भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸ್ವಮತಿ

[ನಾ]ಸ್ವಂತ ಬುದ್ಧಿ (ಪೆಱವುಂ ಪ್ರತ್ಯಂಗೋಚಿತಾತ್ಯಂಗ ಮಣಿಭೂಷಣಂಗಳುಮಂ ಸ್ವಮತಿಪರಿಕಲ್ಪನದಿಂ ಯುಗಾರಂಭದೊಳ್ ಪಡೆದು:ಆದಿಪು, ೮. ೫೪ ವ)

ಸ್ವಯಂಬರ

[ನಾ]ಸ್ವಯಂವರ, ತನ್ನ ಗಂಡನನ್ನು ಕನ್ಯೆ ಆರಿಸಿಕೊಳ್ಳುವ ಪದ್ಧತಿ (ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಂ ಇತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ:ಪಂಪಭಾ,೧. ೧೦೫ ವ)

ಸ್ವರ

[ನಾ]ಧ್ವನಿ(ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್:ಆದಿಪು, ೫. ೮೭ ವ);[ನಾ]ಸ್ವತಂತ್ರವಾಗಿ ಉಚ್ಚರಿಸಬಲ್ಲ ವರ್ಣ (ಅಂತು ಅಕಾರಾದಿ ಹಕಾರಾಂತ ಸ್ವರವ್ಯಂಜನಭೇಧಭಿನ್ನ ಶುದ್ಧಾಕ್ಷರಂಗಳುಮಂ ಅಯೋಗಹಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ:ಆದಿಪು, ೮. ೫೯ ವ)

ಸ್ವರಪರುಷ

[ನಾ] ಗಡಸು ಧ್ವನಿಯವನು (ದೊರೆಕೊಂಡ ಕೃಷ್ಣಲೇಶ್ಯಾ ಪರಿಣಾಮಮೆ ಕೃಷ್ಣವರ್ಣಮಂ ಪುಟ್ಟಿಸಿದಂತಿರೆ ಕರಿಕರ್ ಪೇಡಿಗಳ್ ಅತಿ ಪರುಷ ಸ್ವರಪರುಷ ನಯನಪರುಷಶರೀರರ್: ಆದಿಪು, ೫. ೯೧)

ಸ್ವರಾಜ್ಯ

[ನಾ][ಜೈನ] ಒಂದು ಗರ್ಭಾನ್ವಯಕ್ರಿಯೆ, ಜಿನನಾಗುವವನಿಗೆ ಮಾಡುವ ಪಟ್ಟಾಭಿಷೇಕ (ಸ್ವರಾಜ್ಯ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ:ಆದಿಪು,೧೫. ೧೫ ವ)

ಸ್ವಸ್ತಿ

[ಅ] ಪತ್ರದ ಆರಂಭದಲ್ಲಿನ ‘ಮಂಗಳ’ ಎಂಬ ಅರ್ಥದ ಶಬ್ದ (ಸ್ವಸ್ತಿ ಸಮಸ್ತವಿಷ್ಟಪಾಧೀಶ್ವರ ಪುರುಪರಮೇಶ್ವರಚರಣಸರಸಿಜ ರಜೋರಂಜಿತ ಮಣಿಕಿರೀಟಮಕರಿಕಾಚಕ್ರಂ: ಆದಿಪು, ೧೪. ೪೬ ವ)

ಸ್ವಸ್ತಿಕ

[ನಾ][ಜೈನ] ಒಂದು ಮಂಗಳಕರ ಚಿಹ್ನೆ (ವೃಷಭಜಿನಾವತರಣ ಮಂಗಳನಿಹಿತ ಕಳಶದರ್ಪಣದಂತೆ ಪ್ರಶಸ್ತ ಸ್ವಸ್ತಿಕಾಯಮಾನಸ್ವಸ್ತಿಕಾದಿ ನಾನಾ ಮಣಿಮಯ ಪ್ರಾಸಾದಂಗಳೊಳಂ:ಆದಿಪು, ೬. ೧೦೬ ವ);[ನಾ]ಹೆಂಗಸರು ತಮ್ಮ ಕೈಗಳನ್ನು ಕತ್ತರಿಯಾಕಾರದಲ್ಲಿ ಮಡಿಸಿ ತೆರೆದ ಮೊಲೆಗಳನ್ನು ಮುಚ್ಚಿಕೊಳ್ಳುವ ಭಂಗಿ (ಮನಸಿಜನೃಪ ಲೀಲಾಲಾಂಛನಂ ಸ್ವಸ್ತಿಕಂ ಸ್ತ್ರೀಜನದೊಳೆಸೆದು ನಿಂದತ್ತು ಉತ್ತರೀಯಾಂತರೀಯಂ ತೊನೆಯೆ ತೊಲಗಿ:ಆದಿಪು, ೧೧. ೧೫೨)

ಸ್ವಸ್ತಿಕರ

ಒಳ್ಳೆಯದನ್ನು ಮಾಡುವಂಥದು (ತತ್ ತ್ರಿಷಷ್ಟಿಪಟಲದ ತುದಿಯೊಳ್ ರನ್ನದ ಕಳಶಕ್ಕೆಣೆಯೆಂಬನ್ನೆಗಂ ಅದು ಸುಖಸುಧಾಕರಂ ಸ್ವಸ್ತಿಕರಂ: ಆದಿಪು, ೬. ೩೫)

