Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸೈತು
[ಕ್ರಿ]ನೇರವಾಗಿ, ಚೆನ್ನಾಗಿ (ಇದಂ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳೆಸೆಗು ಎಂದು ಸೈತು ಅಜಿತಂ ಆದಿಯ ವೇದರಹಸ್ಯದೊಳ್ .. .. ನೆಱೆಯೆ:ಪಂಪಭಾ, ೧೦. ೬೪)
ಸೈದ
[ನಾ]ಸಜ್ಜನ, ನೇರವಾದವನು (ಎನಗಂ ಪಾಂಡುಗಂ ಇಲ್ಲ ಭೇದಂ ಎಳೆಯಂ ಪಚ್ಚಾಳ್ವಂ ಪಾಂಡುನಂದನರುಂ ಸೈದರೆ:ಪಂಪಭಾ, ೧೩. ೯)
ಸೈಪು
[ನಾ]ಪುಣ್ಯ (ಕಿವಿಯಂ ಇಂದೊಳದಿಂಚರಕಾಂತುಂ ಇಂತು ಕೋಮಳೆಯಸು ಮತ್ತಮೀ ಒಡಲೊಳಿರ್ದುದು ಎಮ್ಮಯ ಸೈಪು ಭೂಪತೀ:ಪಂಪಭಾ, ೫. ೧೯)
ಸೈರಣೆ
[ನಾ]ತಾಳ್ಮೆ (ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮಂ .. .. ಒಂದು ಮಾಡಿ ಲೋಕಮೆಲ್ಲಮಂ ಮರುಳ್ಮಾಡಲೆಂದು ಪೆಣ್ಮಾಡಿದನಕ್ಕುಂ:ಪಂಪಭಾ,೪. ೭೫ ವ)
ಸೈರಂಧ್ರಿ
[ನಾ]ಅಂತಃಪುರದ ದಾಸಿ, ಅಜ್ಞಾತವಾಸ ಕಾಲದಲ್ಲಿ ದ್ರೌಪದಿ ಹಾಕಿಕೊಂಡಿದ್ದ ವೇಷ (ಸೈರಂಧ್ರಿಯಂ ನೋಡಿ ಸೈರಿಸಲಾಱದೆ ಸಿಂಹಬಲಂ .. .. ತಮ್ಮಕ್ಕನಂ ಈಕೆ ಆರ್ಗೆ ಎಂದು ಬೆಸಗೊಂಡೊಡೆ:ಪಂಪಭಾ,೮. ೫೫ ವ)
ಸೈರಿಸು
ಸುಮ್ಮನಿರು (ಲತಾಂಗಿಯರ ಸುಯ್ಯ ಕಂಪಿಂಗಳಿಗಳ್ ಮೊಗಸಿ ಮುಸುಱಿದುವು ಪೊಸಗಂಪುಗಂಡು ಸೈರಿಸುವ ಮಧುಕರಂಗಳುಮೊಳವೇ: ಆದಿಪು, ೧೧. ೭೨);[ಕ್ರಿ]ತಾಳಿಕೊ, ಸಹಿಸಿಕೊ (ತೇಜಃಪುಂಜಮೆ ಕಣ್ಣೊಳ್ ಉಳ್ಕುವಂತೆ ಸೈರಿಸದೆಮೆಯಿಕ್ಕಿ ದೃಷ್ಟಿಯುದ್ಧದೊಳ್ ಸೋಲೆ:ಆದಿಪು, ೧೪. ೧೦೫ ವ);[ಕ್ರಿ]ಸಹಿಸಿಕೊ (ಇದಿರೊಳ್ ನಿಂದೊಡೆ ವಜ್ರಿ ಸೈರಿಸಂ ಇರಲ್ವೇಡ ಎಮ್ಮ ಒಳ್ವೊಕ್ಕು ನಿಲ್ ನೀನೆಂದು ಕಡಂಗಿ ಕಾಲ್ವಿಡಿವವೊಲ್:ಪಂಪಭಾ, ೪. ೨೪)
ಸೊಕ್ಕಿಸು
[ಕ್ರಿ] ಮತ್ತೇರಿಸು (ಮುಕ್ಕಳಿಸಿಯುಗುೞ್ವ ಮಧುವಿಂ ಮಿಕ್ಕೆಸೆವಾಮೋದಮಿದಱ ತಣ್ಗಂಪಿನೊಳ್ವೊಕ್ಕುದೆನೆ ಮಧುವ ಕಂಪಂ ಮುಕ್ಕುಳಿಸಿದ ವಕುಳಂ ಆರುಮಂ ಸೊಕ್ಕಿಸದೇ: ಆದಿಪು, ೧೧. ೧೨೪)
ಸೊಗಯಿಸು
[ಕ್ರಿ]ಸುಂದರವಾಗಿ ಕಾಣು (ದೇವಾಂಗವಸ್ತ್ರದ ಉಳ್ಳುಡೆಯೊಳ್ ಉಲಿವ ಸೂಸಕದ ತೊಂಗಲ್ವೆರಸು ಎೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ:ಪಂಪಭಾ, ೨. ೪೧ ವ)
ಸೊಗಸಿಕೆ
