भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸ್ಥಾಸಕ

[ನಾ]ಸುಗಂಧಲೇಪನ (ವಿದಗ್ಧವಿಟಂಬೊಲಲೆವ ತೆರೆಗಳ್ ಮೆಲ್ಪಂ ಬವರಿಸಿ ಸೋಂಕುತ್ತುಂ ಕಳೆದುವು ಘನಕುಚಕಳಶಕುಂಕುಮಸ್ಥಾಸಕಮಂ:ಆದಿಪು, ೧೧. ೧೪೫)

ಸ್ಥಿತ

[ಗು]ಇರಿಸಿದ್ದ (ಮಣಿಕಿರೀಟರತ್ನಪ್ರದೀಪಗಳಿಂಂ ಅರ್ಚಿಸಿ ಸಿಂಹಾಸೋಪಸ್ಥಿತಕನಕಪೀಠದೊಳ್ ಕುಳ್ಳಿರ್ದು:ಆದಿಪು, ೯. ೯ ವ)

ಸ್ಥಿತಚಕ್ರ

[ನಾ]ಯುದ್ಧರಥವನ್ನು ನಡೆಸುವ ಒಂದು ರೀತಿ (ಮಂಡಳ ಭ್ರಾಂತ ಉದ್ಭ್ರಾಂತ ಸ್ಥಿತಚಕ್ರಮೆಂಬ ರಥಯುದ್ಧದೊಳಂ .. .. ಅತಿ ಪ್ರವೀಣರುಂ ಜಾಣರುಂ ಆಗಿ:ಪಂಪಭಾ, ೧೩. ೩೮ ವ)

ಸ್ಥಿಮಿತಾಕ್ಷ

[ನಾ]ನೆಟ್ಟ ಕಣ್ಣು (ಸಮದಕರಿಮಕರಹತಿಯಿಂಸಮುಚ್ಚಳತ್ವೀಚಿಮಾಳಿಕಾಸ್ಫಾಳಾಂತಸ್ಸ್ಥಿಮಿತಾಕ್ಷಂಗಳಿಂಈತಿಮಿತಿಮಿಂಗಿಳಂಗೆತ್ತುನೋೞ್ಪುದೀಸ್ಯಂದನಮಂ:ಆದಿಪು,೧೨.೧೨೩)

ಸ್ಥಿರ

[ನಾ][ಜೈನ] ನಾಮಕರ್ಮಪ್ರಕಾರಗಳಲ್ಲಿ ಒಂದು, ಇದರಿಂದ ರಸಾದಿ ಧಾತುಗಳು ಶರೀರದಲ್ಲಿ ನೆಲೆ ನಿಲ್ಲುತ್ತವೆ (ಸ್ಥಿರ ಅಸ್ಥಿರ ಶುಭ ಅಶುಭ ಸುಸ್ವರ ದುಸ್ವರ .. .. ನೀಚೈರ್ಗೋತ್ರಂಗಳೆಂಬ ದ್ವಿಸಪ್ತತಿಪ್ರಕೃತಿಗಳಂ ನಿರವಶೇಷಂ ಕಿಡಿಸಿ:ಆದಿಪು,೧೬. ೪೯ ವ)

ಸ್ಥೂರೀಪೃಷ್ಠ

[ನಾ]ನವಾರೂಢ ಅಶ್ವ, ಭಾರ ಹೊರುವ ಕುದುರೆ (ಕುಮುದದಳಧವಳ ಮನೋಜವಕಾಮಚಾರಿ ಸ್ಥೂರೀಪೃಷ್ಠಯೋಜಿತಮುಂ ಅನುಕೂಲ ಶೂರ ರಥಕಲ್ಪಪರಿಣತ ರಥಚೋದಕ ಪರಿಭ್ರಾಜಿತಮುಂ ಆಗಿ:ಆದಿಪು, ೧೧. ೧೨ ವ)

ಸ್ಥೂಳ

[ಗು][ಸ್ಥೂಲ]ತೋರನಾದ(ತುಂಗವನ್ಯಮತಂಗಜದಂತೆ ಆಘಾತನಿಪಾತಿಸಲ್ಲಕೀಭಂಗಮಂ ಮಣಿಮೌಕ್ತಿಕ ನೀಳಸ್ಥೂಳಶಿಲಾ ಪ್ರವಿಭಾಸಿತ ಉತ್ತುಂಗಮಂ:ಪಂಪಭಾ, ೧. ೧೧೫)

ಸ್ನಾನ

[ನಾ]ಮೀಯುವಿಕೆ, ಜಳಕ(ಸ್ನಾನಾರ್ಥಂ ಒಂದು ಕಳಶಮಂ ನಿಯಮನಿಧಾನಂ ಎೞಲೆ ಪಿಡಿದು ಅಮಳಿನ ಗಂಗಾನದಿಗೆ ವಂದು ಸುರತನಿಧಾನಿ ಅಮರೇಂದ್ರಗಣಿಕೆಯಂ ಮುನಿ ಕಂಡಂ:ಪಂಪಭಾ, ೨. ೪೧)

ಸ್ನಾಯು

[ನಾ]ನರ (ಸ್ನಾಯು ಅಲಾಬೂ ದಂಡ ಅಂಗುಷ್ಠ ಅಂಗುಳಿಪ್ರಯತ್ನದಿಂ ಶ್ರವಣರಮಣೀಯ ಕ್ವಣಿತಮೆಂತು ನೆಗೞ್ದಪ್ಪುದು ಅಂತೆ:ಆದಿಪು, ೨. ೯ ವ)

