भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸೋಲದ ಕೇಳಿಕೆ

[ನಾ]ದಣಿವರಿಯದಸಂಭೋಗಕ್ರೀಡೆ(ರತಿಯ ಸೋಲದ ಕೇಳಿಕೆಯೊಳ್:ಪಂಪಭಾ,೧.೪)

ಸೋಲ್

[ಕ್ರಿ]ಮೋಹಗೊಳ್ಳು (ಮನದಳಿಪಿಂ ತಮಾಳಲತಿಕಾಂಗಿಯರಾಟಿಸೆ ಬರ್ದುಗೆಟ್ಟು ಕಾಂಚನ ಲತಿಕಾಂಗಿಯರ್ ಬಯಸೆ ಸೋಲ್ತು .. .. ಸಂದ ನಿನ್ನ ಮುನ್ನಿನ ಚರಿತಂಗಳಂ ನೆನಯದಿರ್:ಆದಿಪು, ೨. ೪೬)

ಸೋವತಂ ಮಾಡು

[ಕ್ರಿ]ಆಹಾರ ನೀಡು, ಬಲಿ ಕೊಡು (ತಿರಭುಕ್ತಿ ವಿಷಯಧೀಶರಪ್ಪ ಶತಬಿಂದುವಿನ ಮಕ್ಕಳಯ್ವರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತೆ ನಕುಲಂ ನೆಲ್ಲಕೆ ಸೋವತಂ ಮಾಡಿದಂ:ಪಂಪಭಾ, ೧೩. ೪೧ ವ)

ಸೋವಳಿ

[ನಾ]ಅಟ್ಟುವಿಕೆ (ನೆಲನಂ ನಿಱಿಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸವಳಿಯಂ:ಪಂಪಭಾ,೫. ೩೬)

ಸೋವು

[ಕ್ರಿ]ಅಟ್ಟು (ವದನಾಬ್ಜದ ಕಂಪಂ ಆಳ್ದು ಉಣಲ್ ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳ್ ಒಯ್ಯನೆ ಸೋವುತುಂ:ಪಂಪಭಾ, ೨. ೧೭);[ಕ್ರಿ]ಸೋರಿಹೋಗು (ಮಾಣದೆ ಸೋವ ಇಂದ್ರಿಯಮಂ ದ್ರೋಣದೊಳಾಂತು ಅಲ್ಲಿಯೊಗೆದ ಶಿಶುವಂ ಕಂಡೀ ದ್ರೋಣದೊಳೆ ಪುಟ್ಟಿದೀತಂ ದ್ರೋಣನೆ ಪೋಗೆಂದು ಪೆಸರನಿಟ್ಟಂ ಮುನಿಪಂ:ಪಂಪಭಾ,೨. ೪೩)

ಸೌಖ್ಯಾವಹ

[ಗು]ಇಂಪನ್ನುಂಟುಮಾಡುವ (ಶ್ರುತಿಸೌಖ್ಯಾವಹ ವಲ್ಲಕೀಕ್ವಣಿತದೊಳ್ ಕರ್ಪೂರಪಾಳೀವಿಮಿಶ್ರಿತ ತಾಂಬೂಳ ರಸೋತ್ಕಟ ಪ್ರಮದದೊಳ್:ಆದಿಪು, ೯. ೧೧೮)

ಸೌಗಂಧಿಕ

[ನಾ]ಸುಗಂಧದಿಂದ ಕೂಡಿದ, ಕುಬೇರನ ಕೊಳದ ಪರಿಮಳಯುಕ್ತ ಹೊಂದಾವರೆ (ಅಱುವತ್ತುಕೋಟಿ ಧನದಾನುಚರರಂ ಅತಿರೌದ್ರಭಯಾನಕಮಾಗೆ ಕೊಂದು ಸೌಗಂಧಿಕ ಕಾಂಚನಕಮಳಹರಣಪರಿಣತನಾದಂ:ಪಂಪಭಾ, ೮. ೩೧)

ಸೌಂದರ

[ನಾ]ಚೆಲುವು (ಏನೆಸೆದುದೊ ಕಟಾಕ್ಷಮಾಲಾಪ್ರಸರಂ ಭ್ರೂಲಾಸ್ಯಸೌಂದರಂ ನರ್ತಕಿಯಾ:ಆದಿಪು, ೯. ೩೪)

ಸೌಂದರಿ

[ನಾ]ಚೆಲುವೆ (ಏನೆಂದಾಂ ಬಣ್ಣಿಸುವೆನೊ ಸೌಂದರಿಯ ವಿಳಾಸವಿಭ್ರಮಭ್ರೂಲತೆಯಂ:ಆದಿಪು, ೯. ೩೩)

ಸೌದರ್ಯ

[ನಾ]ಸೋದರಭಾವ (ಸೌದರ್ಯಮಂ ಕಾದ ಪೆಂಪೀ ವನಧಿದ್ವೀಪಾಂತರಾಳಕ್ಷಿತಿಯೊಳೆಸೆಗುಂ ಆಕ್ಷೇಪಮಂ ಮಾಣ:ಆದಿಪು, ೧೪. ೮೪)