[ನಾ]ಚೆಲುವು (ದೆಯ್ವಬಲಂ ಸೊಗಸಿಕೆ ಮುಂಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡರ್ದಯ್ವರ ಬಾಲಕ್ರಿಯೆಯುಂ ಮುಯ್ವುಂ ನೋಡಿಸಿತು ತಾಯುಮಂ ತಂದೆಯುಮಂ:ಪಂಪಭಾ,೨. ೧೧)
ಸೊಡರಿಡು
[ಕ್ರಿ]ದೀಪ ಹಚ್ಚು (ಆದಿತ್ಯಂಗೆ ಸೊಡರಿಡಲುಂ ಇಂದ್ರಂಗೆ ದೇವಲೋಕಮಂ ಬಣ್ಣಿಸುವಂತೆಯುಂ ನಿನಗೇನೆಂದು ಕಜ್ಜಂಬೇೞ್ವುದು:ಪಂಪಭಾ,೯. ೧೮ ವ)
ಸೊಡರ್
[ನಾ]ದೀಪ (ಕನಕಪ್ರಾಸಾದಪಙ್ತಿಗಳ ಪೞಪೞನೆ ಬೆಳಗುವ ಸೊಡರ್ಗಳಂ ಆದಿತ್ಯನ ನಂಟರೆಂದು ತಮೋರಾಜಕಂ ಮುಳಿದು:ಪಂಪಭಾ, ೪. ೪೯ ವ)
ಸೊಡರ್ಗುಡಿ
[ನಾ][ಸೊಡರ್+ಕುಡಿ] ದೀಪದ ಉರಿಯುವ ಕುಡಿ (ಬೆಳಗುವ ಸೊಡರ್ಗುಡಿ ಕಿಡೆ ಮನೆಯೊಳಗೆ ತಮಂ ಪರ್ಬುವಂತೆ ಜೀವಂ ತನುವಿಂ ತಳರಲೊಡಂ:ಆದಿಪು, ೫. ೨೭)
ಸೊನೆ
[ನಾ]ಮರದ ರಸ (ಸೊನೆಯ ಸೋನೆಗಳುಮಂ ಒಳಕೊಂಡು ತದಾಶ್ರಮದ ನಂದನವನಂಗಳ್ ಜನಂಗಳಂ ಅನಂಗಂಗೆ ತೊೞ್ತುವೆಸಂಗೆಯ್ಸಿದುವು:ಪಂಪಭಾ, ೨. ೧೨ ವ)
ಸೊನ್ನಲಿಗೆ
[ನಾ]ಕಲಶ (ತ್ರಿದಶಶರಾಸನಂ ತಳಿತ ತೋರಣಮಾಗಿರೆ ಕುಕ್ಕಿನೋಳಿ ಚೆಲ್ವಿದಿರ್ಗೊಳೆ ಬರ್ಪ ಸೊನ್ನಲಿಗೆಯಾಗೆ ನಿಜಧ್ವನಿ ತೂರ್ಯಮಾಗೆ:ಆದಿಪು, ೬. ೭೧)
ಸೊಪ್ಪುಳ್
[ನಾ]ಸಪ್ಪುಳ, ಶಬ್ದ (ಅವರಿರ್ವರ ಕಾಲ ಸೊಪ್ಪುಳಂ ಆಲಿಸಿ ಸುರನದೀನಂದನಂ ಪೇೞಿಂ ಬಂದರಾರ್ ಎಂದು:ಪಂಪಭಾ, ೧೩. ೬೩ ವ)
ಸೊಬಗು
[ನಾ]ಚೆಲುವು (ಎಲ್ಲಿದಂ ವಿನೋದದ ಮೊದಲೆಲ್ಲಿದಂ ಸೊಬಗಿನಾಗರಂ:ಆದಿಪು,೩. ೧೫)
ಸೊಯಂಬರ
[ನಾ][ಸ್ವಯಂವರ] ವಧು ತನ್ನ ಗಂಡನನ್ನು ಆಯ್ದುಕೊಳ್ಳುವುದು (ಸುರಕುಸುಮದ ಪೊಸವಾಸಿಗಮೆರಡುಂ ಕರತಳದೊಳೆಸೆದು ತಮ್ಮಯ ತೋಳೊಳ್ ದೊರೆಯೆನೆ ಬಂದತ್ತು ಸೊಯಂಬರಕ್ಕೆ ಬರ್ಪಂತು ದೇವಗಣಿಕಾನಿಕರಂ:ಆದಿಪು, ೧೦. ೨೦)
ಸೊರ್ಕನಿಕ್ಕು
[ಕ್ರಿ]ಮತ್ತನ್ನು ಸೇರಿಸು, ಮತ್ತುಂಟುಮಾಡು (ಲಯಕ್ಕೆ ಲಕ್ಕಲೆಕ್ಕದ ಜತಿ ನಾಟಕಾಭಿನಯಮಾಯ್ತೆನೆ ಗೇಯದೊಳೀಕೆ ಸೊರ್ಕನಿಕ್ಕಿದಳೆನೆ ಕಣ್ಗೆ ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ:ಪಂಪಭಾ, ೭. ೯೦)
ಸೊರ್ಕಿದಾನೆ
[ನಾ]ಮದ್ದಾನೆ (ಮತ್ತೊರ್ವಳ್ ಅತಿಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರಲುಳಿತಾಧರಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು:ಪಂಪಭಾ, ೪. ೩೬ ವ)
ಸೊರ್ಕಿಪ್ಪು