ಸ್ನಿಗ್ಧ

[ಗು]ನಯವಾದ (ಅಪ್ರಿಣಾಕ ಭಾವಿಳಶ್ಲಿಸ್ಥಿತಚಳನುಂ ಶ್ಲಕ್ಷ್ಣ ಸ್ನಿಗ್ಧ ಮೃದು ಬಹಳಚ್ಛವಿಯುಂ ಬಂಧುಜೀವ ಶಾಕ ಪುಷ್ಟ ಸಪದ್ಮಮಹಾರಜಶಂಖಾಸತಳವೆಂಬ ಸಪ್ತದ್ವಾಸ್ಥಿತನುಂ:ಆದಿಪು, ೧೨. ೫೬ ವ)

ಸ್ನಿಗ್ಧ

[ನಾ]ನುಣುಪಾದ (ಮುಕುಳೀಕೃತಂ ಲಳಿತಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂದಳಿಪಂ ಅಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ:ಪಂಪಭಾ, ೪. ೭೭)

ಸ್ಪಂದ

[ನಾ]ಅದುರುವಿಕೆ (ದಕ್ಷಿಣಭುಜಂ ಅಚಿರಪ್ರತಿಪಕ್ಷ ಮಹೀಪಾಲ ವಿಜಯಲಕ್ಷ್ಮೀಲಲನಾ ವಕ್ಷೆÆÃಜಸ್ಪರ್ಶನಮಂ ಅನಕ್ಷರಂ ಅಱಿಪಿದುದು ಪತಿಗಮಂದಸ್ಪಂದಂ:ಆದಿಪು,೧೧. ೧೧)

ಸ್ಪರ್ಶ

[ನಾ]ಮುಟ್ಟುವುದರಿಂದಾಗುವ ಸಂವೇದನೆ (ಅಂತು ಪರಮಾತಿಶಯ ರೂಪ ರಸ ಗಂಧ ಸ್ಪರ್ಶ ಗುಣವತ್ ಪರಮಾಣುಪರಿನಿರ್ವೃತಮೂರ್ತಿಯಪ್ಪ ಪರಮನ:ಆದಿಪು, ೮. ೬ ವ)

ಸ್ಪರ್ಶನ

[ನಾ]ಮುಟ್ಟುವಿಕೆ (ಅಪ್ಪಿಕೊಂಡುಅಮೃತವರ್ಷಿಕರಪರಿಷೇಕದಿಂದೆಪುತ್ರಸ್ಪರ್ಶನಂಆಪ್ಯಾಯನಕೋಟಿಯಾಗೆ:ಪಂಪಭಾ,೧೩.೮ವ)

ಸ್ಪೃಶ್ಯ

[ನಾ]ಆದಿದೇವನು ವಿಭಾಗಿಸಿದ ಮೂರುವರ್ಣಗಳಲ್ಲಿ ಕೊನೆಯದಾದ ಶೂದ್ರರಲ್ಲಿ ಒಂದು ವರ್ಗ (ಮತ್ತಂ ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ .. .. ಉಪದೇಶಂಗೆಯ್ದು:ಆದಿಪು,೮. ೬೪ ವ)

ಸ್ಫಾರ

[ಗು]ಅತಿಶಯವಾದ (ಅಂತಸ್ಸ್ಫುರದತಿಸ್ಫಾರಸಮರೋಷ್ಮಸಂತಪ್ತಜಲಪ್ರತ್ಯೇಕಚುಳುಕಪಾನಮಾತ್ರಜಾನುದಘ್ನಜಲದುರ್ಗನುಮಾಗಿ:ಆದಿಪು,೧೪.೫೨ವ)

ಸ್ಫೀತ

[ಗು]Áಲವಾದ (ಅಪೂರ್ವೋಚಿತಮಾಂಸಸ್ಫೀತೋಪದಿಗ್ಧ ಗಾತ್ರಾಪರನುಂ:ಆದಿಪು, ೧೨. ೫೬ ವ)

ಸ್ಫುರತ್

[ಗು]ಹತ್ತಿಕೊಂಡ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್:ಆದಿಪು, ೫. ೮೯)

ಸ್ಫುರಿತ

[ಗು]ಪ್ರಕಾಶಮಾನವಾದ (ಸ್ಫುರಿತತಪೋಮಯಾನಳನಿಂ ಈಯೊಡಲಂ ನೆಗೞ್ದೀ ಗಿರೀಂದ್ರಕಂದರದೊಳಗಿಂತೆ ದಲ್ ಕರಗಿಪೆಂ:ಪಂಪಭಾ,೮. ೬); ನಡುಗುವ (ವಿರಥಂ ಪಾಂಡ್ಯಂ ಕೋಪಸ್ಫುರಿತಾಧರಂ ಉಡಿದು ಕೆಡೆಯೆ ಪೞಯಿಗೆಯುಂ ಬಿಬ್ಬರ ಬಿರಿಯೆ:ಪಂಪಭಾ, ೧೨. ೮೩)

ಸ್ಫುಲಿಂಗ

[ನಾ]ಕಿಡಿ, ಕೆಂಡ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್:ಆದಿಪು, ೫. ೮೯)

Search Dictionaries

Loading Results

Follow Us :   
  Download Bharatavani App
  Bharatavani Windows App