Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸಂಚೂರ್ಣಿತ
[ಗು] ಪುಡಿಯಾದ, ಮುರಿದ (ವೃಕೋದರ ಗದಾಸಂಚೂರ್ಣಿತ ಊರುಯುಗಳನುಂ ಭೀಮಸೇನಚರಣ ಪ್ರಹರಣಗಳಿತ ಶೋಣಿತಾರ್ದ್ರ ಮೌಳಿಯುಂ ಆಗಿ: ಪಂಪಭಾ, ೧೩. ೧೦೨ ವ)
ಸಂಚೂರ್ಣಿತಮತಿ
[ನಾ]ಘಾತಕ ಬುದ್ಧಿ[ಯವನು] (ಆ ವಾಕ್ಯಮುಂ ವಿಜ್ಞಾನಮೆಂಬೆಯಪ್ಪೊಡೆ ಪೂರ್ವೋಕ್ತ ದೋಷಪಾಷಾಣ ಸಂಚೂರ್ಣಿತಮತಿಯೇ ಏನನೇತಱೊಳ್ ನಿಶ್ಚಯಿಸುವಯ್:ಆದಿಪು, ೨. ೧೦ ವ)
ಸಂಚೂಳಿಕಾ[ಕೆ]
[ನಾ]ಬೆಟ್ಟದ ತುದಿ (ಮಣಿಮಯಕಿರೀಟ ಉದಗ್ರವಿಸ್ಫುರಿತ ಸಂಚೂಳಿಕಾ ಕನಕಾಚಳಮನೆ ಪೋಲ್ತು:ಆದಿಪು, ೧೪. ೧೦೮ ವ)
ಸಂಛನ್ನ
[ಗು] ಮುಚ್ಚಿದ (ಶ್ವದಂಷ್ಟ್ರಾರ್ಗಳೋಪರಿಮ ಸಂಛನ್ನಂಗಳುಂ ಅಪ್ಪ ಯಂತ್ರಾಯುಧಾವರಣೋಪಕರಣ ಪರಿಣತಂಗಳಾಗಿರ್ದ ದುರ್ಗಂಗಳೊಳ್: ಆದಿಪು, ೧೩. ೫೭ ವ)
ಸಂಛಾದನ
[ಗು]ಆವರಿಸುವ (ವಿನಯಾಮೃತಮರೀಚಿ ಸಂಛಾದನ ಅಂಬೋಧಸಂತತಿಯುಭಯಲೋಕ ವಿವೇಕ ವಿಲೋಚನಾಸ್ತಮಯ ವೇಲೆಯುಂ:ಆದಿಪು,೧೪. ೧೨೨ ವ)
ಸಂಛಾದಿತ
[ಗು] ಮುಸುಕಲ್ಪಟ್ಟ (ಸಿಂಹಾಸನಮಸ್ತಕಸ್ಥಿತನುಂ ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರಸಂಛಾದಿತನುಂ ಆಗಿ ವಿಕ್ರಾಂತತುಂಗಂ ಒಡ್ಡೋಲಗಂಗೊಟ್ಟಿರೆ: ಪಂಪಭಾ, ೧೪. ೨೧ ವ)
ಸಂಜನಿತ
[ಗು] ಹುಟ್ಟಿದ, ಮೂಡಿದ (ಮುಕ್ತಿಸಾಮ್ರಾಜ್ಯದೊಳ್ ಅತಿಪ್ರಾಜ್ಯ ಸಂಜನಿತನಿಸ್ಪೃಹನಂ ಅನವರತ ಕಲ್ಯಾಣ ಪರಿಮಿತದೊಳ್ .. .. ನಿಱಿಸುವುದುಂ: ಆದಿಪು, ೮. ೮ ವ)
ಸಂಜಾತದಯ
[ನಾ] ದಯಾವಂತ (ಆತತ ಯಶೋವಿತಾನಂ ಅಜಾತಭಯಂ ಪೂರ್ವಪರಿಮಿತ ಆಯುಷ್ಯಂ ಸಂಜಾತದಯಂ: ಆದಿಪು, ೬. ೬೪)
ಸಂಜೆಗವಿ
[ಕ್ರಿ][ಸಂಜೆ+ಕವಿ] ಸಾಯಂಕಾಲ ಆವರಿಸು(ಭೂತಾಂಗನಾನಿಕರಂ ಶೋಣಿತವಾರಿಯಂ ಕುಡಿದು ಅಗುರ್ವಪ್ಪನ್ನೆಗಂ ಸೂಸೆ ನೋಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ;ಪಂಪಭಾ, ೧೨. ೨೫)
ಸಜ್ಜನವೆಂಡಿರ್
[ನಾ]ಕುಲಸ್ತ್ರೀ (ತೆಱಂಬೊಳೆವ ಬಾಳೆಗಳಂತಿರೆ ನಾೞ್ವಿಳಾಸದೊಳ್ ಪೊರೆದಿರೆ ಬಂದುದಂದೊಡನೆ ಸಜ್ಜನವೆಂಡಿರ ತಂಡಮೋಳಿಯೊಳ್:ಆದಿಪು, ೧೧. ೪೬)
ಸಜ್ಜರಸ