ಸೌದಾಮಿನಿ

[ನಾ]ಮಿಂಚು (ಸೌದಾಮಿನಿವೊಲ್ ಭೋಂಕೆನೆ ಸುರಕಾಮಿನಿ ರಂಗದೊಳ್ ಅದೃಶ್ಯೆಯಪ್ಪುದುಮಾಗಳ್:ಆದಿಪು, ೯. ೪೧)

ಸೌಧರ್ಮಕಲ್ಪ

[ನಾ][ಜೈನ] ಹದಿನಾರು ಸ್ವರ್ಗಗಳಲ್ಲಿ ಒಂದು (ಮೋಹಾಂಧತಮಸ್ತೋಮಮಂ ಕಳೆದು ಕೃತ ಅನುಶಯಂ ಅನಶನವಿಧಾನದಿಂ ಅಸುವಂ ವಿಸರ್ಜಿಸಿ ಸೌಧರ್ಮಕಲ್ಪದೊಳ್ ದೇವನಾಗಿ:ಆದಿಪು, ೨. ೧೭ ವ) [ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆನತ ಪ್ರಾಣತ ಅರಣ್ಯ ಅಚ್ಯುತ ಎಂಬ ಸ್ವರ್ಗಗಳು]

ಸೌಧರ್ಮೇಂದ್ರ

[ನಾ] [ಜೈನ] ಸೌಧರ್ಮವೆಂಬ ಸ್ವರ್ಗದ ಅಧಿಪತಿ, ಹದಿನಾರು ಮಂದಿ ಇಂದ್ರರಲ್ಲಿ ಒಬ್ಬ (ವಿಳಾಸಂ ಮಿಗೆ ಸೌಧರ್ಮೇಂದ್ರನಂದಾ ಶಚಿವೆರಸು ಮಹೋತ್ಸಾಹದಿಂ ಬಂದನಾಗಳ್: ಆದಿಪು, ೭. ೪೩)

ಸೌಧಾಳಿ

[ನಾ]ಉಪ್ಪರಿಗೆ ಮನೆಗಳ ಸಾಲು (ಓಳಿದೋರಣಮಾಯ್ತು ಹಾರದ ಪಚ್ಚೆಸಾರದ ಮಾಲೆ ಸೌಧಾಳಿಯ ಒಳ್ಗುಡಿಯಾಯ್ತು ಚೀನದ ಸೂಯಿಯಾಣದ ಬಟ್ಟೆ:ಪಂಪಭಾ, ೧೪. ೧೫)

ಸೌನಂದಕ

[ನಾ][ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲಿ ಒಂದಾದ ಖಡ್ಗದ ಹೆಸರು (ಉತ್ಪಾತಮಾತ್ರವಿತ್ರಸ್ತ ಸಮಸ್ತಾರಿಮಂಡಲಮುಂ ವೀರಲಕ್ಷ್ಮೀ ಕರ್ಣಪೂರ ನೀಳೇಂದೀವರ ಶ್ಯಾಮಳಮುಮಪ್ಪ ಸೌನಂದಕಮೆಂಬ ಖಡ್ಗರತ್ನಮುಂ:ಆದಿಪು,೧೧. ೩. ವ)

ಸೌಬಲ

[ನಾ]ಗಾಂಧಾರದ ರಾಜ ಹಾಗೂ ಗಾಂಧಾರಿ ಮತ್ತು ಶಕುನಿಯ ತಂದೆ (ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು:ಪಂಪಭಾ, ೧, ೮೭, ವ)

ಸೌಭಾಗ್ಯ

[ನಾ]ಸೊಬಗು (ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ:ಪಂಪಭಾ, ೧. ೧೩೯ ವ);[ನಾ]ಐಶ್ವರ್ಯ (ಇದಱೊಳ್ ತನ್ನಿಷ್ಟವಪ್ಪನ್ನಂ ಉತ್ತರಂ ಅಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಂ ಇಷ್ಟಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ:ಪಂಪಭಾ, ೧೪. ೬೫)

ಸೌಮನಸ

[ನಾ][ಜೈನ] ಮೇರುಪರ್ವತದ ಮೇಲಿರುವ ನಾಲ್ಕು ವನಗಳಲ್ಲಿ ಒಂದು, ಉಳಿದ ಮೂರು: ಭದ್ರಶಾಲ, ನಂದನವನ ಮತ್ತು ಪಾಂಡುಕ (ಇದು ಭದ್ರಶಾಲನಂದನಂ ಅದು ನನ್ದನವನಂ ಅದಲ್ತೆ ಸೌಮನಸಂ ಅದೇಂ ತುದಿಯೊಳ್ ಪಾಂಡುಕವೆಸೆದಿರ್ಪುದೊ:ಆದಿಪು, ೨. ೨೯)

ಸೌರಭ

[ನಾ]ಸುವಾಸನೆ(ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದು ಅದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ:ಪಂಪಭಾ, ೪. ೧೦೭)

ಸೌರಭ್ಯ

[ನಾ] ಸುವಾಸನಾಯುಕ್ತತೆ (ಎಸಗಿದುದು ಸಮೀರಂ ಶೈತ್ಯಸೌರಭ್ಯಮಾಂದ್ಯಾವಸಥಂ: ಆದಿಪು, ೮. ೩೫)

Search Dictionaries

Loading Results

Follow Us :   
  Download Bharatavani App
  Bharatavani Windows App