ಸ್ವಸ್ಥಾನ

[ನಾ][ಜೈನ] ಜೀವಿಯ ಮೂರು ಅವಸ್ಥೆಗಳಲ್ಲಿ ಒಂದು (ನಿರವಶೇಷ ಮೋಹೋಪಶತಮೋದ್ಭೂತ ಯಥಾಖ್ಯಾತ ಚಾರಿತ್ರಸಂಪನ್ನಂ ಅಂತರ್ಮುಹೂರ್ತದಿಂ ಸ್ವಸ್ಥಾನಸ್ಥಿತನಾಗಿ:ಆದಿಪು, ೬. ೩೩ ವ)

ಸ್ವಾಧ್ಯಾಯ

[ನಾ][ಜೈನ] ಶಾಸ್ತ್ರಗಳನ್ನು ತಿಳಿಹೇಳುವುದು (ಉಪಾಸಕಾಧ್ಯಯನ ಅಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವ ಓದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ:ಆದಿಪು, ೧೫. ೧೩ ವ)

ಸ್ವಾಭಾವಿಕ

[ಗು]ಸಹಜವಾದ (ವಾತ್ಯಾದುರ್ಧರಗಂಧಸಿಂಧುರಕಟಸ್ರೋತಃಸಮುದ್ಯತ್ಮದವ್ರಾತಇಂದಿಂದಿರಚಂಡತಾಂಡವಕಲಸ್ವಾಭಾವಿಕಶ್ರೇಯಸಃ:ಪಂಪಭಾ,೯.೯೭)

ಸ್ವಾಮ್ಯವಿಕ್ರಾಂತಂ

[ನಾ]ಆಸ್ತಿಯನ್ನು ಅಪಹರಿಸುವವನು (ಸ್ವಾಮ್ಯಾರ್ಥಂ ಸ್ವಾಮ್ಯವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ ಅರ್ಥರಾಜ್ಯಹರಂ ಭೃತ್ಯಂ ಯೋನ ಹನ್ಯಾನ್ಸಹನ್ಯತೇ:ಪಂಪಭಾ, ೨. ೯೦ ಶ್ಲೋಕ)

ಸ್ವಾಮ್ಯಾರ್ಥ

[ನಾ]ಸ್ವಾಮಿತ್ವವನ್ನು ಬಯಸುವವನು (ಸ್ವಾಮ್ಯಾರ್ಥಂ ಸ್ವಾಮ್ಯವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ ಅರ್ಥರಾಜ್ಯಹರಂ ಭೃತ್ಯಂ ಯೋನ ಹನ್ಯಾನ್ಸಹನ್ಯತೇ:ಪಂಪಭಾ, ೨. ೯೦ ಶ್ಲೋಕ)

ಸ್ವಾಹಾಕಾರ

[ನಾ]ಯಜ್ಞದ ವೇಳೆ ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಮಾಡುವ ‘ಸ್ವಾಹಾ’ ಎಂಬ ಪದೋಚ್ಚಾರ ಮಂತ್ರ (ಚಾರುತರಯಜ್ಞವಿದ್ಯಾಪಾರಗರ ರವಂಗಳಿಂ ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರಧ್ವನಿ ನೆಗೞೆ ನೆಗೞ್ದುದಾಹುತಿಧೂಮಂ:ಪಂಪಭಾ,೬. ೩೪)

ಸ್ವಾಹಾಂಗನಾನಾಥ

[ನಾ] ಸ್ವಾಹಾಂಗನೆಯ ಗಂಡನಾದ ಅಗ್ನಿ (ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬ ಅರಸನ ಯಜ್ಞದೊಳ್ ಆತನ ತಂದ ಘೃತಸಮುದ್ರಮಂ ಕುಡಿದೊಡೆ: ಪಂಪಭಾ, ೫. ೧೦೪ ವ)

ಸ್ವಿದ್ಯತ್

[ಗು]ಬೆವರಿದ(ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್:ಆದಿಪು, ೫. ೮೭ ವ)

ಸ್ವೇದ

[ನಾ]ಬೆವರು (ಕಾಮಗ್ರಹಗ್ರಹೀತೆಯಾಗಿರೆಮನೋವೈಕಲ್ಯರೋಮಾಂಚಕಸ್ತಂಭಕಂಪಸ್ವೇದವೈವರ್ಣ್ಯಸಂತಾಪನಅನಾಹಾರವ್ಯಾಮೋಹಗದ್ಗದಾಶ್ರುಮೋಕ್ಷಮೂರ್ಛಾದಿನಾನಾವಿಕಾರಂಗಳಂಒಡನೊಡನೆತೋಱುವುದುಂ:ಪಂಪಭಾ,೪.೫೯ವ)

ಸ್ವೇದಜಳ

[ನಾ]ಬೆವರು (ನಿಷ್ಪ್ರಯೋಜನ ಸ್ವೇದಜಳೋದ್ಗಮಮುಂ ನಿಷ್ಪಂದನಾಸಾಸ್ಫುರಿತಮುಂ ನಿಷ್ಕಾರುಣಕಾಯಕಂಪನಮುಂ:ಆದಿಪು, ೧೪. ೮೧ ವ)

Search Dictionaries

Loading Results

Follow Us :   
  Download Bharatavani App
  Bharatavani Windows App