[ನಾ]ರಾಳ ಎಂಬುದರ ರಸ(ಅರಗು ಮೊದಲಾಗೆ ಧೃತ ಸಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಿಂ ವಿಸ್ತರಿಸಿ ಸಮೆದ ಇಂದ್ರಭವನಮೆ ಧರೆಗವತರಿಸಿರ್ದುದೆನಿಸುವ ಅರಗಿನ ಮನೆಯಂ:ಪಂಪಭಾ, ೩. ೩)
ಸಜ್ಜಾತಿ
[ನಾ][ಜೈನ] ಸತ್ಕುಲದಲ್ಲಿ ಹುಟ್ಟುವ ಪರಿಶುದ್ಧ ಜನ್ಮ (ಸಜ್ಜಾತಿ ಸದ್ಗೃಹತ್ವ ಪಾರಿವ್ರಾಜ್ಯಪದ ಸುರೇಂದ್ರತ್ವ ಸಾಮ್ರಾಜ್ಯ ಪರಮಾರ್ಹಂತ್ಯ ಪರಿನಿರ್ವಾಣಮೆಂಬ ಏೞುಂ ಪರಮಸ್ಥಾನನಾಮ:ಆದಿಪು,೧೫. ೧೬ ವ)
ಸಂಜ್ವಲನ
[ನಾ][ಜೈನ] ಚಾರಿತ್ರ್ಯದ ಪರಿಪೂರ್ಣತೆಗೆ ಪೂರಕವಾದ ಕರ್ಮ (ತನ್ನ ಪರಿಣಾಮವಿಶೇಷದಿಂ ಚತುಃ ಸಂಜ್ವಲನ ನವನೋಕಷಾಯಂಗಳೆಂಬ ಪದಿಮೂಱು ಪ್ರಕೃತಿಗಳುಮಂ ಅಂತಃಕರಣಂ ಮಾಡಿ:ಆದಿಪು, ೧೦. ೧೪ ವ)
ಸಟ
[ನಾ]ಸಿಂಹದ ಕೇಸರಗಳು(ಪರೆದ ಉರಿಗೇಸಂ ಅವ್ವಳಿಪ ನಾಲಗೆ ಮಿಂಚುವ ದಾಡೆ ಬಿಟ್ಟ ಕಣ್ ತಿರುಪಿದ ಮೀಸೆ ಕೊಂಕಿದ ಸಟಂ ಕಡು ನೆಕ್ಕ ಕದಂಪು:ಪಂಪಭಾ, ೧೨. ೭)
ಸಟ್ಟುಗ
[ನಾ]ಸೌಟು(ಅನ್ನೆಗಂ ಭೀಮಸೇನನುಂ ಬೋನವೇಳಿಗೆಯಂ ಸಟ್ಟುಗಮುಮಂ ಒರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು:ಪಂಪಭಾ, ೮. ೫೩ ವ)
ಸಡಹುಡ
[ನಾ]ಚುರುಕುತನ, ಲವಲವಿಕೆ, ಸಂಭ್ರಮ(ಸಡಹುಡನಪ್ಪ ಕೞ್ತೆ ಕೊಡೆ ಸಂತಸದಿಂ ಪೆಱಗೇಱಿ ಬರ್ಪ ಕನ್ನಡಿವಿಡಿದಾಕೆ ಚಿನ್ನದ ಸವಂಗಂ:ಪಂಪಭಾ, ೯. ೧೦೩)
ಸಡಿಲಿಸು
[ಕ್ರಿ]ಅಳ್ಳಕಗೊಳಿಸು (ಬಿಡದೆ ಪೊಗೆ ಸುತ್ತೆ ತೋಳಂ ಅಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂದೊಡಗಳೆದರ್:ಆದಿಪು,೫. ೨೪)
ಸಡಿಲ್
[ಕ್ರಿ][ಶಿಥಿಲ] ಕಡಿಮೆಯಾಗು (ನಾನಾಯೋನಿಗಳೊಳ್ ಸುೞಿದೇನಾನುಂ ದುಷ್ಕೃತಂ ಸಡಿಲ್ದೊಡೆ ಪಡೆಗುಂ ಮಾನುಷ್ಯಮಂ:ಆದಿಪು, ೯. ೪೮);[ಕ್ರಿ]ಅಳ್ಳಕಗೊಳ್ಳು (ಬಿದಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊಯ್ಯಗೆ ನಗೆಗಣ್ಗಳ್ ಆಲಿ ಮಗುೞ್ದಂತಿರೆ ಮುಚ್ಚಿರೆ:ಪಂಪಭಾ,೨. ೧೯)
ಸಡಿಲ್ಚು
[ಕ್ರಿ]ಸಡಿಲಿಸು (ಪೊರೆಯೊಳ್ ಪೊಂಗಿರೆ ತಂಬೆಲರ್ಪೊರೆಯಂ ಸಡಿಲ್ಚೆ ನಡು ಪೊಂಗಿರೆ ಮಲ್ಲಿಗೆಗಳೊಳ್ ವಸಂತದೊಳ್ ಬಿರಿದೊಡೆ:ಆದಿಪು,೧೧. ೧೦೬)
ಸಣಂಬು