Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸೇಕ
[ನಾ]ಉಗುಳುವುದು (ವಾಸವವನಿತಾ ವದನಾಬ್ಜ ಆಸವ ಸೇಕ ಪ್ರಭಿನ್ನಮುಕುಳಂ ವಕುಳಂ:ಆದಿಪು, ೬. ೯೭);[ನಾ][ಶಾಖ] ತಾಪ(ಕೆಂದಳಿರ್ವಾಸೆ ಸೇಕದ ತೊವಲ್ಗೆಣೆಯಾಯ್ತು ಮೃಣಾಳನಾಳವೊಂದೆಡೆವೊತ್ತಿ ಪತ್ತಿದುವು:ಪಂಪಭಾ, ೫. ೭)
ಸೇಚನ
[ನಾ] ಸಿಂಪಡಣೆ, ಚಿಮುಕಿಸುವಿಕೆ (ನವರುಧಿರಜಳಚಳತ್ ಸೇಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಣರಂಗಭೂಮಿಯೊಳ್: ಪಂಪಭಾ, ೧೦. ೭೦ ವ)
ಸೇತಮಾಲೆ
[ನಾ]{ಶ್ವೇತ+ಮಾಲಾ] ಬಿಳಿಯ [ಮುತ್ತಿನ] ಹಾರ (ಕಟ್ಟಿದೈಸರದೊಂದು ಬೆಡಂಗಿನ ಸೇತಮಾಲೆ ಪಟ್ಟಿಗೆ ಕಟಿಸೂತ್ರಮೆಂಬಿವು ಮನಂಗೊಳೆ:ಆದಿಪು, ೧೨. ೧೨)
ಸೇತು
[ನಾ]ಸೇತುವೆ(ಅಧಿಕಬಳನಳಕರತಳಗಳಿತ ಕುಳಶೈಲ ಸಹಸ್ರಸಂತಾನ ಕಳಿತ ಸೇತುಬಂಧುರಮಪ್ಪ ದಕ್ಷಿಣಸಮುದ್ರದ ತಡಿವಿಡಿದು ಬಂದು:ಪಂಪಭಾ, ೪. ೧೮ ವ)
ಸೇತುಬಂಧ
[ನಾ] ರಾಮಸೇತು (ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಲ ಬಡಗಣ ನೆಲನಂ ದುರ್ಯೋಧನನಾಳ್ವುದು: ಪಂಪಭಾ, ೪. ೮ ವ)
ಸೇದೆ
[ನಾ][ಸ್ವೇದ] ಆಯಾಸ (ನುಡಿವೊಡೆ ಲಲ್ಲೆಯೆಂಗುಂ ಎರ್ದೆವೇೞ್ವೊಡೆ ಕೈತವಮೆಂಗುಂ ಆಸೆಯಿಂ ಪಿಡಿದೊಡೆ ಸೇದೆಯೆಂಗುಂ:ಆದಿಪು, ೧೨. ೩೨)
ಸೇದೆಗಿಡು
[ಕ್ರಿ]ದಣಿವಿನಿಂದ ಬಳಲು (ಪರಲೋಕಸುಖಾರ್ಥಂ ಆತ್ಮಾಸ್ತಿತ್ವಾಭಿನಿವೇಶದಿಂ ತನುಧನನಿಧನಂ ಮಾಡಿ ಸೇದೆಗಿಡಲ್ವೇಡ:ಆದಿಪು, ೨. ೯ ವ)
ಸೇನಾನಾಯಕ
[ನಾ][ಜೈನ] ಚಕ್ರವರ್ತಿಯ ಹದಿನಾಲ್ಕು ರತ್ನಗಳಲ್ಲೊಂದು, ಸಾಕೇತನಗರದಲ್ಲಿ ಹುಟ್ಟಿದ್ದು (ಸಾಕೇತನಗರದೊಳ್ ಪುಟ್ಟಿದ ಸೇನಾನಾಯಕ ಪುರೋಹಿತ ಗೃಹಪತಿ ತಕ್ಷಕರತ್ನಂಗಳುಂ:ಆದಿಪು, ೧೫. ೩ ವ)
ಸೇನಾನಿರತ್ನ
[ನಾ][ಜೈನ] ಜೀವರತ್ನಗಳಲ್ಲಿ ಒಂದು, ಚಕ್ರವರ್ತಿಯ ಸೇನಾಧಿಪತಿ (ಷಡ್ವಿಧಸೇನಾನಾಯಕ ಪರಾಯಣನುಮಪ್ಪ ಅಯೋಧ್ಯನೆಂಬ ಸೇನಾನಿರತ್ನಮುಂ:ಆದಿಪು,೧೧. ೩ ವ)
ಸೇವಾ
[ನಾ]ಸೇವನೆ, ಕುಡಿತ (ಪಲಬರರಸುಗಳ್ ಪ್ರಾಜ್ಯಸಾಮ್ರಾಜ್ಯಲಕ್ಷ್ಮೀಪದಮಂ ಕೈಕೊಂಡು ತಮ್ಮಂ ಮಱೆದು ವಿಷಯಭೋಗಾಸವಾತ್ಯಂತಸೇವಾಮದದಿಂದಂ:ಆದಿಪು,೯. ೫೮)
