Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸ್ತಿಮಿತತಾರಕ
[ನಾ]ಕಣ್ಣುಗಳನ್ನು ಒಂದೇ ಕಡೆ ನಟ್ಟವನು (ನಿಶ್ಚಳಪಕ್ಷ್ಮಂ ಸ್ತಿಮಿತತಾರಕಂ ಭುಜಬಲಿ ಕಣ್ಣೊಳೆ ತವೆ ಪೀರ್ವವೊಲೇ ನಿಶ್ಚಳತನು ನಡೆ ನೋಡೆ ಭರತರಾಜಂ ಸೋಲ್ತಂ:ಆದಿಪು, ೧೪. ೧೦೫)
ಸ್ತಿಮಿತೇಕ್ಷಣ
[ನಾ]ಸ್ತಿಮಿತತಾರಕ (ಸ್ತಿಮಿತೇಕ್ಷಣವಭ್ರೂಭಂಗಂ ಅನಾಪಾಂಗಾವಳೋಕನಂ ಸುಶ್ಲಿಷ್ಟೋತ್ತಮದಶನಚ್ಛದ ಮಾನಸಂ ಅಮರ್ದುದು ಯೋಗಪ್ರಯೋಗದೊಳ್ ಮುನಿಪತಿಯಾ:ಆದಿಪು, ೯. ೮೭)
ಸ್ತುತಿಸು
[ಕ್ರಿ]ಸ್ತೋತ್ರಮಾಡು (ಎಂದನೇಕ ಸ್ತವನಂಗಳಿಂ ಸ್ತುತಿಸಿ:ಆದಿಪು, ೧೩. ೯೦ ವ)
ಸ್ತೂಪ
ಗೋಪುರ (ಕದಳಿಕಾ ಆತಪತ್ರ ಚಾಮರ ಕನಕಘಂಟಾ ಕಿಂಕಿಣೀಮನೋಹರಂಗಳುಮಪ್ಪ ಒಂಬತ್ತೊಂಬತ್ತು ಉತ್ತುಂಗ ಸ್ತೂಪಂಗಳಮರ್ದಿರೆ: ಆದಿಪು, ೧೦. ೩೪ ವ)
ಸ್ತೋಕ
[ಜೈನ] ಕಾಲ ಅಳೆಯುವ ಪರಿಮಾಣ, ಏಳು ಉಚ್ಛ್ವಾಸಗಳ ಅವಧಿ (ಅದು ಸಮಯ ಆವಳಿಕ ಉಚ್ಛ್ವಾಸ ಸ್ತೋಕ ನಿಮೇಷ ನಾಳಿಕಾ ಮುಹೂರ್ತ ದಿವಸ ಪಕ್ಷ ಮಾಸ ಋತು ಅಯನ ಸಂವತ್ಸರಾದಿ ಗಣನಾಕ್ರಮದಿಂದಂ ಪೆರ್ಚಿದೆಣಿಕೆಯೊಳ್ ಕೂಡಿದುದು: ಆದಿಪು,೬. ೬೮ ವ)
ಸ್ತೋಭಂಗೊಳ್
[ಕ್ರಿ]ಮೈಮರೆ (ಮನಸಿಜನಾವೇಶಮಂತ್ರದಿಂ ಸ್ತೋಭಂಗೊಂಡಂತೆ ಪುರಪುರಂಧ್ರೀಕ್ಷೆÆÃಭಮಾಗೆ:ಆದಿಪು, ೧೧. ೨೩ ವ);[ಕ್ರಿ]ತಡೆಯಲ್ಪಡು, ಸ್ಥಗಿತಗೊಳ್ಳು (ಅಂತುಕಾಮದೇವನೆಂಬಮಂತ್ರವಾದಿಯದಿವ್ಯಮಂತ್ರದಿಂಸ್ತೋಭಂಗೊಂಡದಿವ್ಯಗ್ರಹದಂತೆ:ಪಂಪಭಾ,೪.೫೯ವ)
ಸ್ತೋಭನಾಕ್ಷರ
