भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸೊರ್ಕಿಸು

[ಕ್ರಿ]ಮತ್ತು ಬರಿಸು (ಕುಡಿದೊಡೆ ಸೊರ್ಕಿಸದವು ನಾಣ್ಗೆಡಿಸದವು ಮನಕ್ಕಲಂಪನೀವುವು:ಆದಿಪು,೫. ೩೨)

ಸೊರ್ಕು

[ಕ್ರಿ]ಅಮಲೇರು (ಅಗರುವ ಧೂಪಧೂಮದೊಳ್ ಸೊರ್ಕಿದ ಸೊರ್ಕುಗಳಾಗಳಲ್ಲಿ ತೊಟ್ಟಗೆ ತಿಳಿದಂತೆ:ಆದಿಪು, ೫. ೪೨);[ನಾ]ಅಮಲು (ಪಾಟಿಸಿ ಮಾಡಿದ ಸೊರ್ಕಿವಳಾಟಮೆ ವಲಮೆನಿಸಿ ನೆಗೞ್ದ ನೀಲಾಂಜನೆ:ಆದಿಪು, ೯. ೩೮);[ಕ್ರಿ]ಮೈಮರೆ (ಅಱಿಮರುಳಂತುಟೆ ಸೊರ್ಕಿನ ತೆಱನಂತುಟೆ ಮನಮೊಱಲ್ದು ಎರ್ದೆಯುರಿವುದು ಮೆಯ್ಯೆಱಗುವುದು ಪದೆವುದು ಆನಿದನಱಿಯನಿದೇಕೆಂದು ಕನ್ನೆ ತಳವೆಳಗಾದಳ್;ಪಂಪಭಾ, ೪. ೭)

ಸೊಲ್ವಿನಂ

[ಅ](ಜನರು) ಮಾತಾಡಿಕೊಳ್ಳುವಂತೆ (ಬಲ್ವರಿಕೆಯೊಳರಿ ನೃಪರ ಪಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ಸೊಲ್ವಿನಮಾವರ್ಜಿಸಿದಂ ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ:ಪಂಪಭಾ,೧. ೨೫)

ಸೊವಡು

[ನಾ]ಸೊಗಡು, ಕಂಪು (ಕತ್ತುರಿಯ ತಗುಳ್ದು ಪೊಯ್ವ ಸೊವಡು ಆ ಸೊವಡಿನೊಳ್ ಕಡುಸೊರ್ಕುಸೊರ್ಕಿ ಗಾವರಿಸುವ ತುಂಬಿ ಚೆಲ್ವೆಸೆಯೆ ಕಣ್ಗೆಸೆದತ್ತು ಖಗೇಂದ್ರನೋಲಗಂ:ಆದಿಪು, ೨. ೫)

ಸೋ

[ಕ್ರಿ], ಓಡಿಸು (ತಿರಿವೆಸಳ್ಗಳ್ ಮುಸುಱುವ ಮಧುಕರಂಗಳಂ ಸೋಯೆ ಪರಿವ ಮಕರಂದರಸಂ ಪರಿವೇಷಂಗೊಂಡಂತಿರೆ ಕರಮೆಸೆದುದು ನೃಪನ ಕಯ್ಯ ಲೀಲಾಂಭೋಜಂ:ಆದಿಪು, ೪. ೭೦)

ಸೋಂಕಿಲ್

[ನಾ]ಉಡಿ, ಮಡಿಲು (ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ ಅಗುೞ್ದಿರಲ್:ಪಂಪಭಾ,೧. ೯೬ ವ ಮತ್ತು ೧. ೯೭)

ಸೋಂಕು

[ನಾ]ತಾಕುವಿಕೆ, ತಾಕುವಷ್ಟು ಸನಿಹ (ಸೋಂಕಿನೊಳ್ ನಲಿವ ನಲ್ಲಳಲಂಪಮೊಡರ್ಚಿ:ಆದಿಪು,೨. ೪೧);[ನಾ]ಸ್ಪರ್ಶ (ಜವನಾಣೆಗಂ ಆಜ್ಞೆಗಂ ಉಂಟೆ ವಕ್ರಂ ಆ ಖಳನ ತುೞಿವುಮಂ ಸೋಂಕುಮಂ ಆರವಧರಿಪರ್:ಆದಿಪು, ೪. ೬೭);[ನಾ]ಆವರಿಸು (ಭೋಂಕೆನೆ ಪಯಣದೊಳೆಮ್ಮಂ ಸೋಂಕಿದ ಶರದೃತುವೆ ಬನದೊಳವತರಿಸಿದುದೋ:ಆದಿಪು, ೧೧. ೮೯)

