Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸೌವಾಗ್ಯ
[ನಾ] ಸೌಭಾಗ್ಯ (ಶ್ರೀ ವೀರಶ್ರೀ ಕೀರ್ತಿಶ್ರೀ ವಾಕ್ಶ್ರೀ ಎಂಬ ಪೆಂಡಿರಗಲದೆ ತನ್ನೊಳ್ ಭಾವಿಸಿದ ಪೆಂಡಿರೆನಿಸಿದ ಸೌವಾಗ್ಯದ ಹರಿಗಂ ಎಮ್ಮನೇನೊಲ್ದಪನೋ: ಪಂಪಭಾ, ೫. ೧)
ಸೌಷ್ಠವ
[ನಾ] ಗತ್ತು, ದರ್ಪ (ಆನೆಯನೇಱಿ ಸೌಷ್ಠವದೆ ಬರ್ಪ ಅರಿಕೇಸರಿಯ ಒಂದು ಗಾಡಿಯ ಉದ್ದಾನಿ ತಗುಳ್ದು: ಪಂಪಭಾ, ೪. ೫೮)
ಸೌಸವ
[ನಾ]ಪರಿಮಳ(ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಿಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ:ಪಂಪಭಾ, ೫. ೬೦ ವ)
ಸೌಳಗೆವೋಗು
[ಕ್ರಿ]ಸಳ್ಎಂಬಸೀಳುವಶಬ್ದಮಾಡು(ತೆಗೆದೆಚ್ಚಅರ್ಜುನನಂಬುತೀವೆತುದಿಯಿಂಬಾಲಂಬರಂಪಂದಿಸೌಳಗೆವೋಪಂತಿರೆ:ಪಂಪಭಾ,೮.೧೬)
ಸೌಳನೆ
[ಅ]ಸೌಳಗೆ(ಸೌಳನೆಬಾರಿಸಿದಂದಲೆಂದೊಡೆಇಂಕೂರ್ಮೆಯಮಾತುಮೆಚ್ಚುವನಿತರ್ಕೆಬಳಾರಿಮುರಾಸುರಾರಿಯೇಂ:ಪಂಪಭಾ,೫.೮೨)
ಸ್ಕಂಧ
[ನಾ]ಹೆಗಲು (ಐರಾವತಸ್ಕಂಧಗತಂ .. .. ಸೌಧರ್ಮೇಂದ್ರನಂದಾ ಶಚಿವೆರಸು ಮಹೋತ್ಸಾಹದಿಂ ಬಂದನಾಗಳ್:ಆದಿಪು, ೭. ೪೩)
ಸ್ಖಲಿತ
[ಗು]ಬೀಳುವ (ಮಹೀಪತಿನಿವೇದನ ಸಂಭ್ರಮಗಮನಸ್ಖಲಿತ ವೃದ್ಧಕಂಚುಕಿನಿಕರಮುಂ:ಆದಿಪು, ೮. ೩೫ ವ)
ಸ್ಖಳನ
[ನಾ]ಗತಿಭಂಗ (ಚಕ್ರೇಶ್ವರಂಗೆ ಚಕ್ರರತ್ನಸ್ಖಳನಮಂ ಪತಾಕಿನೀಚಕ್ರಪ್ರಧಾನಪ್ರಭುಗಳಱಿಯೆ ಬಿನ್ನಪಂಗೈದೊಡೆ:ಆದಿಪು, ೧೪. ೬ ವ)
ಸ್ಖಳಿತ
[ನಾ]ಮುಗ್ಗುರಿಸುವಿಕೆ (ಅಳಕೋತ್ಸಾರಿತ ಕೇಶಸಂಚಯನ ನೀವೀಬಂಧನಾವಿಷ್ಕೃತ ಸ್ಖಳಿತಂ:ಆದಿಪು, ೪. ೬೦)
ಸ್ತನಂಧಯ
[ನಾ]ಮೊಲೆಕುಡಿಯುವ ಶಿಶು, ಮಗು (ಎನ್ನ ಬಯಕೆಯಪ್ಪುದು ಸಂಧ್ಯಾಸ್ತನಂದಯಸಮಾಗಮಸಮಾನಂ:ಆದಿಪು,೩. ೪೩ ವ)
ಸ್ತನಿತ
