Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸ್ಮರ
[ನಾ]ಮನ್ಮಥ (ಅಲರ್ಗಣ್ಣೊಳ್ ಸ್ಮರನಿರ್ದಪನಕ್ಕುಂ ಎಡೆವೋಪಾ ಜೋಡೆ ಕಾಮಂಗೆ ಕಾದಲೆಯಕ್ಕುಂ:ಪಂಪಭಾ, ೪. ೮೪)
ಸ್ಮರಕುಳಿಕಾಗ್ನಿ
[ನಾ] ಕಾಮವೆಂಬ ಸರ್ಪದ ವಿಷವೆಂಬ ಬೆಂಕಿ (ಎನ್ನಂ ಸ್ಮರಕುಳಿಕಾಗ್ನಿಯೆ ಕೊಂಡಂತಿರೆ ಕೊಂಡುದು ನೋಡ ನಿನ್ನ ನೋಡಿದ ನೋಟಂ: ಪಂಪಭಾ, ೮. ೬೫)
ಸ್ಮರಣಮಾತ್ರ
[ನಾ]ಬರಿಯ ನೆನಪಿನಿಂದಲೇ (ಎಂತಾನುಂ ಮೂರ್ಛೆಯಿಂದೆೞ್ಚತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮೆ:ಪಂಪಭಾ, ೧೩. ೨ ವ)
ಸ್ಮರಾಕುಳಿತ
[ನಾ] [ಸ್ಮರ+ಆಕುಳಿತ] ಕಾಮದಿಂದ ಕ್ಷೆÆÃಭೆಗೊಂಡದ್ದು (ಮುಕುಳೀಕೃತಂ ಲಳಿತಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂದಳಿತಂ ಅಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ: ಪಂಪಭಾ, ೪. ೭೭)
ಸ್ಮರಿಯಿಸು
[ಕ್ರಿ]ನೆನೆಪಿಸಿಕೊ (ಸ್ಮರಿಯಿಪನಿರ್ಪತ್ತಿರ್ಚ್ಛಾಸಿರ ಬರಿಸಕ್ಕೊರ್ಮೆ ಮನದೊಳುಣಿಸಂ:ಆದಿಪು,೬. ೧೬)
ಸ್ಮರೋನ್ಮಾದ
[ನಾ]ಪ್ರಣಯೋದ್ರೇಕ (ಪೋದುದು ಜೌವನಂ ಶ್ರಮದಿನಾದುದು ಮುಪ್ಪು ಇನಿಸಾದೊಡಂ ಸ್ಮರೋನ್ಮಾದದೊಳಿದೇಕೆ ಗಡಂ ಬಗೆಯಂ ತಗುಳ್ಚಿ ಬೇಳಾದಪಂ:ಆದಿಪು, ೨. ೩೫)
ಸ್ಮಿತ
[ನಾ]ಮುಗುಳ್ನಗೆ (ರಾಜಪುತ್ರಿಸ್ಮಿತ ಮಧುಮಧುರಾಪಾಂಗ ಜೈತ್ರಾಂಗಜಾಸ್ತ್ರಂಗಳ ಕೋಳಂ ನೂತನಪ್ರೇಮದೆ ನಿಮಿರ್ವೆಡೆಯೊಳ್ ಕಾವನಾವಂ:ಆದಿಪು, ೪. ೫೧)
ಸ್ಮೇರಮುಖ
[ನಾ]ನಗುಮುಖ (ಅತ್ಯಂತವಿಸ್ಮಯ ಸ್ಮೇರಮುಖನುಂ ಅತಿರುಚಿರನ್ಯಸ್ತಹಸ್ತಪಲ್ಲವನುಂ .. .. ಆಗಿ ನೋಡುತ್ತುಂ .. .. ಮೂಱುಸೂೞ್ ಬಲಗೊಂಡು:ಆದಿಪು, ೧೦. ೫೨ ವ)
ಸ್ಯಂದನ
[ನಾ]ರಥ (ಭರತೇಶ್ವರಂ .. .. ಇೞಿದು ಜಯಸ್ಯಂದನದಿಂದಂ ಜನಿತಾನಂದದೆ ಬನಮಂ ವಿಳಾಸದಿಂ ಪುಗುತಂದಂ:ಆದಿಪು, ೧೧. ೭೦)
ಸ್ಯಂದನಬಂಧನ
[ನಾ]ರಥದ ಗತಿಸ್ತಂಭನ, ರಥದ ಅಲುಗಾಟವನ್ನು ತಡೆಯುವುದು (ಸ್ಯಂದನಬಂಧನವೆಂಬುದಂ ಇದಂ ಇಂದೀ ವೃಷಸೇನನಿಂದಮಱಿದೆಂ ಇದಂ ಮುನ್ನೆಂದುಂ ಕಂಡಱಿಯೆಂ:ಪಂಪಭಾ, ೧೨. ೧೬೬)
ಸ್ಯಂದಮಾನ
[ಗು]ಸುರಿಯುತ್ತಿರುವ (ಆಕುಳವ್ಯಾಕುಳನಯನ ರಾಜತನೂಜ ಸಮಾಜ ವದನಾಭಿಮುಖಚಟುಳ ಸಂಚಾತ್ಯಮಾಣ ಚಾರುಚಾಮರ ನಿಚಯವಿಚ¼ತ್ ಅವಿರಳಾನಿಳಂಗಳಿಂದಂ:ಆದಿಪು, ೧೪. ೯೫ ವ)