[ನಾ]ಎದುರಿಗಿರುವುದನ್ನು ಪ್ರತಿಬಂಧಿಸುವ ಮಂತ್ರ (ವಿಪಕ್ಷವಿಶಿಖಿಮೋಕ್ಷಟಂಕಾರಮನೆ ಜಗದುದಗ್ರ ನಿಜವೀರಗ್ರಹ ಸ್ತೋಬನಾಕ್ಷರಮೆಂದುಂ ಬಗೆದು:ಆದಿಪು, ೧೪. ೯೮ ವ)
ಸ್ತ್ಯಾನಗೃದ್ಧಿ
[ನಾ][ಜೈನ] ದರ್ಶನಾವರಣೀಯ ಕರ್ಮದ ಒಂದು ಪ್ರಕಾರ (ಅಂತರ್ಮುಹೂರ್ತದಿಂ ನಿದ್ರಾನಿದ್ರಾಪ್ರಚಲಾಪ್ರಚಲಾ ಸ್ತ್ಯಾನಗೃದ್ಧಿ .. .. ಎಂಬ ಪದಿನಾಱು ಕರ್ಮಪ್ರಕೃತಿಗಳಂ ನಿರವಶೇಷಂ ಕಿಡಿಸಿ:ಆದಿಪು,೧೦. ೧೪ ವ)
ಸ್ತ್ರೀರತ್ನ
[ನಾ][ಜೈನ] ಚಕ್ರವರ್ತಿಯ ಹದಿನಾಲ್ಕು ರತ್ನಗಳಲ್ಲೊಂದು, ವಿಜಯಾರ್ಧಪರ್ವತದಲ್ಲಿ ಹುಟ್ಟಿದ್ದು (ವಿಜಯಾರ್ಧಪರ್ವತದೊಳ್ ಪುಟ್ಟಿದ ಗಜಾಶ್ವಸ್ತ್ರೀರತ್ನಂಗಳುಂ:ಆದಿಪು, ೧೫. ೩ ವ)
ಸ್ತ್ರೀವೇದ
[ನಾ][ಜೈನ] ಒಂದು ಬಗೆಯ ನೋಕಷಾಯ; ಹೆಣ್ಣುಜೀವಕ್ಕೆ ಗಂಡಿನ ಬಗ್ಗೆ ಮೋಹವುಂಟುಮಾಡುವ ಕರ್ಮ (ಕ್ರಮಕ್ರಮದೊಳೆ ನಪುಂಸಕವೇದಮುಂ ಸ್ತ್ರೀವೇದಮುಂ ಪುಂವೇದಮುಂ ಪುರಾತನ ಸತ್ಕರ್ಮದೊಡನೆ ಹಾಸ್ಯ ರತಿ ಅರತಿ ಶೋಕ ಭಯ ಜುಗುಪ್ಸಾ ಅಭಿಧಾನ ನವನೋಕಷಾಯ ಷಟ್ಕಮುಮಂ ಘಾತಿಸಿ:ಆದಿಪು, ೧೦. ೧೪ ವ)
ಸ್ತ್ರೀಸಂಸರ್ಗ
[ನಾ]ಹೆಣ್ಣಿನ ಸಹವಾಸ (ಸ್ತ್ರೀಸಂಸರ್ಗಂ ಸುಖಮೆಂಬೀ ಸಂಸಾರಿಗಳೆ ಜಡರ್ ಅದಪ್ಪೊಡೆ ತನುಗಾಯಾಸಕರಂ ಶುಕ್ಲಾರ್ತವವಾಸಿತಂ ಆಪಾತಮಾತ್ರ ರಮಣೀಯತರಂ:ಆದಿಪು, ೬. ೪೪)
ಸ್ಥಗಿತ
[ಗು]ಮುಚ್ಚಿದ, ಆವರಿಸಿದ (ಐರಾವತಸ್ಕಂಧಗತಂ ನಾನಾತಪತ್ರಸ್ಥಗಿತದಶದಿಶಾಮಂಡಲಂ:ಆದಿಪು, ೭. ೪೩);[ಗು]ತೆತ್ತಿಸಿದ, ಜೋಡಿಸಿದ (ಇದಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದೞ್ಕಾಡಿತ್ತು ಅಡಂಗಿತ್ತಿದಱೊಳೆ ಕುರುರಾಜಾನ್ವಯಂ:ಪಂಪಭಾ, ೧೨. ೧೫೬)