[ನಾ]ಗುಡುಗಿನ ಶಬ್ದ (ಅಂಭೋಧರಸ್ತನಿತ ಬಹುಳಸ್ನಿಗ್ಧಂಗಳಪ್ಪ ಮದಸ್ತಂಭೇರಮಬೃಂಹಿತಗಳಿಂದಂ:ಆದಿಪು, ೧೩. ೪೨ ವ)
ಸ್ತನ್ಯ
[ನಾ]ಮೊಲೆಹಾಲು (ಕೇಸರಿಣೀಸ್ತನ್ಯಮಂ ಅನ್ಯಗಜಪೋತಾನೀಕಂ ಉಂಡಾಡೆ:ಆದಿಪು, ೯. ೯೭)
ಸ್ತಬಕ
[ನಾ]ಗೊಂಚಲು (ವನಕುಸುಮಸ್ತಬಕದ ನೆೞಲ್ ಇನಿಸಚ್ಛಾಂಬುವಿನೊಳೆಸೆಯೆ ಮಧುಕರಮದು ಭೋಂಕೆನೆ ಪಾಯ್ದು ಎಱಂಕೆ ನಾಂದೊಡೆ:ಆದಿಪು, ೧೧. ೬೨)
ಸ್ತಂಬಕರಿ
[ನಾ]ಬತ್ತ (ಸ್ತಂಬಕರ್ಯಾದಿ ನಾನಾವಿಧ ಧಾನ್ಯಂಗಳಂ ಪದನಱಿದುಡುಗುವ ಕಣಂ ಮಾಡುವ ಒಕ್ಕುವ ಅಡುಕುವ ಬಯ್ತಿಡುವ ಅಕ್ಕಿ ಮಾಡುವ ವಿವಿಧ ಭಾಜನಂಗಳೊಳ್ ಅಡುವ:ಆದಿಪು, ೬. ೭೭ ವ)
ಸ್ತಂಬೇರಮ
[ನಾ]ಆನೆ (ಸೊಗಯಿಸಿರ್ದ ಸೋಪಾನಪಙ್ತಿ ಮಾರ್ಗಂಗಳೊಳ್ ನಿಜಸ್ತಂಬೇರಮಘಟಾಟೋಪಂ ಬೆರಸಿಂಬಾಗಿ ಪೋಗೆವೋಗೆ:ಆದಿಪು, ೭. ೫೭ ವ)
ಸ್ತಂಭ
[ನಾ]ಆಧಾರ (ಸುರಿಯೆ ಚತುಃಕುಂಭಂಗಳ್ ಭೂಭುವನಸ್ತಂಭಂ ಮಜ್ಜನಮನೆಯ್ದೆ ನಿರ್ವರ್ತಿಸಿದಂ;ಆದಿಪು,೮. ೭೧);[ನಾ]ನಿಶ್ಚೇಷ್ಟಗೊಳ್ಳುವುದು (ಕಾಮಗ್ರಹಗ್ರಹೀತೆಯಾಗಿರೆಮನೋವೈಕಲ್ಯರೋಮಾಂಚಕಸ್ತಂಭಕಂಪಸ್ವೇದವೈವರ್ಣ್ಯಸಂತಾಪನಅನಾಹಾರವ್ಯಾಮೋಹಗದ್ಗದಅಶ್ರುಮೋಕ್ಷಮೂರ್ಛಾದಿನಾನಾವಿಕಾರಂಗಳಂಒಡನೊಡನೆತೋಱುವುದುಂ:ಪಂಪಭಾ,೪.೫೯ವ)
ಸ್ತಂಭಕ
[ನಾ]ನಿಶ್ಚಲತೆ (ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ .. .. ಮೂರ್ಛಾದಿ ನಾನಾವಿಕಾರಂಗಳೊಡನೆ ತೋಱುವುದುಂ:ಪಂಪಭಾ,೪. ೫೯ ವ)
ಸ್ತಂಭನಾಕ್ಷರ
[ನಾ]ಶತ್ರುವನ್ನು ಪ್ರತಿಬಂಧಿಸುವ ಮಂತ್ರಾಕ್ಷರ (ವಿಪಕ್ಷ ಶರಾಸಾರ ಮೋಕ್ಷ ಹೂಂಕಾರ ಸ್ತಂಭಾಕ್ಷರಸ್ತಂಭಿತ ಹೃದಯರಾಗಿ .. .. ನಿಮ್ಮ ಮಗೆದ ಕಾರ್ಯಮಂ ಬಗೆಯಿಂ:ಆದಿಪು,೧೪. ೮೪ ವ)
ಸ್ತವ
[ನಾ]ಸ್ತುತಿ (ನಾನಾ ವಿಶೇಷಸ್ತವದಿಂದಂ ಕೀರ್ತಿಸಲ್ಕೆ ಅತ್ತಳಗಂ ಅಮರನಾಥಂಗಂ ಎಂಬನ್ನೆಗಂ:ಆದಿಪು, ೫. ೧೦೦)
ಸ್ತವನ