ಸೇವಾಧರ್ಮ
[ನಾ]ಆದಿನಾಥನು ‘ಸಕಳಕ್ಷತ್ರಿಯವಣಿಕ್ಶೂದ’್ರರಿಗೆ ನಿಯಮಿಸಿದ ಜೀವನೋಪಾಯದ ಕರ್ಮಗಳು: (ಸೇವಾಧರ್ಮೋಚಿತಮೆನಿಸುವ ಅಸಿಕರ್ಮಮುಮಂ ಅನೇಕ ಲಿಪಿವಿಧಾನಂಗಳಪ್ಪ ಮಷಿಯುಮಂ ಕೃಷೀವಲ ಕುಲೋಚಿತಮಪ್ಪ ಕೃಷಿಯುಮಂ ಶಾಸ್ತ್ರಾನುಗತಮಪ್ಪ ವಿದ್ಯೆಯುಮಂ ವಣಿಗ್ವ್ಯವಹಾರಾನುಕಾರಿಯಪ್ಪ ವಾಣಿಜ್ಯಮುಮಂ:ಆದಿಪು, ೮. ೬೪ ವ)
ಸೇವಿಸು
[ಕ್ರಿ]ಕುಡಿ (ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟಂ ಆಗಳಂಬುಜಮಿತ್ರಂ:ಪಂಪಭಾ, ೩. ೨೩)
ಸೇವೆ
[ನಾ]ಸೇವನೆ, ಉಣ್ಣುವಿಕೆ (ನೋಡಿ ಕಣ್ತಣಿವಿನಂ ಅಪ್ಪಿ ತೋಳ್ ತಣಿವಿನಂ ಸುರತಾಮೃತಸೇವೆಯೊಳ್ ಮನಂ ತಣಿವಿನಂ ಆದ ಅಲಂಪು ಮಿಗೆ:ಆದಿಪು, ೨. ೭೦)
ಸೇವ್ಯ
[ಗು]ತಿನ್ನಲು[ಅನುಭವಿಸಲು] ಯೋಗ್ಯವಾದ (ಬೆಳೆದೋರಂತೆಱಗಿರ್ದ ಶಾಳೀವನದಿಂ ಸೇವ್ಯಂ ನಗೋಪತ್ಯಕಂ:ಆದಿಪು,೧. ೬೪)
ಸೇಸಿಕ್ಕು
[ಕ್ರಿ]ಸೇಸೆಗೊಡು (ನೆರೆದಂತಃಪುರಕಾತೆಯರ್ ಪಲಬರುಂ ಸೇಸಿಕ್ಕೆಯುಂ ವಾರಸೌಂದರಿಯರ್ ಚಾಮರಮಿಕ್ಕೆಯುಂ ಉದಾತ್ತೋತ್ಸಾಹದಿಂ ರಾಜಂದಿರಮಂ ಪೊಕ್ಕಂ:ಆದಿಪು, ೧೨. ೧೨೯)
ಸೇಸೆ
[ನಾ]ಶೇಷಾಕ್ಷತೆ(ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಧಿಗಳಪ್ಪ ಶೇಷಾಕ್ಷತಂಗಳಂ ಈಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳ್ಳುತ್ತುಂ:ಪಂಪಭಾ, ೮. ೨೭ ವ)
ಸೇಸೆಗೊಳ್
[ಕ್ರಿ]ಹಾಕಿದ ಅಕ್ಷತೆಯನ್ನು [ಮಾಡಿದ ಆಶೀರ್ವಾದವನ್ನು] ಸ್ವೀಕರಿಸು (ಅರ್ಹತ್ಪದಮಂ ನೆನೆಯುತ್ತುಂ ಅನುಪ್ರೇಕ್ಷೆಯೆ ಮನದೊಳ್ ತೊಡರ್ದೊಡೆ ತಣ್ಮಲೆಯೆ ಸೇಸೆಗೊಳ್ ಖಚರಪತೀ:ಆದಿಪು, ೨. ೫೭)
ಸೈಕತ
[ನಾ]ಮರಳು (ಪೂತ ಅದಿರ್ಮುತ್ತೆಯ ಸುತ್ತಿಂ ಸುತ್ತಿದ ಸೈಕತಭೂತಳಂಗಳೊಳೆ ಮೆಲ್ಲನೆ ಬೀಡುವಿಡುತ್ತುಂ:ಆದಿಪು, ೪. ೫೮)
ಸೈತಿರ್
[ನಾ]ಸಮಾಧಾನದಿಂದಿರು (ಆ ದುಶ್ಶಾಸನ ಉರಃಸ್ಥಲ ಉಚ್ಛ್ವಸಿತ ಅಸೃಕ್ ಜಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ:ಪಂಪಭಾ, ೭. ೫೮)
ಸೈತು