ಸ್ಥಪತಿ
[ನಾ]ಶಿಲ್ಪಿ (ನಿಜ ರಾಜಧಾನಿಯೊಳೊಸಗೆಯಂ ಮಾಡಿ ವಿವಾಹಮಂಟಪಮಂ ಸ್ಥಪತಿರತ್ನಕ್ಕೆ ವಿರಚಿಸೆಂದು ಬೆಸಸಿದಾಗಳ್:ಆದಿಪು, ೪. ೩೦ ವ)
ಸ್ಥಪುಟಿತ
[ಗು]ಏರುತಗ್ಗುಗಳಿಂದ ಕೂಡಿದ (ವಾಜಿಖುರಾಹತಿ ಸ್ಥಪುಟಿತಗ್ರಾವಸ್ಥಳಂ .. .. ದಾಂಟಲಳುಂಬಮಪ್ಪ ವಿಜಯಾರ್ಧಾದ್ರೀಂದ್ರಮಂ ದಾಂಟಿದಂ:ಆದಿಪು, ೧೩. ೫೫)
ಸ್ಥಳಪಥ
[ನಾ]ನೆಲದ ಮೇಲಿನ ದಾರಿ (ಪತಿಯ ಜಳಸ್ತಂಭದ ಪರಿಣತಿ ದಲಿಲ್ಲದೊಡೆ ಜಳಪಥಂ ಸ್ಥಳಪಥದಂತೆ ಅತಿ ಸುಗಮಮಾಗದು:ಆದಿಪು, ೧೨. ೮೩)
ಸ್ಥಾನಕ್ರಮ
[ನಾ]ಒಂದು ಎರಡು ಮುಂತಾಗಿ ಅನುಕ್ರಮದ ಎಣಿಕೆ (ಗಣಿತಮಂ ದಳಿತೇಂದೀವರನಯನೆಗೆ ಎಡದ ಕಯ್ಯೊಳ್ ಭವ್ಯಾನಂದಕರಂ ಸ್ಥಾನಕ್ರಮದಿಂದಂ ಪುರುದೇವನಱಿಯೆ ತೋಱಿದನಾಗಳ್:ಆದಿಪು, ೮. ೬೦)
ಸ್ಥಾನಲಾಭ
[ನಾ][ಜೈನ] [ಜೈನ] ನಲವತ್ತೆಂಟು ದೀಕ್ಷಾನ್ವಯ ಕ್ರಿಯೆಗಳಲ್ಲಿ ಒಂದು (ಅವತಾರ ವೃತ್ತಿಲಾಭ ಸ್ಥಾನಲಾಭ ಗಣಗ್ರಹಣ ಪೂಜಾರಾಧ್ಯ ಪುಣ್ಯಯಜ್ಞ ದೃಢಚರ್ಯ ಉಪಯೋಗತ್ವಮೆಂಬ ಎಂಟುಂಬೆರಸು .. .. ನಾಲ್ವತ್ತೆಂಟು ದೀಕ್ಷಾನ್ವಯಕ್ರಿಯೆಗಳುಮಂ:ಆದಿಪು೧೫.. ೧೬ ವ)
ಸ್ಥಾಪಿತ
[ಗು]ನೆಟ್ಟ, ನಿಲ್ಲಿಸಿರುವ (ಮನಂ ಆರಾಧಿತ ಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾವನಿತುಂ ಸ್ಥಾಪಿತಯೂಪಕೋಟಿ:ಪಂಪಭಾ, ೪. ೫೯)
ಸ್ಥಾಲಿ
[ನಾ] ಪಾತ್ರೆ (ಐವತ್ತಾಱಂತರದ್ವೀಪಂಗಳು ಏಕಕೋಟಿಪ್ರಮಾಣ ಸ್ಥಾಲಿಗಳುಂ: ಆದಿಪು, ೧೫. ೩ ವ)
ಸ್ಥಾವರ