ಸೋಗಿಲ್

[ನಾ]ಮಡಿಲು (ಕುಡಿವುದಂ ಏೞುಮಂಬುಧಿಯುಮಂ ಕುಲಶೈಲಕುಳಂಗಳುಂ ತಗುಳ್ದಡರ್ವುದನೊಂದಿ ಬಾಳರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದಂ:ಪಂಪಭಾ, ೧. ೧೪೦)

ಸೋಗೆ

[ನಾ]ನವಿಲುಗರಿ (ಮೊಗಮಂ ತಾವರೆ ಕಣ್ಣಂ ಉತ್ಪಳದಳಂ ಧಮ್ಮಿಲ್ಲಮಂ ಸೋಗೆ ಸೆಳ್ಳುಗುರಂ ಕೇದಗೆ .. .. ಪೋಲ್ತುವೆನ್ನದೆ:ಆದಿಪು, ೬. ೮೫);[ನಾ]ತಲೆಯಲ್ಲಿ ಧರಿಸುವ ಕುಚ್ಚು (ನಿಱಿಯಂ ಎಡದ ತೋಳ್ ಸೋಗೆಯಂ ನೂಲ ತೊಂಗಲ್ ದೆಸೆಯಂ ಕಣ್ .. .. ಓರಂತಲೆಯೆ:ಆದಿಪು, ೧೧. ೧೬);[ನಾ]ನವಿಲಿನ ಪುಚ್ಛ (ಪೊಳೆವಿನಕಿರಣಂ ಮೆಯ್ಗಳನಳುರೆ ಕನಲ್ದಗಿದು ಸೋಗೆಯಂ ಪರಪಿ ನೆೞಲ್ಗಳನಾಸೆವಡೆ ಶಿಖಾವಳಿಕುಳ ತಾಂಡವಮೆಸೆದುದು ಆ ಶರತ್ಸಮಯದೊಳಂ:ಆದಿಪು, ೧೧. ೫೧);[ನಾ]ಕ್ರಮವಾಗಿ ಗರಿ ಮತ್ತು ಗಂಡು ನವಿಲು (ದೇವಾಂಗವಸ್ತ್ರದುಳ್ಳುಡೆಯೊಳ್ ಉಲಿವ ಸೂಸಕದ ತೊಂಗಲ್ವೆರಸು ಎೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ:ಪಂಪಭಾ, ೨. ೪೧ ವ)

ಸೋಗೆನವಿಲ್

[ನಾ]ಗಂಡು ನವಿಲು(ಜವಮುೞಿದೊಂದು ಸೋಗೆನವಿಲ್ ಒಯ್ಯನೆ ಕರ್ಕಡೆಗಾಸಿಯಾಗಿ ಪಾಱುವುದುಂ:ಪಂಪಭಾ, ೫. ೫೧)

ಸೋತ್ಕ್ಷೇಪಭ್ರೂ

[ನಾ] [ಸ+ಉತ್ಕ್ಷೇಪ+ಭ್ರೂ] ಸನ್ನೆ ಮಾಡಿದ ಹುಬ್ಬು (ಭೂವಲ್ಲಭ ಸೋತ್ಕ್ಷೇಪಭ್ರೂ ವಿಲಸಿತ ದತ್ತ ವಾಚನಾದೇಶನಿದಂ ಭಾವಿಸಿಂ ಎಂದತಿ ಮಧುರೋದ್ಭಾವಿತ ಗಂಭೀರನಾದದಿಂ ಬಾಜಿಸಿದಂ: ಆದಿಪು, ೧೪. ೪೬)

ಸೋದನ ದೀವಿಗೆ

[ನಾ][ಶೋಧನ ದೀಪಿಕಾ]ಹುಡುಕಲು ಬಳಸುವ ದೀಪ (ಮದನನ ಸೋದನದೀವಿಗೆಯೆನೆ ತೊಳಗಿ ಬೆಳಗಿದಂ ತುಹಿನಕರಂ:ಪಂಪಭಾ, ೪. ೫೨)

ಸೋದರಿಕೆ

[ನಾ]ಒಡಹುಟ್ಟಿದವರ ನಂಟು (ಎನಿತಱಿಯದಿರ್ದೊಡಂ ಸೋದರಿಕೆಯೆ ಮಿಕ್ಕು ಬರ್ಕುಮಾಗದೇ:ಪಂಪಭಾ,೧೨. ೨೦೭ ವ)