ಸ್ಯಂದಿ
[ನಾ]ಸುರಿಸುವಂಥದು (ತ್ರಿದಶಸ್ತುತ್ಯಮಿದು ಆದಿದೇವಚರಿತಂ ಕರ್ಣಾಮೃತಸ್ಯಂದಿಯಕ್ಕೆ ಭವ್ಯಾವಳಿಗೆಂದು ಪೇೞಿಸೆ ಬುಧರ್:ಆದಿಪು, ೧೬. ೭೯)
ಸ್ರಕ್
[ನಾ]ಹೂವಿನ ಹಾರ (ನಾನಾ ಭೂಷಣ ವಸ್ತ್ರ ಅನೂನ ಸ್ರಕ್ ರುಚಿ ಸನಾಥನಿಂ ಕಳೆಯಲೊಡಂ ತಾನೆಸೆದುದು:ಆದಿಪು, ೯. ೭೮)
ಸ್ರೋತ
[ನಾ]ನದಿ, ಪ್ರವಾಹ (ಲಳಿತೋತ್ಸವಧ್ವಜಾಂಶುಕವಿಳಸನಮಂಮುಂದೆನಿನಗೆತೋರ್ಪಂತಿರೆಕಣ್ಗೊಳಿಸಿರ್ದುದುನೋಡಹಿಮಾಚಳಶಿಖರದಮೇಲೆಪಾಯ್ವಗಂಗಾಸ್ರೋತಂ:ಪಂಪಭಾ,೭.೭೩);[ನಾ][ಮದ]ಧಾರೆ(ವಾತ್ಯಾದುರ್ಧರಗಂಧಸಿಂಧುರಕಟಸ್ರೋತಃಸಮುದ್ಯತ್ಮದವ್ರಾತೇಂದಿಂದಿರಚಂಡತಾಂಡವಕಲಸ್ವಾಭಾವಿಕಶ್ರೇಯಸಃ:ಪಂಪಭಾ,೯.೯೭)
ಸ್ವಕೀಯ
[ಗು]ತನ್ನ (ನೀಂ ಲಲಿತಾಂಗಚರನಪ್ಪುದಱಿಂದಂ ಸ್ವಕೀಯಪ್ರಾಣೇಶ್ವರಿ ತತ್ ಸ್ವಯಂಪ್ರಭಾದೇವಿ .. .. ಶ್ರೀಮತಿಯೆಂಬ ಮಗಳಾಗಿ ಪುಟ್ಟಿದಳ್:ಆದಿಪು, ೪. ೧೮ ವ)
ಸ್ವಕೀಯಪ್ರಭುತೆ
[ನಾ]ಸ್ವಪ್ರಭುತ್ವ, ತನಗೆ ತಾನೇ ಪ್ರಭುವಾಗುವುದು(ಅಮೂರ್ತರ್ ಚರಮತನು ಸಮಾಕಾರರ್ ಉದ್ಧೂತಲೇಪರ್ ಪ್ರಣುತರ್ .. .. ಸ್ವಕೀಯಪ್ರಭುತೆಯಂ ಎಮಗಂ ಮಾೞ್ಕತಿಪ್ರೀತಿಯಿಂದಂ:ಆದಿಪು, ೧. ೨)
ಸ್ವಗುರುಸ್ಥಾನಸಂಕ್ರಾಂತಿ
[ನಾ][ಜೈನ] ಒಂದು ಗರ್ಭಾನ್ವಯಕ್ರಿಯೆ, ತನ್ನ ಗುರುವಿನ ಸ್ಥಾನವನ್ನು ಹೊಂದುವುದು (ಸ್ವಗುರುಸ್ಥಾನಸಂಕ್ರಾಂತಿ.. ..ಅಗ್ರನಿರ್ವೃತಿಎಂಬ ಅಯ್ವತ್ತಮೂಱು ಗರ್ಭಾದಿ ನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ:ಆದಿಪು, ೧೫. ೧೫ ವ)
ಸ್ವಚ್ಛಂದಮಿೞ್ತು
[ನಾ]ಇಚ್ಛಾಮರಣ, ಬೇಕೆಂದಾಗ ಸಾಯುವುದು (ಅಂತು ಶರಪಂಜರದೊಳ್ ಒಱಗಿಯುಂ ಒಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ ಸ್ವಚ್ಛಂದಮಿೞ್ತು ಅಪ್ಪುದಱಿಂ ಉತ್ತರಾಯಣಂ ಬರ್ಪನ್ನಂ ಇರಿಸಿದಂ: ಪಂಪಭಾ, ೧೧. ೪೭ ವ)
ಸ್ವಧಾಕಾರ
[ನಾ]ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಹೇಳುವ ಮಂತ್ರ (ಚಾರುತರಯಜ್ಞವಿದ್ಯಾಪಾರಗರ ರವಂಗಳಿಂ ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರಧ್ವನಿ ನೆಗೞೆ ನೆಗೞ್ದುದಾಹುತಿಧೂಮಂ:ಪಂಪಭಾ,೬. ೩೪)
ಸ್ವಪಕ್ಷ