ದ ಸತ್ತಿಸಂಗಡಂಗಳುಂ: ಆದಿಪು, ೮. ೧೫ ವ)
ಸಂಗಡಮಿೞ್ತು
[ನಾ]ಕೂಡಿ ಸಾಯುವುದು (ಪಡಲಿಟ್ಟಂತೆವೊಲಾಯ್ತು ಕೀಚಕಬಲಂ ಗಂಧರ್ವರಿಂದಿಂದಿರುಳ್ಗಡಿದೇಂ ಸಂಗಡಮಿೞ್ತುವಾಯ್ತೆ:ಪಂಪಭಾ,೮. ೮೧)
ಸಗಣನೀರ್
[ನಾ]ಸಗಣಿಯ ನೀರು (ಕತ್ತುರಿಯ ಸಗಣನೀರ್ ಬಿಡುಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂಪತ್ತಿನ ಬಿತ್ತರದೆತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಲೆಲ್ಲಂ:ಪಂಪಭಾ, ೩. ೨)
ಸಂಗತ
[ನಾ] ಗುಂಪು (ಸಂಗತದಿಂ ಈಗಳ್ ಇಂತೀ ರಂಗಮೆ ರಣರಂಗಮಾಗೆ ಕಾದುವಂ ಅಳವಂ ಪೊಂಗದಿರ್ ಇದಿರ್ಚು ಅದೇಂ ಗಳ ರಂಗಂಬೊಕ್ಕಾಡುವಂತೆ ಪೆಂಡಿರ್ ಗಂಡರ್: ಪಂಪಭಾ, ೨. ೮೦); [ಗು] ಸೇರಿಕೊಂಡ (ಸಂಗತ ಧೂಮಾವಳಿಯಂ ಇಭಂಗಳೆ ಗೆತ್ತು ಒಳಱೆ ಪಾಯ್ದು ಪೊಗೆ ಪುಗೆ ಕಣ್ಣಂ: ಪಂಪಭಾ, ೫. ೯೨)
ಸಂಗತಂಗಳು
[ನಾ]ಹೊಂದಿಕೊಂಡವು (ಕನಕರಜತಮಯ ಅನೇಕಭಂಗಿಭೃಂಗಾರಂಗಳುಂ ಅವಱೊಳ್ ಸಂಗತಂಗಳಾಗಿ ಮಣಿವಿತಾನ ನಾನಾಮಯೂಖಂಗಳೊಳ್ ಸೆಣಸಿ ಬೆಳಗುವ:ಆದಿಪು, ೮. ೧೫ ವ);[ನಾ]ಆತ್ಮೀಯತೆಯಿಂದಿರುವವು (ವಿನಯಮುಂ ಎಱಕಮುಂ ಅಪ್ಪುದು ಸನಾಭಿಗಳ್ ಸಂಗತಂಗಳಪ್ಪೊಡೆ:ಆದಿಪು, ೧೪. ೭೬)
ಸಂಗತಿ
[ನಾ]ಕೂಡುವಿಕೆ (ನಿನ್ನಿರವಂ ತಳೆದೊಪ್ಪುತಿರ್ಪ ತತ್ಸರಸಿಗೆ ಮಾಡಲಿಂದು ನವಸಂಗತಿಯಂ ನಡೆ ಮನ್ಮನೋರಮೇ:ರಾಜಶೇವಿ, ೧೦. ೬೧);[ನಾ]ಸಹವಾಸ (ಆ ಜಡಧಿಸಂಗತಿಯಿಂ ಜಡಬುದ್ಧಿ ಬುದ್ಧಿಯಂ ತೊಲಗಿಸಿತಕ್ಕುಂ ಅಲ್ಲದೊಡೆ ನೀನಿನಿತಂ ನುಡಿವೈ ಪಳಾಳಮಂ:ಪಂಪಭಾ, ೯. ೪೪)
ಸಂಗತ್ವ