ಸೋನೆ

[ನಾ]ಮಳೆ (ಸೋನೆಯಿಂ ಸರಿಗಳಿಂ ತಂದಲ್ಗಳಿಂದ ಅಂದು ಭೂತಳಂ ಏಕಾರ್ಣವಮಾಗೆ ಚಕ್ರಿಯ ಬಲಕ್ಕಾತಂಕಮಂ ಮಾಡಿದರ್:ಆದಿಪು, ೧೩. ೫೯)

ಸೋಪಾನ

[ನಾ]ಮೆಟ್ಟಿಲು, ಹಂತ (ನೋಯಲೀಯದೆ ನೆಲದಾಕಾಶದೆಡೆಯೊಳ್ ಅಂಬುಗಳಂ ತರತರದಿಂದೆಚ್ಚು ಸೋಪಾನಂ ಮಾಡಿ:ಪಂಪಭಾ, ೭. ೩೮ ವ)

ಸೋಪಾನಪದ್ಧತಿ

[ನಾ]ಮೆಟ್ಟಿಲುಗಳ ಮೂಲಕ ಮೇಲೇರುವ ಕ್ರಮ (ಉಪಪರ್ವತಂಗಳ್ ಅತಿಪ್ರಕಟಮಾಗೆ ಸೋಪಾನಪದ್ಧತಿಗಳೊಳ್ ಗಿರಿದುರ್ಗಾರೋಹಣಮುಮಂ:ಆದಿಪು, ೬. ೬೨ ವ)

ಸೋಮಪಾನಕಷಾಯಿತೋದರ

[ನಾ] ಸೋಮರಸ ಪಾನದಿಂದ ಕದಡಿದ ಹೊಟ್ಟೆಯುಳ್ಳವನು (ಅಂತು ಪುರೋಡಾಶ ಪವಿತ್ರೋದರನುಂ ಸೋಮಪಾನಕಷಾಯಿತೋದರನುಂ ಆಗಿ: ಪಂಪಭಾ, ೬. ೩೮ ವ)

ಸೋರ್

[ಕ್ರಿ]ಸುರಿದು ಹೋಗು (ಸೋರ್ದುದು ಕೊಳಗೊಂಡ ಗರ್ವರಸಂ ಆ ಭರತೇಶ್ವರಚಕ್ರವರ್ತಿಯಾ:ಆದಿಪು,೧೩. ೭೧)

ಸೋರ್ಮುಡಿ

[ನಾ]ಸಡಿಲವಾದ ತಲೆಗೂದಲು (ಬಾಡಿದ ಪೂಮಾಲೆಯೊಡನೆ ಬೞಲ್ದ ಸೋರ್ಮುಡಿಯುಂ ಅಡಿಗಡಿಗೆ ತಡತಡವಪ್ಪ ನಡೆಗಳುಂ ಬೆರಸು ವನದೇವತೆಗಳ್:ಆದಿಪು, ೧೧. ೭೦ ವ, ೭೧)

ಸೋಲ

[ನಾ]ವ್ಯಾಮೋಹ (ಒಂದೊಂದೆ ರಸದ ಸೋಲಮದೊಂದೊಂದನೆ ಕೊಲ್ಗುಂ:ಆದಿಪು, ೪. ೭೩);[ನಾ]ಬೇಟ (ರತಿಯ ಸೋಲದ ಕೇಳಿಕೆಯೊಳ್:ಪಂಪಭಾ,೧.೪);[ನಾ]ಮೋಹ (ಸೂಚಮನುರ್ಚಿ ಪುಲ್ಲೆಗಾಟಿಸಿ ಮಲೆತರ್ಪೆರಲೆಯ ಸೋಲಮಂ ಅೞ್ತಿಯೊಳ್ ಅರಿಕೇಸರಿ ನಿಂದು ನೋೞ್ಪುದೊಂದರಸಲ್ತೇ:ಪಂಪಭಾ,೫. ೪೪);[ನಾ]ಸೋತಾಗ ಕೊಡಬೇಕಾದ ಪಣ(ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾಡುತ್ತಿರೆ ಲಂಬಣಂ ಪಱಿಯೆ:ಪಂಪಭಾ, ೯. ೬೯);[ನಾ]ಸೋಲುವಿಕೆ (ಕಾಳೆಗದ ಗೆಲ್ಲದ ಸೋಲದ ಮಾತು ನಿನ್ನೊಳಂ ನರನೊಳಮಿರ್ದುದು:ಪಂಪಭಾ,೧೨. ೧೧೮)

Search Dictionaries

Loading Results

Follow Us :   
  Download Bharatavani App
  Bharatavani Windows App